Home
ಸುದ್ದಿಜಾಲ

ದಸರಾ ಸಂಭ್ರಮಕ್ಕೆ BSNL‌ ಬಿಗ್‌ ಆಫರ್‌..! ಅನ್‌ಲಿಮಿಟೆಡ್‌ ಡೇಟಾ, ವಿಡಿಯೋ ಕಾಲ್‌..!

ಬಿಎಸ್ಎನ್ಎಲ್ ಹೊಸದಾಗಿ ದಸರಾ ಹಬ್ಬದ ಸೀಸನ್ ಗಾಗಿ ತಮ್ಮ ಪ್ರಿಪೇಯ್ಡ್ ಚಂದಾದಾರರಿಗೆ 78 ರುಪಾಯಿ ಬೆಲೆಬಾಳುವ ಹೊಸ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ. ಇವತ್ತಿನಿಂದ ಈ ಆಫರ್ ಲಭ್ಯವಿದ್ದು, 10 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ ಪ್ಲಾನ್ ಹೊಂದಿದೆ. ಪಾನ್ ಇಂಡಿಯಾ ಬೇಸಿಸ್ ನಲ್ಲಿ ಈ ಪ್ಲಾನ್ ಲಭ್ಯವಿರುತ್ತದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.

ದಸರಾ ಸಂಭ್ರಮಕ್ಕೆ BSNL‌ ಬಿಗ್‌ ಆಫರ್‌..! ಅನ್‌ಲಿಮಿಟೆಡ್‌ ಡೇಟಾ, ವಿಡಿಯೋ ಕಾಲ್‌

78 ರುಪಾಯಿ ಪ್ಲಾನ್ ನ ಪ್ರಕಾರ ಬಿಎಸ್ಎನ್ಎಲ್ ಪ್ರೀಪೇಯ್ಡ್ ಬಳಕೆದಾರರು ಅನಿಯಮಿತ ಕರೆ, ಅನಿಯಮಿತ ಡಾಟಾ ಮತ್ತು ಅನಿಯಮಿತ ವೀಡಿಯೋ ಕಾಲಿಂಗ್ ಲಾಭಗಳನ್ನು ಪಡೆಯಲಿದೆ. ಡಾಟಾ ಮತ್ತು ಕರೆಗಳ ಬೆನಿಫಿಟ್ ಗಳನ್ನು ಇದರಲ್ಲಿ ಪರಿಚಯಿಸಲಾಗಿದೆ ಆದರೆ ಯಾವುದೇ ಎಸ್ಎಂಎಸ್ ಬೆನಿಫಿಟ್ ಗಳ ಬಗ್ಗೆ ಹೇಳಲಾಗಿಲ್ಲ. ಅಂದರೆ ಇದು ಸಾಮಾನ್ಯ ತಾರೀಫ್ ಗಳಿಗಿಂತ ಅನುಕೂಲಕರವಾಗಿದೆ. 78 ರುಪಾಯಿ ಪ್ಲಾನ್ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 19 ರ ವರೆಗೆ ಲಭ್ಯವಿದೆ ಮತ್ತು ನವೆಂಬರ್ 5 ರಂದು ದೀಪಾವಳಿ ಪ್ರಯುಕ್ತ ಲಭ್ಯವಾಗುತ್ತದೆ.

ಬಿಎಸ್ಎನ್ಎಲ್ ಇತ್ತೀಚೆಗಷ್ಟೇ ರೂ.29 ಮತ್ತು ರೂ.9 ಪ್ರೀಪೇಯ್ಡ್ ಪ್ಲಾನ್ ನ್ನು ಮರು ಪರಿಚಯಿಸಿತ್ತು.. ಕಂಪೆನಿಯು ಫ್ರೀಡಂ ಆಫರ್ ಚೋಟಾ ಪ್ಯಾಕ್ ನ ಅಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಗಸ್ಟ್ ನಲ್ಲಿ ಪ್ರೀಪೇಯ್ಡ್ ಪ್ಲಾನ್ ಗಳನ್ನು ಬಿಡುಗಡೆಗೊಳಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕಡಿಮೆ ಡಾಟಾ ಬೆನಿಫಿಟ್ ನ ಪ್ಲಾನ್ ಗಳನ್ನು ಪರಿಚಯಿಸಿದೆ.

ದಸರಾ ಸಂಭ್ರಮಕ್ಕೆ BSNL‌ ಬಿಗ್‌ ಆಫರ್‌..! ಅನ್‌ಲಿಮಿಟೆಡ್‌ ಡೇಟಾ, ವಿಡಿಯೋ ಕಾಲ್‌

ಬಿಎಸ್ಎನ್ಎಲ್ ನ 9 ರುಪಾಯಿ ರೀಚಾರ್ಜ್ ಪ್ಲಾನ್ ಈ ಹಿಂದೆ ಅನಿಯಮಿತ ವಾಯ್ಸ್ ಕರೆಗಳು, 2ಜಿಬಿ ಡಾಟಾ ಜೊತೆಗೆ 80Kbps ಸ್ಪೀಡ್ ನಲ್ಲಿ ಎಫ್ ಯುಪಿಯನ್ನು ಪರಿಚಯಿಸಿತ್ತು. ಆದರೆ ಇದೀಗ ಡಾಟಾ ವನ್ನು ಕಡಿತಗೊಳಿಸಿದ್ದು 100ಎಂಬಿಯನ್ನು ಮಾತ್ರವೇ ಈ ಆಫರ್ ನ ಅಡಿಯಲ್ಲಿ ನೀಡುತ್ತದೆ. ಆದರೆ ಕರೆಗಳು ಮತ್ತು ಎಸ್ಎಂಎಸ್ ಬೆನಿಫಿಟ್ ಮತ್ತು ವ್ಯಾಲಿಡಿಟಿ ಮರುಪರಚಯಿಸಲಾಗಿರುವ ಪ್ಲಾನ್ ನಲ್ಲೂ ಕೂಡ ಹಳೆಯದರಂತೆಯೇ ಇದೆ.

ಇದರ ಜೊತೆಗೆ 29 ರುಪಾಯಿ ರಿಚಾರ್ಜ್ ಪ್ಲಾನ್ ನ್ನು ಕೂಡ ಬಿಎಸ್ಎನ್ಎಲ್ ಪರಿಚಯಿಸಿದ್ದು 1ಜಿಬಿ ಡಾಟಾವನ್ನು ಈ ಗ ನೀಡುತ್ತದೆ. ಮೊದಲು 14ಜಿಬಿ ಡಾಟಾವನ್ನು ನೀಡುತ್ತಿತ್ತು. ಇದರ ವ್ಯಾಲಿಡಿಟಿಯು 7 ದಿನಗಳ ಅವಧಿಯದ್ದಾಗಿದೆ ಮತ್ತು ಉಚಿತ ಹಲೋ ಟ್ಯೂನ್ ಗಳ ಜೊತೆಗೆ ಅನಿಯಮಿತ ಹಾಡುಗಳ ಬದಲಾವಣೆಗೂ ಕೂಡ ಅವಕಾಶ ನೀಡುತ್ತದೆ. ಇತರೆ ಬೆನಿಫಿಟ್ ಗಳೆಂದರೆ ಅನಿಯಮಿತ ರಾಷ್ಟ್ರೀಯ ಕರೆಗಳು ಮತ್ತು ಸ್ಥಳೀಯ ಕರೆಗಳು, 300 ಉಚಿತ ಎಸ್ಎಂಎಸ್ ನ್ನು ಈ ಅವಧಿಯಲ್ಲಿ ನೀಡುತ್ತದೆ.

Best Mobiles in India

English summary
BSNL Dussehra prepaid recharge offer: Unlimited video calls at Rs 78. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+