ಕೇವಲ 1 ರೂ.ಗೆ 30 ದಿನ ಅನ್‌ಲಿಮಿಟೆಡ್ ಸೇವೆ: BSNL 'ಫ್ರೀಡಂ ಪ್ಲಾನ್' ವಿಸ್ತರಣೆ!
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆಯಂತೆ ನೀಡಿರುವ 'ಫ್ರೀಡಂ ಪ್ಲಾನ್' ಆಫರ್‌ನ್ನು ಮತ್ತೆ 15 ದಿನಗಳವರೆಗೆ ವಿಸ್ತರಿಸಿದೆ. ಕಳೆದ ಆಗಸ್ಟ್ 1ರಂದು ಪ್ರಾರಂಭಿಸಲಾದ ಈ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿರುವುದರಿಂದ, ಇದೀಗ ಅದು ಸೆಪ್ಟೆಂಬರ್ 15ರವರೆಗೆ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ಮೂಲದ ಕೇವಲ ₹1 ಪಾವತಿಸಿ 30 ದಿನಗಳವರೆಗೆ ಅನಿಯಮಿತ ಸೇವೆ ಪಡೆಯುವ ಆಯ್ಕೆಯು ಮತ್ತೆ ದೊರೆತಿದೆ.
BSNL ಪರಿಚಯಿಸಿದ್ದ ಫ್ರೀಡಂ ಪ್ಲಾನ್ ವಿಶೇಷ ಯೋಜನೆಯಡಿ ಹೊಸ ಗ್ರಾಹಕರು ಕೇವಲ ₹1 ಪಾವತಿಸಿ ಉಚಿತ ಸಿಮ್ ಪಡೆಯಬಹುದು. ಇದರಿಂದ 30 ದಿನಗಳವರೆಗೆ ಅನಿಯಮಿತ ಧ್ವನಿ ಕರೆ, ಪ್ರತಿದಿನ 100 SMS ಹಾಗೂ ಒಟ್ಟು 60GB ಡೇಟಾ (ಪ್ರತಿದಿನ 2GB) ಸೌಲಭ್ಯ ಲಭ್ಯ. ಜಿಯೋ ಮತ್ತು ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆ ನೀಡುವ ಉದ್ದೇಶದಿಂದ BSNL ಈ ಆಕರ್ಷಕ ಯೋಜನೆಯನ್ನು ತಂದಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಹೊಸ ಬಳಕೆದಾರರನ್ನು ಸೆಳೆಯುವ ಗುರಿ ಕಂಪನಿಯದು.
ಈ ಯೋಜನೆಯನ್ನು ಪಡೆಯಲು ಹೊಸ ಗ್ರಾಹಕರು ಹತ್ತಿರದ BSNL ಗ್ರಾಹಕ ಸೇವಾ ಕೇಂದ್ರ (CSC) ಅಥವಾ ಅಧಿಕೃತ ರೀಟೈಲರ್‌ರನ್ನು ಸಂಪರ್ಕಿಸಬಹುದು. ಇದರ ಮೂಲಕ ಕೇವಲ ₹1ಕ್ಕೆ ಸಂಪೂರ್ಣ ತಿಂಗಳ ಮೊಬೈಲ್ ಸೇವೆಯನ್ನು ಅನುಭವಿಸುವ ಅವಕಾಶ ಸಿಗುತ್ತದೆ. ಈ ಆಫರ್ BSNL ಗೆ ದೇಶಾದ್ಯಂತ ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಸಹಕಾರಿ ಎಂದು ನಿರೀಕ್ಷಿಸಲಾಗಿದೆ. ಇಷ್ಟೇ ಅಲ್ಲದೆ, BSNL ಇತ್ತೀಚಿಗಷ್ಟೇ ತನ್ನ ಹೊಸ ತಲೆಮಾರಿನ 'ಕ್ವಾಂಟಮ್-5G' FWA (Fixed Wireless Access) ಬ್ರಾಡ್‌ಬ್ಯಾಂಡ್ ಸೇವೆಯನ್ನು ಪರಿಚಯಿಸಿದೆ
'ಕ್ವಾಂಟಮ್-5G' ಬ್ರಾಡ್‌ಬ್ಯಾಂಡ್ ಸೇವೆ
BSNLನ 'ಕ್ವಾಂಟಮ್-5G' FWA (Fixed Wireless Access) ಬ್ರಾಡ್‌ಬ್ಯಾಂಡ್ ಸೇವೆ ಈಗಾಗಲೇ ಆರಂಭವಾಗಿದೆ. ವೈರ್ಡ್ ಸಂಪರ್ಕದ ಅವಶ್ಯಕತೆ ಇಲ್ಲದೆ ವೇಗದ ಇಂಟರ್ನೆಟ್ ಒದಗಿಸುವುದು ಈ ಸೇವೆಯ ಉದ್ದೇಶ. ಪ್ರಾರಂಭಿಕ ಹಂತದಲ್ಲಿ ಇದು ಆಯ್ದ ನಗರಗಳಲ್ಲಿ ಲಭ್ಯವಿದ್ದು, ಮನೆ ಬಳಕೆದಾರರು ಹಾಗೂ ಎಂಟರ್‌ಪ್ರೈಸ್ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ.

BSNL ಪ್ರಸ್ತುತ ಎರಡು ಯೋಜನೆಗಳನ್ನು ಘೋಷಿಸಿದೆ. ತಿಂಗಳಿಗೆ ₹999 ಯೋಜನೆ 100 Mbps ವೇಗ, ಹಾಗೂ ₹1,499 ಯೋಜನೆ 300 Mbps ವೇಗ ಒದಗಿಸುತ್ತದೆ. ಈ ಸೇವೆಗಳು ಧ್ವನಿ ಕರೆಗಳನ್ನು ಬೆಂಬಲಿಸದಿದ್ದರೂ, ಭವಿಷ್ಯದಲ್ಲಿ ಹೆಚ್ಚಿನ ವೈವಿಧ್ಯಮಯ ಯೋಜನೆಗಳನ್ನು ಪರಿಚಯಿಸುವ ಸಾಧ್ಯತೆ ಇದೆ.
WhatsApp ಮೂಲಕ ಬ್ರಾಡ್‌ಬ್ಯಾಂಡ್ ಅಪ್‌ಗ್ರೇಡ್
BSNL ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗಾಗಿ ತಂತ್ರಜ್ಞಾನಾಧಾರಿತ ಹೊಸ ಸೌಲಭ್ಯವೊಂದನ್ನು ಪರಿಚಯಿಸಿದೆ. ಈಗ BSNL FTTH (ಫೈಬರ್ ಬ್ರಾಡ್‌ಬ್ಯಾಂಡ್) ಅಥವಾ ಲ್ಯಾಂಡ್‌ಲೈನ್ ಗ್ರಾಹಕರು WhatsApp ಮೂಲಕ ತಮ್ಮ ಯೋಜನೆಗಳನ್ನು ಸುಲಭವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1800-4444 ಸಂಖ್ಯೆಗೆ WhatsApp ಸಂದೇಶ ಕಳುಹಿಸಿದರೆ ಸಾಕು. ಇದರಿಂದ ಸಮಯ ಉಳಿತಾಯವಾಗುವುದು ಮಾತ್ರವಲ್ಲ, ಸೇವಾ ಪ್ರಕ್ರಿಯೆಯು ಹೆಚ್ಚು ಸುಗಮವಾಗುತ್ತದೆ.
BSNL ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಮೊಬೈಲ್ ಪ್ಲಾನ್‌ಗಳಿಂದ ಹಿಡಿದು ಆಧುನಿಕ 5G ಬ್ರಾಡ್‌ಬ್ಯಾಂಡ್ ಸೇವೆಗಳವರೆಗೆ ವೈವಿಧ್ಯಮಯ ಆಯ್ಕೆಯನ್ನು ಒದಗಿಸಲು ಮುಂದಾಗಿದೆ. ₹1ರ ಫ್ರೀಡಂ ಪ್ಲಾನ್, WhatsApp ಆಧಾರಿತ ಸೇವೆಗಳು ಮತ್ತು ಕ್ವಾಂಟಮ್-5G ಪರಿಚಯದ ಮೂಲಕ ಕಂಪನಿಯು ಡಿಜಿಟಲ್ ಸ್ಪರ್ಧೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ದಿಸೆಯಲ್ಲಿ ಪ್ರಮುಖ ಹೆಜ್ಜೆ ಹಾಕುತ್ತಿದೆ ಎನ್ನಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








