Home
ಸುದ್ದಿಜಾಲ

ಜಿಯೋಗೆ ಸೆಡ್ಡು, ತಿಂಗಳಿಗೆ 1500GB ಡೇಟಾ ಪ್ಲಾನ್ ಘೋಷಿಸಿದ ಕಂಪನಿ...!

By Srinidhi

ಟೆಲಿಕಾಂ ಮಾರುಕಟ್ಟೆಯಲ್ಲಿ ಜಾರಿಯಲ್ಲಿದ್ದ ದರ ಸಮರವೂ ಸದ್ಯ ಬ್ರಾಡ್ ಬ್ಯಾಂಡ್ ವಲಯಕ್ಕೆ ಶಿಫ್ಟ್ ಆಗಿದ್ದು, ಇದಕ್ಕೆ ಪ್ರಮುಖ ಕಾರಣ ಎಂದರೆ ಜಿಯೋ ಗಿಗಾಫೈಬರ್ ಎನ್ನುವ ಹೆಸರಿನಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಿರುವುದು. ಈ ಹಿನ್ನಲೆಯಲ್ಲಿ ಸದ್ಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಏರ್‌ಟೆಲ್ ಮತ್ತು BSNL ಗಳು ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರೀ ತಯಾರಿಯನ್ನು ನಡೆಸಿವೆ ಎನ್ನಲಾಗಿದೆ. ಇದಕ್ಕಾಗಿಯೇ BSNL ಬೆಸ್ಟ್ ಎನ್ನುವ ಆಫರ್ ವೊಂದನ್ನು ನೀಡುತ್ತಿದೆ.

ಜಿಯೋಗೆ ಸೆಡ್ಡು, ತಿಂಗಳಿಗೆ 1500GB ಡೇಟಾ ಪ್ಲಾನ್ ಘೋಷಿಸಿದ ಕಂಪನಿ...!

ಇಷ್ಟು ದಿನ ಕಡಿಮೆ ವೇಗದಲ್ಲಿ ಸೇವೆಯನ್ನು ನೀಡುತ್ತಿದ್ದ BSNL, ಬಳಕೆದಾರರನ್ನು ಕಳೆದುಕೊಳ್ಳುವ ಭಯ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದಾಗಿ ಹೆಚ್ಚಿನ ವೇಗದ ಸೇವೆಯ ಜೊತೆಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ನೀಡಲಿದೆ. 100Mbps ವೇಗದ ಸೇವೆಯೊಂದಿಗೆ 1.5TB ಡೇಟಾವನ್ನು ಬಳಕೆಗೆ ನೀಡುವ ಪ್ಲಾನ್ ವೊಂದನ್ನು ಲಾಂಚ್ ಮಾಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸ ಪ್ಲಾನ್ ಕುರಿತ ಮಾಹಿತಿಯೂ ಮುಂದಿದೆ.

ಫೈಬರ್ ಟು ಹೋಮ್:

ಫೈಬರ್ ಟು ಹೋಮ್:

ಜಿಯೋ ಗಿಗಾ ಫೈಬರ್ ಮಾದರಿಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ BSNL, ತನ್ನ ಫೈಬರ್ ಟು ಹೋಮ್ ಸೇವೆಯ FUP ಲಿಮಿಟ್ ಅನ್ನು ಹೆಚ್ಚು ಮಾಡಲು ಮುಂದಾಗಿದೆ. ಬಳಕೆದಾರರಿಗೆ ತಿಂಗಳಿಗೆ 1.5TB ಡೇಟಾವನ್ನು ನೀಡುವ ಪ್ಲಾನ್ ಘೋಷಣೆ ಮಾಡಿದೆ. ಈ ಮೂಲಕ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಬಳಕೆಗೆ ನೀಡುವ ಪ್ರಯತ್ನ ಮಾಡುತ್ತಿದೆ. ಹೆಚ್ಚಿನ ಡೇಟಾ ಅಗತ್ಯವಿರುವ ಬಳಕೆದಾರರನ್ನು ಸೆಳೆಯುವ ಪ್ರಯತ್ನ ಇದಾಗಿದೆ.

100Mbps ವೇಗದ ಸೇವೆ:

100Mbps ವೇಗದ ಸೇವೆ:

ಫೈಬರ್ ಟು ಹೋಮ್ ಸೇವೆಯಲ್ಲಿ BSNL ತನ್ನ ಬಳಕೆದಾರರಿಗೆ 1.5TB ಡೇಟಾವನ್ನು ಅತ್ಯಂತ ವೇಗದಲ್ಲಿ ನೀಡಲಿದ್ದು, ಇದು 100Mbpsನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಈ ಪ್ಲಾನ್ ನಲ್ಲಿ ಬಳೆದಾರರು ಹೆಚ್ಚಿನ ಡೇಟಾವನ್ನು ಮತ್ತು ಹೆಚ್ಚಿನ ವೇಗದ ಸೇವೆ ಎರಡನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ರೂ.4999:

ರೂ.4999:

ಫೈಬರ್ ಟು ಹೋಮ್ ಸೇವೆಯನ್ನು ಬಳಸುವವರಿಗೆ 15 TB ಡೇಟಾವನ್ನು ಹಾಗೂ 100Mbps ವೇಗದ ಸೇವೆಯನ್ನು ನೀಡಲಿರುವ BSNL ಇದಕ್ಕಾಗಿ ರೂ4999 ದರವನ್ನು ವಿಧಿಸಲಿದೆ. ಈ ಮೊದಲು ಇದೇ ಪ್ಲಾನ್ ನಲ್ಲಿ ಬಳಕೆದಾರರಿಗೆ ಕೇಲವ 1TB ಡೇಟಾವನ್ನು ಮಾತ್ರವೇ ನೀಡುತಿತ್ತು. ಆದರೆ ಈ ಬಾರಿ ಅದಕ್ಕಿಂತ ಅರ್ಧದಷ್ಟು ಪ್ರಮಾಣದ ಡೇಟಾವನ್ನು ಉಚಿತವಾಗಿಯೇ ನೀಡಲಿದೆ.

ಉಚಿತ ಕರೆ:

ಉಚಿತ ಕರೆ:

ಇದಲ್ಲದೇ ರೂ.4999 ಪ್ಲಾನ್ ಬಳಕೆ ಮಾಡಿಕೊಳ್ಳುವವರಿಗೆ ಮತ್ತೊಂದು ಆಫರ್ ನೀಡಿರುವ BSNL ಒಂದು ಇಮೇಲ್ ಐಡಿಯನ್ನು ಉಚಿತವಾಗಿ ನೀಡಲಿದೆ. ಇದರೊಂದಿಗೆ ಉಚಿತವಾಗಿ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂಧಾಗಿ ಬಳಕೆದಾರರು ಒಂದೇ ಪ್ಲಾನ್ ನಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
BSNL FTTH Broadband Plans to Offer Up to 1.5TB Data at 100Mbps. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+