Home
ಸುದ್ದಿಜಾಲ

ಜಿಯೋ ಫೈಬರ್ ಗೆ ಸೆಡ್ಡು: BSNL ನಿಂದ ಬೊಂಬಾಟ್ ಬ್ರಾಡ್ ಬ್ಯಾಂಡ್ ಪ್ಲಾನ್.....!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಕಾಲಿಟ್ಟ ಕಡೆಗಳಲ್ಲಿ ದರ ಸಮರವೂ ಏರ್ಪಡುತ್ತಿದೆ. ಆರಂಭದಲ್ಲಿ ಟೆಲಿಕಾಂ ಪ್ರೀಪೇಯ್ಡ್ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಸ್ಪರ್ಧೇಯನ್ನು ನಿರ್ಮಿಸಿತ್ತು. ಇದಾದ ನಂತರದಲ್ಲಿ ಪ್ರೋಸ್ಟ್ ಪೇಯ್ಡ್ ಮಾರುಕಟ್ಟೆಗೆ ಆದ್ಯತೆಯನ್ನು ನೀಡಿ ಅಲ್ಲಿಯೂ ದೊಡ್ಡ ಮಟ್ಟದಲ್ಲಿ ದರ ಸಮರಕ್ಕೆ ಕಾರಣವಾಗಿತ್ತು. ಇದಾದ ನಂತರದಲ್ಲಿ ಈಗ ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇಲ್ಲಿಯೂ ದೊಡ್ಡದಾಗಿ ಸ್ಪರ್ಧೆಯೂ ಏರ್ಪಡುವ ಸಾಧ್ಯತೆ ಇದ್ದು, ಇದಕ್ಕೇ ಈಗಾಗಲೇ ಸಿದ್ಧತೆ ನಡೆಸಿರುವ ಸರಕಾರಿ ಸ್ವಾಮ್ಯದ BSNL ಹೊಸ ಮಾದರಿಯ ಆಫರ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ.

ಜಿಯೋ ಫೈಬರ್ ಗೆ ಸೆಡ್ಡು: BSNL ನಿಂದ ಬೊಂಬಾಟ್ ಬ್ರಾಡ್ ಬ್ಯಾಂಡ್ ಪ್ಲಾನ್.....!

ಈಗಾಗಲೇ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿರುವ BSNL, ಜಿಯೋ ಕಾರ್ಯಾರಂಭವನ್ನು ಮಾಡಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹೊಡೆತವನ್ನು ತಿನ್ನಲಿದೆ. ಇದಕ್ಕಾಗಿಯೇ BSNL ಸಿದ್ಧತೆಯನ್ನು ನಡೆಸಿದ್ದು, ಹೊದಾಗಿ ಪ್ಲಾನ್ ಗಳನ್ನು ಲಾಂಚ್ ಮಾಡಿದ್ದು, ತನ್ನ ಬಳಕೆದಾರರನ್ನು ಸಂತೋಷಪಡಿಸುವ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜಿಯೋಗೆ ಸೆಡ್ಡು:

ಜಿಯೋಗೆ ಸೆಡ್ಡು:

ಈಗಾಗಲೇ ಗಿಗಾಫೈಬರ್ ಅನ್ನು ಲಾಂಚ್ ಮಾಡಿದೆ. ಅತೀ ವೇಗದ ಮತ್ತು ಹೆಚ್ಚು ಡೇಟಾವನ್ನು ನೀಡಲು ಇದು ಮುಂದಾಗಿದೆ. ಈ ಹಿನ್ನಲೆಯಲ್ಲಿ BSNL ಸಹ ತನ್ನ ಬ್ರಾಡ್ ಬ್ಯಾಂಡ್ ಪ್ಲಾನ್ ಗಳನ್ನು ರಿವೈಜ್ ಮಾಡಿದ್ದು, ಬಳಕೆದಾರರಿಗೆ ಸಾಕಷ್ಟು ಡೊಡ್ಡ ಪ್ರಮಾಣದಲ್ಲಿ ಡೇಟಾವನ್ನು ಮತ್ತು ವೇಗದ ಸೇವೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಮುಂದಾಗಿದೆ.

ಮೂರು ಹೊಸ ಪ್ಲಾನ್:

ಮೂರು ಹೊಸ ಪ್ಲಾನ್:

BSNL ತನ್ನ ಬಳಕೆದಾರರಿಗೆ ಹೊಸದಾಗಿ ಮೂರು ಹೊಸ ಪ್ಲಾನ್ ಗಳನ್ನು ಲಾಂಚ್ ಮಾಡಿದೆ. ರೂ.1045, ರೂ.1395 ಮತ್ತು 1895 ಪ್ಲಾನ್ ಗಳನ್ನು ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ಡೇಟಾವನ್ನು ಹೆಚ್ಚವರಿಯಾಗಿ ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚು ಪ್ರಮಾಣದಲ್ಲಿ ಇಂಟರ್ನೆಟ್ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ರೂ.1045 ಪ್ಲಾನ್:

ರೂ.1045 ಪ್ಲಾನ್:

ಈ ಪ್ಲಾನ್ ನಲ್ಲಿ ಬಳಕೆದಾರರಿಗೆ 30mbps ವೇಗದಲ್ಲಿ ಒಟ್ಟು 150GB FUP ಡೇಟಾವನ್ನು ನೀಡಲಿದೆ. ಇದರಲ್ಲಿ 50 GB ಹೆಚ್ಚುವರಿ ಡೇಟಾವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ, ಅರ್ಧಕ್ಕೂ ಹೆಚ್ಚು ಪ್ರಮಾಣದ ಡೇಟಾವನ್ನು BSNL ಉಚಿತವಾಗಿ ನೀಡಲು ಮುಂದಾಗಿದೆ. ಈ FUP ಮುಗಿದ ಮೇಲೆ 2 mbps ವೇಗದಲ್ಲಿ ಡೇಟಾ ಬ್ರೌಸ್ ಆಗಲಿದೆ.

ರೂ.1395 ಪ್ಲಾನ್:

ರೂ.1395 ಪ್ಲಾನ್:

ಈ ಪ್ಲಾನ್ ನಲ್ಲಿ ಬಳಕೆದಾರರು ಒಟ್ಟು 200GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಇದು 40mbps ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದರಲ್ಲಿಯೂ ಬಳಕೆದಾರರು ಒಟ್ಟು 50 GB ಡೇಟಾವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದಾಗಿದೆ. ಈ FUP ಮುಗಿದ ಮೇಲೆ 2 mbps ವೇಗದಲ್ಲಿ ಡೇಟಾ ಬ್ರೌಸ್ ಆಗಲಿದೆ.

ರೂ.1895 ಪ್ಲಾನ್:

ರೂ.1895 ಪ್ಲಾನ್:

ಈ ಪ್ಲಾನ್ ನಲ್ಲಿ ಬಳಕೆದಾರರಿಗೆ 50mbps ವೇಗದಲ್ಲಿ ಒಟ್ಟು 200GB FUP ಡೇಟಾವನ್ನು ನೀಡಲಿದೆ. ಇದರಲ್ಲಿ 50 GB ಹೆಚ್ಚುವರಿ ಡೇಟಾವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ, ಅರ್ಧಕ್ಕೂ ಹೆಚ್ಚು ಪ್ರಮಾಣದ ಡೇಟಾವನ್ನು BSNL ಉಚಿತವಾಗಿ ನೀಡಲು ಮುಂದಾಗಿದೆ. ಈ FUP ಮುಗಿದ ಮೇಲೆ 2 mbps ವೇಗದಲ್ಲಿ ಡೇಟಾ ಬ್ರೌಸ್ ಆಗಲಿದೆ.

Best Mobiles in India

English summary
BSNL FTTH Broadband Plans Revamped to Take on Jio GigaFiber. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+