BSNL ನಿಂದ 499 ರೂ.ಗಳ ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಬಿಡುಗಡೆ! ವಿಶೇಷತೆ ಏನು?

|

ದೇಶದ ಟೆಲಿಕಾಂ ವಲಯದಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಖಾಸಗಿ ಟೆಲಿಕಾಂಗಳು ಹಲವು ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ. ಇನ್ನು ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ 499 ರೂ.ಗಳಿಗೆ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಇನ್ನು ಈ ಬ್ರಾಡ್‌ಬ್ಯಾಂಡ್ ನಿರ್ದಿಷ್ಟ ಸರ್ಕಲ್‌ ಮತ್ತು ಹೊಸ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆ 499 ರೂ.ಗಳ ಹೊಸ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಪರಿಚಯಿಸಿದೆ. ಇದು ಕೆಲವು ವೃತ್ತ ವಲಯಗಳಲ್ಲಿ ಲಭ್ಯವಾಗಲಿದೆ. ಈ ಚಂದಾದಾರಿಕೆಯ ಆರು ತಿಂಗಳ ನಂತರ, ಗ್ರಾಹಕರು 150ಜಿಬಿ ಯೋಜನೆಗೆ ವಲಸೆ ಹೋಗಬಹುದಾಗಿದೆ. ಸದ್ಯ ಅಂಡಮಾನ್ ಮತ್ತು ನಿಕೋಬಾರ್ ವಲಯದಲ್ಲಿನ ಎಲ್ಲಾ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಎಸ್‌ಎನ್‌ಎಲ್ ಪರಿಷ್ಕರಿಸಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಅಂಡಮಾನ್ ಮತ್ತು ನಿಕೋಬಾರ್ ವೃತ್ತಕ್ಕಾಗಿ ಹೊಸದಾಗಿ ಪರಿಚಯಿಸಲಾದ 499 ರೂ. ಬ್ರಾಡ್‌ಬ್ಯಾಂಡ್ ಯೋಜನೆ 10Mbps ಡೌನ್‌ಲೋಡ್ ವೇಗವನ್ನು 40GB ವರೆಗೆ ನೀಡುತ್ತದೆ. ಇದು ಪೋಸ್ಟ್ FUP ಡೌನ್‌ಲೋಡ್ ವೇಗ 512Kbps ಹೊಂದಿದೆ. ಈ ಹೊಸ ಬಿಎಸ್ಎನ್ಎಲ್ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಆರು ತಿಂಗಳವರೆಗೆ ಈ ಯೋಜನೆ ಅನ್ವಯಿಸುತ್ತದೆ, ನಂತರ ಗ್ರಾಹಕರು 150ಜಿಬಿ ಯೋಜನೆಗೆ ವಲಸೆ ಹೋಗುತ್ತಾರೆ. ಈ ಬೆಳವಣಿಗೆಯನ್ನು ಮೊದಲು ಕೇರಳ ಟೆಲಿಕಾಂ ಗುರುತಿಸಿದೆ. ಇನ್ನು ಹೊಸದಾಗಿ ಪರಿಷ್ಕೃತಗೊಂಡಿರುವ ಯೋಜನೆಗಳಿಗೆ ಬಂದರೆ, ಎಲ್ಲಾ ಬಿಎಸ್‌ಎನ್‌ಎಲ್ ಬಳಕೆದಾರರು - ಹೊಸ ಮತ್ತು ಅಸ್ತಿತ್ವದಲ್ಲಿರುವವರು - ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೆ ಚಂದಾದಾರರಾಗಬಹುದು.

ಅಂಡಮಾನ್

ಇನ್ನು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿನ ಬಿಎಸ್‌ಎನ್‌ಎಲ್ ಎಫ್‌ಟಿಟಿಎಚ್ ಬ್ರಾಡ್‌ಬ್ಯಾಂಡ್ ಯೋಜನೆಗಳು ಜೂನ್ 1, 2021 ರಿಂದ ಹೆಚ್ಚಿನ ವೇಗವನ್ನು ನೀಡಲಿವೆ. ಈ ಯೋಜನೆಗಳು 150ಜಿಬಿ, 225 ಜಿಬಿ, 300 ಜಿಬಿ, 450 ಜಿಬಿ, 750 ಜಿಬಿ, 1200 ಜಿಬಿ ಮತ್ತು 1500 ಜಿಬಿ ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ಅನ್ನು ಹೊಂದಿವೆ. ಈ ಬ್ರಾಡ್‌ಬ್ಯಾಂಡ್ ಯೋಜನೆಗಳು 12 Mbps, 15 Mbps, 20 Mbps, 30 Mbps, 50 Mbps, 80 Mbps ಮತ್ತು 100 Mbps ವರೆಗೆ ಇರಲಿದೆ. ಈ ಎಲ್ಲಾ ಯೋಜನೆಗಳು ಎಫ್‌ಯುಪಿ ಮಿತಿಗಳನ್ನು ಹೊಂದಿದ್ದು, ನಂತರ ವೇಗವನ್ನು 512 Kbps, 1 Mbps, 2 Mbps ಮತ್ತು 4 Mbpsಗೆ ಇಳಿಸಲಾಗುತ್ತದೆ. ಇನ್ನು ಬಿಎಸ್‌ಎನ್‌ಎಲ್‌ ಹೊಂದಿರುವ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಬಗ್ಗೆ ಮುಂದೆ ಓದಿರಿ.

ಬಿಎಸ್‌ಎನ್‌ಎಲ್ ಭಾರತ್ ಫೈಬರ್ ರೂ 449 ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್‌ಎನ್‌ಎಲ್ ಭಾರತ್ ಫೈಬರ್ ರೂ 449 ಬ್ರಾಡ್‌ಬ್ಯಾಂಡ್ ಯೋಜನೆ

ಫೈಬರ್ ಬೇಸಿಕ್ ಪ್ಲಾನ್ ಎಂದೂ ಕರೆಯಲ್ಪಡುವ ಈ ಯೋಜನೆಯು 3.3 ಟಿಬಿ ವೇಗ ಅಥವಾ 3300 ಜಿಬಿ ಎಫ್‌ಯುಪಿ ಮಿತಿಯವರೆಗೆ 30 ಎಮ್‌ಬಿಪಿಎಸ್ ವೇಗವನ್ನು ನೀಡುತ್ತದೆ. ಎಫ್‌ಯುಪಿ ಮಿತಿಯನ್ನು ತಲುಪಿದ ನಂತರ, ವೇಗವನ್ನು 2 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ. ಈ ಯೋಜನೆಯನ್ನು ಆರಿಸಿಕೊಳ್ಳುವ ಬಳಕೆದಾರರು ಭಾರತದೊಳಗಿನ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ ಪಡೆಯುತ್ತಾರೆ.

ಬಿಎಸ್‌ಎನ್‌ಎಲ್ ಭಾರತ್ ಫೈಬರ್ ರೂ 799 ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್‌ಎನ್‌ಎಲ್ ಭಾರತ್ ಫೈಬರ್ ರೂ 799 ಬ್ರಾಡ್‌ಬ್ಯಾಂಡ್ ಯೋಜನೆ

ಈ ಯೋಜನೆಯು 3300 ಜಿಬಿ ಅಥವಾ 3.3 ಟಿಬಿ ಅಥವಾ 3300 ಜಿಬಿ ಡೇಟಾ ವರೆಗೆ 100 ಎಂಬಿಪಿಎಸ್ ವೇಗವನ್ನು ನೀಡುತ್ತದೆ. ಎಫ್‌ಯುಪಿ ಮಿತಿಯನ್ನು ತಲುಪಿದ ನಂತರ, ವೇಗವನ್ನು 2 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ.

ಬಿಎಸ್ಎನ್ಎಲ್ ಪ್ರೀಮಿಯಂ ಫೈಬರ್ ರೂ 999 ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್ಎನ್ಎಲ್ ಪ್ರೀಮಿಯಂ ಫೈಬರ್ ರೂ 999 ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್ಎನ್ಎಲ್ ಫೈಬರ್ ಪ್ರೀಮಿಯಂ ಬ್ರಾಡ್ಬ್ಯಾಂಡ್ ಯೋಜನೆಯು 200 ಎಮ್ಬಿಪಿಎಸ್ ವೇಗವನ್ನು 999 ರೂ.ಗೆ 3300 ಜಿಬಿ ಅಥವಾ 3.3 ಟಿಬಿ ವರೆಗೆ ನೀಡುತ್ತದೆ, ನಂತರ ವೇಗವನ್ನು 2 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ. ಈ ಯೋಜನೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಸದಸ್ಯತ್ವದೊಂದಿಗೆ ಬರುತ್ತದೆ.

ಬಿಎಸ್‌ಎನ್‌ಎಲ್ ಅಲ್ಟ್ರಾ ಫೈಬರ್ ರೂ 1499 ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್‌ಎನ್‌ಎಲ್ ಅಲ್ಟ್ರಾ ಫೈಬರ್ ರೂ 1499 ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್‌ಎನ್‌ಎಲ್‌ನ ಈ ಯೋಜನೆಯು 4 ಟಿಬಿ ಅಥವಾ 4000 ಜಿಬಿ ತಲುಪುವವರೆಗೆ 300 ಎಮ್‌ಬಿಪಿಎಸ್ ವೇಗವನ್ನು ನೀಡುತ್ತದೆ. ಎಫ್‌ಯುಪಿ ಮಿತಿಯ ನಂತರ, ವೇಗವನ್ನು 4 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ. ಈ ಯೋಜನೆಯು ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಪ್ರಯೋಜನಗಳನ್ನು ನೀಡುತ್ತದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಸದಸ್ಯತ್ವದೊಂದಿಗೆ ಬರುತ್ತದೆ.

Best Mobiles in India

English summary
BSNL has introduced a 40GB broadband plan for Rs 499 in Andaman and Nicobar circle. The government-owned telco has also revised all plans in the circle.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X