BSNL: ಅಗ್ಗದ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಬಯಸೋರಿಗೆ ಇಲ್ಲಿವೆ ಬೆಸ್ಟ್‌ ಪ್ಲಾನ್‌ಗಳು!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಈ ಮೂಲಕ ತಮ್ಮ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌ ನೀಡಿವೆ. ಇನ್ನು ಖಾಸಗಿ ಟೆಲಿಕಾಂಗಳ ನಡುವೆ ಪೈಪೋಟಿ ನಡೆಸುತ್ತಿರುವ ಬಿಎಸ್‌ಎನ್‌ಎಲ್‌ ತನ್ನ ಅಗ್ಗದ ಬೆಲೆಯ ಪ್ಲಾನ್‌ಗಳನ್ನು ಮುಂದುವರೆಸುತ್ತಿದೆ. ಖಾಸಗಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಗಿಂತ ಬಿಎಸ್‌ಎನ್‌ಎಲ್‌ ಕಡಿಮೆ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ನೀಡುವ ಪ್ಲಾನ್‌ಗಳನ್ನು ನೀಡುತ್ತಿದೆ.

ಬಿಎಸ್‌ಎನ್‌ಎಲ್‌

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ವಿನಮ್ರ ವಿಶೇಷ ಸುಂಕದ ವೋಚರ್ ಗಳನ್ನು 250ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ 90 ದಿನಗಳವರೆಗೆ ಮಾನ್ಯತೆಯನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್‌ನ 94ರೂ.ಗಳ STV 60 ದಿನಗಳ ಮಾನ್ಯತೆ ಹೊಂದಿದ್ದು, BSNL ಡೀಫಾಲ್ಟ್ ಟ್ಯೂನ್‌ಗಳೊಂದಿಗೆ ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ನೆಟ್‌ವರ್ಕ್ ಮತ್ತು ರಾಷ್ಟ್ರೀಯ ರೋಮಿಂಗ್‌ಗೆ 75 ದಿನಗಳ ಮಾನ್ಯತೆ ನೀಡುತ್ತಿದೆ. ಅಲ್ಲದೆ 100 ಉಚಿತ ದೇಶೀಯ ನಿಮಿಷಗಳ 3GB ಉಚಿತ ಡೇಟಾವನ್ನು ನೀಡುತ್ತದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಅಗ್ಗದ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ನೀಡುತ್ತಿರುವ ಪ್ರಿಪೇಯ್ಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಟೆಲಿಕಾಂ ನ 88ರೂ ಬೆಲೆಯ ವಾಯ್ಸ್ ವೋಚರ್ 90 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ನಿಮಗೆ ಸ್ಥಳೀಯ/STD ಕರೆಗಳಿಗೆ ಪ್ರತಿ ಸೆಂಕೆಂಡಿಗೆ 0.8ಪೈಸಾ ಶೂಲ್ಕ ವಿಧಿಸಲಾಗುತ್ತದೆ. ಇನ್ನು 209ರೂ. ಬೆಲೆಯ ಕಾಂಬೊ ವಾಯ್ಸ್ ವೋಚರ್ ಕೂಡ 90 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು ಸ್ಥಳೀಯ ಕರೆ ಯಾವುದೇ ನೆಟ್‌ವರ್ಕ್‌ಗೆ ಪ್ರತಿ 2 ಸೆಕೆಂಡಿಗೆ 1 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ ಮುಖ್ಯ ಖಾತೆಯಲ್ಲಿ Rs25 ಟಾಕ್ ಮೌಲ್ಯ ನೀಡಲಾಗುತ್ತದೆ. ಹಾಗೆಯೇ 198ರೂ.ಗಳ STV 50 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ ದೈನಂದಿನ 2GB ಡೇಟಾವನ್ನು ನೀಡುತ್ತದೆ. ನಂತರ ವೇಗವನ್ನು 40 Kbps ಗೆ ಇಳಿಸಲಾಗುತ್ತದೆ.

BSNL

BSNL

ಇನ್ನು BSNL 97ರೂ ಮತ್ತು 99ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಇದರಲ್ಲಿ 97 ಪ್ರಿಪೇಯ್ಡ್ ಯೋಜನೆಯು 2GB ದೈನಂದಿನ ಡೇಟಾವನ್ನು ಹೊಂದಿದೆ, ಇದು 18 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಲೋಕಧುನ್ ವಿಷಯಕ್ಕೆ ಪ್ರವೇಶ ಸಿಗಲಿದ್ದು, ಭಾರತದಲ್ಲಿ ಎಲ್ಲಿಯಾದರೂ ಅನಿಯಮಿತ ಧ್ವನಿ ಕರೆ ಪ್ರಯೋಜನ ಪಡೆಯಬಹುದಾಗಿದೆ. ಇನ್ನು 99ರೂ. ಪ್ರಿಪೇಯ್ಡ್ ಪ್ಲಾನ್‌ ಕೂಡ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ 99 SMS ಮತ್ತು ರಿಂಗ್‌ಟೋನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು 22 ದಿನಗಳ ಮಾನ್ಯತೆಯನ್ನು ಹೊಂದಿದೆ.

BSNL

BSNL ಟೆಲಿಕಾಂ 50 ದಿನಗಳ ಮಾನ್ಯತೆಯ ಪ್ಲಾನ್‌ಗಳನ್ನು ಕೂಡ ಹೊಂದಿದೆ. ಇದರಲ್ಲಿ 75ರೂ. ಬೆಲೆಯ ಪ್ರಿಪೇಯ್ಡ್‌ಪ್ಲಾನ್‌ 50 ದಿನಗಳ ಮಾನ್ಯತೆ ನೀಡಲಿದೆ. ಇದು 2GB ಡೇಟಾ, 100 ನಿಮಿಷಗಳ ಧ್ವನಿ ಕರೆಗಳು ಮತ್ತು 50 ದಿನಗಳವರೆಗೆ ಉಚಿತ ರಿಂಗ್‌ಟೋನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇನ್ನು ಬಿಎಸ್‌ಎನ್‌ಎಲ್‌ನ ಜನಪ್ರಿಯ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ 247ರೂ. ಪ್ರಿಪೇಯ್ಡ್ ಪ್ಲಾನ್‌ ಕೂಡ ಸೇರಿದೆ. ಈ ಪ್ಲಾನ್‌ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಇದು 50GB ಹೈ-ಸ್ಪೀಡ್ ಡೇಟಾಗೆ ಪ್ರವೇಶವನ್ನು ನೀಡುತ್ತದೆ ನಂತರ ವೇಗವನ್ನು 80 Kbps ಗೆ ಇಳಿಸಲಾಗುತ್ತದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 100 SMS ಪ್ರಯೋಜನ ಸಿಗಲಿದ್ದು, 30 ದಿನಗಳ ಮಾನ್ಯತೆಯನ್ನು ಹೊಂದಿದೆ.

BSNL

ಇದಲ್ಲದೆ BSNL ಟೆಲಿಕಾಂನ ಅಗ್ಗದ ಬೆಲೆಯ ಪ್ರಿಪೇಯ್ಡ್‌ಪ್ಲಾನ್‌ಗಳಲ್ಲಿ 298 ರೂ. ಪ್ಲಾನ್‌ ಖರೀದಿಸಬಹುದಾಗಿದೆ. ಈ ಪ್ಲಾನ್‌ 56 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು, ದೈನಂದಿನ 1GB ಡೇಟಾ ಮತ್ತು ದಿನಕ್ಕೆ 100 SMS ಪ್ರಯೋಜನ ದೊರೆಯಲಿದೆ. ಇನ್ನು BSNL ಟೆಲಿಕಾಂ 319ರೂ. ಪ್ರಿಪೇಯ್ಡ್ ಪ್ಲಾನ್‌ 75 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆ ಪ್ರಯೋಜನ ಹಾಗೂ 10GB ಡೇಟಾ ಪ್ರಯೋಜನ ಸಿಗಲಿದೆ. BSNL ರೂ 395 ವೋಚರ್ 71 ದಿನಗಳ ಮಾನ್ಯತೆ, 3000 ನಿಮಿಷಗಳ ಉಚಿತ ಆನ್-ನೆಟ್ ಕರೆಗಳು, ಉಚಿತ 1800 ನಿಮಿಷಗಳ ಆಫ್-ನೆಟ್ ಕರೆಗಳು ಮತ್ತು 2Gb ದೈನಂದಿನ ಡೇಟಾವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ 395ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಅನ್ನು ಸಹ ನೀಡುತ್ತಿದೆ. ಈ ಪ್ಲಾನ್‌ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 71 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 142GB ಡೇಟಾ ಪ್ರಯೋಜನ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ನ SVT 499ರೂ. ಪ್ಲ್ಯಾನ್ ಕೂಡ ದೀರ್ಘಾವಧಿಯ ಪ್ಲಾನ್‌ ಆಗಿದೆ. ಇದು ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲಾನ್‌ ಕೂಡ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

Best Mobiles in India

English summary
BSNL has prepaid plans priced under Rs 250 that give validities of up to 90 days.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X