Home
ಸುದ್ದಿಜಾಲ

BSNL ಟೆಲಿಕಾಂನಿಂದ ಅಗ್ಗದ ಬೆಲೆಯ ಫೈಬರ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್ ರೀ ಲಾಂಚ್‌!

ಪ್ರಸ್ತುತ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾದಂತೆ ಇಂಟರ್‌ನೆಟ್‌ ಬಳಕೆ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಡೆರಹಿತ ಇಂಟರ್‌ನೆಟ್‌ ಸೇವೆಗಾಗಿ ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ಹಲವು ಬ್ರಾಂಡ್‌ಬ್ಯಾಂಡ್‌ ಕಂಪೆನಿಗಳು ಅನೇಕ ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಜಿಯೋ ಫೈಬರ್‌, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಕೂಡ ಸೇರಿವೆ. ಸದ್ಯ ಇದೀಗ ಬಿಎಸ್‌ಎನ್‌ಎಲ್‌ ತನ್ನ ಎಂಟ್ರಿಲೆವೆಲ್‌ ಪ್ಲಾನ್‌ ಅನ್ನು ಮತ್ತೊಮ್ಮೆ ಪರಿಚಯಿಸಿದೆ.

BSNL

ಹೌದು, ಸರ್ಕಾರಿ ಸ್ವಾಮ್ಯದ BSNL ಟೆಲಿಕಾಂ ತನ್ನ ಎಂಟ್ರಿ ಲೆವೆಲ್‌ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್‌ ಅನ್ನು ರಿ ಲಾಂಚ್‌ ಮಾಡಿದೆ. ಇನ್ನು ಈ ಪ್ಲಾನ್‌ನಿಮಗೆ 1000GB ಡೇಟಾ ಬಳಕೆಯವರೆಗೆ 30 Mbps ಡೌನ್‌ಲೋಡ್ ವೇಗವನ್ನು ನೀಡಲಿದೆ. ನಂತರ ಇಂಟರ್‌ನೆಟ್‌ ವೇಗವನ್ನು 2 Mbps ಗೆ ಇಳಿಸಲಾಗುತ್ತದೆ ಎನ್ನಲಾಗಿದೆ. ಸದ್ಯ ಈ ಪ್ಲಾನ್‌ 90 ದಿನಗಳ ಪ್ರಮೋಷನಲ್‌ ಅವಧಿಗೆ ಲಭ್ಯವಿದೆ. ಇನ್ನುಳಿದಂತೆ ಈ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ತನ್ನ ಎಂಟ್ರಿ ಲೆವೆಲ್‌ ಫೈಬರ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ರೀ ಲಾಂಚ್‌ ಮಾಡಿದೆ. ಇದು 90 ದಿನಗಳ ಪ್ರಮೋಷನಲ್‌ ಅವಧಿಯನ್ನು ಹೊಂದಿದೆ. 6 ತಿಂಗಳ ನಂತರ, ಬಳಕೆದಾರರನ್ನು 449ರೂ. ಬೆಲೆಯ ಫೈಬರ್ ಬೇಸಿಕ್ ಪ್ಲಾನ್‌ಗೆ ವರ್ಗಾಯಿಸಲಾಗುತ್ತದೆ ಎನ್ನಲಾಗಿದೆ. ಈ ಫೈಬರ್ ಪ್ಲಾನ್‌ ಮೂಲಕ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನ ಪಡೆಯಬಹುದಾಗಿದೆ.

ಬ್ರಾಡ್‌ಬ್ಯಾಂಡ್

ಇನ್ನು 449ರೂ.ಗಳ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್‌ ಬೇಸಿಕ್‌ ಪ್ಲಾನ್‌ ಎನಿಸಿಕೊಂಡಿದೆ. ಇದು 3.3TB ವೇಗ ಅಥವಾ 3300GB FUP ಮಿತಿಯವರೆಗೆ 30 Mbps ವೇಗವನ್ನು ಒಳಗೊಂಡಿದೆ. ತನ್ನ ನಿಗಧಿತ ವೇಗದ ಮಿತಿಯನ್ನು ತಲುಪಿದ ನಂತರ, ಇದರ ವೇಗ 2Mbps ಗೆ ಇಳಿಸಲಾಗುತ್ತದೆ. ಈ ಯೋಜನೆಯನ್ನು ಬಳಸುವ ಯಾವುದೇ ಬಳಕೆದಾರರು ಭಾರತದೊಳಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಯನ್ನು ಸಹ ಪಡೆಯುತ್ತಾರೆ. ಇದಲ್ಲದೆ ಬಿಎಸ್‌ಎನ್‌ಎಲ್‌ ಇನ್ನು ಅನೇಕ ಪೈಬರ್‌ ಬ್ಯಾಡ್‌ಬ್ಯಾಂಡ್‌ ಪ್ಲಾನ್‌ ಗಳನ್ನು ಹೊಂದಿದ್ದು, ಅವುಗಳು ಈ ಕೆಳಗಿನಂತಿವೆ.

BSNL

BSNL ಭಾರತ್ ಫೈಬರ್ ಸೂಪರ್‌ಸ್ಟಾರ್ ಪ್ರೀಮಿಯಂ 1:ಬಿಎಸ್‌ಎನ್‌ಎಲ್‌ನ ಈ ಪ್ಲಾನ್‌ 749ರೂ ಬೆಲೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ 100 GB ವರೆಗೆ 100 Mbps ವೇಗವನ್ನು ನೀಡುತ್ತದೆ. ನಿಗಧಿತ ವೇಗದ ಮಿತಿಯನ್ನು ತಲುಪಿದ ನಂತರ 5Mbps ಗೆ ಇಳಿಸಲಾಗುತ್ತದೆ. ಈ ಪ್ಲಾನ್‌ ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ.
BSNL ಭಾರತ್ ಫೈಬರ್ ಸೂಪರ್‌ಸ್ಟಾರ್ ಪ್ರೀಮಿಯಂ 2:ಇನ್ನು ಈ ಪ್ಲಾನ್‌ 949ರೂ ಬೆಲೆಯನ್ನು ಹೊಂದಿದೆ. ಇದು 150 Mbps ವೇಗವನ್ನು 200 GB ವರೆಗೆ ನೀಡುತ್ತದೆ. ನಂತರ 10 Mbpsಗೆ ಇಳಿಸಲಾಗುತ್ತದೆ. ಸದ್ಯ ಈ ಪ್ಲಾನ್‌ ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಮಾತ್ರವಲ್ಲದೆ ಏರ್‌ಟೆಲ್, ಜಿಯೋ ಮತ್ತು ಎಕ್ಸಿಟೆಲ್ ಕೂಡ ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಹೊಂದಿವೆ. ಇದರಲ್ಲಿ ಜಿಯೋಫೈಬರ್‌ 399ರೂ. ಪ್ಲಾನ್‌ ಕೂಡ ಒಂದಾಗಿದೆ. ಈ ಪ್ಲಾನ್‌ 30Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಯೋಜನೆಯು ಯಾವುದೇ OTT ಚಂದಾದಾರಿಕೆಗಳೊಂದಿಗೆ ಬರುವುದಿಲ್ಲ ಆದರೆ ಅನಿಯಮಿತ ಕರೆಯನ್ನು ನೀಡುತ್ತದೆ.
ಇನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 499 ರೂ.ಗಳಲ್ಲಿ ಬ್ರಾಡ್‌ಬ್ಯಾಂಡ್ ಅನ್ನು ನೀಡುತ್ತದೆ. ಇದು 40 Mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಪ್ರಯೋಜನವನ್ನು ನೀಡಲಿದೆ.ಈ ಪ್ಲಾನ್‌ ಹೆಚ್ಚುವರಿ ಪ್ರಯೋಜನಗಳನ್ನು ಏರ್‌ಟೆಲ್‌ ಎಕ್ಸ್‌ಟ್ರಿಮ್‌, ವಿಂಕ್‌ ಮ್ಯೂಸಿಕ್‌ ಮತ್ತು ಶಾ ಆಕಾಡೆಮಿಗೆ ಚಂದಾದಾರಿಕೆಯನ್ನು ನೀಡಲಿದೆ. ಇದಲ್ಲದೆ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಹಲವು ಪ್ಲಾನ್‌ ಹೊಂದಿದೆ. ಇದರಲ್ಲಿ 699ರೂ, ಪ್ಲಾನ್‌ 100 Mbps, 849ರೂ, ಪ್ಲಾನ್‌ 200 Mbps ಮತ್ತು 999ರೂ, ಪ್ಲಾನ್‌ 300 Mbps ವೇಗದ ಅನಿಯಮಿತ ಡೇಟಾವನ್ನು ನೀಡಲಿವೆ.

Best Mobiles in India

English summary
BSNL reintroduces Rs 399 fiber plan with 30 Mbps speed.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+