BSNL ನಿಂದ 100 ರೂ.ಒಳಗಿನ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯಲ್ಲಿ ಬದಲಾವಣೆ!

|

ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಬಂದಿದೆ. ಖಾಸಗಿ ಟಲಿಕಾಂಗಳಿಗೆ ಸೆಡ್ಡು ಹೊಡೆಯುವ ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಬಿಎಸ್‌ಎನ್‌ಎಲ್‌ 100ರೂ. ಒಳಗೆ ಲಭ್ಯವಿರುವ ಕೆಲವು ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಷ್ಕರಿಸಿದೆ. ತನ್ನ ಈ ಪ್ರಿಪೇಯ್ಡ್ ಪ್ಲಾನ್ ಗಳ ಬೆಲೆಯಲ್ಲಿ 1ರೂ ಅಥವಾ 2ರೂ.ಗಳಷ್ಟು ಕಡಿಮೆ ಮಾಡಿದೆ. ಇನ್ನು ಈ ಅಲ್ಪಾವಧಿಯ ಪ್ಲಾನ್‌ಗಳು ಬಳಕೆದಾರರ ಚಂದಾದಾರಿಕೆಯನ್ನು ಮುಂದುವರೆಸಿಕೊಂಡು ಹೋಗಲು ಸಹಾಯಕವಾಗಿವೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ತನ್ನ ಅಲ್ಪಾವಧಿಯ ಪ್ಲಾನ್‌ಗಳಲ್ಲಿ ದರ ಪರಿಷ್ಕರಣೆ ಮಾಡಿದೆ. ತಮ್ಮ ಚಂದಾದಾರಿಕೆ ಮುಂದುವರೆಸಿಕೊಂಡು ಹೋಗುವ ಬಳಕೆದಾರಿಗೆ ಈ ಪ್ಲಾನ್‌ಗಳು ಉಪಯುಕ್ತವಾಗಲಿದೆ. BSNL ಈ ಹಿಂದೆ ತನ್ನ ಸ್ಪೇಷಲ್‌ ಟಾರಿಫ್‌ ವೋಚರ್ ಅನ್ನು 54ರೂ.ಗಳಿಗೆ ನೀಡುತ್ತಿತ್ತು. ಈ ಪ್ಲಾನ್‌ 5600 ಸೆಕೆಂಡು ಲೋಕಲ್ ಮತ್ತು STD ಅನ್ನು ಯಾವುದೇ ನೆಟ್‌ವರ್ಕ್ ಕರೆಗಳಿಗೆ 8 ದಿನಗಳವರೆಗೆ ನೀಡುತ್ತದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಸದ್ಯ ಯಾವೆಲ್ಲಾ ಪ್ಲಾನ್‌ಗಳನ್ನು ಪರಿಷ್ಕರಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ತನ್ನ ಸ್ಪೇಷಲ್‌ ಟಾರಿಫ್‌ ವೋಚರ್‌ 57ರೂ ಪ್ಲಾನ್‌ ಅನ್ನು ಪರಿಷ್ಕರಿಸಿದೆ. ಇದು ಈಗ ನಿಮಗೆ 56ರೂ ಗಳಿಗೆ ಲಬ್ಯವಾಗಲಿದೆ. ಇದರಲ್ಲಿ ಗ್ರಾಹಕರು 10GB ಉಚಿತ ಡೇಟಾ ಮತ್ತು ಜಿಂಗ್ ಮ್ಯೂಸಿಕ್ ಆಪ್ ಅನ್ನು 10 ದಿನಗಳವರೆಗೆ ಪಡೆಯಲಿದ್ದಾರೆ. ಅಲ್ಲದೆ BSNL ತನ್ನ ಪ್ರಿಪೇಯ್ಡ್ ಯೋಜನೆಯನ್ನು ಪರಿಷ್ಕರಿಸಿದ್ದು 58ರೂ.ಬೆಲೆಯ ಪ್ಲಾನ್‌ ಈಗ 57ರೂ.ಗಳಿಗೆ ಲಭ್ಯವಿದೆ. ಈ ಪ್ಲಾನ್‌ ಬಳಕೆದಾರರಿಗೆ ತಮ್ಮ ಅಂತರಾಷ್ಟ್ರೀಯ ರೋಮಿಂಗ್ ಸೇವೆಯನ್ನು 30 ದಿನಗಳವರೆಗೆ ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಬಿಎಸ್‌ಎನ್‌ಎಲ್‌ ದರ ಪರಿಷ್ಕರಣೆ ಮಾಡಿರುವ ಬಗ್ಗೆ ಕೇರಳ ಟೆಲಿಕಾಂ ವರದಿ ಮಾಡಿದೆ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ ಇಂಟರ್‌ನ್ಯಾಷನಲ್‌ ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಕೂಡ ಪರಿಚಯಿಸಿದೆ. ಇದಕ್ಕಾಗಿ BSNL ಬಳಕೆದಾರರು ಈಗ ತಮ್ಮ ಅಸ್ತಿತ್ವದಲ್ಲಿರುವ SIM ಕಾರ್ಡ್ BSNL ನಿಂದ ಅಂತರಾಷ್ಟ್ರೀಯ ರೋಮಿಂಗ್ ಸಕ್ರಿಯಗೊಳಿಸಿದ SIM ಕಾರ್ಡ್‌ನೊಂದಿಗೆ ಸಕ್ರಿಯಗೊಳಿಸಲು 50ರೂ.ಶುಲ್ಕವನ್ನು ಖರ್ಚು ಮಾಡಬೇಕಾಗುತ್ತದೆ. ನೀವು ಅಂತಾರಾಷ್ಟ್ರೀಯ ಪ್ರಿಪೇಯ್ಡ್ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರು 57ರೂ. ಅಥವಾ 168ರೂ.ಗಳ ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಇದು ನಿಮಗೆ 30 ದಿನಗಳು ಅಥವಾ 90 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.

ಬಿಎಸ್‌ಎನ್‌ಎಲ್

ಇದಲ್ಲದೆ ಬಿಎಸ್‌ಎನ್‌ಎಲ್ ಗೂಗಲ್ ಮತ್ತು ಗೂಗಲ್ ಮಿನಿ ಆಫರ್‌ಗಳನ್ನು ಘೋಷಿಸಿದೆ. ಇದು ಬಳಕೆದಾರರಿಗೆ ರಿಯಾಯಿತಿ ದರದಲ್ಲಿ ಗೂಗಲ್ ಸ್ಮಾರ್ಟ್ ಸಾಧನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಗೂಗಲ್ ನೆಸ್ಟ್ ಮಿನಿ 4,999 ರೂ.ಬೆಲೆ ಹೊಂದಿದ್ದು, ಇದು ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಕೇವಲ 1,188ರೂ.ಗಳಿಗೆ ಲಭ್ಯವಾಗಲಿದೆ. ಇನ್ನು 9,999ರೂ.ಬೆಲೆಯ ಗೂಗಲ್ ನೆಸ್ಟ್ ಹಬ್ 2,388ರೂ.ಗಳಿಗೆ ಲಭ್ಯವಾಗಲಿದೆ. ಈ ರಿಯಾಯಿತಿ 799 ರೂ.ಗಿಂತ ಹೆಚ್ಚಿನ ಬೆಲೆಯ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ ಕೆಲದಿನಗಳ ಹಿಂದೆ ತನ್ನ ಪ್ರಮೋಷನಲ್‌ ಪ್ಲಾನ್‌ 699ರೂ ಪ್ಲಾನ್‌ ಅನ್ನು ಜನವರಿವರೆಗೆ ವಿಸ್ತರಿಸುವುದಾಗಿ ಹೇಳಿದೆ. ಬಳಕೆದಾರರು ಈ ಪ್ರಿಪೇಯ್ಡ್ ಪ್ಲಾನ್‌ ಅನ್ನು ರಿಟೇಲ್‌ ಸ್ಟೋರ್‌ಗಳ ಮೂಲಕ, 123ಗೆ SMS ಕಳುಹಿಸುವ ಮೂಲಕ ಅಥವಾ USSD ಕಿರುಸಂಕೇತವನ್ನು ಡಯಲ್ ಮಾಡುವ ಮೂಲಕ ಪಡೆಯಬಹುದು. ಸದ್ಯ ಈ ಬೆಳವಣಿಗೆಯನ್ನು ಕೇರಳ ಟೆಲಿಕಾಂ ಮೊದಲು ವರದಿ ಮಾಡಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಹಾಗೂ ಡೈಲಿ 100 ಸಂದೇಶ ಪ್ರಯೋಜನವನ್ನು ಒಳಗೊಂಡಿದೆ. ಅಧಿಕ ಡೇಟಾ ಬಯಸದೆ ಅಧಿಕ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ BSNL ನ 699 ರೂ.ಪ್ಲಾನ್‌ ಸೂಕ್ತವಾಗಿದೆ. ಇದು 180 ದಿನಗಳ ವ್ಯಾಲಿಡಿಟಿಯನ್ನು ನೀಡುವ ಯೋಜನೆ ಆಗಿದೆ. ಈ ಪ್ಲಾನ್‌ 0.5GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡಲಿದೆ.

ಬಿಎಸ್‌ಎನ್‌ಎಲ್‌

ಇದಿಷ್ಟೇ ಅಲ್ಲ ಬಿಎಸ್‌ಎನ್‌ಎಲ್‌ ಕೆಲ ದಿನಗಳ ಹಿಂದೆ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಬಿಎಸ್‌ಎನ್‌ಎಲ್‌ ಸೆಲ್ಫ ಕೇರ್‌ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ ಮೂಲಕ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮುಖ್ಯ ಖಾತೆಯ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
BSNL has revised some prepaid plans under Rs 100.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X