ಜುಲೈ 20 ರಿಂದ ಟೆಲಿಕಾಂನಲ್ಲಿ ಹೊಸದೊಂದು ಕ್ರಾಂತಿ ಹುಟ್ಟುಹಾಕುತ್ತಿದೆ 'ಬಿಎಸ್‌ಎನ್‌ಎಲ್'!!
ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಭಾರೀ ಪೈಪೋಟಿ ನೀಡುತ್ತಿರುವ ಸರ್ಕಾರಿ ನಿಯಮಿತ ಟೆಲಿಕಾಂ ಕಂಪೆನಿ 'ಬಿಎಸ್‌ಎನ್‌ಎಲ್' ಕಂಪನಿ ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿಗೆ ಮುಂದಾಗಿದೆ. ಡಿಜಿಟಲ್ ಇಂಡಿಯಾಕ್ಕೆ ಬದಲಾಗುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇನ್ನು ಮುಂದೆ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೌಲಭ್ಯವನ್ನು ಆರಂಭಿಸಲಿದೆ.
ಹೌದು, ಇದೇ ಮೊದಲ ಬಾರಿಗೆ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೇವೆಯನ್ನು ಇದೇ ತಿಂಗಳ 20ನೇ ತಾರೀಖಿನಿಂದ ಬಿಎಸ್‌ಎನ್‌ಎಲ್ ಆರಂಭಿಸುತ್ತಿದೆ. ಇದರಿಂದ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೆ ಸಂಚಲನವನ್ನು ಉಂಟು ಮಾಡುವ ಸಾಧ್ಯತೆ ಇದ್ದು, ಜಿಯೋ ಪ್ರಕಟಿಸಿದ ಜಿಯೋ ಗಿಗಾ ಫೈಬರ್ ಸೇವೆಗೂ ಕೂಡ ಇದು ಸೆಡ್ಡು ಹೊಡೆಯಲಿದೆ ಎಂದು ಹೇಳಲಾಗುತ್ತಿದೆ.

ಸ್ಥಿರ ದೂರವಾಣಿಯಲ್ಲಿ ಇದೇ ಮೊದಲ ಬಾರಿಗೆ ಪ್ರೀಪೇಯ್ಡ್ ಕರೆ ಸೇವೆ ಸಿಗಲಿದ್ದು, ಇದಕ್ಕಾಗಿ ಪ್ರತ್ಯೇಕ ದೂರವಾಣಿ ಕೇಂದ್ರ ಅಥವಾ ಕೇಬಲ್ ಬೇಕಾಗಿಲ್ಲ ಎಂದು ಬಿಎಸ್‌ಎನ್‌ಎಲ್ ಸಂಸ್ಥೆ ತಿಳಿಸಿದೆ. ಹಾಗಾದರೆ, ಸ್ಥಿರ ದೂರವಾಣಿಯಲ್ಲಿ ಬಿಎಸ್‌ಎನ್‌ಎಲ್ ಪ್ರೀಪೇಯ್ಡ್ ಸೇವೆ ಹೇಗಿರಲಿದೆ?, ಇದರಿಂದ ಗ್ರಾಹಕರಿಗೆ ಆಗುವ ಲಾಭಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಏನಿದು ಪ್ರೀಪೇಯ್ಡ್ ಸೌಲಭ್ಯ?
ಪ್ರತಿಯೊಂದು ದೂರವಾಣಿ ವಿನಿಮಯ ಕೇಂದ್ರ (ಟೆಲಿಕಾಂ ಎಕ್ಸ್‌ಚೇಂಜ್)ಗಳಲ್ಲಿ ಇರುವ ಹಾಲಿ ತಾಂತ್ರಿಕ ವ್ಯವಸ್ಥೆಯಲ್ಲೇ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ. ನೆಕ್ಸ್ಟ್ ಜನರೇಷನ್ ನೆಟ್‌ವರ್ಕ್ಸ್ (ಎನ್‌ಜಿಎನ್) ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದ್ದು, ಮನೆಯ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೌಲಭ್ಯವನ್ನು ನಿಯಂತ್ರಿಸಲಾಗುತ್ತದೆ.

ಮೊಬೈಲ್‌ನಂತೆ ಕಾರ್ಯನಿರ್ವಹಣೆ!
ಮನೆಯ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೌಲಭ್ಯವನ್ನು ಪಡೆಯುವುದು ಒಂದು ರೀತಿಯಲ್ಲಿ ಮೊಬೈಲ್‌ನಂತೆಯೇ ಕಾರ್ಯನಿರ್ವಹಿಸಲಿದೆ. ಪ್ರತಿ ತಿಂಗಳು ಯಾವುದೇ ಬಾಡಿಗೆ ದರಗಳು ಹಾಗೂ ರಿಜಿಸ್ಟ್ರೇಷನ್ ಚಾರ್ಜ್ ಸೇರಿದಂತೆ ಯಾವುದೇ ಹೆಚ್ಚಿನ ದರಗಳನ್ನು ಇಲ್ಲಿ ವಿಧಿಸಲಾಗುವುದಿಲ್ಲ. ಗ್ರಾಹಕರ ಇಚ್ಚೆಯಂತೆ ಈಗ ಸೇವೆಗಳು ಅವರಿಗೆ ಸಿಗಲಿವೆ.

ಹೊಸ ದೂರವಾಣಿ ಪಡೆಯಬೇಕು!
ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೌಲಭ್ಯವನ್ನು ಪಡೆಯಲು ಬಿಎಸ್‌ಎನ್‌ಎಲ್‌ನಿಂದ ಪ್ರತ್ಯೇಕವಾಗಿ ಸ್ಥಿರ ದೂರವಾಣಿ ಸೆಟ್‌ನ್ನು ಪಡೆಯಬೇಕಿದೆ. ಹಾಲಿ ಸ್ಥಿರ ದೂರ ವಾಣಿ ಸಂಪರ್ಕ ಹೊಂದಿರುವವರಿಗೆ ಬಿಎಸ್‌ಎನ್‌ಎಲ್ ವತಿಯಿಂದಲೇ ಹೊಸ ದೂರವಾಣಿ ಸೆಟ್ ಪೂರೈಕೆಯಾಗಲಿದೆ. ಇದಕ್ಕಾಗಿ 625 ರೂ. ಪಾವತಿಸಬೇಕು ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

ಅನುಷ್ಠಾನ ಶುಲ್ಕವನ್ನು ನೀಡಬೇಕಾಗಿಲ್ಲ.
ಸ್ಥಿರ ದೂರವಾಣಿ ಪ್ರೀಪೇಯ್ಡ್ ಹೊಸ ಸಂಪರ್ಕ ಪಡೆಯಲು ಠೇವಣಿ, ಅನುಷ್ಠಾನ ಶುಲ್ಕವನ್ನು ನೀಡಬೇಕಾಗಿಲ್ಲ. ಬಿಎಸ್‌ಎನ್‌ಎಲ್‌ನಿಂದ ಪ್ರತ್ಯೇಕವಾಗಿ ಸ್ಥಿರ ದೂರವಾಣಿ ಸೆಟ್‌ನ್ನು ಪಡೆದುಕೊಂಡರೆ ಸಾಕು. ಪ್ರೀಪೇಯ್ಡ್ ಸೌಲಭ್ಯ ಪಡೆಯುವುದನ್ನು ಆಯಾ ಗ್ರಾಹಕರ ಆಯ್ಕೆಗೆ ಬಿಡಲಾಗಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.

ಮೌಲ್ಯವರ್ಧಿತ ಸೇವೆ
ಪ್ರೀಪೇಯ್ಡ್ ಸ್ಥಿರ ದೂರವಾಣಿ ಸೌಲಭ್ಯವು ಸ್ಥಿರ ದೂರವಾಣಿಯಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡಲಿದೆ. ಈಗಿನಂತೆ ಕಂಪ್ಯೂಟರ್‌ನಲ್ಲಿ ವೇಗದ ಇಂಟರ್ ನೆಟ್ ಬಳಸಲು, ಸ್ಥಿರ ದೂರವಾಣಿಯಲ್ಲಿ ಮೊಬೈಲ್ ಮಾದರಿಯ ಸೇವೆ ನೀಡಲು ಸಾಧ್ಯವಾಗಲಿದೆ. ವೋಚರ್ ಕಾರ್ಡ್ ಮತ್ತು ಆನ್‌ಲೈನಿನಲ್ಲಿ ರೀಚಾರ್ಜ್ ಮಾಡಿಸಬಹುದಾಗಿದೆ.

ಜಿಯೋ ಗಿಗಾ ಫೈಬರ್‌ಗೆ ಸೆಡ್ಡು!
ಮೊಬೈಲ್ ಪೈಪೋಟಿಯ ಭರದಲ್ಲಿ ಸ್ಥಿರ ದೂರವಾಣಿ ಕಣ್ಮರೆಯಾಗುತ್ತಿದೆ. ಅಂತಹ ವೇಳೆ ಸ್ಥಿರ ದೂರವಾಣಿಯ ಪ್ರೀಪೇಯ್ಡ್ ಸೌಲಭ್ಯವು ಜಿಯೋವಿನ ಗಿಗಾ ಫೈಬರ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ವೈರ್‌ಗಳ ಸಹಾಯದಿಂದ ವೇಗದ ಇಂಟರ್ ನೆಟ್ ಬಳಸಲು ಸಹಾಯ ಮಾಡುವ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಬೆಲೆಯನ್ನು ಕಡಿತಗೊಳಿಸಲು ಮುಂದಾಗಿದೆ.

10 ರೂ.ನಿಂದ ಗರಿಷ್ಠ 2000 ರೂ.ವರೆಗೆ
ಈಗ ಸಿಕ್ಕಿರುವ ಮಾಹಿತಿಯಂತೆ ಬಿಎಸ್‌ಎನ್‌ಎಲ್ ಕನಿಷ್ಠ 10 ರೂ.ನಿಂದ ಗರಿಷ್ಠ 200 ರೂ.ವರೆಗೆ ರೀಚಾರ್ಜ್ ಟಾರಿಫ್ ಅನ್ನು ಆರಂಭದ ಹಂತದಲ್ಲಿ ನೀಡುತ್ತಿದೆ. ವಾರ್ಷಿಕ 1999 ರೂ.ಗಳ ಟಾರಿಫ್ ಅನ್ನು ಪರಿಚಯಿಸುತ್ತಿದೆ. ಮಾಸಿಕ ಯಾವುದೇ ನೆಟ್‌ವಕ್ ಗರ್ಳಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರತ್ಯೇಕ ಸರ್ವರ್‌ಗಳು!!
2013 ರಲ್ಲಿ ಪ್ರಾಯೋಗಿಕವಾಗಿ ಇಂತಹ ಯೋಜನೆಯೊಂದನ್ನು ಬಿಎಸ್‌ಎನ್‌ಎಲ್ ಜಾರಿಗೆ ತರಲು ಮುಂದಾಗಿತ್ತು, ಬಳಿಕ ತಾಂತ್ರಿಕ ಕಾರಣಕ್ಕೆ ಕೈಬಿಟ್ಟಿತ್ತು. ಆದರೆ, ಈಗ ಹೊಸ ತಂತ್ರಜ್ಞಾನದ ಪ್ರತ್ಯೇಕ ಸರ್ವರ್‌ಗಳನ್ನು ಎಲ್ಲ ಟೆಲಿಕಾಂ ಎಕ್ಸ್‌ಚೇಂಜ್ ಗಳಲ್ಲಿ ಅಳವಡಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ದೂರವಾಣಿ ಕೇಂದ್ರ ಅಥವಾ ಕೇಬಲ್ ಬೇಕಾಗಿಲ್ಲ.!


Click it and Unblock the Notifications








