395 ದಿನಗಳು.. BSNL ಸೂಪರ್ ಪ್ಲಾನ್! ಶೀಘ್ರದಲ್ಲೇ ದೇಶಾದ್ಯಂತ 4G ಸೇವೆ
ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಇದೆ. ಇನ್ಮುಂದೆ 13 ತಿಂಗಳು ರೀಚಾರ್ಜ್ ಬಗ್ಗೆ ಚಿಂತೆಯೇ ಇಲ್ಲ. ಹೌದು, ಬಿಎಸ್ಎನ್ಎಲ್ (BSNL) ಶೀಘ್ರದಲ್ಲೇ ದೇಶಾದ್ಯಂತ ತನ್ನ 4G ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದು ನೆಟ್‌ವರ್ಕ್ ಅಪ್‌ಗ್ರೇಡ್ ಮತ್ತು ಆಕರ್ಷಕ ಯೋಜನೆಗಳೊಂದಿಗೆ ಹೊಸ ಕೊಡುಗೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ 2,399 ರೂ. ರೀಚಾರ್ಜ್‌ನೊಂದಿಗೆ 395 ದಿನಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ನೀವು ಅನಿಯಮಿತ ಕರೆ ಮತ್ತು ಪ್ರತಿದಿನ 2GB ಡೇಟಾವನ್ನು ಪಡೆಯಬಹುದು. ಡೇಟಾ ಮಿತಿ ಪೂರ್ಣಗೊಂಡರೂ 40KBPS ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು.
ಹೌದು, ಟೆಲಿಕಾಂ ಕ್ಷೇತ್ರದ ದೈತ್ಯಗಳಲ್ಲಿ ಒಂದಾಗಿರುವ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್ ಇದೀಗ ಗ್ರಾಹಕರನ್ನು ತನ್ನತ್ತ ಸೆಳೆಯಲು ಭರ್ಜರಿ ಪ್ಲ್ಯಾನ್ ರೂಪಿಸಿದೆ. ಜುಲೈ ತಿಂಗಳ ಆರಂಭದಲ್ಲಿಯೇ ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್ ದರಗಳಲ್ಲಿ ಏರಿಕೆ ಕಂಡಿದ್ದರಿಂದ ಬಳಕೆದಾರರು, ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಈಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಅದರಂತೆ, ಬಿಎಸ್ಎನ್ಎಲ್ ಅಸಾಧಾರಣ ಯೋಜನೆಗಳಲ್ಲಿ ಒಂದಾದ 395 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಇನ್ಮುಂದೆ ಬಳಕೆದಾರರು 13 ತಿಂಗಳ ವರೆಗೆ ರೀಚಾರ್ಜ್ ಬಗ್ಗೆ ಚಿಂತಿಸಬೇಕಾಗಿಲ್ಲ.

BSNL 4G 395 ದಿನಗಳ ಯೋಜನೆಯ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ನ 13 ತಿಂಗಳ ಯೋಜನೆಯು 2,399 ರೂ.ಗಳ ಬೆಲೆಯಲ್ಲಿ ಲಭ್ಯವಿದೆ. ಅಂದರೆ, ತಿಂಗಳಿಗೆ 200 ರೂ.ಗಳನ್ನು ವಿಧಿಸುತ್ತಿದೆ. ಈ ಯೋಜನೆಯಲ್ಲಿ ಯಾವ ರೀತಿಯ ಸೇವೆಗಳು ಲಭ್ಯವಿದೆ ಎಂಬುದನ್ನು ತಿಳಿಯೋಣ ಬನ್ನಿ.
* ಈ ಪ್ರಿಪೇಯ್ಡ್ ಯೋಜನೆಯು 395 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅಂದರೆ, ಇದು 13 ತಿಂಗಳ ವರೆಗಿನ ರೀಚಾರ್ಜ್‌ಗೆ ಸಮಾನವಾಗಿರುತ್ತದೆ.
* ಈ ಯೋಜನೆಯಲ್ಲಿ ನೀವು ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ಪಡೆಯುತ್ತೀರಿ.
* ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಪ್ರತಿನಿತ್ಯ 100 ಉಚಿತ SMS ಅನ್ನು ಪಡೆಯುತ್ತಾರೆ.
* ಈ ಯೋಜನೆಯು ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳನ್ನು ಸಹ ಒಳಗೊಂಡಿದೆ
* ದೇಶಾದ್ಯಂತ ಉಚಿತ ರೋಮಿಂಗ್ ಸೌಲಭ್ಯ ಇರಲಿದೆ.
* ಅನೇಕ ಮೌಲ್ಯವರ್ಧಿತ ಸೇವೆಗಳನ್ನು ಸಹ ಸೇರಿಸಲಾಗಿದೆ.
* ಈ ಸೇವೆಗಳಲ್ಲಿ ಜಿಂಗ್ ಮ್ಯೂಸಿಕ್, ಬಿಎಸ್‌ಎನ್‌ಎಲ್ ಟ್ಯೂನ್ಸ್, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್ ಮತ್ತು ಗೇಮೆನ್ ಆಸ್ಟ್ರೋಟೆಲ್ ಮುಂತಾದ ಸೇವೆಗಳನ್ನು ಒಳಗೊಂಡಿವೆ.
BSNL 365 ದಿನಗಳ ಯೋಜನೆಯ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ನ ಮತ್ತೊಂದು 365 ದಿನಗಳ ಯೋಜನೆಯು 1,999 ರೂ. ಬೆಲೆಯಲ್ಲಿ ಲಭ್ಯವಿದೆ. ಇದು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯು ಬಳಕೆದಾರರನ್ನು ವರ್ಷವಿಡೀ ಪದೇ ಪದೆ ರೀಚಾರ್ಜ್ ಮಾಡುವ ಕಿರಿಕಿರಿಯಿಂದ ದೂರ ಉಳಿಸುತ್ತದೆ. ಈ ಯೋಜನೆಯ ಪ್ರಯೋಜನಗಳ ವಿವರಗಳು ಈ ಕೆಳಗಿನಂತಿವೆ.

* ಬಿಎಸ್‌ಎನ್‌ಎಲ್‌ನಿಂದ ಮತ್ತೊಂದು ದೀರ್ಘವಧಿಯ ವ್ಯಾಲಿಡಿಟಿ ಆಯ್ಕೆಯು 365 ದಿನಗಳ ಯೋಜನೆಯಾಗಿದೆ.
* ಈ ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ ದೈನಂದಿನ ಬಳಕೆಯ ಮಿತಿಯಿಲ್ಲದೆ ಒಟ್ಟು 600GB ಡೇಟಾವನ್ನು ನೀಡುತ್ತದೆ. ನೀವು ಇದನ್ನು ಯಾವಾಗ ಬೇಕಾದರೂ ಬಳಸಬಹುದು.
* ಬಳಕೆದಾರರು ಪ್ರತಿದಿನ 100 ಉಚಿತ SMS ಅನ್ನು ಸಹ ಪಡೆಯುತ್ತಾರೆ.
* ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಲಭ್ಯವಿದೆ.
ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಆಗಸ್ಟ್‌ನಿಂದ ದೇಶಾದ್ಯಂತ 4G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಸುಮಾರು 10000 ಟವರ್‌ಗಳನ್ನು ಈ ಉದ್ದೇಶಕ್ಕಾಗಿ ನವೀಕರಿಸಲಾಗಿದೆ. ಇದರಿಂದ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗೆ ಪೈಪೋಟಿ ನೀಡುವ ಅವಕಾಶ ದೊರೆಯಲಿದೆ. ಇತ್ತೀಚೆಗೆ, BSNL ತನ್ನ ಸಾಮಾಜಿಕ ಮಾಧ್ಯಮದ ಮೂಲಕ 4G ಸೇವೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದೆ. 4G ರೀಚಾರ್ಜ್ ಯೋಜನೆಗಳ ವಿವರಗಳನ್ನು YouTube ವಿಡಿಯೋ ಮೂಲಕ ಬಹಿರಂಗಪಡಿಸಲಾಗಿದೆ.
ಶೀಘ್ರದಲ್ಲೇ ಇದು ದೇಶಾದ್ಯಂತ ಲಭ್ಯ
ಈ BSNL 4G ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳೊಂದಿಗೆ ನೀವು ಅನಿಯಮಿತ ಕರೆ, 4G ಡೇಟಾ ಸೇವೆಗಳು ಸೇರಿದಂತೆ ಮನರಂಜನೆ, ಗೇಮಿಂಗ್, ಮ್ಯೂಸಿಕ್‌ನಂತಹ ಮೌಲ್ಯವರ್ಧಿತ ಸೇವೆಗಳನ್ನು ಪಡೆಯಬಹುದು. ಸಂಪೂರ್ಣ ಸ್ವದೇಶಿ ಜ್ಞಾನದೊಂದಿಗೆ ವಿನ್ಯಾಸಗೊಳಿಸಲಾದ 4G ನೆಟ್‌ವರ್ಕ್ ಕುರಿತು ಈ ವಿಡಿಯೋ ವಿವರಿಸುತ್ತದೆ. ಸದ್ಯದಲ್ಲೇ ಇದು ದೇಶಾದ್ಯಂತ ಲಭ್ಯವಾಗಲಿದೆ.


Click it and Unblock the Notifications








