Subscribe to Gizbot

BSNL ನಿಂದ ಸಿಡಿಎಂಎ ಗ್ರಾಹಕರಿಗೆ ವಿಶೇಷ ಪ್ಲಾನ್‌

Posted By: Super
BSNL ನಿಂದ ಸಿಡಿಎಂಎ ಗ್ರಾಹಕರಿಗೆ ವಿಶೇಷ ಪ್ಲಾನ್‌

ಮುಂಬರುವ ದೀಪಾವಳಿ ಹಾಗೂ ಆಯುಧ ಪೂಜೆ ಹಬ್ಬಗಳ ಅಂಗವಾಗಿ ಬಹುತೇಕ ಎಲ್ಲಾ ಗ್ರಾಹಕ ಸರಕು ಉತ್ಪನ್ನ ಸಂಸ್ಥೆಗಳು ವಿಶೇಷ ಆಫರ್‌ಗಳನ್ನು ಪ್ರಕಟಗೊಳಿಸಿ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ. ಅದರಂತೆಯೇ ಬಿಎಸ್‌ಎನ್‌ಎಲ್‌ ಕೂಡ ಕರ್ನಾಟಕ ಹಾಗೂ ಕೇರಳಾದಲ್ಲಿನ ಪ್ರೀಪೇಯ್ಡ್‌ ಸಿಡಿಎಂಎ ಗ್ರಾಹಕರುಗಳಿಗೆ ವಿಶೇಷ ಆಫರ್‌ಗಳನ್ನು ನೀಡಲು ಮುಂದಾಗಿದ್ದು ಜಾಯ್‌ 'ಸಿಡಿಎಂಎ ಪ್ಲಾನ್‌' ಹಾಗೂ 'ಹರ್ಷ ಸಿಡಿಎಂಎ' ಪ್ಲಾನ್‌ ಎಂದು ಹೆಸರಿಟ್ಟಿದೆ.

ಕೇರಳಾ ಗ್ರಾಹಕರಿಗಾಗಿ ರೂ 85 ವೆಚ್ಚದಲ್ಲಿ ಜಾಯ್‌ CDMA ಪ್ಲಾನ್‌

CDMA ಪ್ರೀ ಪೇಯ್ಡ್‌ ಸ್ಕೀಮ್‌ನ ಪ್ರಕಾರ ಗ್ರಾಹಕರು BSNL ನೆಟ್ವರ್ಕ್‌ಗಳಿಗೆ 1 ಪೈಸೆ ಪ್ರತಿ 2 ಸೆಕೆಂಡುಗಳಿಗೆ ಹಾಗೂ ಉಳಿದ ಎಲ್ಲಾ ಕರೆಗಳನ್ನು 1 ಪೈಸೆ/ಪ್ರತಿ ಸೆಕೆಂಡಿನಂತೆ ಮಾಡಬಹುದಾಗಿದೆ. BSNL ನ ಸ್ಥಳೀಯ ಕರೆಗಳನ್ನು ಸಂಜೆ 8 ರಿಂದ 10 ಗಂಟೆ ಒಳಗಾಗಿ ಮಾಡಿದಲ್ಲಿ ಪ್ರತಿನಿಮಿಷಕ್ಕೆ 10 ಪೈಸೆ ಚಾರ್ಜ್‌ ಮಾಡಲಾಗುತ್ತದೆ.

ಕರೆ ದರಗಳನ್ನು ಕಡಿಮೆ ಮಾಡುವುದರ ಜೊತೆಗೆ ಮೊದಲ ತಿಂಗಳಿನಲ್ಲಿ 250 ಸ್ಥಳೀಯ ಕರೆಗಳು, 100 ಸ್ಥಳೀಯ/ರಾಷ್ಟ್ರೀಯ ಎಸ್‌ಎಂಎಸ್‌ ಹಾಗು 50 MB ಡೇಟಾ ಬಳಕೆ ಮಾಡಬಹುದಾಗಿದೆ. 180 ದಿನಗಳು ಕಳೆದ ನಂತರ ಕರೆದರಗಳು ಹಾಗೆಯೇ ಉಳಿಯಲಿದೆ. ನಂತರ ಅದೇ ಪ್ಲಾನ್‌ ಮುಂದುವರೆಸ ಬೇಕೆಂದಿರುವವರು 34 ಪ್ಲಾನ್‌f ವೋಚರ್‌ ಮೂಲಕ ಪಡೆದುಕೊಳ್ಳ ಬಹುದಾಗಿದೆ. ಇದರಿಂದ ಮುಂದಿನ 180 ದಿನಗಳವರೆ ಪ್ಲಾನ್‌ ಮುಂದುವರೆಯುತ್ತದೆ..

ಕರ್ನಾಟಕ ಗ್ರಾಹಕರಿಗಾಗಿ ರೂ 86 ವೆಚ್ಚದಲ್ಲಿ ಹರ್ಷ CDMA ಪ್ಲಾನ್‌

ಈ ಪ್ಲಾನ್‌ನಲ್ಲಿಯೂ ಕೂಡ ಜಾಯ್‌ CDMA ಪ್ಲಾನ್‌ನಂತೆಯೇ ಆಕರ್ಷಕ ಕರೆದರಗಳನ್ನು ನೀಡಲಾಗಿದ್ದು ಮೊದಲ 30 ದಿನಗಳಲ್ಲಿ 100 ಎಸ್‌ಎಂಎಸ್‌ ಗಳ ಬದಲಾಗಿ 500 ಎಸ್‌ಎಂಎಸ್‌ಗಳನ್ನು ಪಡೆಯಲಿದ್ದಾರೆ.

ಇದನ್ನು ಹೊರತು ಪಡಿಸಿದೆ CDMA ಪ್ಲಾನ್‌ನ ಉಳಿದೆಲ್ಲಾ ಆಫರ್‌ಗಳು ಹಾಗೆಯೇ ಇವೆ.ವೆತ್ಯಾಸ ವೇನೆಂದರೆ 85 ರೂ. ಬದಲಾಗಿ 86 ರೂಪಾಯಿಯ ವೋಚರ್‌ ರೆಚಾರ್ಹ್‌ ಮಾಡಿಕೊಳ್ಳ ಬೇಕಾಗುತ್ತದೆ.

ಒಟ್ಆರೆ ಕರ್ನಾಟಕ ಹಾಗು ಕೇರಳಾ CDMA ಗ್ರಾಹಕರುಗಳಿಗೆ ಈ ಹಬ್ಬದ ಶೀಸನ್‌ನಲ್ಲಿ ಉತ್ತಮ ಆಪರ್‌ ಲಭ್ಯವಾಗಿದ್ದು 8 ರಿಂದ 10 ಗಂಟೆ ನಡುವಿನ ಹ್ಯಾಪಿ ಅವರರ್ಸ್‌ನಲ್ಲಿ 10 ಪ್ತಿ ನಿಮಿಷ ದಂತೆ ಕರೆ ಮಾಡಬಹುದಾಗಿದೆ.

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot