Home
ಸುದ್ದಿಜಾಲ

ಈ ಗ್ರಾಹಕರಿಗೆ 25% ರಿಯಾಯಿತಿ ನೀಡುತ್ತದೆ ಬಿಎಸ್ಎನ್ಎಲ್

By Gizbot Bureau

ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಮಗ್ ಲಿಮಿಟೆಡ್(ಬಿಎಸ್ಎನ್ಎನ್) ಮಾರ್ಚ್ 31 ರ ವರೆಗೆ ತನ್ನ ವಾರ್ಷಿಕ ಪ್ಲಾನಿನ 25% ಕ್ಯಾಷ್ ಬ್ಯಾಕ್ ಆಫರ್ ನ್ನು ವಿಸ್ತರಣೆ ಮಾಡಿದೆ. ಬಿಎಸ್ಎನ್ಎಲ್ ಕಾರ್ಪೋರೇಟ್ ನ ಟ್ವೀಟರ್ ಅಕೌಂಟ್ ನಲ್ಲಿ ಇದನ್ನು ಅಧಿಕೃತವಾಗಿ ತಿಳಿಸಲಾಗಿದೆ. ಈ ಆಫರ್ ಬಿಎಸ್ಎನ್ಎಲ್ ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಲಭ್ಯವಿರುತ್ತದೆ.

ಬಿಎಸ್ಎನ್ಎಲ್ ನ ಟ್ವೀಟ್ ಹೀಗಿದೆ:

ಬಿಎಸ್ಎನ್ಎಲ್ ನ ಟ್ವೀಟ್ ಹೀಗಿದೆ:

#CashBack offer extended. Get flat 25% off on #BSNL annual subscription #Plans. #GoGetIt #GrabIt...

ಗ್ರಾಹಕರು ಈ ಕ್ಯಾಷ್ ಬ್ಯಾಕ್ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು :

ಗ್ರಾಹಕರು ಈ ಕ್ಯಾಷ್ ಬ್ಯಾಕ್ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು :

- ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ಗೆ ಲಾಗಿನ್ ಆಗಿ.

- ಚಂದಾದಾರಿಕೆಯ ಸ್ಕೀಮಿನ ಚಂದಾದಾರಿಕೆಗೆ ಒಪ್ಪಿಗೆ ಸೂಚಿಸಿ

- ನೀವು ಒಪ್ಪಿಗೆ ಸೂಚಿಸಿದ ಕೂಡಲೇ ಹೊಸ ವಿಂಡೋ ತೆರೆದುಕೊಳ್ಳುತ್ತದೆ

- ಸರ್ವೀಸ್ ಐಡಿಯನ್ನು ಎಂಟರ್ ಮಾಡಿ( ಲ್ಯಾಂಡ್ ಲೈನ್ ಅಥವಾ FTTH ಬ್ರಾಡ್ ಬ್ಯಾಂಡ್ ನಂಬರ್ ಜೊತೆಗೆ ಕ್ಯಾಪ್ಚಾವನ್ನು ಎಂಟರ್ ಮಾಡಿ.

- ಒಟಿಪಿಯನ್ನು ಎಂಟರ್ ಮಾಡಿ. ಅದು ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಬರುತ್ತದೆ.

- ಒಟಿಪಿ ಎಂಟರ್ ಮಾಡಿ ವ್ಯಾಲಿಡೇಟ್ ನ್ನು ಪ್ರೆಸ್ ಮಾಡಿ

- ನಿಮ್ಮ ಸದ್ಯದ ಪ್ಲಾನಿನ ವಿವರವನ್ನು ಮತ್ತು ವಾರ್ಷಿಕವಾಗಿ ಪ್ರಪೋಸ್ ಮಾಡಲಾಗಿರುವ ಪ್ಲಾನಿನ ವಿವರವನ್ನು ಪರಿಶೀಲಿಸಿ.

- ಒಂದು ವೇಳೆ ನೀವು 25% ಕ್ಯಾಷ್ ಬ್ಯಾಕ್ ಗೆ ನಿಮ್ಮ ಪ್ಲಾನ್ ನ್ನು ಬದಲಾಯಿಸಲು ಇಚ್ಛಿಸಿದರೆ ಸಬ್ಮಿಟ್ ಬಟನ್ ನ್ನು ಕ್ಲಿಕ್ಕಿಸಿ.ಯಾವುದೇ ಬದಲಾವಣೆಯ ಅಗತ್ಯವಿಲ್ಲದೇ ಇದ್ದರೆ ಕ್ಯಾನ್ಸಲ್ ನ್ನು ಕ್ಲಿಕ್ಕಿಸಿ.

- ಒಮ್ಮೆ ಆರ್ಡರ್ ಸೃಷ್ಟಿಯಾದ ಕೂಡಲೇ ನಿಮ್ಮ ಸ್ಕ್ರೀನಿನ ಮೇಲೆ ಬದಲಾಗಿರುವ ರಿಕ್ವೆಸ್ಟ್ ನಂಬರ್ ಸಹಿತವಾಗಿರುವ ಮೆಸೇಜ್ ಕಾಣಿಸುತ್ತದೆ.

ನೆನಪಿನಲ್ಲಿ ಇಡಬೇಕಾದ ಅಂಶಗಳು:

ನೆನಪಿನಲ್ಲಿ ಇಡಬೇಕಾದ ಅಂಶಗಳು:

ನೀವು ನೆನಪಿನಲ್ಲಿ ಇಡಬೇಕಾಗಿರುವ ಅಂಶವೇನೆಂದರೆ ಗ್ರಾಹಕರು ಈ ರಿಕ್ವೆಸ್ಟ್ ನ್ನು ಕೇವಲ ತಿಂಗಳಿಗೆ ಒಮ್ಮೆ ಮಾತ್ರ ಬದಲಾಯಿಸುವುದಕ್ಕೆ ಅವಕಾಶವಿರುತ್ತದೆ ಮತ್ತು ಒಂದು ವೇಳೆ ಪ್ಲಾನ್ ಚೇಂಜ್ ಮಾಡುವುದಕ್ಕೆ ಮನವಿ ಈಗಾಗಲೇ ಪ್ರೊಗ್ರೆಸ್ ನಲ್ಲಿದ್ದರೂ ಕೂಡ ಪುನಃ ಹೊಸ ರಿಕ್ವೆಸ್ಟ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಗ್ರಾಹಕರಿಂದ ವಾರ್ಷಿಕ ಪ್ಲಾನಿನ ಬಿಲ್ ಪಾವತಿ ಆದ ನಂತರ ಇನ್ ವಾಯ್ಸ್ ಜನರೇಟ್ ಆದ ಮೇಲೆ ಗ್ರಾಹಕರ ಅಕೌಂಟಿನಲ್ಲಿ ಈ ಕ್ಯಾಷ್ ಬ್ಯಾಕ್ ಮೊತ್ತವು ಕ್ರೆಡಿಟ್ ಆಗಿರುತ್ತದೆ.

ಕ್ರೆಡಿಟ್ ಆಗಿರುವ ಮೊತ್ತ ಡೆಬಿಟ್ ಕೂಡ ಆಗುತ್ತದೆ!

ಕ್ರೆಡಿಟ್ ಆಗಿರುವ ಮೊತ್ತ ಡೆಬಿಟ್ ಕೂಡ ಆಗುತ್ತದೆ!

ಕ್ರೆಡಿಟ್ ಆಗಿರುವ ಮೊತ್ತವನ್ನು ಗ್ರಾಹಕರು ಪುನಃ ಬಿಎಸ್ಎನ್ಎಲ್ ಸೇವೆಗಳನ್ನು ಪಡೆಯುವುದಕ್ಕೆ ಮುಂದಿನ ಬಿಲ್ ಗಳಲ್ಲಿ ಬಳಕೆ ಮಾಡಬಹುದು. ಒಂದು ವೇಳೆ ಬಿಎಸ್ಎನ್ಎಲ್ ಚಂದಾದಾರರು ತಮ್ಮ ಪ್ಲಾನ್ ನ್ನು ಕಡಿಮೆ ಬಾಡಿಗೆಯ ಪ್ಲಾನ್ ಗೆ ವರ್ಗಾಯಿಸಿದಲ್ಲಿ ಅಥವಾ ಸೇವೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದಲ್ಲಿ ಸಮಾನ ಕ್ಯಾಷ್ ಬ್ಯಾಕ್ ಮೊತ್ತವನ್ನು ಡೆಬಿಟ್ ಮಾಡಿಕೊಳ್ಳಲಾಗುತ್ತದೆ.

ಡಿಸೆಂಬರ್ ನಲ್ಲಿ ಪ್ರಕಟವಾದ ಆಫರ್:

ಡಿಸೆಂಬರ್ ನಲ್ಲಿ ಪ್ರಕಟವಾದ ಆಫರ್:

ಇದೇ ರೀತಿಯ ಕ್ಯಾಷ್ ಬ್ಯಾಕ್ ಸ್ಕೀಮ್ ನ್ನು ಡಿಸೆಂಬರ್ ನಲ್ಲಿ ಪ್ರಕಟಿಸಲಾಗಿತ್ತು. ಹೊಸದಾದ ಮತ್ತು ಸದ್ಯವಿರುವ ಎಲ್ಲಾ ಬಿಎಸ್ಎನ್ಎಲ್ ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಮತ್ತು ಬ್ರಾಡ್ ಬ್ಯಾಂಡ್ ವೈಫೈ ಚಂದಾದಾರರಿಗೆ ಈ ವಾರ್ಷಿಕ, ಅರ್ಧ ವಾರ್ಷಿಕ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಭಾರತದಲ್ಲಿ ಪರಿಚಯಿಸಲಾಗಿತ್ತು.

Best Mobiles in India

English summary
BSNL is giving 25% cashback to these customers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+