ಈ ಗ್ರಾಹಕರಿಗೆ 2ಜಿಬಿ ಡಾಟಾವನ್ನು ಉಚಿತವಾಗಿ ನೀಡುತ್ತಿರುವ ಬಿಎಸ್ಎನ್ಎಲ್
ಬಿಎಸ್ಎನ್ಎಲ್ ಸಂಸ್ಥೆ ತನ್ನ 4ಜಿ ಸೇವೆಯನ್ನು ಈ ದೇಶದಲ್ಲಿ ಕಾರ್ಯರೂಪಕ್ಕೆ ತರಲು ಕೆಲಸ ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಸರ್ವೀಸ್ ಪ್ರೊವೈಡರ್ ಮುಂದಿನ ಜನರೇಷನ್ನಿನ ನೆಟ್ ವರ್ಕ್ ನ್ನು ರೂಪಿಸುವುದಕ್ಕೆ ಅನುಮತಿ ಪಡೆದುಕೊಂಡಿದ್ದಾರೆ ಮತ್ತು ಸದ್ಯ ಕೇರಳದ ಇದುಕ್ಕಿ ಜಿಲ್ಲೆಯಲ್ಲಿ ಪರಿಕ್ಷಾರ್ಥ ಬಿಡುಗಡೆಯನ್ನು ಕೂಡ ಮಾಡಿದ್ದಾರೆ. ಸಂಪೂರ್ಣ ಪ್ರೊಸೆಸ್ ಮುಗಿಯುವುದಕ್ಕೆ ಕೆಲವು ತಿಂಗಳು ಬೇಕಾಗುತ್ತದೆ ಮತ್ತು ನಿಧಾನವಾಗಿ ಎಲ್ಲಾ ಕಡೆಯೂ ಬಿಎಸ್ಎನ್ಎಲ್ ನ 4ಜಿ ಸೇವೆಯು ಬಿಡುಗಡೆಗೊಳ್ಳಲಿದೆ.

4ಜಿ ಗೆ ಅಪ್ ಗ್ರೇಡ್ ಆಗುವವರಿಗೆ 2ಜಿಬಿ ಡಾಟಾ ಫ್ರೀ:
ಇದೀಗ ಲಭ್ಯವಾಗಿರುವ ಟೆಲಿಕಾಂ ಸುದ್ದಿಗಳ ಅನ್ವಯ ಬಿಎಸ್ಎನ್ಎಲ್ ತನ್ನ ಯಾವ ಚಂದಾದಾರರು 4ಜಿ ನೆಟ್ ವರ್ಕ್ ಗೆ ಅಪ್ ಗ್ರೇಡ್ ಆಗಲು ಬಯಸುತ್ತಾರೋ ಅವರಿಗೆ ಉತ್ತಮ ಆಫರ್ ಗಳನ್ನು ನೀಡಲಿದೆ ಎಂದು ಹೇಳಲಾಗಿದೆ. ಹೊಸ ಸಿಮ್ ಗೆ ಯಾರು ಅಪ್ ಗ್ರೇಡ್ ಮಾಡಿಕೊಳ್ಳುತ್ತಾರೋ ಆ ಎಲ್ಲಾ ಬಿಎಸ್ಎನ್ ಎಲ್ ಗ್ರಾಹಕರು ಉಚಿತವಾಗಿ 2ಜಿಬಿ 4ಜಿ ಡಾಟಾವನ್ನು ಪಡೆಯಲಿದ್ದಾರೆ.

ಹೊಸ ಸಿಮ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ:
ಬಳಕೆದಾರರಿಗೆ ತಮ್ಮ ಹಳೆಯ ಸಿಮ್ ಕಾರ್ಡ್ ನ್ನು ಬಳಸುವುದಕ್ಕೆ ಅವಕಾಶವಿರುತ್ತದೆ ಆದರೆ ಅದು ಕೇವಲ 3ಜಿ ನೆಟ್ ವರ್ಕ್ ಗೆ ಮಾತ್ರವೇ ಸೀಮಿತವಾಗಿರುತ್ತದೆ. ಒಂದು ವೇಳೆ ಯಾವುದೇ ಗ್ರಾಹಕ 4ಜಿ ಸೇವೆಯನ್ನು ಬಳಸಲು ಇಚ್ಛಿಸುವುದಾದರೆ ಅವರು ಹೊಸ 4ಜಿ ಸಿಮ್ ಕಾರ್ಡ್ ನ್ನು ಪಡೆಯಬೇಕಾಗುತ್ತದೆ.

ಸಿಮ್ ಬದಲಿಸುವಿಕೆ ಕಡ್ಡಾಯವಾಗುವ ಸಾಧ್ಯತೆ:
ವರದಿಯು ಹೇಳುವಂತೆ ಬಿಎಸ್ಎನ್ಎಲ್ ತನ್ನ 3ಜಿ ಮೂಲಭೂತ ಸೌಕರ್ಯವನ್ನು 4ಜಿ ಗೆ ಹೆಚ್ಚಿಸುತ್ತಿದೆ ಮತ್ತು ಬಿಎಸ್ಎನ್ಎಲ್ ತನ್ನ VoLTE ಸೇವೆಗಳನ್ನು ಹೊರಡಿಸುವವರೆಗೂ ಕೂಡ 2ಜಿ ಕನೆಕ್ಟಿವಿಟಿಯು ಬಳಕೆದಾರರಿಗೆ ಹಾಗೆಯೇ ಲಭ್ಯವಿರುತ್ತದೆ ಮತ್ತು ಇದು ಎಲ್ಲಾ ಬಿಎಸ್ಎನ್ಎಲ್ ಗ್ರಾಹಕರಿಗೆ ತನ್ನ ಸಿಮ್ ಕಾರ್ಡ್ ಬದಲಿಸಿಕೊಳ್ಳುವುದನ್ನು ನಂತರದ ದಿನಗಳಲ್ಲಿ ಕಡ್ಡಾಯಗೊಳಿಸುತ್ತದೆ. ಈ ನಿಟ್ಟಿನಲ್ಲಿ ಬಳಕೆದಾರರು ಖುಷಿಯಾಗಲು 2ಜಿಬಿ ಡಾಟಾವನ್ನು ಉಚಿತವಾಗಿ ಕಂಪೆನಿಯು ಆಫರ್ ಮಾಡುತ್ತಿದೆ.

ಖಾಸಗಿ ಟೆಲಿಕಾಂ ಸಂಸ್ಥೆಗಳಿಂದ 4ಜಿ ಈಗಾಗಲೇ ಲಭ್ಯ:
ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಬಿಎಸ್ಎನ್ಎಲ್ 4ಜಿ ಸೇವೆಯು ಈಗಾಗಲೇ ಪರಿಚಿತಗೊಂಡಿರುವ ಬಗ್ಗೆ ಟೆಲಿಕಾಂ ಆಪರೇಟರ್ ವರದಿ ಮಾಡಿದ್ದಾರೆ. ಬಿಎಸ್ಎನ್ಎಲ್ ಹೊರತು ಪಡಿಸಿ ಇತರೆ ಎಲ್ಲಾ ಖಾಸಗಿ ಟೆಲಿಕಾಂ ಆಪರೇಟರ್ ಗಳು ರಿಲಯನ್ಸ್ ಜಿಯೋ, ಏರ್ ಟೆಲ್, ವಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಗಳು ಈಗಾಗಲೇ ತಮ್ಮ ಬಳಕೆದಾರರಿಗೆ 4ಜಿ ಸೇವೆಯನ್ನು ನೀಡುತ್ತಿದೆ.

ಮೈ ಬಿಎಸ್ಎನ್ಎಲ್ ಆಪ್ ಬಿಡುಗಡೆ
ಕಳೆದ ತಿಂಗಳು ಬಿಎಸ್ಎನ್ಎಲ್ ಹೊಸ ವರ್ಷನ್ ನ ಮೈ ಬಿಎಸ್ಎನ್ಎಲ್ ಆಂಡ್ರಾಯ್ಡ್ ಆಪ್ ಬಿಡುಗಡೆಗೊಳಿಸುವ ಬಗ್ಗೆ ವರದಿ ಬಂದಿತ್ತು. ಇದರ ಪರಿಚಯಾರ್ಥವಾಗಿ ಯಾರು ಈ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೋ ಅವರಿಗೆ 1 ಜಿಬಿ ಡಾಟಾವನ್ನು ಉಚಿತವಾಗಿ ನೀಡಲಾಗಿತ್ತು.ಈ ಉಚಿತ ಡಾಟಾವು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಮತ್ತು ಬಳಕೆದಾರರು ಬಳಸುತ್ತಿರುವ ಪ್ಲಾನ್ ಗೆ ಇದು ಸೇರಿಸಲಾಗುತ್ತದೆ.


Click it and Unblock the Notifications








