BSNL ಗ್ರಾಹಕರಿಗೆ ಬಂಪರ್: 425 ದಿನಗಳ ವ್ಯಾಲಿಡಿಟಿ ಮತ್ತು 850GB ಡೇಟಾ ಆಫರ್!
ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡುಹೊಡೆಯುತ್ತಿರುವ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ಈ ವರ್ಷದ ಹೋಳಿ ಹಬ್ಬದ ಕೊಡುಗೆಯಾಗಿ ಭರ್ಜರಿ ಆಫರ್ ಒಂದನ್ನು ಘೋಷಿಸಿದೆ. ಈ ವರ್ಷದ ಹೋಳಿ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ ಗ್ರಾಹಕರು 425 ದಿನಗಳ ವ್ಯಾಲಿಡಿಟಿ ಮತ್ತು ಒಟ್ಟು 850GB ಡೇಟಾವನ್ನು ಹೊಂದಿರುವ ರೀಚಾರ್ಜ್ ಯೋಜನೆಗೆ ಅದೇ ಹಳೆಯ ವಾರ್ಷಿಕ ರೀಚಾರ್ಜ್ ಬೆಲೆಯಲ್ಲಿ ಸೇವೆ ಪಡೆಯಬಹುದು ಎಂದು ಬಿಎಸ್‌ಎನ್‌ಎಲ್ ಸಂಸ್ಥೆ ತಿಳಿಸಿದೆ.! ಈ ಮೂಲಕ ತನ್ನೆಲ್ಲಾ ಗ್ರಾಹಕರಿಗೆ ಒಂದು ಬಹುದೊಡ್ಡ ಉಡುಗೊರೆಯನ್ನು ನೀಡಿದೆ. ಹಾಗಾದರೆ, ಹೋಳಿ ಹಬ್ಬಕ್ಕೆ ಬಿಎಸ್‌ಎನ್‌ಎಲ್ ಪರಿಚಯಿಸಿರುವ ರೀಚಾರ್ಜ್ ಯೋಜನೆ ಹೇಗಿದೆ ಮತ್ತು ಏನೆಲ್ಲಾ ಲಾಭಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.
BSNL ನ 2,399 ರೂ. ಯೋಜನೆ
ಹೋಳಿ ಹಬ್ಬದ ಅಂಗವಾಗಿ, ಬಿಎಸ್‌ಎನ್‌ಎಲ್ ತನ್ನ ವಾರ್ಷಿಕ ರೀಚಾರ್ಜ್ ಮೇಲೆ ಉಚಿತವಾಗಿ ಒಂದು ತಿಂಗಳ ಮಾನ್ಯತೆಯನ್ನು ನೀಡುತ್ತಿದೆ. ಜೊತೆಗೆ, 60GB ಡೇಟಾ ಹೆಚ್ಚುವರಿಯಾಗಿ ಒದಗಿಸುತ್ತಿದೆ. BSNL ನ 2,399 ರೂ. ಯೋಜನೆಯು ಹಿಂದೆ 395 ದಿನಗಳ ಮಾನ್ಯತೆ, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಹೊಂದಿತ್ತು. ಆದರೆ ಹೋಳಿ ಹಬ್ಬದ ಸಂದರ್ಭದಲ್ಲಿ, ಈ ಯೋಜನೆಯು 30 ದಿನಗಳ ಉಚಿತ ಮಾನ್ಯತೆ, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತಿದೆ. ಇದರಿಂದ ಗ್ರಾಹಕರು 425 ದಿನಗಳ ಮಾನ್ಯತೆ ಮತ್ತು ಒಟ್ಟು 850GB ಡೇಟಾ ಪಡೆಯುತ್ತಾರೆ. ಇದಲ್ಲದೆ, ಪ್ರತಿದಿನ 100 ಉಚಿತ SMS ಗಳ ಪ್ರಯೋಜನವೂ ಲಭ್ಯವಿದೆ. ಈ ಯೋಜನೆಯ ವೆಚ್ಚವು ದಿನಕ್ಕೆ ಸುಮಾರು 5.6 ರೂ. ಆಗಿದ್ದು, ಈ ಎಲ್ಲಾ ಪ್ರಯೋಜನಗಳು 14 ತಿಂಗಳ ಕಾಲ ಲಭ್ಯವಿರುತ್ತವೆ.
ಬಿಎಸ್‌ಎಲ್‌ನಿಂದ ಮತ್ತೊಂದು ರೀಚಾರ್ಜ್ ಪ್ಲಾನ್!

ಬಳಕೆದಾರರಿಗೆ ಕೈಗೆಟಕುವ ಬೆಲೆಗೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ BSNL ನಿಂದ ಮತ್ತೊಂದು ₹1,999 ರೂಗಳ ರಿಚಾರ್ಜ್ ಯೋಜನೆಯು ಲಭ್ಯವಿದೆ. ಈ ಯೋಜನೆಯಲ್ಲಿ ಬರೋಬ್ಬರಿ 365 ದಿನಗಳ ವ್ಯಾಲಿಡಿಟಿಯೊಂದಿಗೆ ಬಳಕೆದಾರರಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಬರೋಬ್ಬರಿ 600GB ಡೇಟಾವನ್ನು ಸಹ ಕಂಪನಿ ನೀಡುತ್ತಿದೆ. ಇಷ್ಟೇ ಅಲ್ಲದೇ, ಈ ಯೋಜನೆಯಲ್ಲಿ ದಿನಕ್ಕೆ 100 SMS ನಂತೆ ಪೂರ್ಣ ವರ್ಷದ ಮಾನ್ಯತೆಯನ್ನು ಅನುಭವಿಸಬಹುದು ಎಂದು BSNL ತಿಳಿಸಿದೆ.
ಈ ₹1,999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈ ಕೆಳಗಿನ ಪ್ರಯೋಜನಗಳನ್ನು ಒಳಗೊಂಡಿದೆ:
12 ತಿಂಗಳ ಮಾನ್ಯತೆ - ಮಾರ್ಚ್ 2026 ರವರೆಗೆ ಪುನಃ ರೀಚಾರ್ಜ್ ಮಾಡುವ ಅಗತ್ಯವಿಲ್ಲ.
ಅನಿಯಮಿತ ಕರೆಗಳು - ಎಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಸ್ಥಳೀಯ ಮತ್ತು STD ಕರೆಗಳು.
600GB ಒಟ್ಟು ಡೇಟಾ - ದಿನಕ್ಕೆ ಯಾವುದೇ ಮಿತಿಯಿಲ್ಲ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.
ದಿನಕ್ಕೆ 100 SMS - ಹೆಚ್ಚುವರಿ ಶುಲ್ಕಗಳಿಲ್ಲದೆ ಸಂಪರ್ಕದಲ್ಲಿರಿ.
ನೀವು BSNL ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಪ್ರಿಪೇಯ್ಡ್ ಸಂಖ್ಯೆಯನ್ನು ನಿರಂತರವಾಗಿ ರೀಚಾರ್ಜ್ ಮಾಡುವುದರಿಂದ ಕಳವಳಗೊಂಡಿದ್ದರೆ, BSNL ನ 2,399 ರೂ. ಮತ್ತು 1,999 ರೂ. ಯೋಜನೆಗಳು ನಿಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸುತ್ತವೆ. ಈ ಯೋಜನೆಗಳು ಒಂದು ವರ್ಷದ ಮಾನ್ಯತೆ, ಅನಿಯಮಿತ ಕರೆಗಳು ಮತ್ತು ಹೊಂದಿಕೊಳ್ಳುವ ಡೇಟಾ ಬಳಕೆಯೊಂದಿಗೆ ಬರುತ್ತವೆ, ಇದರಿಂದ ನೀವು ಕೈಗೆಟುಕುವ ಬೆಲೆಯಲ್ಲಿ ನಿರಂತರ ಸಂಪರ್ಕವನ್ನು ಖಚಿತಪಡಿಸಿಕೊಳ್ಳಬಹುದು. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಸಮಯದಲ್ಲಿ ಡೇಟಾ ಸೌಲಭ್ಯಗಳನ್ನು ಬಳಸಬಹುದು. ಆದರೆ, ಡೇಟಾ ಬಳಕೆ ನಂತರ ಇಂಟರ್ನೆಟ್ ವೇಗ 80Kbps ಗೆ ಇಳಿಯುತ್ತದೆ ಎಂಬುದು ಗಮನದಲ್ಲಿರಲಿ.


Click it and Unblock the Notifications








