Subscribe to Gizbot

ಇ - ಗವರ್ನೆನ್ಸ್ ಸೌಲಭ್ಯವುಳ್ಳ ಅದ್ವಿತೀಯ ಇಂಟರ್ನೆಟ್ ಫೋನ್

Written By:

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಶುಕ್ರವಾರ, ಕಡಿಮೆ ದರದ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದು ಸಾಮಾನ್ಯ ಜನರಿಗೆ ಇ ಗವರ್ನೆನ್ಸ್ ಸೇವೆಯನ್ನು ಒದಗಿಸಲಿದೆ.

ಇದು 3 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಡ್ಯುಯೆಲ್ ಸಿಮ್ ಕಾರ್ಡ್ ಸ್ಲಾಟ್‌ ಫೋನ್‌ನಲ್ಲಿದೆ. ಇದರ ಬೆಲೆ ಕೇವಲ ರೂ 1099 ಆಗಿದ್ದು ಈ ಹ್ಯಾಂಡ್‌ಸೆಟ್ ಖರೀದಿಯನ್ನು ಜೂನ್ 15 ರಿಂದ ಮಾಡಬಹುದಾಗಿದೆ. ಈ ಫೋನ್ ಅನ್ನು ಇ ಗವರ್ನೆನ್ಸ್ ಸೇವೆಗಾಗಿ ವಿಶೇಷವಾಗಿ ತಯಾರಿಸಿದ್ದು ಸಾಮಾನ್ಯ ಜನರಿಗೂ ಇಂಟರ್ನೆಟ್ ಸೇವೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲೇ ಹೊಸ ಮುನ್ನುಡಿಯನ್ನು ಬರೆಯಲಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಆರ್‌ಕೆ ಉಪಾಧ್ಯಾಯ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ನಿಂದ ಹೊಸ ಸ್ಮಾರ್ಟ್‌ಫೋನ್ ಭಾರತ್

ಇದರಲ್ಲಿ ಆಕರ್ಷಕವಾದ ಧ್ವನಿ ಯೋಜನಾ ಸೌಲಭ್ಯವಿದ್ದು, ಸಾಮಾನ್ಯ ಜನರಿಗೂ ಇದು ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸಲಿದೆ ಮತ್ತು ಸಮಾಧಾನಕರವಾದ ಬೆಲೆಯಲ್ಲಿ ಈ ಫೋನ್ ಬಂದಿದ್ದು ಸಮಾಜದ ಹೆಚ್ಚಿನ ಜನರಿಗೆ ಈ ಫೋನ್ ಖಂಡಿತ ವರದಾನವಾಗಿ ಪರಿಣಮಿಸಲಿದೆ ಎಂದು ಉಪಾಧ್ಯಾಯ ತಿಳಿಸಿದ್ದಾರೆ. ಬಳಕೆದಾರರು ಈ ಫೋನ್‌ನಲ್ಲಿ ಆಡಿಯೋ, ವೀಡಿಯೋ ಮತ್ತು ಜಾವಾ ಗೇಮ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದು 1.3 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು 1800 mAh LAN ಬ್ಯಾಟರಿ ಸಾಮರ್ಥ್ಯ ಫೋನ್‌ಗಿದೆ. ಕಂಪೆನಿಯ ಪ್ರಕಾರ ಇದು 8 ಗಂಟೆಗಳ ಟಾಕ್ ಟೈಮ್ ಅವಧಿಯನ್ನು ಒದಗಿಸಲಿದ್ದು 15 ದಿನಗಳ ಸ್ಟ್ಯಾಂಡ್ ಬೈ ಸಮಯವನ್ನು ಒದಗಿಸಲಿದೆ. ಇದು 64 ಎಂಬಿ ರ್‌ಯಾಮ್ ಅನ್ನು ಹೊಂದಿದ್ದು ಆಂತರಿಕ ಸಂಗ್ರಹಣೆ ಸಾಮರ್ಥ್ಯ 64 ಎಂಬಿಯಾಗಿದೆ.

ಇಷ್ಟಲ್ಲದೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮೂಲಕ ಫೋನ್‌ನಲ್ಲಿ 1200 ನಿಮಿಷಗಳ ಉಚಿತ ಟಾಕ್ ಟೈಮ್ ಅನ್ನು ಕಂಪೆನಿ ವಿಶೇಷವಾಗಿ ಒದಗಿಸಿದೆ. ಈ ಡಿವೈಸ್ ಅನ್ನು ವಿನ್ಯಾಸಗೊಳಿಸಿದ್ದು ಪ್ಯಾಂಟೆಲ್ ಟೆಕ್ನೋಲಜೀಸ್ ಲಿಮಿಟೆಡ್ ಆಗಿದ್ದು, ಬಳಕೆದಾರ ಅಪ್ಲಿಕೇಶನ್‌ಗಳಾದ ಮೊಬೈಲ್ ಬ್ಯಾಂಕಿಂಗ್, ಟೆಲಿ - ಹೆಲ್ತ್ ಕೇರ್ ಡೆಲಿವರಿ ಮತ್ತು ಸ್ಟ್ರೀಮಿಂಗ್ ಡೇಟಾ ಡೆಲಿವರಿಯನ್ನು ಫೋನ್ ಒದಗಿಸುತ್ತದೆ. ಪ್ಯಾಂಟಲ್ ಭಾರತ್ ಫೋನ್ ಕಡಿಮೆ ದರದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೊದಲ ಫೋನ್ ಆಗಿದ್ದು ಸಾಮಾನ್ಯ ಜನರಿಗೆ ಇ-ಗವರ್ನೆನ್ಸ್ ಅನ್ನು ಅರ್ಥಮಾಡಿಸಲು ಈ ಫೋನ್ ಸಹಾಯಕವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot