BSNLನಿಂದ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! 395 ದಿನಗಳ ವ್ಯಾಲಿಡಿಟಿ ವಿಶೇಷ!

|

ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಬಿಎಸ್‌ಎನ್‌ಎಲ್‌ ತನ್ನ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಬಂದಿದೆ. ಈಗಾಗಲೇ ಅನೇಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದ್ದು ಗ್ರಾಹಕರನ್ನು ಸೆಳೆದಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗೆ 797ರೂ. ಬೆಲೆಯ ಹೊಸ ಪ್ರಿಪೇಯ್ಡ್ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ ಹಳೆಯ BSNL ಸಂಖ್ಯೆಯನ್ನು ದ್ವಿತೀಯ ಸಾಧನವಾಗಿ ಸಕ್ರಿಯವಾಗಿ ಇರಿಸಲು ಬಯಸುವ ಗ್ರಾಹಕರಿಗೆ ವೋಚರ್ ಪ್ಲಾನ್‌ ಆಗಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌ ಮಾಡಿದೆ. ಈ ಪ್ಲಾನ್‌ ಮೂಲಕ ಬಳಕೆದಾರರು ಮುಖ್ಯವಾಗಿ ತಮ್ಮ ದ್ವಿತೀಯ ಫೋನ್ ಸಂಖ್ಯೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಇನ್ನು ಈ ಪ್ಲಾನ್‌ನಲ್ಲಿ ಗ್ರಾಹಕರು ಆನ್‌ಲೈನ್‌ನಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಸಿಗಲಿದೆ. 797ರೂ. ಬೆಲೆಯ ಹೊಸ ಪ್ರಿಪೇಯ್ಡ್ ಪ್ಲಾನ್‌ 395 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದ್ದು, ಹೆಚ್ಚುವರಿಯಾಗಿ 30 ವ್ಯಾಲಿಡಿಟಿಯನ್ನು ಸಹ ಘೋಷಿಸಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂನ ಹೊಸ ಪ್ರಿಪೇಯ್ಡ್‌ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್‌ 797ರೂ. ಪ್ರಿಪೇಯ್ಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ 797ರೂ. ಪ್ರಿಪೇಯ್ಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ 797ರೂ. ಪ್ರಿಪೇಯ್ಡ್‌ ಪ್ಲಾನ್‌ 395 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಪ್ಲಾನ್‌ನ ಲಾಂಚ್‌ ಆಫರ್‌ನಲ್ಲಿ ಬಿಎಸ್‌ಎನ್‌ಎಲ್‌ ಹೆಚ್ಚುವರಿ 30ದಿನಗಳ ವ್ಯಾಲಿಡಿಟಿಯನ್ನು ನೀಡುವುದಾಗಿ ಘೋಷಿಸಿದೆ. ಬಳಕೆದಾರರು ಜೂನ್ 12, 2022 ರೊಳಗೆ ಈ ಪ್ಲಾನ್‌ ಆರಿಸಿಕೊಂಡರೆ ಮಾತ್ರ ಈ ಹೆಚ್ಚುವರಿ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ ಗ್ರಾಹಕರು ಮೊದಲ 60 ದಿನಗಳವರೆಗೆ ಮಾತ್ರ ಈ ಪ್ಲಾನ್‌ನ ಎಲ್ಲಾ ಪ್ರಯೋಜನಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. 60 ದಿನಗಳ ನಂತರ, ಬಳಕೆದಾರರು ಕರೆ ಮಾಡಲು ಅಥವಾ ಇಂಟರ್ನೆಟ್ ಬ್ರೌಸ್ ಮಾಡಲು ಟಾಕ್‌ಟೈಮ್ ಅಥವಾ ಡೇಟಾ ಯೋಜನೆಗಳನ್ನು ಆರಿಸಬೇಕಾಗುತ್ತದೆ.

ಪ್ರಿಪೇಯ್ಡ್‌

ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಮೊದಲ 60 ದಿನಗಳವರೆಗೆ ದೈನಂದಿನ 2GB ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಡೈಲಿ 100 SMS ಅನ್ನು ಪಡೆದುಕೊಳ್ಳಬಹುದಾಗಿದೆ. ಆದರೆ 60 ದಿನಗಳ ನಂತರ ಡೇಟಾ ವೇಗವು 80 Kbps ಗೆ ಕಡಿಮೆಯಾಗುತ್ತದೆ. ಅಲ್ಲದೆ ಡೇಟಾ ಮತ್ತು ಕರೆ ಪ್ರಯೋಜನಗಳು 60 ದಿನಗಳ ನಂತರ ಮುಕ್ತಾಯಗೊಳ್ಳುತ್ತವೆ, ಆದರೆ ಸಿಮ್ ಸಕ್ರಿಯವಾಗಿರುತ್ತದೆ. ನಿಮಗೆ ಡೇಟಾದ ಅವಶ್ಯಕತೆಯಿದ್ದರೆ ನೀವು ಡೇಟಾ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

BSNL

ಇದಲ್ಲದೆ BSNL ಟೆಲಿಕಾಂ ಭಾರತದ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ 4G ಸೇವೆಗಳು ಮತ್ತು ಅದರ 5G ನೆಟ್‌ವರ್ಕ್ ಅನ್ನು ಸ್ವತಂತ್ರವಲ್ಲದ (NSA) ಮೋಡ್‌ನಲ್ಲಿ ಪರಿಚಯಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಖಾಸಗಿ ಟೆಲಿಕಾಂಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾದಂತಹ ಇತರ ಟೆಲಿಕಾಂ ಆಪರೇಟರ್‌ಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಸೂಪರ್‌ಫಾಸ್ಟ್ 4G ಅನುಭವವನ್ನು ಒದಗಿಸಿದ್ದಾರೆ ಮತ್ತು 5G ರೋಲ್‌ಔಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ BSNL ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಅಂದರೆ 5G SA ಸಂಪರ್ಕವನ್ನು Q3 2023 ರ ವೇಳೆಗೆ ನಿಯೋಜಿಸುತ್ತದೆ ಎಂದು ವರದಿಯಾಗಿದೆ.

ಬಿಎಸ್‌ಎನ್‌ಎಲ್‌

ಇನ್ನು ಇತ್ತೀಚಿಗೆ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳ ಹಾದಿಯಲ್ಲಿಯೇ ಹೆಜ್ಜೆಹಾಕಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ವರ್ಷ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಬಿಎಸ್‌ಎನ್‌ಎಲ್‌ ಸೆಲ್ಫ ಕೇರ್‌ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ ಮೂಲಕ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮುಖ್ಯ ಖಾತೆಯ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
BSNL Rs 797 voucher recharge plan launched for prepaid plans in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X