ಬಿಎಸ್ಎನ್ಎಲ್ 100ಜಿ ಆಪ್ಟಿಕಲ್ ಟ್ರಾನ್ಸ್ ಪೋರ್ಟ್ ನೆಟ್ವರ್ಕ್ ಆರಂಭ

ಬಿಎಸ್ಎನ್ಎಲ್ 100ಜಿ ಆಪ್ಟಿಕಲ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ಸೇವೆಯನ್ನು ಭಾರತಾದ್ಯಂತ ಆರಂಭಿಸಿದೆ. ಇದು 10ಜಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.

By Prathap T
|

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್ಎನ್ಎಲ್) ತನ್ನ 100ಜಿ ಆಪ್ಟಿಕಲ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್(ಎನ್.ಜಿ-ಒಟಿಎನ್) ಸೇವೆಯನ್ನು ಭಾರತದಾದ್ಯಂತ ಆರಂಭಿಸಿದೆ. ಇದು ಬ್ರಾಡ್ ಬ್ಯಾಂಡ್ ವೇಗವನ್ನು ಸುಧಾರಿಸುವ ಜೊತೆಗೆ ಲ್ಯಾಂಡ್ ಲೈನ್ ಹಾಗೂ ಮೊಬೈಲ್ ಸೇವೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಬಿಎಸ್ಎನ್ಎಲ್ 100ಜಿ ಆಪ್ಟಿಕಲ್ ಟ್ರಾನ್ಸ್ ಪೋರ್ಟ್ ನೆಟ್ವರ್ಕ್ ಆರಂಭ

ಬಿಎಸ್ಎನ್ಎಲ್ ಆಪ್ಟಿಕಲ್ ಫೈಬರ್ ಇನ್ ಫ್ರಾಸ್ಟ್ರಕ್ಚರ್ 100ಜಿ ಸಾಮರ್ಥ್ಯಕ್ಕೆ ಅಸ್ತಿತ್ವದಲ್ಲಿರುವ 10ಜಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಬಿಎಸ್ಎನ್ಎಲ್ ಹೇಳಿಕೊಂಡಿದೆ.

ಈ ವರ್ಧಿತ ಸಾಮರ್ಥ್ಯವು ಬಿಎಸ್ಎನ್ಎಲ್ ಸಾಮಾನ್ಯ ಗ್ರಾಹಕರು ಪಡೆಯುತ್ತಿರುವ ಲ್ಯಾಂಡ್ ಲೈನ್, ಎಫ್.ಟಿ.ಟಿ.ಎಚ್ ಮತ್ತು ಮೊಬೈಲ್ ಸೇವೆಗಳಲ್ಲಿ ಸಹಾಯ ಮಾಡಲಿದೆ. ಮಾತ್ರವಲ್ಲದೇ, ಈ ಯೋಜನೆಯು ಬೂಸ್ಟ್ ಎಂಟರ್ ಪ್ರೈಸಸ್ ಬುಸಿನೆಸ್ ವಿಭಾಗದ ಲೀಸ್ ಲೈನ್ ನಲ್ಲಿ ಹೆಚ್ಚಿನ ಆಲ್ಟ್ರಾ ಸಾಮರ್ಥ್ಯವನ್ನು ಒದಗಿಸಬಲ್ಲ ಗುಣಮಟ್ಟವನ್ನು ಹೊಂದಿದೆ.

ಎನ್.ಜಿ-ಒಟಿಎನ್ ಸೇವೆಯು ಕೇಂದ್ರ ಸರ್ಕಾರದ ಯೋಜನೆಗಳಾದ ಭಾರತ್ ನೆಟ್, ಸ್ವ್ಯಾನ್ ಹಾಗೂ ಎನ್.ಕೆ.ಎನ್ ಸೇವೆಗಳಿಗೆ ಸಹಕಾರಿಯಾಗಲಿದೆ ಎಂದು ಬಿಎಸ್ಎನ್ಎಲ್ ಹೇಳಿಕೊಂಡಿದೆ. ಬಿಎಸ್ಎನ್ಎಲ್ ಹಾಗೂ ಫೈಬರ್ ಹೋಮ್ ಸಹಯೋಗದಲ್ಲಿ ಮತ್ತಷ್ಟು ಹೆಚ್ಚಿನ ಸೇವೆಯನ್ನು ದೇಶಕ್ಕೆ ನೀಡುವ ವಿಶ್ವಾಸವನ್ನು ಬಿಎಸ್ಎನ್ಎಲ್ ಸಿಎಂಡಿ ಅನುಪಮ ಶ್ರೀವಾಸ್ತವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ದೇಶದ 100 ನಗರಗಳಲ ಪೈಕಿ 45 ನಗರಗಳಲ್ಲಿ ಈಗಾಗಲೇ NG-OTN ಸೇವೆಯನ್ನು ಇಂದಿನಿಂದಲೇ ಆರಂಭಿಸಲಾಗಿದೆ. ಉಳಿದ 55 ನಗರಗಳಲ್ಲಿ ಮುಂದಿನ ಮಾರ್ಚ್ 2018ರೊಳಗೆ ಕಾರ್ಯಾರಂಭಗೊಳಿಸುವ ಗುರಿ ಹೊಂದಲಾಗಿದೆ.

ಬಿಎಸ್ಎನ್ಎಲ್ ಈಗಾಗಲೇ ಸರಿಸುಮಾರು 115 ಮಿಲಿಯನ್ ಗ್ರಾಹಕರನ್ನು ಹೊಂದಿದೆ. NG-OTN ಸೇವೆ ಮೂಲಕ ಗ್ರಾಹಕರ ಒತ್ತಾಸೆಗಳನ್ನು ಈಡೇರಿಸುವತ್ತಾ ಬಿಎಸ್ಎನ್ಎಲ್ ದಿಟ್ಟ ಹೆಜ್ಜೆ ಇಟ್ಟಿದೆ. ಆಮೂಲಕ ಗುಣಮಟ್ಟದ ಗ್ರಾಹಕರ ಸೇವೆ ಒದಗಿಸಲು ಬದ್ಧವಾಗಿದೆ ಎಂದು ಸಂಸ್ಥೆಯು ಹೇಳಿಕೆ ನೀಡಿದೆ.

ಈ ಯೋಜನೆಯನ್ನು ಶೇ.99.99ರಷ್ಟು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಉದ್ದೇಶಿಸಿದ್ದು, ಆನಿಟ್ಟಿನಲ್ಲಿ ನೆಟ್ ವರ್ಕ್ ಆಪರೇಟಿಂಗ್ ಸೆಂಟರ್(ಎನ್ಒಸಿ) ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆದು 24*7 ಸೇವೆ ವ್ಯವಸ್ಥೆಯನ್ನು ಕಲ್ಪಿಸಿದೆ.

Best Mobiles in India

Read more about:
English summary
Bharat Sanchar Nigam Limited ( BSNL) has launched its 100G Optical Transport Network (NG-OTN) across India, which will help it improve broadband speeds and enhance landline and mobile services.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X