ಬಿಎಸ್ಎನ್ಎಲ್ ನಿಂದ ಅಭಿನಂದನ್ ರೂ151 ಪ್ರಿಪೇಯ್ಡ್ ರೀಚಾರ್ಜ್
ಬಿಎಸ್ಎನ್ಎಲ್ ಹೊಸದಾಗಿ “ಅಭಿನಂದನ್ 151” ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ನ್ನು ಬಿಡುಗಡೆಗೊಳಿಸಿದೆ.
ಅನುಮಾನವೇ ಬೇಡ. ಖಂಡಿತ ಇದು ವಾಯುಪಡೆಯ ಕೆಚ್ಚೆದೆಯ ಧೀರ ಅಭಿನಂದನ್ ವರ್ತಮಾನ್ ಅವರ ಹೆಸರಿನಲ್ಲಿ ಬಿಡುಗಡೆಗೊಳಿಸುತ್ತಿರುವ ಪ್ರಿಪೇಯ್ಡ್ ಪ್ಲಾನ್ ಆಗಿದೆ.

ಎಲ್ಲಿ ಲಭ್ಯ?
ಟೆಲಿಕಾಂ ಟಾಕ್ ತಿಳಿಸುವಂತೆ ಈ ಪ್ಲಾನ್ ಸದ್ಯ ತಮಿಳುನಾಡಿನಲ್ಲಿ ಮಾತ್ರವೇ ಲಭ್ಯವಿದ್ದು ಚೆನೈ ಸರ್ಕಲ್ ಗೆ ಸಿಗುತ್ತದೆ. ಈ ಹೊಸ ಬಿಎಸ್ಎನ್ಎಲ್ ರೀಚಾರ್ಜ್ ನ ಹೆಸರೇ ಸೂಚಿಸುವಂತೆ ಇದರ ಬೆಲೆ 151 ರುಪಾಯಿಗಳು ಮತ್ತು 180 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿರುತ್ತದೆ.

ಪ್ಲಾನಿನ ವಿವರ:
ಬಿಎಸ್ಎನ್ಎಲ್ ಅನಿಯಮಿತ ಸ್ಥಳೀಯ, ರಾಷ್ಟ್ರೀಯ ಮತ್ತು ಪ್ರತಿದಿನ 100 ಎಸ್ಎಂಎಸ್ ಗಳನ್ನು ಈ ಪ್ಯಾಕ್ ನ ಅಡಿಯಲ್ಲಿ ನೀಡುತ್ತದೆ ಜೊತೆಗೆ 1ಜಿಬಿ 3ಜಿ ಡಾಟಾ ಪ್ರತಿದಿನ ಉಚಿತವಾಗಿ ಬಳಸಬಹುದಾಗಿದೆ. 180 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್ ಹೊಂದಿದ್ದರೂ ಕೂಡ ಅನಿಯಮಿತ ಕರೆಗಳು, ಎಸ್ಎಂಸ್ ಗಳು, ಡಾಟಾ ಪ್ಯಾಕ್ ಆಫರ್ ಇವೆಲ್ಲವೂ ಕೂಡ ಕೇವಲ 24 ದಿನಗಳ ಅವಧಿಗೆ ಸೀಮಿತವಾಗಿರುತ್ತದೆ.ಅಂದರೆ ಪ್ಲಾನಿನ ಅವಧಿ ಇರುವವರೆಗೂ ಕೂಡ ಇನ್ ಕಮ್ಮಿಂಗ್ ಕರೆಗಳನ್ನು ಸ್ವೀಕರಿಸುವುದಕ್ಕೆ ಅವಕಾಶವಿರುತ್ತದೆ. ಔಟ್ ಗೋಯಿಂಗ್ ಕರೆಗಳು ಮತ್ತು ಡಾಟಾ ಕನೆಕ್ಟಿವಿಟಿ ಲಭ್ಯವಿರುವುದಿಲ್ಲ.

ಎಸ್ಎಂಎಸ್ ಮೂಲಕ ಚಂದಾದಾರಿಕೆ:
ಬಿಎಸ್ಎನ್ಎಲ್ ಪ್ರಿಪೇಯ್ಡ್ ಬಳಕೆದಾರರು ಈ ಪ್ಲಾನಿಗೆ ಚಂದಾದಾರರಾಗಲು ‘PLAN 151' ಎಂದು ಬರೆದು 123 ನಂಬರ್ ಗೆ ಎಸ್ಎಂಎಸ್ ಕಳುಹಿಸುವ ಮೂಲಕವೂ ಆಗಬಹುದು.

ಫಾರಿನರ್ ಪ್ರಿಪೇಯ್ಡ್ ಪ್ಲಾನ್:
ಇದರ ಜೊತೆಗೆ ಬಿಎಸ್ಎನ್ಎಲ್ ಇತ್ತೀಚೆಗೆ ಹೊಸ ಫಾರಿನರ್ ಪ್ರಿಪೇಯ್ಡ್ ಪ್ಲಾನ್ ನ್ನು 398 ರುಪಾಯಿ ಬೆಲೆಗೆ ಪರಿಚಯಿಸಿದೆ.ಈ ತಾರಿಫ್ ನಲ್ಲಿ 1ಜಿಬಿ ಹೈ ಸ್ಪೀಡ್ 3ಜಿ ಡಾಟಾ ಪ್ರತಿ ದಿನ ಲಭ್ಯವಿರುತ್ತದೆ. ಲಿಮಿಟ್ ಮುಗಿದ ನಂತರ ಅದರ ಸ್ಪೀಡ್ 40 Kbps ಗೆ ಇಳಿಕೆಯಾಗುತ್ತದೆ. ಇದರಲ್ಲಿ ಪ್ರತಿದಿನ 100ಎಸ್ಎಂಎಸ್ ಗಳು ಕೂಡ ಪ್ರತಿದಿನ ಉಚಿತವಾಗಿ ಲಭ್ಯವಿರುತ್ತದೆ. ತಮಿಳುನಾಡು ಮತ್ತು ಚೆನೈ ಸರ್ಕಲ್ ನಲ್ಲೂ ಕೂಡ ಈ ಆಫರ್ ಲಭ್ಯವಿದೆ.

ಬಂಪರ್ ಆಫರ್ ಅವಧಿ ವಿಸ್ತರಣೆ:
ಬಂಪರ್ ಆಫರ್ ನ ಅವಧಿಯನ್ನು ಬಿಎಸ್ಎಸ್ಎಲ್ ವಿಸ್ತರಿಸಿದೆ. ಹೆಚ್ಚುವರಿಯಾಗಿ 2.21 ಜಿಬಿ ಡಾಟಾ ಪ್ರತಿದಿನ ಜೂನ್ 30 ರ ವರೆಗೆ ಈ ಆಫರ್ ನ ಅಡಿಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ಎಪ್ರಿಲ್ 30 ಕ್ಕೇ ಅಂತ್ಯಗೊಳ್ಳಬೇಕಿದ್ದ ಈ ಆಫರ್ ನ್ನು ಕಂಪೆನಿಯು ಮುಂದುವರಿಸಿದ್ದು ವಿಸ್ತರಿಸಿದ ಅವಧಿಯನ್ನು ಪ್ರಿಪೇಯ್ಡ್ ಪ್ಲಾನ್ ಅಪ್ ಡೇಟ್ ಮಾಡುವ ಮೂಲಕ ಖಾತ್ರಿಗೊಳಿಸಿದೆ.
ಈ ಪ್ಲಾನ್ ಗಳು Rs 186 ರಿಂದ ಆರಂಭವಾಗಿ Rs 1,699 ವರೆಗೆ ಇದೆ. ಇದರಲ್ಲಿ Rs 429, Rs 485, Rs 666, ಮತ್ತು Rs 999 ಪ್ಲಾನಿನ ಗ್ರಾಹಕರು ಈ ಆಫರ್ ಗೆ ಅರ್ಹರಾಗಿರುತ್ತಾರೆ. ಸೆಪ್ಟೆಂಬರ್ 2018 ರಲ್ಲಿ ಈ ಬಂಪರ್ ಆಫರ್ ನ್ನು ಆರಂಭಿಸಲಾಗಿತ್ತು ಮತ್ತು ಅಂದುಕೊಂಡಂತೆ ಅಂತ್ಯಗೊಳಿಸಿದ್ದೇ ಆದರೆ ಜನವರಿಯಲ್ಲೇ ಅಂತ್ಯಗೊಳ್ಳಬೇಕಿತ್ತು. ಆದರೆ ಇದೀಗ ಪುನಃ ಅವಧಿ ವಿಸ್ತರಣೆ ಆಗಿದ್ದು ಜೂನ್ 30 ರ ವರೆಗೂ ಬಂಪರ್ ಆಫರ್ ಗ್ರಾಹಕರಿಗೆ ಸಿಗುತ್ತದೆ.


Click it and Unblock the Notifications








