ಹಬ್ಬದ ಸಮಯದಲ್ಲಿ ಬಿಗ್ ಆಫರ್ ಘೋಷಿಸಿದ ಬಿಎಸ್‌ಎನ್‌ಎಲ್!
ಪ್ರಸ್ತುತ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇದರ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಆಕರ್ಷಕ ಪ್ಲಾನ್‌ಗಳ ಮೂಲಕ ಗಮನ ಸೆಳೆದಿದೆ. ತನ್ನ ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುತ್ತಾ ಬಂದಿದೆ. ಇದೀಗ ತನ್ನ ಬಳಕೆದಾರರಿಗೆ ಹೊಸ ಆಕರ್ಷಕ ಆಫರ್ ಅನ್ನು ನೀಡಿದೆ. ಈ ಆಫರ್ ಒಂದು ತಿಂಗಳ ಕಾಲ ಅಂದರೆ ಇದೇ ಅಕ್ಟೋಬರ್ 7 ರಿಂದ ನವೆಂಬರ್ 8, 2021 ರವರೆಗೆ ಇರಲಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆ ಹಬ್ಬದ ಪ್ರಯುಕ್ತ ಹೊಸ ಆಫರ್ ಅನ್ನು ಘೋಷಿಸಿದೆ. ತನ್ನ 247 ರೂ.ಗಳಿಂದ ಆರಂಭವಾಗುವ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚುವರಿ ಸಿಂಧುತ್ವ ಮತ್ತು ಹೆಚ್ಚುವರಿ ಡೇಟಾವನ್ನು ನೀಡುವುದಾಗಿ ಹೇಳಿದೆ. ಈ ಆಫರ್ 247ರೂ ಗಳಿಂದ ಆರಂಭವಾಗಲಿದ್ದು 1,999ರೂ,ಗಳ ತನಕ ಲಭ್ಯವಾಗಲಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್ ಯಾವೆಲ್ಲಾ ಪ್ಲಾನ್‌ಗಳಿಗೆ ಹೆಚ್ಚುವರಿ ಮಾನ್ಯತೆಯ ಆಫರ್ ಅನ್ನು ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್ 247ರೂ. 398ರೂ. ಮತ್ತು 499ರೂ. ಪ್ಲಾನ್‌ಗಳು ಇದೀಗ ಹಬ್ಬದ ಅವಧಿಯಲ್ಲಿ 5 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ 247ರೂ.ಗಳ ಪ್ರಿಪೇಯ್ಡ್ ಪ್ಲಾನ್ 50GB ಹೈ ಸ್ಪೀಡ್ ಡೇಟಾವನ್ನು ನೀಡಲಿದೆ. ಡೇಟಾ ಸ್ಪೀಡ್ ಮುಗಿದ ನಂತರ 80ಕೆಬಿಪಿಎಸ್ ವೇಗಕ್ಕೆ ಇಳಿಯಲಿದೆ. ಇದು ಬಿಎಸ್‌ಎನ್‌ಎಲ್ ಟ್ಯೂನ್‌ಗಳು ಮತ್ತು ಇರೋಸ್ ನೌ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್ ನವೆಂಬರ್ 6 ರವರೆಗೆ, 35 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.

ಬಿಎಸ್‌ಎನ್‌ಎಲ್ 398ರೂ.ಗಳ ಪ್ರಿಪೇಯ್ಡ್ ಪ್ಲಾನ್ ಕೂಡ ಫೆಸ್ಟಿವಲ್ ಆಫರ್‌ನಲ್ಲಿ 35 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಪ್ಲಾನ್ ಯಾವುದೇ ವೇಗದ ನಿರ್ಬಂಧವಿಲ್ಲದೆ ಅನಿಯಮಿತ ಡೇಟಾವನ್ನು ನೀಡಲಿದೆ. ಇದು ದೆಹಲಿ ಮತ್ತು ಮುಂಬೈನಲ್ಲಿ ಎಂಟಿಎನ್ಎಲ್ ನೆಟ್ವರ್ಕ್ ಸೇರಿದಂತೆ ಮನೆ ಮತ್ತು ರಾಷ್ಟ್ರೀಯ ರೋಮಿಂಗ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡಲಿದೆ.

ಇದಲ್ಲದೆ 1,999ರೂ. ಬೆಲೆಯ ಪ್ಲಾನ್ ಆಫರ್ ಅವಧಿಯಲ್ಲಿ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ನೀಡುತ್ತದೆ. ಇನ್ನು ಈ ಪ್ಲಾನ್ ವಾರ್ಷಿಕ ಪ್ಲಾನ್ ಆಗಿದ್ದು, 600GB ಡೇಟಾವನ್ನು ಹೆಚ್ಚಿನ ವೇಗದಲ್ಲಿ ನೀಡುತ್ತದೆ. ನಂತರ ವೇಗವನ್ನು 80 ಕೆಬಿಪಿಎಸ್‌ಗೆ ಕಡಿಮೆ ಮಾಡುತ್ತದೆ. ಈ ಪ್ಲಾನ್ ಅನಿಯಮಿತ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 ಎಸ್‌ಎಂಎಸ್ ಜೊತೆಗೆ ಉಚಿತ ಪಿಆರ್‌ಬಿಟಿ ಜೊತೆಗೆ ಅನ್‌ಲಿಮಿಟೆಡ್ ಟ್ಯೂನ್ ಚೇಂಜ್ ಆಯ್ಕೆಯನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ನಿಮಗೆ 60 ದಿನಗಳವರೆಗೆ ಲೋಧುನ್ ವಿಷಯಕ್ಕೆ ಇರೋಸ್ ಮೂಲಕ ಪ್ರವೇಶವನ್ನು ನೀಡಲಿದೆ. ಹೀಗಾಗಿ ಈ ಯೋಜನೆಯು ಹಬ್ಬದ ಕೊಡುಗೆ ಅವಧಿಯಲ್ಲಿ ಇತರ ಪ್ರಯೋಜನಗಳೊಂದಿಗೆ 395 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ಇನ್ನು ಹಬ್ಬದ ಅವಧಿಯಲ್ಲಿ ನೀಡಲಾಗುವ ಹೆಚ್ಚುವರಿ ಡೇಟಾ ಆಫರ್ ನಲ್ಲಿ 485ರೂ ಮತ್ತು 499ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ ಗಳು ಪ್ರತಿ ದಿನ ಹೆಚ್ಚುವರಿ 0.5GB ಮತ್ತು 1GB ಡೇಟಾವನ್ನು ನೀಡಲಿವೆ. ಈ ಯೋಜನೆಗಳು ಎಲ್ಲಾ ಉಚಿತಗಳ ಜೊತೆಗೆ ದಿನಕ್ಕೆ 1.5GB ಮತ್ತು 3GB ನಿಯಮಿತ ಡೇಟಾವನ್ನು ನೀಡುತ್ತದೆ. 499ರೂ. ಪ್ರಿಪೇಯ್ಡ್ ಪ್ಲಾನ್ 3GB ದೈನಂದಿನ ಡೇಟಾವನ್ನು ಜೊತೆಗೆ 35 ದಿನಗಳ ವ್ಯಾಲಿಡಿಟಿ ಮತ್ತು ಇತರ ಪ್ರಯೋಜನಗಳನ್ನು ನೀಡಲಿವೆ.

ಇದಲ್ಲದೆ ಇತ್ತೀಚಿಗೆ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂಗಳ ಹಾದಿಯಲ್ಲಿಯೇ ಹೆಜ್ಜೆಹಾಕಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳ ಹಿಂದೆ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಬಿಎಸ್‌ಎನ್‌ಎಲ್ ಸೆಲ್ಫ ಕೇರ್ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಮೂಲಕ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮುಖ್ಯ ಖಾತೆಯ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








