ಜಿಯೋ ಗಿಗಾ ಫೈಬರ್ ಆರಂಭಕ್ಕೂ ಮುನ್ನವೇ ಅನ್‌ಲಿಮಿಡೆಟ್ ಡೇಟಾ ಆಫರ್ ಕೊಟ್ಟ BSNL...!
ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಕಾಲಿಟ್ಟ ಕಡೆಯಲ್ಲಿ ದರ ಸಮರ ಶುರುವಾಗುವುದು ಎನ್ನುವ ಮಾತು ಮತ್ತೆ ನಿಜವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋ, ಗಿಗಾ ಫೈಬರ್ ರಿಜಿಸ್ಟ್ರೇಷನ್ ಅನ್ನು ಆರಂಭಿಸಿದ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಬ್ರಾಡ್ ಬ್ಯಾಂಡ್ ಸೇವೆಗಳು ಎಚ್ಚೆತ್ತು ಕೊಂಡು ಬಳಕೆದಾರರಿಗೆ ಉತ್ತಮ ಸೇವೆಗಳನ್ನು ನೀಡಲು ಮುಂದಾಗಿದೆ.

ಇದರಲ್ಲಿ ಮೊದಲಿಗೆ BSNL ಹೊಸ ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಸೆಳೆಯಲು ಮತ್ತು ಇರುವ ಬಳಕೆದಾರರನ್ನು ಉಳಿಸಿಕೊಳ್ಳುವ ಸಲುವಾಗಿ ಹೊಸದೊಂದು ಪ್ಲಾನ್‌ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಡೇಟಾದೊಂದಿಗೆ ವೇಗದ ಇಂಟರ್ನೆಟ್ ಸೇವೆಯೂ ಲಭ್ಯವಾಗಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ BSNL ನೀಡಿರುವ ಹೊಸ ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

ರೂ.995 ಪ್ಲಾನ್:
ಮಾರುಕಟ್ಟೆಯಲ್ಲಿ ಜಿಯೋ ಆರಂಭದ ನಂತರದಲ್ಲಿ ಬಳಕೆದಾರರನ್ನು ಸೆಳೆಯುವ ಸಲುವಾಗಿ ಹೊಸ ಮಾದರಿಯ ಆಫರ್ ಅನ್ನು ನೀಡಲಿದೆ ಎನ್ನುವುದನ್ನು ತಿಳಿದಿರುವ BSNL, ಇದಕ್ಕಾಗಿಯೇ ರೂ.995 ಪ್ಲಾನ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ 200 GB FUP ಡೇಟಾ ಬಳಕೆಗೆ ದೊರೆಯಲಿದೆ. ಇದಲ್ಲದೇ ವೇಗದ ಸೇವೆಯೂ ಈ ಪ್ಲಾನ್‌ನಲ್ಲಿ ಲಭ್ಯವಿದೆ.

20 Mbps:
ಜಿಯೋ ಮಾರುಕಟ್ಟೆಯಲ್ಲಿ 1 GBPS ವೇಗದ ಸೇವೆಯನ್ನು ನೀಡಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ಆದರೆ BSNL ತನ್ನ ಬಳಕೆದಾರರಿಗೆ ರೂ.995 ಪ್ಲಾನ್ ನಲ್ಲಿ 20 MBPS ವೇಗದ ಡೇಟಾವನ್ನು ನೀಡಲು ಮುಂದಾಗಿದೆ. ಈ 20 GB ಡೇಟಾ ಖಾಲಿಯಾದ ನಂತರದಲ್ಲಿ ಬಳಕೆದಾರರಿಗೆ 2 MBPS ವೇಗದ ಅನ್‌ಲಿಮಿಡೆಟ್ ಡೇಟಾವನ್ನು ಬಳಕೆಗೆ ನೀಡಲಿದೆ. ಹಾಗಾಗಿ ಯಾವುದೇ ಯೋಚನೆ ಇಲ್ಲದೇ ಉಚಿತ ಡೇಟಾ ಸೇವೆಯನ್ನು ಪಡೆಯಬಹುದಾಗಿದೆ.

ಉಚಿತ ಇಮೇಲ್:
ಇದಲ್ಲದೇ BSNL ಒಂದು ಉಚಿತ ಇಮೇಲ್ ಐಡಿಯನ್ನು ನೀಡಲಿದ್ದು, ಇದರೊಂದಿಗೆ 1 GB ಡೇಟಾ ಸೇವ್ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ. ಈ ಹಿನ್ನಲೆಯಲ್ಲಿ ಕಾಂಬೋ ವಿಚಾರದಲ್ಲಿ ಈ ಪ್ಲಾನ್ ಬೆಸ್ಟ್ ಎನ್ನಬಹುದಾಗಿದೆ. ಆದರೆ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಯಾವುದೇ ವಾಯ್ಸ್ ಕಾಲ್ ಬೆನಿಫಿಟ್ ಇರುವುದಿಲ್ಲ ಎನ್ನಲಾಗಿದೆ.

ಪ್ರಮೋಷನಲ್ ಆಫರ್:
ಈ ಪ್ಲಾನ್ ಅನ್ನು BSNL ಪ್ರೋಮೋಷನ್‌ಗಾಗಿ ನೀಡಿದೆ. ಇದು ಲಾಂಚ್ ಅದ 90 ದಿನಗಳ ಒಳಗೆ ಮಾತ್ರವೇ ಬಳಕೆ ದೊರೆಯಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯುವುದಿಲ್ಲ. ಇದೇ ಮಾದರಿಯಲ್ಲಿ ಎಲ್ಲಾ ಬ್ರಾಡ್ ಬ್ಯಾಂಡ್ ಸೇವೆ ನೀಡುವ ಕಂಪನಿಗಳು ಸಹ ಪ್ರಮೋಷನ್ ಪ್ಲಾನ್‌ಗಳನ್ನು ನೀಡಲು ಮುಂದಾಗಿದೆ.


Click it and Unblock the Notifications








