IPL ಕಿಚ್ಚಿಗೆ ಬೆಂಕಿ ಹಚ್ಚಿದ BSNL ಆಫರ್: ಜಿಯೋ-ಏರ್‌ಟೆಲ್ ಕೊಟ್ಟಿದ್ದು ಇದರ ಮುಂದೆ ಏನಿಲ್ಲ..!
ದೇಶದಲ್ಲಿ IPL ಹವಾ ಜೋರಾಗಿದೆ, ಇಂದು ರಾತ್ರಿಯಿಂದಲೇ IPL ಕಳೆಕಟ್ಟಲಿದ್ದು, ಕ್ರಿಕೆಟ್ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ತಯಾರಿಯನ್ನು ನಡೆಸಿದ್ದಾರೆ. ಈ ಬಾರಿ IPL ಪಂದ್ಯಾವಳಿಯೂ ಸಾಕಷ್ಟು ಕಳೆಕಟ್ಟಲಿದ್ದು, ಹೆಚ್ಚಿನ ಸ್ಮಾರ್ಟ್‌ಫೋನಿನಲ್ಲಿಯೇ IPL ನೋಡುವವರ ಸಂಖ್ಯೆಯೂ ಹೆಚ್ಚಾಗಲಿದೆ.

ಇದಕ್ಕೆ ಕಾರಣ ಜಿಯೋ ಎಂದರೆ ತಪ್ಪಾಗುವುದಿಲ್ಲ, IPL ನೋಡಲಿ ಎನ್ನುವ ಕಾರಣಕ್ಕೆ ಡೇಟಾ ಆಫರ್ ಕೊಟ್ಟಿತ್ತು. ಇದರ ಬೆನ್ನಲೇ ಏರ್‌ಟೆಲ್ ಉಚಿತವಾಗಿ ಹಾಟ್ ಸ್ಟಾರ್ ಸೇವೆಯನ್ನು ನೀಡಿತ್ತು. ಇದಾದ ಮೇಲೆ BSNL ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ.

BSNL ಆಫರ್:
ಏರ್‌ಟೆಲ್ ಮತ್ತು ಜಿಯೋ ಗಳು ತನ್ನ ಬಳಕೆದಾರರಿಗೆ ಇಷ್ಟು ದೊಡ್ಡ ಮಟ್ಟದ ಆಫರ್ ಗಳನ್ನು ನೀಡಿದ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ BSNL ಸಹ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ಲಾಂಚ್ ಮಾಡಿದ್ದು, IPL ನೋಡುವ ಸಲುವಾಗಿಯೇ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾವನ್ನು ನೀಡುವ ಪ್ಲಾನ್ ವೊಂದನ್ನು ಲಾಂಚ್ ಮಾಡಿದ್ದು, ಈ ಮೂಲಕ IPL ಕಿಚ್ಚಿಗೆ ಇನ್ನಷ್ಟು ಬೆಂಕಿ ಹಚ್ಚಲು ಮುಂದಾಗಿದೆ.

ರೂ.251 ಪ್ಲಾನ್:
BNLS ತನ್ನ ಬಳಕೆದಾರರಿಗೆ IPL ನೋಡುವ ಸಲುವಾಗಿವೇ ರೂ.251 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 153GB ಡೇಟಾವನ್ನು ನೀಡಲು ಮುಂದಾಗಿದೆ. ಇದು ಜಿಯೋ ಆಫರ್ ಅನ್ನು ಮೀರಿಸುವಂತೆ ಇದೆ ಎನ್ನಲಾಗಿದೆ. ಈ ಆಫರ್ ನಲ್ಲಿ BSNL ಬಳಕೆದಾರರು ಪ್ರತಿ ನಿತ್ಯ 3GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಜಿಯೋ ಸಹ ಈ ಮಾದರಿಯ ಆಫರ್ ಅನ್ನು ನೀಡಲು ಸಾಧ್ಯವಾಗಿಲ್ಲ.

51 ದಿನ ವ್ಯಾಲಿಡಿಟಿ:
ಇದಲ್ಲದೇ ರೂ.251 ಪ್ಲಾನ್ ವ್ಯಾಲಿಡಿಟಿಯನ್ನು ವಿಸ್ತರಿಸಿರುವ BNSL, ತನ್ನ ಬಳಕೆದಾರರು IPL ಅನ್ನು ಆರಂಭದಿಂದ ಕೊನೆಯವರೆಗೂ ಪಂದ್ಯಾವಳಿಗಳನ್ನು ನೋಡಲಿ ಎನ್ನುವ ಕಾರಣಕ್ಕೆ ಏಪ್ರಿಲ್ 7 ರಿಂದ ಮೇ 27ರ ವೆರೆಗೆ ಒಟ್ಟು 51 ದಿನಗಳ ಕಾಲದ ವ್ಯಾಲಿಡಿಟಿಯನ್ನು ನೀಡಲಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ.

ಕರೆ ಲಾಭವಿಲ್ಲ:
BSNL ಬಳಕೆದಾರರಿಗೆ ರೂ.251 ಪ್ಲಾನ್ ನಲ್ಲಿ ಕೇವಲ ಡೇಟಾವನ್ನು ಮಾತ್ರವೇ ಬಳಕೆ ನೀಡುತ್ತಿದ್ದು, ಯಾವುದೇ ಕರೆ ಮಾಡುವ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿಲ್ಲ. IPL ನೋಡುವವರಿಗೆ ಹೆಚ್ಚಿನ ಡೇಟಾವನ್ನು ಮಾತ್ರವೇ ನೀಡಲಿದೆ.


ಜಿಯೋ ಆಫರ್:
ಜಿಯೋ ಸಹ ತನ್ನ ಬಳಕೆದಾರರಿಗೆ IPL ನೋಡುವ ಸಲುವಾಗಿ ಡೇಟಾ ಆಫರ್ ಅನ್ನು ನೀಡಿದೆ. ಅಲ್ಲದೇ ಗೇಮ್ ಆಡುವ ಆಪ್ ವೊಂದನ್ನು ನೀಡಿದೆ ಜೊತೆಗೆ ಟಾಕ್ ಶೋವೊಂದನ್ನು ಆಯೋಜಿಸಿದೆ. ಒಟ್ಟಿನಲ್ಲಿ ಭರಪೂರ ಮನರಂಜನೆಯನ್ನು ನೀಡುತ್ತಿದೆ.


Click it and Unblock the Notifications








