Home
ಸುದ್ದಿಜಾಲ

ಬಿಎಸ್ಎನ್ಎಲ್ ಬಿಡುಗಡೆಗೊಳಿಸಿದೆ 78 ರುಪಾಯಿ ಪ್ರಿಪೇಯ್ಡ್ ಪ್ಲಾನ್

ಬಿಎಸ್ಎನ್ಎಲ್ ಹೊಸ ಎಂಟ್ರಿ ಲೆವೆಲ್ ಪ್ಲಾನ್ ಒಂದನ್ನು ದೇಶದ ಜನತೆಯ ಚಂದಾದಾರರಿಗಾಗಿ ಬಿಡುಗಡೆಗೊಳಿಸಿದೆ. ಈ ಪ್ಲಾನ್ ನ ಬೆಲೆ 78 ರುಪಾಯಿಗಳು. ಇದು ಡಾಟಾ ಮತ್ತು ಕಾಲಿಂಗ್ ಬೆನಿಫಿಟ್ ಗಳನ್ನು ಹೊಂದಿದೆ.

ಬಿಎಸ್ಎನ್ಎಲ್ ಬಿಡುಗಡೆಗೊಳಿಸಿದೆ 78 ರುಪಾಯಿ ಪ್ರಿಪೇಯ್ಡ್ ಪ್ಲಾನ್

ಪ್ಲಾನ್ ನ ಒಂದು ಭಾಗವಾಗಿ, ಬಳಕೆದಾರರು ಪ್ರತಿದಿನ 2ಜಿಬಿ ಡಾಟಾ,ಅನಿಯಮಿತ ಎಸ್ ಟಿಡಿ ಮತ್ತು ಸ್ಥಳೀಯ ಕರೆಗಳಿಗೆ ಅವಕಾಶವಿದ್ದು 10 ದಿನಗಳ ಅವಧಿಯನ್ನು ಹೊಂದಿರುತ್ತದೆ.ಅಂದರೆ ಒಟ್ಟು 20ಜಿಬಿ ಡಾಟಾ ಲಭ್ಯವಾಗುತ್ತದೆ.

ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ ಮುಂಬೈ ಮತ್ತು ದೆಹಲಿ ಸರ್ಕಲ್ ನಲ್ಲಿರುವ ಜನರಿಗೂ ಕೂಡ ಕರೆ ಮಾಡಲು ಅವಕಾಶವಿರುತ್ತದೆ.

ಈ ಬೆಲೆಯಲ್ಲಿ ರಿಲಯನ್ಸ್ ಜಿಯೋ ಕೂಡ ಯಾವುದೇ ಪ್ಲಾನ್ ನ್ನು ಕೂಡ ಆಫರ್ ಮಾಡುವುದಿಲ್ಲ. ಆದರೆ ರಿಲಯನ್ಸ್ ಜಿಯೋ 98 ರುಪಾಯಿ ಪ್ಲಾನ್ ನ್ನು ಆಫರ್ ಮಾಡುತ್ತದೆ. ಈ ಪ್ಲಾನ್ ನಲ್ಲಿ ಜಿಯೋ 2ಜಿಬಿ ಡಾಟಾವನ್ನು 28 ದಿನಗಳ ಅವಧಿಗೆ ನೀಡುತ್ತದೆ ಅಂದರೆ ಈ ಅವಧಿಯಲ್ಲಿ ನೀವು 56ಜಿಬಿ ಡಾಟಾವನ್ನು ಬಳಕೆ ಮಾಡಬಹುದು. ಇದರ ಜೊತೆಗೆ ಬಳಕೆದಾರರಿಗೆ ಅನಿಯಮಿತ ಕರೆಗಳ ಆಯ್ಕೆ ಅಂದರೆ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವುದಕ್ಕೆ ಅವಕಾಶವಿರುತ್ತದೆ ಜೊತೆಗೆ ಜಿಯೋ ಆಪ್ ಗಳಿಗೆ ಉಚಿತ ಚಂದಾದಾರಿಕೆ ಸಿಗುತ್ತದೆ.

ಬಿಎಸ್ಎನ್ಎಲ್ 29 ರುಪಾಯಿ ಪ್ಲಾನ್

ಇತ್ತೀಚೆಗೆ ಬಿಎಸ್ಎನ್ಎಲ್ ಟೆಲಿಕಾಂ ಸೇವೆಯು ತನ್ನ ಎಂಟ್ರಿ ಲೆವೆಲ್ ಪ್ಲಾನ್ ನ್ನು ಮರುಪರಿಶೀಲಿಸಿ ಮಾರುಕಟ್ಟೆಗೆ ಬಿಟ್ಟಿದೆ. ಅದುವೇ 29 ರುಪಾಯಿ ಎಂಟ್ರಿ ಲೆವೆಲ್ ಪ್ರೀಪೇಯ್ಡ್ ಪ್ಲಾನ್.

ಬದಲಾಗಿರುವ ಬಿಎಸ್ಎನ್ಎಲ್ ಪ್ಲಾನ್ ನ ಅನ್ವಯ ಬಳಕೆದಾರರಿಗೆ ಅನಿಯಮಿತ ಸ್ಥಳೀಯ ಮತ್ತು ನ್ಯಾಷನಲ್ ಕರೆಗಳು ಯಾವುದೇ ಎಫ್ ಯುಪಿ ಲಿಮಿಟ್ ಇಲ್ಲದೇ ಕರೆ ಮಾಡಲು ಅವಕಾಶವಿರುತ್ತದೆ ಆದರೆ ಮುಂಬೈ ಮತ್ತು ದೆಹಲಿ ಸರ್ಕಲ್ ಗೆ ಕರೆ ಮಾಡಿದರೆ ಸಾಮಾನ್ಯ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಪ್ಲಾನ್ 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು 300 ಉಚಿತ ಎಸ್ಎಂಎಸ್ ಗಳಿಗೆ. 1ಜಿಬಿ ಡಾಟಾ 7 ದಿನಗಳ ಅವಧಿಗೆ 29 ರುಪಾಯಿ ಪ್ಲಾನ್ ನಲ್ಲಿ ಉಚಿತವಾಗಿ ಸಿಗುತ್ತದೆ.

ಈ ಬದಲಾವಣೆ ಆಗುವ ಮುನ್ನ ರುಪಾಯಿ 29 ಪ್ಲಾನ್ 100ಎಸ್ಎಂಎಸ್ ಪ್ರತಿದಿನ ಉಚಿತ ಮತ್ತು 2ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳ ಅವಕಾಶವನ್ನು ನೀಡುತ್ತಿದ್ದು ಮತ್ತು ಇದರ ಅವಧಿ 7 ದಿನಗಳೇ ಆಗಿತ್ತು. ಕುತೂಹಲಕಾರಿ ವಿಚಾರವೇನೆಂದರೆ ಬದಲಾವಣೆಯ ನಂತರ ಬಿಎಸ್ಎನ್ಎಲ್ ಟೆಲಿಕಾಂ ಆಪರೇಟರ್ ಪ್ಲಾನ್ ನಲ್ಲಿ ಸಿಗುವ ಲಾಭಗಳನ್ನು ಕಡಿತಗೊಳಿಸಿದ್ದು ಗ್ರಾಹಕರಿಗೆ ನಿರಾಸೆಯೇ ಸರಿ.

Best Mobiles in India

English summary
BSNL launches Rs 78 prepaid plan: Here's all that it offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+