999ರೂ. ಬೆಲೆಯಲ್ಲಿ ಹೊಸ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಲಾಂಚ್‌ ಮಾಡಿದ ಬಿಎಸ್‌ಎನ್‌ಎಲ್‌ !

|

ಇತ್ತೀಚಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಖಾಸಗಿ ಟೆಲಿಕಾಂಗಳು ಸೇರಿದಂತೆ ಅನೇಕ ಕಂಪೆನಿಗಳು ಹಲವು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದಕ್ಕೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಕೂಡ ಹೊರತಾಗಿಲ್ಲ. ಸದ್ಯ ಇದೀಗ ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸ ಪ್ರೀಮಿಯಂ ಒಟಿಟಿ ಪ್ರಯೋಜನ ನೀಡುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಪರಿಚಯಿಸಿದೆ. ಇದು 999ರೂ. ಬೆಲೆಯನ್ನು ಹೊಂದಿದ್ದು, ಒಟಿಟಿ ಪ್ರಯೋಜನಗಳನ್ನು ನೀಡಲಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ 999ರೂ. ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಪರಿಚಯಿಸಿದೆ. ಸೂಪರ್ ಸ್ಟಾರ್ ಪ್ರೀಮಿಯಂ ಪ್ಲಸ್ ಎಂದು ಕರೆಯಲ್ಪಡುವ ಫೈಬರ್ ಟು ದಿ ಹೋಮ್ (FTTH) ಯೋಜನೆಯು ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ. ಈ ಯೋಜನೆಯಲ್ಲಿ 2000GB ತಲುಪುವವರೆಗೆ 150 Mbps ವೇಗ ನೀಡುವ ಡೇಟಾ ಪ್ರಯೋಜನ ಸಿಗಲಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂ ಪರಿಚಯಿಸಿರುವ ಹೊಸ ಪ್ರಿಪೇಯ್ಡ್‌ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌ ಟೆಲಿಕಾಂ 999ರೂ. ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ ಟೆಲಿಕಾಂ 999ರೂ. ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ 2000GB ತಲುಪುವವರೆಗೆ 150 Mbps ವೇಗ ನೀಡುವ ಡೇಟಾ ಪ್ರಯೋಜನ ನೀಡಲಿದೆ. ಇನ್ನು ಈ ಪ್ಲಾನ್‌ಗೆ ಚಂದಾದಾರರಾಗಿರುವ ಬಳಕೆದಾರರು ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನು ಸೂಪರ್ ಸ್ಟಾರ್ ಪ್ರೀಮಿಯಂ ಪ್ಲಸ್ ಪ್ಲಾನ್‌ ಜೊತೆಗೆ, ಇಂಟರ್ನೆಟ್ ಸೇವಾ ಪೂರೈಕೆದಾರರು (ISP) 8 ವಿಭಿನ್ನ OTT ಅಪ್ಲಿಕೇಶನ್‌ಗಳಿಂದ ಪ್ರೀಮಿಯಂ OTT ವಿಷಯವನ್ನು ಸಹ ಪ್ರವೇಶಿಸಬಹುದಾಗಿದೆ.

ಪ್ಲಾನ್‌

ಇದಲ್ಲದೆ ಈ ಪ್ಲಾನ್‌ಗೆ ಚಂದಾದಾರರಾಗಿರುವ ಬಳಕೆದಾರರು ಲಯನ್ಸ್ ಗೇಟ್ ಎಲ್‌ಎಲ್‌ಪಿ, ಶೆಮರೂ ಮಿ ಮತ್ತು ಶೆಮರೂ ಗುಜರಾತಿ, ಹಂಗಾಮಾ ಮ್ಯೂಸಿಕ್ ಮತ್ತು ಹಂಗಾಮಾ ಪ್ಲೇ SVOD, SonyLIV ಪ್ರೀಮಿಯಂ, Zee5 ಪ್ರೀಮಿಯಂ, VooT ಸೆಲೆಕ್ಟ್ ಮತ್ತು YuppTV ಲೈವ್, YuppTV ಪ್ಯಾಕೇಜ್‌ಗಳ ಪ್ರಕಾರ ಇತರ ವಿಷಯಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನು ಈಗಾಗಲೇ BSNL ಎಲ್ಲಾ ಟೆಲಿಕಾಂ ವಲಯಗಳಲ್ಲಿನ ಹೊಸ ಗ್ರಾಹಕರಿಗೆ 949ರೂ ಫೈಬರ್ ಪ್ರೀಮಿಯಂ ಮತ್ತು 999ರೂ ಬೆಲೆಯ ಸೂಪರ್ ಸ್ಟಾರ್ ಪ್ರೀಮಿಯಂ-2 ಅಸ್ತಿತ್ವದಲ್ಲಿರುವ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ.

999ರೂ.ಗಳ ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್‌

999ರೂ.ಗಳ ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ 999ರೂ.ಗಳ ಏರ್‌ಟೆಲ್‌ ಎಂಟರ್‌ಟೈನ್‌ಮೆಂಟ್‌ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ 200 Mbps ವರೆಗೆ ಡೇಟಾ ವೇಗವನ್ನು ನೀಡುತ್ತದೆ. ಈ ಬ್ರಾಡ್‌ಬ್ಯಾಂಡ್ ಯೋಜನೆಯ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಇದರ FUP ಮಿತಿ 300GB ಆಗಿದೆ. ಇದರೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗಲಿದೆ. ಉಚಿತ ಲ್ಯಾಂಡ್‌ಲೈನ್ ಸಂಪರ್ಕದೊಂದಿಗೆ ಬರುತ್ತದೆ ಹಾಗೂ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

999ರೂ.ಗಳ ಜಿಯೋ ಫೈಬರ್‌ ಬ್ರಾಡ್‌ಬ್ಯಾಂಡ್ ಪ್ಲಾನ್‌

999ರೂ.ಗಳ ಜಿಯೋ ಫೈಬರ್‌ ಬ್ರಾಡ್‌ಬ್ಯಾಂಡ್ ಪ್ಲಾನ್‌

ಜಿಯೋಫೈಬರ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ ಇನ್ನು ಜಿಯೋಫೈಬರ್‌ನ ಬ್ರಾಡ್‌ಬ್ಯಾಂಡ್ ಪ್ಲಾನ್ 150Mbps ವರೆಗಿನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡಲಿದೆ. ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಇದು ಅನಿಯಮಿತ ಇಂಟರ್‌ನೆಟ್‌ನೊಂದಿಗೆ ಬರುತ್ತದೆ. ಇದಲ್ಲದೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ ಸ್ಟಾರ್ ಸೇರಿದಂತೆ 15 OTT ಆಪ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಲಯನ್ಸ್‌ಗೇಟ್, ಸನ್‌ಎನ್‌ಕ್ಸ್ಟ್, ಹೊಯಿಚೊಯ್, ಆಲ್ಟ್ ಬಾಲಾಜಿ, ವೂಟ್ ಕಿಡ್ಸ್, ಇರೋಸ್ ನೌ, ಡಿಸ್ಕವರಿ +, ಆಲ್ಟ್ ಬಾಲಾಜಿ, ಮತ್ತು ಹಂಗಾಮ ಪ್ಲೇ ಸೇವೆಗಳಿಗೆ ಬೆಲೆಗಳು ಸ್ವಲ್ಪ ಉನ್ನತ ಶ್ರೇಣಿಯಲ್ಲಿ ಇರಲಿದೆ.

ಎಕ್ಸಿಟೇಲ್ 999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಎಕ್ಸಿಟೇಲ್ 999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಈ ಎಕ್ಸಿಟೇಲ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನ ಹೊಂದಿದೆ. ಇನ್ನು ಈ ಪ್ಲಾನ್‌ 300 Mbps ವೇಗವನ್ನು 999ರೂ. ಬೆಲೆಯಲ್ಲಿ ನೀಡಲಿದೆ. ಅದೇ ಯೋಜನೆಯು ತಿಂಗಳಿಗೆ 499ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಎಕ್ಸಿಟೈಲ್ 752ರೂ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ಶುಲ್ಕವಿಲ್ಲದೆ ZEE5, Voot, Eros, Shemaroo ಗೆ ಬಹು ಓವರ್‌-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
The benefits of this plan include up to 150 Mbps speed till 2000 GB is reached after which the speed is reduced 10 Mbps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X