Home
ಸುದ್ದಿಜಾಲ

ಜಿಯೋ ಬೆಸ್ಟ್, BSNL ಬೇಡ ಅಂದವರೆಲ್ಲ ರಿಚಾರ್ಜ್ ಮಾಡಿಸಿಕೊಳ್ಳುವ ಪ್ಲಾನ್..!

By Srinidhi

ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಗೆ ಇಳಿದಿರುವ ಸರ್ಕಾರಿ ಸ್ವಾಮ್ಯದ BSNL, ದಿನಕ್ಕೊಂದು ಹೊಸ ಮಾದರಿಯ ಆಫರ್ ಗಳನ್ನು ಘೋಷಣೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಹೊಸದಾಗಿ SVT 171 ಆಫರ್ ವೊಂದನ್ನು ಲಾಂಚ್ ಮಾಡಿದೆ. ಖಾಸಗಿ ಟೆಲಿಕಾಂ ಕಂಪನಿಗಳಿಗಿಂತ ಕಡಿಮೆ ಬೆಲೆಗೆ ಹೆಚ್ಚು ಪ್ರಮಾಣದ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ. ನಿತ್ಯ 2GB ಡೇಟಾವನ್ನು ನೀಡುವ ಪ್ಲಾನ್‌ ಗಳಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ.

ಜಿಯೋ ಬೆಸ್ಟ್, BSNL ಬೇಡ ಅಂದವರೆಲ್ಲ ರಿಚಾರ್ಜ್ ಮಾಡಿಸಿಕೊಳ್ಳುವ ಪ್ಲಾನ್..!

ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳು ಮೂಗಿನ ಮೇಲೆ ಬೆಟ್ಟು ಇಟ್ಟುಕೊಳ್ಳುವಂತೆ ಮಾಡಿರುವ BSNL, ದಿನದಿಂದ ದಿನಕ್ಕೆ ತನ್ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಹೊಸ ಹೊಸ ಪ್ಲಾನ್ ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ SVT 171 ಆಫರ್ ಲಾಂಚ್ ಆಗಿದ್ದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

30 ದಿನಗಳ ವ್ಯಾಲಿಡಿಟಿ:

30 ದಿನಗಳ ವ್ಯಾಲಿಡಿಟಿ:

BSNL SVT 171 ಆಫರ್ ನಲ್ಲಿ ಬಳಕೆದಾರರಿಗೆ ಸಾಕಷ್ಟು ಲಾಭಗಳು ಆಗಲಿದೆ. ರೂ.171 ಪಾವತಿ ಮಾಡಿದರೆ 30 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರೆ ಟೆಲಕಾಂ ಕಂಪನಿಗಳು ಕೇವಲ 28 ದಿನಗಳ ಪ್ಲಾನ್ ಅನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ BSNL ವಿಭಿನ್ನವಾಗಿ ಹೆಚ್ಚಿನ ವ್ಯಾಲಿಡಿಟಿ ನೀಡುತ್ತಿದೆ.

ನಿತ್ಯ 2GB ಡೇಟಾ:

ನಿತ್ಯ 2GB ಡೇಟಾ:

ಇದಲ್ಲದೇ BSNL SVT 171 ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಇದು ಒಟ್ಟಾಗಿ 60GB ಡೇಟಾ ಬಳಕೆದಾರರಿಗೆ ಲಭ್ಯವಿರಲಿದೆ. ಇದೇ ಬೇರೆ ಟೆಲಿಕಾಂ ಕಂಪನಿಗಳ ಪ್ಲಾನ್‌ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಡೇಟಾ ಲಭ್ಯವಿಲ್ಲ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ.

ಅನ್‌ಲಿಮಿಟೆಡ್ ಕರೆಗಳು:

ಅನ್‌ಲಿಮಿಟೆಡ್ ಕರೆಗಳು:

ಮಾರುಕಟ್ಟೆಯಲ್ಲಿ ಜಿಯೋ ಬಿಟ್ಟರೇ BSNL ಮಾತ್ರವೇ ಯಾವುದೇ ಷರತ್ತು ಇಲ್ಲದೇ ಅನ್‌ಲಿಮಿಟೆಡ್ ಕರೆಗಳ ಸೇವೆಯನ್ನು ಬಳಕೆದಾರರಿಗೆ ಉಚಿತವಾಗಿ ನೀಡುತ್ತಿದೆ. ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳು ದಿನಕ್ಕೆ ಇಷ್ಟು ಇಲ್ಲವೇ ವಾರಕ್ಕೆ ಇಷ್ಟು ಎಂದು ನಿಗಧಿ ಪಡಿಸುತ್ತಿವೆ, ಈ ಹಿನ್ನಲೆಯಲ್ಲಿ BSNL ಆಫರ್ ಇದು ಬೆಸ್ಟ್.

ಉಚಿತ SMS:

ಉಚಿತ SMS:

ಸೋಶಿಯಲ್ ಮೀಡಿಯಾ ಹೆಚ್ಚಾದ ಮೇಲೆ SMS ಕೇಳುವವರು ಇಲ್ಲದಾಗಿದೆ. ಆದರೆ ಕೆಲವು ವಿಷಯಗಳಿಗೆ SMS ಬೇಕಾಗುತ್ತದೆ. ಇದರಿಂದಾಗಿ ಬಳಕೆದಾರರಿಗೆ BSNL ಉಚಿತ SMS ಸೇವೆಯನ್ನು ನೀಡುವ ಕ್ರಮಕ್ಕೆ ಮುಂದಾಗಿದೆ. ಇದರಿಂದಲೂ ಗ್ರಾಹಕರಿಗೆ ಲಾಭವಾಗಲಿದೆ.

ಬೇರೆ ಟೆಲಿಕಾಂ:

ಬೇರೆ ಟೆಲಿಕಾಂ:

ಇದಲ್ಲದೇ ಬೇರೆ ಟೆಲಿಕಾಂ ಕಂಪನಿಗಳು ಇದೇ ಮಾದರಿಯ ಆಫರ್ ಗಳನ್ನು ನೀಡಿವೆ. ಆದರೆ ಇಷ್ಟು ಪ್ರಮಾಣದ ಡೇಟಾ ಮತ್ತು ವ್ಯಾಲಿಡಿಟಿಯನ್ನು ನೀಡಿಲ್ಲ. ಎಲ್ಲಾ ಪ್ಲಾನ್‌ ಗಳು ರೂ.199ಕ್ಕಿಂತ ಮೇಲಿದೆ ಮತ್ತು ಡೇಟಾ ಸಹ ಕಡಿಮೆಯನ್ನು ನೀಡುತ್ತಿವೆ. ಈ ಹಿನ್ನಲೆಯಲ್ಲಿ BSNL ಉತ್ತಮ ಎನ್ನವ ಮಾತು ಕೇಳಿ ಬಂದಿದೆ.

Best Mobiles in India

English summary
BSNL Launches STV 171 Prepaid Recharge Plan. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+