Home
ಸುದ್ದಿಜಾಲ

BSNL: ಆಹಾ..! ಪ್ರತಿದಿನ 3GB ಡೇಟಾ ಜೊತೆ ಇಷ್ಟೊಂದು ಆಫರ್.. ಎರಡು ಹೊಸ ಪ್ಲಾನ್​ ಲಾಂಚ್

BSNL Prepaid Plans: ಬಿಎಸ್​ಎನ್​ಎಲ್ ತನ್ನ ಬಳಕೆದಾರರಿಗೆ ಒಳ್ಳೆಯ ಸುದ್ದಿ ನೀಡಿದೆ. ಪ್ರತಿದಿನ 3GB ಡೇಟಾ ಜೊತೆಗೆ ಇಷ್ಟೊಂದು ಆಫರ್​! ಹೌದು, ಬಿಎಸ್​ಎನ್​ಎಲ್ (BSNL) ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು (BSNL Prepaid Plans) ಬಿಡುಗಡೆ ಮಾಡಿದೆ. ಈ ಮೂಲಕ ಜಿಯೋ, ಏರ್‌ಟೆಲ್ ಮತ್ತು ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿದೆ. ಜೊತೆಗೆ, ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆದಿದೆ. ಬನ್ನಿ, ಹೊಸ ಪ್ರಿಪೇಯ್ಡ್ ಯೋಜನೆಗಳ ಬೆಲೆ ಮತ್ತು ಪ್ರಯೋಜನೆಗಳನ್ನು ತಿಳಿಯೋಣ.

ಹೌದು, ಬಿಎಸ್​ಎನ್​ಎಲ್​ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಇತ್ತೀಚೆಗೆ ಲಾಂಚ್ ಮಾಡಿದೆ. ಈ ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆ 628 ಮತ್ತು 215 ರೂ. ಇದೆ. ಈ ಪ್ಲಾನ್‌ಗಳಲ್ಲಿ ಗ್ರಾಹಕರು ಡೇಟಾ ಮತ್ತು ಸಕ್ರಿಯ ವ್ಯಾಲಿಡಿಟಿಯೊಂದಿಗೆ (ಮಾನ್ಯತೆ) ಧ್ವನಿ ಕರೆ (ವಾಯ್ಸ್​ ಕಾಲ್)​ ಸೌಲಭ್ಯ ಪಡೆಯಲಿದ್ದಾರೆ. ಈ ಎರಡೂ ಪ್ಲಾನ್‌ಗಳನ್ನು ಭಾರತದಾದ್ಯಂತ ಬಿಎಸ್​ಎಲ್​ಎನ್​ನ ಎಲ್ಲಾ ವಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

BSNL: ಪ್ರತಿದಿನ 3GB ಡೇಟಾ ಜೊತೆ ಇಷ್ಟೊಂದು ಆಫರ್! ಎರಡು ಹೊಸ ಪ್ಲಾನ್​ ಲಾಂಚ್

ಕಳೆದ ಕೆಲವು ತಿಂಗಳುಗಳಿಂದ ಬಿಎಸ್​ಎಲ್​ಎನ್​ ಅನೇಕ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಯೋಜನೆಗಳ ಬೆಲೆ ಜಿಯೋ (Jio), ಏರ್‌ಟೆಲ್ (Airtel) ಮತ್ತುವೊಡಾಫೋನ್ ಐಡಿಯಾ (Vodafone Idea) ರೀಚಾರ್ಜ್‌ ಪ್ಲಾನ್‌ಗಳಿಗಿಂತ ಅಗ್ಗವಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮೂರು ದೊಡ್ಡ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೋಸ್ಟ್ ಯೋಜನೆಗಳ ಬೆಲೆ ಏರಿಸಿದ್ದವು. ಬಳಿಕ ಕೆಲವು ರಾಜ್ಯಗಳ ಸಾವಿರಾರು ಗ್ರಾಹಕರು, ಈ ಕಂಪನಿಗಳ ಸಿಮ್‌ ಬಿಟ್ಟು ಬಿಎಸ್​ಎಲ್​ಎನ್ ಸಿಮ್‌ ಬಳಸಲು ಶುರು ಮಾಡಿದ್ದಾರೆ.

ಬಿಎಸ್​ಎಲ್​ಎನ್​ 628 ರೂ. ರೀಚಾರ್ಜ್‌ ಪ್ಲಾನ್

ಬಿಎಸ್​ಎಲ್​ಎನ್​ನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 628 ರೂ. ಯೋಜನೆ ಒಂದಾಗಿದೆ. ನೀವು ಈ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಡಿಟಿ ಪಡೆಯಬಹುದು. ಹಾಗೆಯೇ ಅನ್‌ಲಿಮಿಟೆಡ್ ವಾಯ್ಸ್​ ಕಾಲ್​, ಪ್ರತಿದಿನ 100 ಎಸ್ಎಂಎಸ್ (SMS) ಮತ್ತು ನಿತ್ಯ 3GB ಡೇಟಾವನ್ನು 84 ದಿನಗಳವರೆಗೆ ಲಭ್ಯವಿರುತ್ತದೆ. ಈ ಪ್ಲಾನ್‌ನೊಂದಿಗೆ ನೀವು, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮನ್ ಮತ್ತು ಆಸ್ಟ್ರೋಸೆಲ್‌ನ ಲಾಭಗಳನ್ನು ಸಹ ಪಡೆಯಬಹುದು. ಜೊತೆಗೆ ಗ್ರಾಹಕರು Lystn Podcast, Zing Music, Wow Entertainment ಮತ್ತು ಬಿಎಸ್​ಎಲ್​ಎನ್ ಟ್ಯೂನ್‌ಗಳ ಪ್ರಾಯೋಜನವನ್ನು ಪಡೆಯಬಹುದು.

ಬಿಎಸ್​ಎಲ್​ಎನ್​ 215 ರೂ. ರೀಚಾರ್ಜ್‌ ಪ್ಲಾನ್

ಬಿಎಸ್​ಎಲ್​ಎನ್ ಎರಡನೇ ಪ್ರಿಪೇಯ್ಡ್ ಪ್ಲಾನ್‌ ಬೆಲೆ 215 ರೂ. ಆಗಿದೆ. ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಗ್ರಾಹಕರು ಈ ಯೋಜನೆಯಲ್ಲಿ 2GB ಇಂಟರ್ನೆಟ್ ಡೇಟಾ, ಅನಿಯಮಿತ ಧ್ವನಿ ಕರೆ​ ಮತ್ತು ನಿತ್ಯ 100 ಎಸ್‌ಎಂಎಸ್‌ ಸೌಲಭ್ಯ ಪಡೆಯಬಹುದು. ಅಲ್ಲದೆ ಈ ಪ್ಲಾನ್‌ನಲ್ಲಿ ನೀವು, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮನ್ ಮತ್ತು ಆಸ್ಟ್ರೋಸೆಲ್‌ನ ಪ್ರಯೋಜನಗಳನ್ನು ಸಹ ಪಡೆಯಬಹುದು. ಹಾಗೆಯೇ Lystn Podcast, Zing Music, Wow Entertainment ಮತ್ತು ಬಿಎಸ್​ಎಲ್​ಎನ್ ಟ್ಯೂನ್‌ಗಳ ಲಾಭ ಪಡೆಯಬಹುದು.

ಒಟ್ಟಾರೆ, ಖಾಸಗಿ ಕಂಪನಿಗಳು ತನ್ನ ಪ್ಲಾನ್ ಬೆಲೆ ಹೆಚ್ಚಳ ಮಾಡಿದ್ದು, ಇತ್ತ ಬಿಎಸ್​ಎಲ್​ಎನ್​ ಈ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ. ಜೊತೆಗೆ ಮೂರು ದೊಡ್ಡ ಕಂಪನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ, ಬಿಎಸ್​ಎಲ್​ಎನ್​ ತನ್ನ ನೆಟ್‌ವರ್ಕ್ ನಿರಂತರವಾಗಿ ಸುಧಾರಿಸುವ ಪ್ರಯತ್ನ ಮಾಡುತ್ತಿದೆ. ಅದರಂತೆ ಗ್ರಾಹಕರನ್ನು ಸೆಲೆಯಲು ಹಲವು ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ.

Best Mobiles in India

English summary
BSNL Launches two new prepaid plans With Up to 3GB Data Per Day: check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+