ಬಿಎಸ್‌ಎನ್‌ಎಲ್‌ನಿಂದ ವೀಡಿಯೋ ಕಾಲಿಂಗ್‌ ಸೇವೆ ಆರಂಭ

Written By:

ಕರ್ನಾಟಕದ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಒಂದು ಗುಡ್‌ ನ್ಯೂಸ್‌. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ವೀಡಿಯೋ ಕರೆ ಸೌಲಭ್ಯವನ್ನು ಆರಂಭಿಸಿದೆ. ಸಾರ್ವಜನಿಕ ಕಂಪೆನಿ ಐಟಿಐ ಮತ್ತು ತಂತ್ರಜ್ಞಾನ ಕಂಪೆನಿ ಕ್ಲಿಕ್‌ ಟೆಲಿಕಾಂ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್‌ ಈ ಸೇವೆಯನ್ನು ಆರಂಭಿಸಿದ್ದು, ದಕ್ಷಿಣ ಮತ್ತು ಪೂರ್ವ ವಲಯದ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ.

ಬಿಎಸ್‌ಎನ್ಎಲ್‌ ಆಕರ್ಷಕ ವೀಡಿಯೋ ಕಾಲಿಂಗ್‌ ಆಫರ್‌ ಪ್ರಕಟಿಸಿದ್ದು, 60 ಸೆಕೆಂಡ್‌ಗೆ 2.50 ದರ ನಿಗದಿಪಡಿಸಿದೆ. ಅಲ್ಲದೇ ಗ್ರಾಹಕರು ತಿಂಗಳಿಗೆ 2,200 ರೂಪಾಯಿಯ ಪ್ಲ್ಯಾನ್‌ ಅಳವಡಿಸಿದ್ರೆ ಅನಿಯಮಿತವಾಗಿ ವೀಡಿಯೋ ಕಾಲಿಂಗ್‌ ಮಾಡಬಹುದು ಎಂದು ಬಿಎಸ್‌ಎನ್‌ಎಲ್‌ ಹೇಳಿದೆ.

ಬಿಎಸ್‌ಎನ್‌ಎಲ್‌ನಿಂದ ವೀಡಿಯೋ ಕಾಲಿಂಗ್‌ ಸೇವೆ ಆರಂಭ

ಇಷ್ಟೇ ಅಲ್ಲದೇ ಮತ್ತೆರಡು ಯೋಜನೆಗಳನ್ನು ಬಿಎಸ್‌ಎನ್‌ಎಲ್‌ ಪ್ರಕಟಿಸಿದ್ದು 750 ರೂಪಾಯಿ ಪ್ಲ್ಯಾನ್‌ ಅಳವಡಿಸಿದ್ರೆ, ತಿಂಗಳಿಗೆ 900 ನಿಮಿಷಗಳ ವೀಡಿಯೋ ಕರೆ ಮತ್ತು 350 ರೂಪಾಯಿ ಪ್ಲ್ಯಾನ್‌ ಅಳವಡಿಸಿದ್ರೆ, 150 ನಿಮಿಷಗಳ ವೀಡಿಯೋ ಕರೆ ಸಂಪೂರ್ಣ ಉಚಿತ ಎಂದು ಬಿಎಸ್‌ಎನ್‌ಎಲ್‌ ಪ್ರಕಟಿಸಿದೆ.

ಉತ್ತರ ಮತ್ತು ಪಶ್ಚಿಮ ವಲಯದಲ್ಲಿ ಬಿಎಸ್‌ಎನ್‌ಎಲ್‌ ಈಗಾಗ್ಲೇ ವೀಡಿಯೋ ಕಾಲಿಂಗ್‌ ಆರಂಭಿಸಿದ್ದು, ದಕ್ಷಿಣ ಮತ್ತು ಪೂರ್ವ ವಲಯದಲ್ಲಿ ಈ ಸೇವೆ ಕಳೆದ ಸೋಮವಾರದಿಂದ ಆರಂಭವಾಗಿದೆ. ಈ ವೀಡಿಯೋ ಕಾಲಿಂಗ್‌ ಸೇವೆಗೆ ಗ್ರಾಹಕರ ಪ್ರತಿಕ್ರಿಯೆ ನೋಡಿ ಮುಂದಿನ ಯೋಜನೆ ಆರಂಭಿಸಲಾಗುವುದು ಎಂದು ಬಿಎಸ್‌ಎನ್‌ಎಲ್‌ ಆಡಳಿತ ನಿರ್ದೇಶಕ ಆರ್‌.ಕೆ.ಉಪಾಧ್ಯಾಯ ಹೇಳಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot