Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 13 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಈ ಪ್ಲಾನ್ ಬೆಸ್ಟ್!
ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಆಕರ್ಷಕ ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನಗಳ ಮೂಲಕ ಗ್ರಾಹಕರನ್ನು ಸೆಳೆದಿವೆ. ಜೊತೆಗೆ ಅಗ್ಗದ ಬೆಲೆಯಲ್ಲಿ ಅಧಿಕ ಪ್ರಯೋಜನ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳಿಂದ ಖಾಸಗಿ ಟೆಲಿಕಾಂಗಳು ಬಳಕೆದಾರರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿವೆ. ಇದರ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ.

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವ ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಹೊಂದಿದೆ. ಖಾಸಗಿ ಟೆಲಿಕಾಂಗಳಿಗಿಂತ ಕಡಿಮೆ ಬೆಲೆಯಲ್ಲಿ ಅಧಿಕ ಪ್ರಯೋಜನ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಇದಲ್ಲದೆ ವಿವಿಧ ಬೆಲೆಗಳಲ್ಲಿ ಅನೇಕ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ತಮಗೆ ಸೂಕ್ತ ಎನಿಸುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದು. ಅದರಲ್ಲೂ ಹೆಚ್ಚಿನ ಡೇಟಾ ಬಯಸೋರಿಗೆ ಬಿಎಸ್‌ಎನ್‌ಎಲ್‌ನಲ್ಲಿ ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳು ಲಭ್ಯವಿದೆ.

ಬಿಎಸ್‌ಎನ್‌ಎಲ್ ಟೆಲಿಕಾಂನ ಬಹುತೇಕ ಪ್ರಿಪೇಯ್ಡ್ ಪ್ಲಾನ್‌ಗಳು ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುತ್ತವೆ. ಇದರಲ್ಲಿ ಬಿಎಸ್‌ಎನ್‌ಎಲ್ 1,999ರೂ. ಪ್ರಿಪೇಯ್ಡ್ ಪ್ಲಾನ್ ತನ್ನ ಅಧಿಕ ಡೇಟಾ ಪ್ರಯೋಜನದಿಂದ ಗ್ರಾಹಕರನ್ನು ಸೆಳೆದಿದೆ. ಇದು ವಾರ್ಷಿಕ ಅವಧಿ ಮಾನ್ಯತೆ ನೀಡುವ ಪ್ಲಾನ್ ಆಗಿದ್ದು, ಒಟ್ಟು 600GB ಡೇಟಾವನ್ನು ನೀಡಲಿದೆ. ಈ ಡೇಟಾ ಪ್ರಯೋಜನದಲ್ಲಿ ದೈನಂದಿನ ಮಿತಿಯನ್ನು ವಿಧಿಸಲಾಗಿಲ್ಲ. ನೀವು ಒಂದೇ ದಿನಕ್ಕೆ ಬೇಕಿದ್ದರೂ ಒಟ್ಟು ಡೇಟಾವನ್ನು ಬಳಸಬಹುದು ಅನ್ನೊದು ಇದರ ವಿಶೇಷ. ಹಾಗಾದ್ರೆ ಬಿಎಸ್‌ಎನ್‌ಎಲ್ 1,999ರೂ.ಪ್ರಿಪೇಯ್ಡ್ ಪ್ಲಾನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್ 1,999ರೂ. ಪ್ರಿಪೇಯ್ಡ್ ಪ್ಲಾನ್
ಬಿಎಸ್‌ಎನ್‌ಎಲ್ 1,999ರೂ. ಪ್ರಿಪೇಯ್ಡ್ ಪ್ಲಾನ್ ನಿಮಗೆ ಒಟ್ಟು 365 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್ ದೇಶದ ಬಹುತೇಕ ವಲಯಗಳಲ್ಲಿ ಲಭ್ಯವಿದೆ. ಇನ್ನು ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆ, ದೈನಂದಿನ 100 SMS ಮತ್ತು ಒಟ್ಟು 600GB ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಒಟ್ಟು 600GB ಡೇಟಾವನ್ನು ಬಳಕೆದಾರರು ಯಾವಾಗ ಬೇಕಾದರೂ ಬಳಸಬಹುದು.

ಪ್ರಸ್ತುತ ದಿನಗಳಲ್ಲಿ ಲಭ್ಯವಿರುವ ಅನೇಕ ಪ್ರಿಪೇಯ್ಡ್ ಪ್ಲಾನ್‌ಗಳು ದೈನಂದಿನ 1.5GB, 2GB, ಅಥವಾ 3GB ಡೇಟಾ ಪ್ರಯೋಜನ ನೀಡಲಿವೆ. ಆದರೆ ಬಿಎಸ್‌ಎನ್‌ಎಲ್ ಟೆಲಿಕಾಂನ ಈ ಪ್ಲಾನ್‌ನ ಒಟ್ಟು ಡೇಟಾ ಪ್ರಯೋಜನ 600GB ಆಗಿದೆ. ಈ ಡೇಟಾವನ್ನು ನೀವು ಯಾವಾಗ ಬಳಸಲು ಬಯಸುತ್ತಿರೋ ಆಗ ಬಳಸಬಹುದು. ಇಡೀ ಡೇಟಾವನ್ನು ಒಂದು ವರ್ಷದ ಅವಧಿಯವರೆಗೂ ಬಳಸಬಹುದು, ಇಲ್ಲವೇ ಒಂದೇ ವಾರದಲ್ಲಿ ಬೇಕಿದ್ದರೂ ನೀವು ಖಾಲಿ ಮಾಡಬಹುದು. ಇದಕ್ಕೆ ದೈನಂದಿನ ಮಿತಿಯಿಲ್ಲ ಎನ್ನಲಾಗಿದೆ.

ಬಳಕೆದಾರರ ಡೇಟಾ ಬಳಕೆಗೆ ಸಂಪೂಣ ಸ್ವಾತಂತ್ರ್ಯವನ್ನು ಈ ಪ್ಲಾನ್‌ನಲ್ಲಿ ನೀಡಿರುವುದರಿಂದ ಈ ಪ್ಲಾನ್ ಗಮನಸೆಳೆದಿದೆ. ದೈನಂದಿನ ಮಿತಿಯಿಲ್ಲದ ಕಾರಣದಿಂದಾಗಿ ನೀವು ಡೇಟಾ ಮುಗಿಯುವ ತನಕ ಯಾವುದೇ ಅಡೆತಡೆ ಇಲ್ಲದೆ ಇಂಟರ್‌ನೆಟ್ ಬಳಸುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಬಳಕೆದಾರರು 30 ದಿನಗಳವರೆಗೆ PRBT, 30 ದಿನಗಳವರೆಗೆ ಇರೋಸ್‌ನೌ ಮನರಂಜನೆ ಮತ್ತು 30 ದಿನಗಳವರೆಗೆ ಲಾಕ್‌ದುನ್ ವಿಷಯಕ್ಕೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಬಿಎಸ್‌ಎನ್‌ಎಲ್ ಟೆಲಿಕಾಂ ಅಧಿಕ ಡೇಟಾ ನೀಡುವ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಹೊಂದಿದೆ ಅವುಗಳ ವಿವರ ಈ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್ 2399ರೂ.ಪ್ರಿಪೇಯ್ಡ್ ಪ್ಲಾನ್
ಬಿಎಸ್‌ಎನ್‌ಎಲ್ 2399ರೂ.ಪ್ರಿಪೇಯ್ಡ್ ಪ್ಲಾನ್ ವಾರ್ಷಿಕ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಆಗಿದೆ. ಈ ಪ್ಲಾನ್ ಇದೀಗ ಹೆಚ್ಚುವರಿಯಾಗಿ 60 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಹೀಗಾಗಿ ಒಟ್ಟು 425 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವು ಕೂಡ ಲಭ್ಯವಾಗಲಿದೆ. ಇದಲ್ಲದೆ ಮುಂಬೈ ಮತ್ತು ದೆಹಲಿ ಎಮ್‌ಟಿಎನ್‌ಎಲ್ ಬಳಕೆದಾರರಗೆ ಅನಿಯಮಿತ ಸಾಂಗ್ ಚೇಂಜ್ ಹಾಗೂ EROS ಚಂದಾದಾರಿಕೆ ಸಹ ನೀಡಲಿದೆ.

ಬಿಎಸ್‌ಎನ್‌ಎಲ್ 447ರೂ. ಪ್ರಿಪೇಯ್ಡ್ ಪ್ಲಾನ್
ಬಿಎಸ್‌ಎನ್‌ಎಲ್ STV 447 ರೂ. ಪ್ಲಾನ್ ನಿಮಗೆ 100GB ಹೈ ಸ್ಪೀಡ್ ಡೇಟಾವನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನೀವು 100GB ಡೇಟಾದ ನಿಗದಿತ ಮಿತಿಯನ್ನು ಮೀರಿದ ನಂತರ,80 Kbps ವೇಗದಲ್ಲಿ ಇಂಟರ್ನೆಟ್ ಅನ್ನು ಪ್ರವೇಶಿಸಬಹುದು. ಈ ಪ್ಲಾನ್ ಒಟ್ಟು 60 ಕ್ಯಾಲೆಂಡರ್ ದಿನಗಳ ಮಾನ್ಯತೆಯನ್ನು ನೀಡಲಿದೆ. ಸದ್ಯ ಈ ಪ್ಲಾನ್ ಅನ್ನು ವೆಬ್‌ಸೈಟ್‌ನಲ್ಲಿ 'ಡೇಟಾ ವೋಚರ್' ಅಡಿಯಲ್ಲಿ ನಮೂದಿಸಿದ್ದರೂ ಸಹ, ಇದು ದಿನಕ್ಕೆ 100 SMS ಜೊತೆಗೆ ಅನಿಯಮಿತ ಧ್ವನಿ ಕರೆಯನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್ 499ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ 499ರೂ. ಪ್ಲ್ಯಾನ್ ದೀರ್ಘಾವಧಿಯ ಪ್ಲಾನ್ ಆಗಿದೆ. ಈ ಪ್ಲಾನ್ ನಿಮಗೆ ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಿದೆ. ಅಂದರೆ, ಒಟ್ಟು ಪೂರ್ಣ ಅವಧಿಗೆ 180 GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್ 599ರೂ. ಪ್ರೀಪೇಯ್ಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್ 599 ರೂ. ಪ್ರೀಪೇಯ್ಡ್ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470