ಬಿಎಸ್ಎನ್ಎಲ್‌ನಲ್ಲಿ ಪ್ರತಿದಿನ 100 ಎಸ್ಎಂಎಸ್ ಉಚಿತ..!
ಜಿಯೋ ಬಂದ ಮೇಲೆ ಟೆಲಿಕಾಂ ದುನಿಯಾದಲ್ಲೊಂದು ಮಹತ್ವದ ಬದಲಾವಣೆಗಳು ಆಗಲು ಪ್ರಾರಂಭವಾದಲು. ಇತರೆ ಎಲ್ಲಾ ಟೆಲಿಕಾಂ ಸಂಸ್ಥೆಗಳೂ ಕೂಡ ಜಿಯೋಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಜಿಯೋ ತರುವಂತ ಆಫರ್ ಗಳನ್ನೇ ಹೋಲುವ ಆಫರ್ ಗಳನ್ನು ನೀಡಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅಧ್ಬುತ ಅವಕಾಶಗಳು ತೆರೆದುಕೊಂಡವು. ಅದೇ ರೀತಿ ಜಿಯೋವನ್ನು ಮೀರಿಸುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಯಾವಾಗಲೂ ಕೂಡ ಬಹಳ ಮುಂದೆಯೇ ಇರುತ್ತದೆ.
ಬಿಎಸ್ಎಲ್ ಎಲ್ ಅನಿಯಮಿತ ಕರೆಗಳು, ಡಾಟಾ ಸೆಂಟ್ರಿಕ್ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ವೈಶಿಷ್ಟ್ಯತೆಗಳಿರುವ ಫೋನಿನ ಬಿಡುಗಡೆಗಾಗಿ ಡೀಟೆಲ್ ಮೊಬೈಲ್ ಜೊತೆ ಕೈಜೋಡಿಸಿರುವುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಮತ್ತು ಇದು ಜಿಯೋ ಫೋನ್ ಜೊತೆಗೆ ಸ್ಪರ್ಧೆಗೆ ಇಳಿಯುವ ಉದ್ದೇಶವನ್ನು ಇಟ್ಟುಕೊಂಡಿತ್ತು. ಆದರೆ ಇದುವರೆಗೂ ಬಿಎಸ್ಎನ್ಎಲ್ ಜಿಯೋ ಎಸ್ಎಂಎಸ್ ಆಫರ್ ಗಳ ಜೊತೆಗ ಸ್ಪರ್ಧೆ ಮಾಡುವ ಕೆಲಸಕ್ಕೆ ಕೈ ಹಾಕಿರಲಿಲ್ಲ.

ಸದ್ಯ ಎಲ್ಲಾ ಟೆಲಿಕಾಂ ಆಪರೇಟರ್ ಗಳು ಕೂಡ ಎಸ್ಎಂಎಸ್ ಗಳ ಭರ್ಜರಿ ಆಫರ್ ಗಳನ್ನು ನೀಡಲು ಶುರು ಮಾಡಿದ್ದಾರೆ.ಬಿಎಸ್ಎಲ್ಎನ್ ಯಾವಾಗಲೂ ಡಾಟಾ ಮತ್ತು ಕರೆಗಳ ಆಫರ್ ಗಳನ್ನು ನೀಡುತ್ತಿತ್ತು.ಎಸ್ಎಂಎಸ್ ಗೆ ಅಷ್ಟು ಮಹತ್ವ ನೀಡುತ್ತಿರಲಿಲ್ಲ. ಆದರೆ ಇನ್ನು ಮುಂದೆ ಅದು ಬದಲಾಗಲಿದೆ. ಟೆಲಿಕಾಂ ಟಾಕ್ ವರದಿ ಮಾಡಿರುವಂತೆ, ಬಿಎಸ್ಎಲ್ ಸಂಸ್ಥೆ ತನ್ನ ಪೊಸ್ಟ್ ಪೇಡ್ ಪ್ಲಾನ್ ನಲ್ಲಿ 100 ಎಸ್ಎಂಎಸ್ ಪ್ರತಿದಿನ ಉಚಿತವಾಗಿ ನೀಡುವ ಪ್ಲಾನ್ ಒಂದನ್ನು ಬಿಡುಗಡೆಗೊಳಿಸಲಿದೆ.
399 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡುವ ಪೋಸ್ಟ್ ಪೇಡ್ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ ಎಂಬುದನ್ನು ಪ್ರತಿಯೊಬ್ಬ ಗ್ರಾಹಕರೂ ಮರೆಯಬಾರದು. ಆದರೆ 399 ರುಪಾಯಿಗಿಂತ ಕಡಿಮೆ ಪ್ಲಾನ್ ನ್ನು ರೀಚಾರ್ಜ್ ಮಾಡಿಕೊಂಡರೆ ತಮ್ಮ ಒಟ್ಟು ವ್ಯಾಲಿಡಿಟಿ ಪಿರೇಡ್ ನಲ್ಲಿ 100 ಎಸ್ಎಂಎಸ್ ಉಚಿತವಾಗಿರುತ್ತದೆ.
ಅಗಸ್ಟ್ 1 ನೇ ತಾರೀಖಿನಿಂದ ಈ ಬದಲಾವಣೆಯನ್ನು ಮಾಡಲಾಗಿದ್ದು ಸದ್ಯ ಚೆನೈ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದೆ. ಬಿಎಸ್ಎನ್ಎಲ್ ನ ಈ ಹೊಸ ಬದಲಾವಣೆಯೊಂದಿಗೆ ಏರ್ಟೆಲ್, ಜಿಯೋ, ವಡಾಫೋನ್ ನ ಎಸ್ಎಂಎಸ್ ಆಫರ್ ಗಳೊಂದಿಗೆ ಸ್ಪರ್ಧೆಯೊಡ್ಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಎಸ್ಎನ್ಎಲ್ ಸದ್ಯ ನಡೆಯುತ್ತಿರುವ ಟೆಲಿಕಾಂ ಯುದ್ಧ ಅಂದರೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಸ್ಪರ್ಧೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂಬುದು ಇದರಿಂದ ಅರ್ಥವಾಗುತ್ತದೆ. ಕಂಪೆನಿಯು ಪ್ರಕಟಪಡಿಸಿರುವಂತೆ ಅನ್ ಲಿಮಿಡೆಟ್ ಡಾಟಾವನ್ನು ಎಲ್ಲಾ ಪೋಸ್ಟ್ ಪೇಡ್ ಗ್ರಾಹಕರಿಗೂ ನೀಡಲಾಗುತ್ತದೆ ಎಂದು ತಿಳಿಸಿದೆ. ಆದರೆ ಅಂತರ್ಜಾಲದ ವೇಗವು 40kbps ನಂತರ ಕಡಿಮೆಯಾಗುತ್ತದೆ.
ಇತ್ತೀಚೆಗೆ ಬಿಎಸ್ಎನ್ಎಲ್ ಪ್ರೀಪೇಡ್ ಪ್ಲಾನ್ ನ್ನು ರಿವೈಸ್ ಮಾಡಿದ್ದು ತನ್ನ ಬಳಕೆದಾರರಿಗೆ ಹೆಚ್ಚು ಡಾಟಾ ನೀಡಲು ಮುಂದಾಗಿದೆ. ತನ್ನ 14 ರೂ, 19 ರೂ, 40 ರೂ ಮತ್ತು 57 ರೂ ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿದೆ. ಪ್ಲಾನಿನ ಬೆಲೆಯು ಅದೇ ಆಗಿದ್ದರೂ ಕೂಡ ಅದರಲ್ಲಿ ಲಭ್ಯವಾಗುವ ಡಾಟಾವನ್ನು ಮಾತ್ರ ಅಧಿಕಗೊಳಿಸಲಾಗಿದೆ.
ಬಿಎಸ್ಎನ್ ಎಲ್ 14 ರುಪಾಯಿ ಪ್ಲಾನ್ ನಲ್ಲಿ110ಎಂಬಿ ಡಾಟಾ ಬದಲಾಗಿ 1 ಜಿಬಿ ಡಾಟಾ ಪ್ರತಿದಿನ ನೀಡುತ್ತದೆ. 20 ರೂಪಾಯಿ ಪ್ಲಾನ್ ನಲ್ಲಿ 150ಎಂಬಿ ಡಾಟಾ 3 ದಿನಗಳಿಗೆ ನೀಡುವ ಬದಲಾಗಿ 1ಜಿಬಿ ಡಾಟಾವನ್ನು 3 ದಿನಗಳಿಗೆ ನೀಡುತ್ತದೆ. ಅಷ್ಟೇ ಅಲ್ಲ 57 ರುಪಾಯಿ ಮತ್ತು 40 ರುಪಾಯಿ ಪ್ಲಾನ್ ನಲ್ಲೂ ಕೂಡ 1ಜಿಬಿ ಡಾಟಾವನ್ನು ನೀಡಲಾಗುತ್ತದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.


Click it and Unblock the Notifications








