ಭವಿಷ್ಯದಲ್ಲಿ BSNLಗೆ ಸೆಡ್ಡು ಹೊಡೆಯಲು ಜಿಯೋ, ಏರ್‌ಟೆಲ್‌ಗೂ ಸಾಧ್ಯವಿಲ್ಲಾ.!!

Written By:

ಖಾಸಾಗಿ ಟೆಲಿಕಾಂ ಕಂಪೆನಿಗಳ ಆಟಕ್ಕೆ ಬ್ರೇಕ್ ಹಾಕಲು ಸರ್ಕಾರಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸಂಸ್ಥೆ ಅಲ್ಟ್ರಾಸ್ಪೀಡ್ ಇಂಟರ್‌ನೆಟ್ ಸೇವೆಯನ್ನು ನೀಡಲು ಮುಂದಾಗಿದೆ!! ಹೌದು, ಟೆಲಿಕಾಂನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ BSNL ಕಾರ್ಯಪ್ರವೃತ್ತವಾಗಿದೆ.!!

ಹೊಸದೊಂದು ಯೋಜನೆ ಮೂಲಕ ನೂರುಪಟ್ಟು ವೇಗದ ಇಂಟರ್ ನೆಟ್ ನೀಡುವ ಯೋಜನೆಯನ್ನು ಜಾರಿಗೊಳಿಸಲು BSNL ಮುಂದಾಗಿದೆ. ಈ ಬಗ್ಗೆ ವಿವರ ನೀಡಿರುವ ಕೇಂದ್ರ ಟಿಲಿಕಾಂ ಸಚಿವ ಮನೋಜ್ ಸಿನ್ಹಾ ಅವರು, ಮುಂದಿನ ತಲೆಮಾರಿನ ಆಪ್ಟಿಕಲ್ ಫೈಬರ್ ತಂತ್ರಜ್ಞಾನದ ಮೂಲಕ BSNL ಅಲ್ಟ್ರಾಸ್ಪೀಡ್ ಇಂಟರ್‌ಟ್ ನೀಡಲಿದೆ ಎಂದು ತಿಳಿಸಿದ್ದಾರೆ.!!

ಹಾಗಾದರೆ, BSNL ನೀಡುತ್ತಿರುವ ಮುಂದಿನ ತಲೆಮಾರಿನ ಆಪ್ಟಿಕಲ್ ಫೈಬರ್ ತಂತ್ರಜ್ಞಾನ ಯಾವುದು? ಎಷ್ಟು ವೇಗದ ಇಂಟರ್‌ನೆಟ್ ಅನ್ನು BSNL ಗ್ರಾಹಕರು ಪಡೆಯಬಹುದು.? ಬೆರೆ ಟೆಲಿಕಾಂಗಳು ನೀಡುತ್ತಿರುವ ಇಂಟರ್‌ನೆಟ್ ಸ್ಪೀಡ್ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
BSNL ಫೈಬರ್ ಟು ಹೋಮ್!!

BSNL ಫೈಬರ್ ಟು ಹೋಮ್!!

ಬಿಎಸ್ಎನ್ಎಲ್ ಈಗಾಗಲೇ ತನ್ನ ಫೈಬರ್ ಟು ದ ಹೋಮ್ ಯೋಜನೆಯಡಿಯಲ್ಲಿ ಗರಿಷ್ಠ 100 ಎಂಬಿ ಪರ್ ಸೆಕೆಂಡ್ ವೇಗದ ಇಂಟರ್ ನೆಟ್ ಸೇವೆ ಒದಗಿಸುತ್ತಿದ್ದು, ಇದನ್ನು ನೂರು ಪಟ್ಟು ಹೆಚ್ಚಿಸುವ ಯೋಜನೆ ಶೀಘ್ರ ಜಾರಿಯಾಗಲಿದೆ. ಇದಕ್ಕಾಗಿ ಎನ್ಜಿ ಒಟಿಹೆಚ್ ತಂತ್ರಜ್ಞಾನವನ್ನು ಫೈಬರ್ ಟು ಹೋಮ್ನಲ್ಲಿ ಅಳವಡಿಸಲಾಗುತ್ತಿದೆ.!!

1000ಎಂಬಿಪಿಎಸ್ ಡೌನ್‌ಲೋಡ್ ವೇಗ!!

1000ಎಂಬಿಪಿಎಸ್ ಡೌನ್‌ಲೋಡ್ ವೇಗ!!

ಫೈಬರ್ ಟು ಹೋಮ್ ಎಂಬ ಯೋಜನೆಯಡಿಯಲ್ಲಿ ಪ್ರತೀ ಸೆಕೆಂಡ್ ಗೆ 100 ಎಂಬಿಪಿಎಸ್ ವೇಗದ ಇಂಟರ್ ನೆಟ್ ಒದಗಿಸುತ್ತಿರುವ BSNL ನೂತನ ತಂತ್ರಜ್ಞಾನದಿಂದ 1 ಸಾವಿರ ಎಂಬಿಪಿಎಸ್ ವೇಗದಲ್ಲಿ ಇಂಟರ್‌ನೆಟ್ ಡೌನ್‌ಲೋಡ್ ಸ್ಪೀಡ್ ನೀಡುವ ಯೋಜನೆಯನ್ನು ಜಾರಿಗೊಳಿಸುತ್ತಿದೆ.!!

ಏರ್‌ಟೆಲ್, ಜಿಯೋ ಸ್ಪೀಡ್ ಎಷ್ಟು?

ಏರ್‌ಟೆಲ್, ಜಿಯೋ ಸ್ಪೀಡ್ ಎಷ್ಟು?

ಏರ್‌ಟೆಲ್ ಸೇರಿದಂತೆ ಇತರ ಟೆಲಿಕಾಂ ಕಂಪೆನಿಗಳು ಕೂಡ 100 ಎಂಬಿಪಿಎಸ್ ವೇಗದ ಇಂಟರ್ ನೆಟ್ ಒದಗಿಸುತ್ತಿದ್ದು, ಡೌನ್‌ಲೋಡ್ ವೇಗವು 50 ಎಂಬಿಪಿಎಸ್ ವೇಗಕ್ಕಿಂತ ಹೆಚ್ಚಿಲ್ಲ ಎನ್ನಬಹುದು.!! ಹಾಗಾಗಿ, ಭವಿಷ್ಯದಲ್ಲಿ BSNL ಇವುಗಳಿಗಿಂತ ಹತ್ತು ಪಟ್ಟು ವೇಗದ ಇಂಟರ್‌ನೆಟ್ ನೂಡುತ್ತದೆ,!!

44 ರಾಜಧಾನಿ ನಗರಗಳಲ್ಲಿ ಯೋಜನೆ!!

44 ರಾಜಧಾನಿ ನಗರಗಳಲ್ಲಿ ಯೋಜನೆ!!

BSNL ದೇಶದ ಪ್ರಮುಖ 44 ರಾಜಧಾನಿ ನಗರಗಳಿಗೆ ಅಲ್ಟ್ರಾ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಒದಗಿಸಲಿದೆ. ಇದೇ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಮತ್ತೆ 100 ನಗರಗಳನ್ನು ವ್ಯಾಪ್ತಿಗೆ ಸೇರಿಸುವ ಉದ್ದೇಶ ಕೂಡ ಇದೆ ಕೇಂದ್ರ ಟಿಲಿಕಾಂ ಸಚಿವ ಮನೋಜ್ ಸಿನ್ಹಾಅವರು ಹೇಳಿದ್ದಾರೆ.

330 ಕೋಟಿ ಬಂಡವಾಳ

330 ಕೋಟಿ ಬಂಡವಾಳ

1 ಸಾವಿರ ಎಂಬಿಪಿಎಸ್ ವೇಗದಲ್ಲಿ ಇಂಟರ್‌ನೆಟ್ ಡೌನ್‌ಲೋಡ್ ಸ್ಪೀಡ್ ನೀಡುವ ಯೋಜನೆಗಾಗಿ BSNL ಸಂಸ್ಥೆಗೆ ಸರ್ಕಾರ ಒಟ್ಟು 330 ಕೋಟಿ ಬಂಡವಾಳ ಹೂಡುತ್ತಿದೆ.!! ಹಾಗಾಗಿ, ಭವಿಷ್ಯದಲ್ಲಿ BSNL ಸ್ಪೀಡ್ ಇಂಟರ್‌ನೆಟ್ ನೀಡುವ ಕಂಪೆನಿಗಳಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ.!!

ಭವಿಷ್ಯದಲ್ಲಿ BSNL ಬಾಸ್ ಆಗಲಿದೆ.!!

ಭವಿಷ್ಯದಲ್ಲಿ BSNL ಬಾಸ್ ಆಗಲಿದೆ.!!

BSNL ನೂತನ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಇದೇ ಸಮಯದಲ್ಲಿ ಬೇರೆ ಯಾವ ಟೆಲಿಕಾಂ ಕಂಪೆನಿಗಳ:ಉ ಇಂತಹ ಯೋಜನೆಯನ್ನು ಜಾರಿ ಮಾಡಿ ವೇಗದ ಇಂಟರ್‌ನೆಟ್ ನೀಡಲು ಸಾಧ್ಯವಿಲ್ಲಾ.!! ಹಾಗಾಗಿ, ಭವಿಷ್ಯದಲ್ಲಿ BSNL ಬಾಸ್ ಆಗಲಿದೆ.!!

ಓದಿರಿ:ಮುದ್ದೆ ತಯಾರಿಸುವ ಯಂತ್ರದಿಂದ ಉದ್ಯಮಿಗಳಾಗುವ ಅವಕಾಶ!! ಹೇಗೆ ಎಂದು ತಿಳಿಯಿರಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Telecom minister Manoj Sinha launches new optical fibre-based technology that enables BSNL to provide broadband connection with download speed up to 1,000 Mbps. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot