777ಕ್ಕೆ 500ಜಿಬಿ ಡಾಟಾ...ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್..!

By Avinash
|

ಭಾರತದಲ್ಲಿ FTTH ಸೇವೆಗೆ ಜಿಯೋ ಚಾಲನೆ ನೀಡುತ್ತಿರುವ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ BSNL ಹೊಸ ಎರಡು ಬ್ರಾಡ್ ಬ್ಯಾಂಡ್ ಪ್ಲಾನ್ ಗಳನ್ನು ಬಹಳ ಕಡಿಮೆ ದರದಲ್ಲಿ ತನ್ನ ಗ್ರಾಹಕರಿಗೆ ಪರಿಚಯಿಸಿ ಜಿಯೋಗೆ ಸೆಡ್ಡು ಹೊಡೆದಿದೆ. ಇದರಿಂದ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ದರ ಸಮರಕ್ಕೆ ನಾಂದಿಯಾಡಿದಂತಾಗಿದೆ.

777ಕ್ಕೆ 500ಜಿಬಿ ಡಾಟಾ...ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್..!

ಬಿಎಸ್ಎನ್ಎಲ್ ಘೋಷಿಸಿರುವ ಹೊಸ ತಿಂಗಳ ಪ್ಲಾನ್ ಗಳಲ್ಲಿ ಮೊದಲನೇಯದು ಫೈಬ್ರೋ ಕಾಂಬೋ ULD 777, ಇದು 777 ರೂ.ಗೆ 50Mbps ವೇಗದಲ್ಲಿ 500GB ಡಾಟಾವನ್ನು ನೀಡುತ್ತಿದ್ದು, 30 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಎರಡನೇಯ ಪ್ಲಾನ್ ಏನೆಂದರೆ ಫೈಬ್ರೋ ಕಾಂಬೋ ULD 1277, ಇದು 100Mbps ವೇಗದಲ್ಲಿ 750GB ಡಾಟಾ ನೀಡುತ್ತಿದೆ. ಹೊಸ FTTH ಪ್ಲಾನ್ ಕೇವಲ ಜಿಯೋ ಫೈಬರ್ ಗಷ್ಟೇ ಹೊಡೆತ ಬಿಳದೇ ಸ್ಪೇಕ್ಟ್ರಾನೆಟ್ ಮತ್ತು ACT ಫೈಬರ್ ನೆಟ್ ನಂತಹ ಅನೇಕ ಲೋಕಲ್ ಇಂಟರ್ ನೆಟ್ ಸರ್ವಿಸ್ ಪ್ರಾವಿಡಾರ್ಸ್ (ISPs) ಗಳಿಗೆ ಬಹುದೊಡ್ಡ ಹೊಡೆತ ಬಿದ್ದಿದೆ.

<strong>ಸಂಗೀತ ಪ್ರಿಯರಿಗೆ ಇಲ್ಲಿವೆ ಬೆಸ್ಟ್ ಮ್ಯೂಸಿಕ್ ಆಪ್ಸ್... ಕೇಳಿ ಆನಂದಿಸಿ..!</strong>ಸಂಗೀತ ಪ್ರಿಯರಿಗೆ ಇಲ್ಲಿವೆ ಬೆಸ್ಟ್ ಮ್ಯೂಸಿಕ್ ಆಪ್ಸ್... ಕೇಳಿ ಆನಂದಿಸಿ..!

ಇದಷ್ಟೇ ಅಲ್ಲದೇ, ಎರಡು ಪ್ಲಾನ್ ಗಳ ಜೊತೆ ಭಾರತದಾದ್ಯಂತ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಸೇವೆಯನ್ನು ನೀಡಿದೆ. ಟ್ವಿಟರ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಎಸ್ಎನ್ಎಲ್ ಅಂಡಮಾನ್ ಮತ್ತು ನಿಕೋಬಾರ್ ಹೊರತುಪಡಿಸಿ ಬೇರೆ ಎಲ್ಲಾ ಟೆಲಿಕಾಂ ಕ್ಷೇತ್ರಗಳಿಗೂ ಈ ಆಫರ್ ಅನ್ವಯವಾಗಲಿದೆ ಎಂದು ತಿಳಿಸಿದ್ದು, ಹೊಸ FTTH ಬಳಕೆದಾರರು ಒಂದು ತಿಂಗಳ ಭದ್ರತಾ ಠೇವಣಿಯನ್ನಿಟ್ಟು ಈ ಸೇವೆ ಬಳಸಬಹುದಾಗಿದೆ.

777ಕ್ಕೆ 500ಜಿಬಿ ಡಾಟಾ...ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್..!

ಫೈಬ್ರೋ ಕಾಂಬೋ ULD 777 ಬ್ರಾಡ್ ಬ್ಯಾಂಡ್ ಯೋಜನೆಯಲ್ಲಿ ಡಾಟಾ ಬ್ಯಾಲೆನ್ಸ್ ಮುಗಿದಿದ್ದರೆ, ಡಾಟಾ ವರ್ಗಾವಣೆ ವೇಗ 2Mbpsಗೆ ಖಡಿತಗೊಳ್ಳಲಿದೆ. ಬಳಕೆದಾರರು ಈ ಪ್ಲಾನ್ ಅನ್ನು ದೀರ್ಘ ಕಾಲಕ್ಕೂ ಬಳಸಬಹುದಾಗಿದ್ದು, ರಿಯಾಯಿತಿಯನ್ನು ಬಿಎಸ್ಎನ್ಎಲ್ ನೀಡಿದೆ. ಒಂದು ವರ್ಷಕ್ಕೆ 8,547 ರೂ., ಎರಡು ವರ್ಷಕ್ಕೆ 16,317 ರೂ. ಮತ್ತು ಮೂರು ವರ್ಷಕ್ಕೆ 23,310 ರೂ. ಗಳಲ್ಲಿ ಪ್ಲಾನ್ ಲಭ್ಯವಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

ಇದೇ ರೀತಿ ಫ್ಯಬ್ರೋ ಕಾಂಬೋ ULD 1277 ಪ್ಲಾನ್ ಸಹ ಡಾಟಾ ಮುಗಿದ ತಕ್ಷಣ 2Mbpsಗೆ ತನ್ನ ವೇಗವನ್ನು ಖಡಿತಗೊಳಿಸಲಿದ್ದು, 14,047 ರೂ., 26,817 ರೂ., ಮತ್ತು 38,310 ರೂ. ದೀರ್ಘ ಕಾಲಿಕ ಪ್ಲಾನ್ ಗಳು ಗ್ರಾಹಕರಿಗೆ ಲಭ್ಯವಿವೆ. ಬಿಎಸ್ಎನ್ಎಲ್ ಇತ್ತೀಚೆಗೆ non-FTTH ಬ್ರಾಡ್ ಬ್ಯಾಂಡ್ ಆಫರ್ ಗಳನ್ನು ಪರಿಚಯಿಸಿದ್ದು, ಮಾಸಿಕ 99 ರೂ. ಗಳಿಂದ 399 ರೂ.ಗಳವರೆಗೂ ಪ್ಲಾನ್ ಲಭ್ಯವಿವೆ. ಈ ಆಫರ್ ಗಳಲ್ಲಿ 20Mbps ವೇಗದಲ್ಲಿ ಡಾಟಾ ಬಳಸಬಹುದು, ಡಾಟಾ ಮುಗಿದ ನಂತರ 1Mbpsಗೆ ವೇಗ ಕುಂಠಿತಗೊಳ್ಳುತ್ತದೆ. ಈ ಪ್ಲಾನ್ ಗಳಲ್ಲೂ ಅನಿಯಮಿತ ವಾಯ್ಸ್ ಕಾಲ್ ಸೇವೆಯನ್ನು ನೀಡಿದೆ.

777ಕ್ಕೆ 500ಜಿಬಿ ಡಾಟಾ...ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್..!

ಏರ್ ಟೆಲ್ ಹೀಗಾಗಲೇ 899 ರೂ.ಗೆ ಮಾಸಿಕ 40MBps ವೇಗದಲ್ಲಿ 150GB ಡಾಟಾ ನೀಡುತ್ತಿದ್ದು, ಈ ಆಫರ್ ಗಿಂತಲೂ ಬಿಎಸ್ಎನ್ಎಲ್ ಉತ್ತಮವಾದ ಪ್ಲಾನ್ ಘೋಷಿಸಿ ಟೆಲಿಕಾಂ ಕ್ಷೇತ್ರದಲ್ಲಿ ತಲ್ಲಣ ಉಂಟು ಮಾಡಿದೆ.

Best Mobiles in India

English summary
BSNL Offers 500GB Data, 50Mbps Speed With New Rs. 777 FTTH Plan. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X