ಬಿಎಸ್ಎನ್ಎಲ್ ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಉಚಿತ 1 ವರ್ಷದ ಅಮೇಜಾನ್ ಪ್ರೈಮ್ ಸದಸ್ಯತ್ವ
ಬಿಎಸ್ಎನ್ಎಲ್ ಕೂಡ ಇದೀಗ ತನ್ನ ರೀಚಾರ್ಜ್ ಪ್ಲಾನ್ ಜೊತೆಗೆ ವೀಡಿಯೋ ಸ್ಟ್ರೀಮಿಂಗ್ ಅವಕಾಶವನ್ನು ಉಚಿತವಾಗಿ ನೀಡುವ ಆಫರ್ ನ್ನು ಇತರೆ ಟೆಲಿಕಾಂ ಕಂಪೆನಿಗಳಂತೆ ತನ್ನ ಗ್ರಾಹಕರಿಗೂ ನೀಡುವುದಕ್ಕೆ ಮುಂದಾಗಿದೆ. ಬಿಎಸ್ಎನ್ಎಲ್ ಒಂದು ವರ್ಷದ ಉಚಿತ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ತನ್ನ ಪೋಸ್ಟ್ ಪೇಯ್ಡ್ ಮತ್ತು ಲ್ಯಾಂಡ್ ಲೈನ್ ಕನೆಕ್ಷನ್ ಹೊಂದಿರುವ ಗ್ರಾಹಕರಿಗಾಗಿ ನೀಡುತ್ತಿದೆ.

ಯಾವ ಬಳಕೆದಾರರು 399 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ರಿಚಾರ್ಜ್ ಮಾಡಿಸಿಕೊಳ್ಳುತ್ತಾರೋ ಮತ್ತು 745 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಪ್ಲಾನ್ ನಲ್ಲಿ ಹಾಕಿಸಿಕೊಳ್ಳುವ ಲ್ಯಾಂಡ್ ಲೈನ್ ಬಳಕೆದಾರರಿಗೆ ಈ ಸೌಲಭ್ಯವು ಲಭ್ಯವಾಗುತ್ತದೆ.
ಅಮೇಜಾನ್ ಪ್ರೈಮ್ ಸದಸ್ಯತ್ವವು ಒಂದು ವರ್ಷದ ಅವಧಿಗೆ ಲಭ್ಯವಾಗುತ್ತದೆ. ಭಾರತದಲ್ಲಿ ಅಮೇಜಾನ್ ಪ್ರೈಮ್ ಸದಸ್ಯತ್ವ ಒಂದು ವರ್ಷದ ಅವಧಿಗೆ 999 ರುಪಾಯಿ ಬೆಲೆ ಬಾಳುತ್ತದೆ ಮತ್ತು ಪ್ರತಿ ತಿಂಗಳ ಸದಸ್ಯತ್ವವಾದರೆ 129 ರುಪಾಯಿ ಬೆಲೆ ಇದೆ. ಇದು ಅಮೇಜಾನ್ ನಲ್ಲಿ ಪಾವತಿ ಮಾಡಿ ಖರೀದಿಸಬೇಕಾಗಿರುವ ಸದಸ್ಯತ್ವದ ಲಾಭಗಳಾಗಿರುತ್ತದೆ. ಯಾರು ಸದಸ್ಯತ್ವವನ್ನು ಹೊಂದಿರುತ್ತಾರೋ ಅವರಿಗೆ ಅಮೇಜಾನ್ ನಲ್ಲಿ ಹೆಚ್ಚಿನ ಆಫರ್ ಗಳು ಮತ್ತು ಸೌಲಭ್ಯಗಳು ಲಭ್ಯವಾಗುತ್ತದೆ. ಬಿಎಸ್ಎನ್ಎಲ್ ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ ಈ ಸದಸ್ಯತ್ವವನ್ನು ಪಡೆದುಕೊಳ್ಳುವ ಅವಕಾಶವಿದೆ.

ಅಮೇಜಾನ್ ಪ್ರೈಮ್ ಸದಸ್ಯತ್ವದ ಲಾಭಗಳು:
ಅಮೇಜಾನ್ ತನ್ನ ಪ್ರೈಮ್ ಸದಸ್ಯರಿಗೆ ವಿಶೇಷ ಸವಲತ್ತುಗಳನ್ನು ಮತ್ತು ಲಾಭಗಳನ್ನು ಒದಗಿಸುತ್ತದೆ. ಉದಾಹರಣೆಗೆ ಪ್ರೊಡಕ್ಟ್ ಸೇಲ್ ಗೆ ಮುಂಚಿತ ಆಕ್ಸಿಸ್, ಸರಿಯಾದ ಸಮಯದ ಡೆಲಿವರಿ ಆಯ್ಕೆ, ವೇಗದ ಶಿಪ್ಪಿಂಗ್, ಪ್ರೈಮ್ ಮ್ಯೂಸಿಕ್ ಮತ್ತು ಪ್ರೈಮ ವೀಡಿಯೋಗಳ ಸ್ಟ್ರೀಮಿಂಗ್ ಅವಕಾಶ ಇತ್ಯಾದಿ.

ಪ್ರೈಮ್ ಸದಸ್ಯತ್ವ ಪಡೆಯುವುದು ಹೇಗೆ?
ಏರ್ ಟೆಲ್ ಮತ್ತು ವಡಾಫೋನ್ ಕೂಡ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ತನ್ನ ಕೆಲವು ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ನೀಡುತ್ತದೆ. ಬಿಎಸ್ಎನ್ಎಲ್ ಬಳಕೆದಾರರು ಬಿಎಸ್ಎನ್ಎಲ್ ವೆಬ್ ಸೈಟ್ ಗೆ ತೆರಳಿ ಮತ್ತು ಅಮೇಜಾನ್ ಪ್ರೈಮ್ ಮೆಂಬರ್ ಬ್ಯಾನರ್ ನ್ನು ಕ್ಲಿಕ್ಕಿಸಿ. ಬಿಎಸ್ಎನ್ಎಲ್ ಮೊಬೈಲ್ ಅಥವಾ ಲ್ಯಾಂಡ್ ಲೈನ್ ನಂಬರ್ ನ್ನು ನಿಮ್ಮ ನಿರ್ಧಿಷ್ಟ ಇಮೇಲ್ ಐಡಿ ಮತ್ತು ಎಂಟರ್ ಮಾಡಿ. ಒಟಿಪಿ ಜನರೇಟ್ ಆಗುತ್ತದೆ.ಇದೀಗ ನಿಮ್ಮ ಅಮೇಜಾನ್ ಕ್ರಿಡೆನ್ಶಿಯಲ್ಸ್ ಬಳಸಿ ನೀವು ವ್ಯಾಲಿಡೇಟ್ ಮಾಡಿ ಮತ್ತು ಆಫರ್ ನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.

ಯಾರು ಅರ್ಹರು?
ಒಂದು ವೇಳೆ ನಿಮ್ಮ ಬಳಿ ಅಮೇಜಾನ್ ಅಕೌಂಟ್ ಇಲ್ಲದೇ ಇದ್ದಲ್ಲಿ ಹೊಸದಾಗಿ ನೀವು ಅಮೇಜಾನ್ ಅಕೌಂಟ್ ನ್ನು ಸೃಷ್ಟಿ ಮಾಡಿಕೊಳ್ಳಬಹುದು. ಆದರೆ ಒಂದು ವಿಚಾರ ಸ್ಪಷ್ಟವಾಗಿ ನೆನಪಿರಲಿ. ಬಿಎಸ್ಎನ್ಎಲ್ ಅಮೇಜಾನ್ ಪ್ರೈಮ್ ಸದಸ್ಯತ್ವದ ಹೊಸ ಪ್ರೈಮ್ ಬಳಕೆದಾರರಿಗೆ ಮಾತ್ರವೇ ಲಭ್ಯವಿರುತ್ತದೆ. ಒಂದು ವೇಳೆ ನೀವು ಈಗಾಗಲೇ ಅಮೇಜಾನ್ ಪ್ರೈಮ್ ಸದಸ್ಯತ್ವ ಹೊಂದಿರುವವರಾಗಿದ್ದಲ್ಲಿ ನೀವು ನಿಮ್ಮ ಸದ್ಯದ ಪ್ರೈಮ್ ಸದಸ್ಯತ್ವ ಮುಗಿದ ನಂತರವೇ ಆಫರ್ ಗೆ ಅರ್ಹರಾಗುತ್ತೀರಿ.


Click it and Unblock the Notifications








