BSNLನಿಂದ ಇತಿಹಾಸದ ಭರ್ಜರಿ ಆಫರ್ ಪ್ರಕಟ!..ಈಗಲೇ ಬುಕ್ ಮಾಡ್ತೀರಾ!
ಭಾರತದ ಟೆಲಿಕಾಂ ಪ್ರಪಂಚದಲ್ಲಿ ಪಾತಾಳಕ್ಕಿಳಿದಿರುವ ಸರ್ಕಾರಿ ಸಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ಇದೀಗ ಇತಿಹಾಸದ ಭರ್ಜರಿ ಆಫರ್ ಒಂದನ್ನು ಪ್ರಕಟಿಸಿದೆ. ತನ್ನ ಲ್ಯಾಂಡ್‌ಲೈನ್ ಫೋನ್ ಬಳಸುವವರಿಗೆ ಬಿಎಸ್‌ಎನ್‌ಎಲ್ ಉಚಿತ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲು ಸಂಸ್ಥೆ ಮುಂದಾದ್ದು, ಈ ಆಫರ್ ಬಗ್ಗೆ ನೀವು ಕೇಳಿದ್ರೆ ಅದನ್ನು ಬುಕ್ ಮಾಡುವುದು ಖಂಡಿತ.
ಹೌದು, ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಸ್‌ಎನ್‌ಎಲ್ ತನ್ನ ಲ್ಯಾಂಡ್‌ಲೈನ್ ಬಳಕೆದಾರರಿಗೆ ಭರ್ಜರಿ ಉಚಿತ ಡೇಟಾ ನೀಡಲು ಮುಂದಾಗಿದೆ. ಇದೀಗ ಬಿಎಸ್‌ಎನ್‌ಎಲ್ ಲ್ಯಾಂಡ್ ಲೈನ್ ಗ್ರಾಹಕರು ಉಚಿತವಾಗಿ ಹೈಸ್ಪೀಡ್ ಹೋಮ್ ವೈಫೈ ಸೇವೆಯನ್ನು ಪಡೆಯಬಹುದಾಗಿದ್ದು, 10 ಎಂಬಿಪಿಎಸ್ ವೇಗದಲ್ಲಿ ಪ್ರತಿದಿನ 5 ಜಿಬಿ ಡೇಟಾವನ್ನು ಸಂಸ್ಥೆ ಉಚಿತವಾಗಿ ನೀಡುತ್ತಿದೆ.

10 ಎಂಬಿಪಿಎಸ್ ವೇಗದಲ್ಲಿ ಪ್ರತಿದಿನ 5 ಜಿಬಿ ಡೇಟಾ ಜೊತೆಗೆ ಸಂಸ್ಥೆ ತನ್ನ ಲ್ಯಾಂಡ್ ಲೈನ್ ಮತ್ತು ಮೊಬೈಲ್ ಗ್ರಾಹಕರಿಗೆ 'ಫ್ರಿ ವಾಯ್ಸ್ ಕಾಲಿಂಗ್ ' ಸೇವೆಯನ್ನು ಒದಗಿಸುತ್ತಿದೆ. 'ವಿಂಗ್ಸ್' ವಿಒಐಪಿ ಪ್ಲಾಟ್ಫಾರಂ ಮೂಲಕ ಈ ಸೇವೆ ದೊರಕಲಿದೆ. ಈ ಸೇವೆಯಲ್ಲಿ ಬಹುತೇಕ ದೇಶಗಳಿಗೆ ಅಂತರಾಷ್ಟ್ರೀಯ ಕರೆಗಳನ್ನು ಕೇವಲ.1.20 ರೂ.ಗಳಲ್ಲಿ ಮಾಡಬಹುದು ಎಂದು ತಿಳಿಸಿದೆ.
ಲ್ಯಾಂಡ್‌ಲೈನ್ ಫೋನ್ ಗ್ರಾಹಕರು ಈ ವೈಫೈ ಸೇವೆಯನ್ನು ಪಡೆಯಲು ಕೇವಲ ಒಂದು ಕರೆ ಮಾಡಿದರೆ ಸಾಕಿದ್ದು, ಬಿಎಸ್‌ಎನ್‌ಎಲ್ ಸಂಸ್ಥೆ ನೀಡಿರುವ 18003451504 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಯೋಜನೆಯನ್ನು ಪಡೆಯಬಹುದಾಗಿದೆ. ಇನ್ನು ಹೋಮ್ ವೈಫೈ ಇನ್ಸ್ಟಾಲ್ ಮಾಡಲು ಯಾವುದೇ ಶುಲ್ಕವಿಲ್ಲ ಎಂಬುದನ್ನು ಸಹ ಬಿಎಸ್‌ಎನ್‌ಎಲ್ ಸಂಸ್ಥೆ ತಿಳಿಸಿದೆ.

ಈ ಬ್ರಾಡ್ಬ್ಯಾಂಡ್ ಅನುಸ್ಥಾಪನೆಗೆ ಗ್ರಾಹಕರಿಗೆ ಚಾರ್ಜ್ ಮಾಡಲಾಗುವುದಿಲ್ಲ. ಉಚಿತ ಕೊಡುಗೆ ಅಡಿಯಲ್ಲಿ, ದಿನಕ್ಕೆ 10 ಎಂಬಿಪಿಎಸ್ ವರೆಗೆ ವೇಗವನ್ನು ಹೊಂದಿರುವ 5 ಜಿಬಿ ಡೇಟಾ ಹಾಗೆಯೇ, ಈಗಾಗಲೇ ಈ ಲ್ಯಾಂಡ್‌ಲೈನ್ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರಿಗೆ ವರ್ಷಕ್ಕೆ 25% ಕ್ಯಾಶ್‌ಬ್ಯಾಕ್ ಮತ್ತು ಅಮೆಜಾನ್ ಚಂದಾದಾರಿಕೆಯನ್ನು ನೀಡುವುದಾಗಿ ಸಂಸ್ಥೆ ಹೇಳಿದೆ.


Click it and Unblock the Notifications