ಬಿಎಸ್‌ಎನ್‌ಎಲ್‌ನಿಂದ ಫುಲ್‌ ಟಾಕ್‌ಟೈಮ್‌ ಆಫರ್‌ ಘೋಷಣೆ!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇವುಗಳ ನಡುವೆ ಸರ್ಕಾರ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೂಡ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿಕೊಂಡು ಬಂದಿದೆ. ಖಾಸಗಿ ಟೆಲಿಕಾಂಗಳ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳಿಗೆ ಸೆಡ್ಡು ಹೊಡೆಯುವ ಅನೇಕ ಪ್ಲಾನ್‌ಗಳನ್ನು ಪರಿಚಯಿಸಿದೆ. ಈಗಾಗಲೇ ಅನೇಕ ಪ್ಲಾನ್‌ಗಳನ್ನು ಪರಿಚಯಿಸಿರುವ ಬಿಎಸ್‌ಎನ್‌ಎಲ್‌ ಇದೀಗ ತನ್ನ ಟಾಕ್‌ಟೈಮ್‌ ಪ್ಲಾನ್‌ಗಳಲ್ಲಿ ಭರ್ಜರಿ ಆಫರ್‌ ನೀಡಿದೆ.

BSNL

ಹೌದು, ಸರ್ಕಾರಿ ಸ್ವಾಮ್ಯದ BSNL ಫುಲ್‌ ಟಾಕ್‌ಟೈಮ್‌ ನೀಡುವ ಪ್ರಿಪೇಯ್ಡ್ ಆಫರ್‌ ಅನ್ನು ಘೋಷಣೆ ಮಾಡಿದೆ. ಈ ಆಫರ್‌ಗಳು ಕೆಲವು ಆಯ್ದ ಟೆಲಿಕಾಂ ವಲಯಗಳಲ್ಲಿ ಮಾತ್ರ ಲಭ್ಯವಾಗಲಿದೆ. ಆ ವಲಯಗಳಲ್ಲಿ ಬಿಎಸ್‌ಎನ್‌ಎಲ್‌ ಬಳಸುವ ಗ್ರಾಹಕರು ಮಾತ್ರ ಈ ಆಫರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ BSNL ನ ವೆಬ್‌ಸೈಟ್ ಪ್ರಕಾರ, 60ರೂ ಮತ್ತು 110ರೂ. ಬೆಲೆಯ ಟಾಕ್‌ಟೈಮ್ ಪ್ಲಾನ್‌ಗಳಲ್ಲಿ ಫುಲ್‌ ಟಾಕ್‌ಟೈಮ್‌ ಆಫರ್‌ ಅನ್ನು ನೀಡಲಾಗಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂ ನೀಡಿರುವ ಫುಲ್‌ಟಾಕ್‌ಟೈಮ್‌ ಆಫರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ನೀಡುವ ಈ ಫುಲ್‌ಟಾಕ್‌ಟೈಮ್‌ ಆಫರ್‌ 2021ರ ಅಂತ್ಯದವರೆಗೂ ಲಭ್ಯವಿರಲಿದೆ. ಮೊದಲಿಗೆ ಈ ಆಫರ್‌ ಅನ್ನು BSNL ಕೇರಳದ ವೆಬ್‌ಸೈಟ್‌ನಲ್ಲಿ ವರದಿ ಮಾಡಲಾಗಿದೆ. ಇನ್ನು ಫುಲ್‌ ಟಾಕ್‌ಟೈಮ್ ಆಫರ್‌ ಅನ್ನು BSNL ನ ರೀಚಾರ್ಜ್ ಅಥವಾ SMS ಮೂಲಕ SMS ಕೋಡ್ ಕಳುಹಿಸುವ ಮೂಲಕ ಅಥವಾ BSNL ಮೊಬೈಲ್ ಸೆಲ್ಫ್-ಕೇರ್ ಪೋರ್ಟಲ್ ಮೂಲಕ ಅಥವಾ USSD ಕೋಡ್ ಅನ್ನು ಡಯಲ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದಾಗಿದೆ.

BSNL

BSNL ಪ್ರಸ್ತುತ ಪ್ರತಿ ಭಾನುವಾರದಂದು ಭಾರತದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಫುಲ್‌ ಟಾಕ್‌ಟೈಮ್ ಆಫರ್‌ ಅನ್ನು 100ರೂ, ಪ್ರಿಪೇಯ್ಡ್ ವೋಚರ್‌ಗಳಲ್ಲಿ ನೀಡುತ್ತಿದೆ. ಇನ್ನು BSNL ಭಾರತದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 220ರೂ, 500ರೂ, 550ರೂ, 1100ರೂ, 2000ರೂ, 3000ರೂ, 5000ರೂ, ಮತ್ತು 6000ರೂ, ಬೆಲೆಯ ಪ್ರಿಪೇಯ್ಡ್ ಯೋಜನೆಗಳನ್ನು ಸಹ ಕ್ರಮಬದ್ಧಗೊಳಿಸಿದೆ. ಇದರ ನಡುವೆ BSNL ಪಂಜಾಬ್ ಟೆಲಿಕಾಂ ವೃತ್ತದಲ್ಲಿ 220ರೂ.ಗಳ ಫುಲ್‌ ಟಾಕ್ ಟೈಮ್ ಆಫರ್, ಗುಜರಾತ್ ಸರ್ಕಲ್‌ನಲ್ಲಿ 290ರೂ.ಗಳ ಪ್ರಿಪೇಯ್ಡ್ ವೋಚರ್ ಅನ್ನು ನೀಡುತ್ತಿದೆ. ಇದಲ್ಲದೆ BSNL ಟಾಕ್‌ಟೈಮ್ ಪ್ರಯೋಜನಗಳನ್ನು ನೀಡುವ ವಾಯ್ಸ್‌ ವೋಚರ್‌ಗಳನ್ನು ಸಹ ಹೊಂದಿದೆ. ಆದರೆ ಈ ಟಾಕ್‌ಟೈಮ್‌ ಪ್ಲಾನ್‌ಗಳು ವೋಚರ್‌ನ ಮೌಲ್ಯದಷ್ಟು ಪ್ರಯೋಜನಗಳನ್ನು ನೀಡುವುದಿಲ್ಲ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ ಟೆಲಿಕಾಂ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನವೆಂಬರ್ 2021 ರಲ್ಲಿ ಸಕ್ರಿಯಗೊಳಿಸಲಾದ ಎಲ್ಲಾ ಹೊಸ ಭಾರತ್ ಫೈಬರ್ ಸಂಪರ್ಕಗಳಿಗೆ 90% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದರಿಂದ ಬಳಕೆದಾರರಿಗೆ 500ರೂ.ಗಳ ತನಕ ಡಿಸ್ಕೌಂಟ್‌ ದೊರೆಯಲಿದೆ. ಇಂಟರ್ನೆಟ್ ಸೇವಾ ಪೂರೈಕೆದಾರರು ತಮ್ಮ ಮೊದಲ ತಿಂಗಳ ಬಿಲ್‌ನಲ್ಲಿ ಗರಿಷ್ಠ 500ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಈ ಆಫರ್‌ ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ಟೆಲಿಕಾಂ ವಲಯಗಳಲ್ಲಿ 90 ದಿನಗಳ ಅವಧಿಗೆ ಪ್ರಮೋಷನಲ್‌ ಆಧಾರದ ಮೇಲೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌

ಇದಲ್ಲದೆ ಬಿಎಸ್‌ಎನ್‌ಎಲ್‌ ತನ್ನ ಪ್ರಮೋಷನಲ್‌ ಪ್ಲಾನ್‌ 699ರೂ ಪ್ಲಾನ್‌ ಅನ್ನು ಇದೀಗ ಜನವರಿವರೆಗೆ ವಿಸ್ತರಿಸಿದೆ. ಬಳಕೆದಾರರು ಈ ಪ್ರಿಪೇಯ್ಡ್ ಪ್ಲಾನ್‌ ಅನ್ನು ರಿಟೇಲ್‌ ಸ್ಟೋರ್‌ಗಳ ಮೂಲಕ, 123ಗೆ SMS ಕಳುಹಿಸುವ ಮೂಲಕ ಅಥವಾ USSD ಕಿರುಸಂಕೇತವನ್ನು ಡಯಲ್ ಮಾಡುವ ಮೂಲಕ ಪಡೆಯಬಹುದು. ಸದ್ಯ ಈ ಬೆಳವಣಿಗೆಯನ್ನು ಕೇರಳ ಟೆಲಿಕಾಂ ಮೊದಲು ವರದಿ ಮಾಡಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಹಾಗೂ ಡೈಲಿ 100 ಸಂದೇಶ ಪ್ರಯೋಜನವನ್ನು ಒಳಗೊಂಡಿದೆ. ಅಧಿಕ ಡೇಟಾ ಬಯಸದೆ ಅಧಿಕ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ BSNL ನ 699 ರೂ.ಪ್ಲಾನ್‌ ಸೂಕ್ತವಾಗಿದೆ. ಇದು 180 ದಿನಗಳ ವ್ಯಾಲಿಡಿಟಿಯನ್ನು ನೀಡುವ ಯೋಜನೆ ಆಗಿದೆ.

ಬಿಎಸ್‌ಎನ್‌ಎಲ್‌

ಇನ್ನು ಇತ್ತೀಚಿಗೆ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳ ಹಾದಿಯಲ್ಲಿಯೇ ಹೆಜ್ಜೆಹಾಕಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳ ಹಿಂದೆ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಬಿಎಸ್‌ಎನ್‌ಎಲ್‌ ಸೆಲ್ಫ ಕೇರ್‌ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ ಮೂಲಕ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮುಖ್ಯ ಖಾತೆಯ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
BSNL on its website noted that it is giving full talktime offers on Rs 60 and Rs 110 prepaid vouchers until December 31, 2021.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X