Home
ಸುದ್ದಿಜಾಲ

ಐಪಿಎಲ್ 2019 ಗೆ ಸ್ಪೆಷಲ್ ರೀಚಾರ್ಜ್ ಆಫರ್ ನೀಡುತ್ತಿರುವ ಬಿಎಸ್ಎನ್ಎಲ್

By Gizbot Bureau

ಐಪಿಎಲ್ ಸೀಸನ್ ಆರಂಭವಾಗಿದೆ ಮತ್ತು ಡಿಟಿಹೆಚ್ ಆಪರೇಟರ್ ಗಳು ವಿಭಿನ್ನ ಆಫರ್ ಗಳನ್ನು ಕ್ರಿಕೆಟ್ ಅಭಿಮಾನಿಗಳಿಗಾಗಿ ನೀಡುತ್ತಿದ್ದಾರೆ. ಇದೀಗ ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ವಿಭಿನ್ನ ಆಫರ್ ಗಳನ್ನು ಐಪಿಎಲ್ ಸೀಸನ್ ಪ್ರಯುಕ್ತ ನೀಡುತ್ತಿದೆ.

ಐಪಿಎಲ್ 2019 ಗೆ ಸ್ಪೆಷಲ್ ರೀಚಾರ್ಜ್ ಆಫರ್ ನೀಡುತ್ತಿರುವ ಬಿಎಸ್ಎನ್ಎಲ್

ಕೆಲವು ಹೊಸ ರೀಚಾರ್ಜ್ ಪ್ಯಾಕ್ ಗಳನ್ನು ಇತ್ತೀಚೆಗಷ್ಟೇ ಈ ಟೆಲಿಕಾಂ ಆಪರೇಟರ್ ಬಿಡುಗಡೆಗೊಳಿಸಿದ್ದರು ಮತ್ತು ಅದರಲ್ಲಿ ಡಾಟಾ ಬೆನಿಫಿಟ್ ಮತ್ತು ಉಚಿತ ಸ್ಕೋರ್ ಅಲರ್ಟ್ ಎಸ್ಎಂಎಸ್ ಸೌಲಭ್ಯವನ್ನು ಒದಗಿಸಿಕೊಡಲಾಗಿತ್ತು. ಇದೀಗ ಬಿಎಸ್ಎನ್ಎಲ್ ಮತ್ತೆರಡು ಹೊಸ ರೀಚಾರ್ಜ್ ಪ್ಯಾಕ್ ಗಳನ್ನು ಪರಿಚಯಿಸಿದ್ದು ಇದು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳನ್ನು ಖುಷಿಪಡಿಸಲಿದೆ.

ಎರಡು ರೀಚಾರ್ಜ್ ಪ್ಲಾನ್ ಗಳು:

ಎರಡು ರೀಚಾರ್ಜ್ ಪ್ಲಾನ್ ಗಳು:

ಐಪಿಎಲ್ ಸೀಸನ್ ಪ್ರಯುಕ್ತ ಹೊಸ ಎರಡು ರೀಚಾರ್ಜ್ ಪ್ಲಾನ್ ಗಳನ್ನು ಟ್ವೀಟರ್ ನಲ್ಲಿ ಬಿಎಸ್ಎನ್ಎಲ್ ಐಪಿಎಲ್ ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಿದೆ. ಮಾದಲ ರೀಚಾರ್ಜ್ ಪ್ಯಾಕ್ ರುಪಾಯಿ 199ರದ್ದಾಗಿದ್ದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ನಲ್ಲಿ ಚಂದಾದಾರರು ಅನಿಯಮಿತ ಸ್ಥಳೀಯ,ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳ ಜೊತೆಗೆ 100ಎಸ್ಎಂಎಸ್ ಗಳನ್ನು ಪ್ರತಿದಿನ ಕಳುಹಿಸಬಹುದು. ಈ ಪ್ಲಾನ್ ನಲ್ಲಿ ಪ್ರತಿದಿನ 1ಜಿಬಿ ಡಾಟಾ ಕೂಡ ವ್ಯಾಲಿಡಿಟಿ ಅವಧಿಯವರೆಗೆ ಪ್ರತಿದಿನ ಉಚಿತವಾಗಿರುತ್ತದೆ.

ಎರಡನೇ ಪ್ಲಾನ್:

ಎರಡನೇ ಪ್ಲಾನ್:

ಎರಡನೇ ಪ್ಲಾನ್ ನ ಬೆಲೆ ರುಪಾಯಿ 499 ಆಗಿದ್ದು 90 ದಿನಗಳ ಅವಧಿಯನ್ನು ಹೊಂದಿದೆ ಅಂದರೆ ಹೆಚ್ಚು ಕಡಿಮೆ ಮೂರು ತಿಂಗಳ ಅವಧಿಯನ್ನು ಇದು ಹೊಂದಿರುತ್ತದೆ. ಆದರೆ ಇತರೆ ಬೆನಿಫಿಟ್ ಗಳು ಮೇಲಿನ ಪ್ಲಾನ್ ನಂತೆಯೇ ಇರುತ್ತದೆ. 1ಜಿಬಿ ಡಾಟಾ ಪ್ರತಿದಿನ, ಅನಿಯಮಿತ ಸ್ಥಳೀಯ, ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳು ಮತ್ತು 100ಎಸ್ಎಂಎಸ್ ಗಳು ಪ್ರತಿದಿನ ಉಚಿತವಾಗಿರುತ್ತದೆ.

ಉಚಿತ ಕ್ರಿಕೆಟ್ ಸ್ಕೋರ್ ಕಾಲರ್ ಟ್ಯೂನ್:

ಉಚಿತ ಕ್ರಿಕೆಟ್ ಸ್ಕೋರ್ ಕಾಲರ್ ಟ್ಯೂನ್:

ಈ ಹಿಂದೆ ಆಫರ್ ಮಾಡದ ಕೆಲವು ಬೆನಿಫಿಟ್ ಗಳನ್ನು ಎರಡೂ ಪ್ಲಾನ್ ಗಳು ಒದಗಿಸುತ್ತವೆ. ಈ ಐಪಿಎಲ್ ಸ್ಪೆಷಲ್ ಪ್ಲಾನ್ ಗಳ ಜೊತೆಗೆ ಬಿಎಸ್ಎನ್ಎಲ್ ಗ್ರಾಹಕರು ಉಚಿತ ಕ್ರಿಕೆಟ್ ಸ್ಕೋರ್ ಕಾಲರ್ ಟ್ಯೂನ್ ನ್ನು ಕೂಡ ಸೆಟ್ ಮಾಡಿಕೊಳ್ಳಬಹುದು. ರೆಗ್ಯುಲರ್ ಡಯಲರ್ ಟೋನ್ ಬದಲಾಗಿ ಲೈವ್ ಸ್ಕೋರ್ ಅಪ್ ಡೇಟ್ ನೀಡುವ ಐಪಿಲ್ ಮ್ಯಾಚ್ ನ್ನು ಕಾಲರ್ ಟ್ಯೂನ್ ಆಗಿ ಬಳಸಬಹುದು. ಆದರೆ ಈ ಕಾಲರ್ ಟ್ಯೂನ್ ಕೇವಲ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವ ಸಂದರ್ಬದಲ್ಲಿ ಮಾತ್ರವೇ ಆಕ್ಟಿವ್ ಆಗಿರುತ್ತದೆ.ಕ್ರಿಕೆಟ್ ಮ್ಯಾಚ್ ಇಲ್ಲದ ಸಂದರ್ಬದಲ್ಲಿ ಚಂದಾದಾರರಿಗೆ ಅನಿಯಮಿತ ಪ್ರೀಮಿಯಂ ಕಾಲರ್ ಟೂನ್ ಆಕ್ಸಿಸ್ ಗೆ ಅವಕಾಶವಿರುತ್ತದೆ.

ಬೆಸ್ಟ್ ಆಫರ್ ಗಳು:

ಬೆಸ್ಟ್ ಆಫರ್ ಗಳು:

ತನ್ನ ಎಲ್ಲಾ ನೂತನ ಎಸ್ ಟಿವಿ ರೀಚಾರ್ಜ್ ಗಳಲ್ಲಿ 1ಜಿಬಿ ಪ್ರತಿದಿನ ಡಾಟಾ ಲಿಮಿಟ್ ನ್ನು ಬಿಎಸ್ಎನ್ಎಲ್ ಕಾಯ್ದುಕೊಂಡಿದೆ. ರಿಲಯನ್ಸ್ ಜಿಯೋ, ಏರ್ ಟೆಲ್ ಮತ್ತು ವಡಾಫೋನ್ ಗೆ ಹೋಲಿಸಿದರೆ ಪ್ರತಿದಿನ ಹೆಚ್ಚು ಡಾಟಾವನ್ನು ಇವುಗಳು ನೀಡುತ್ತವೆ. ರಿಲಯನ್ಸ್ ಜಿಯೋ ಜಿಯೋ ಆಪ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ನೀಡುತ್ತದೆ ಮತ್ತು ವಡಾಫೋನ್ ಉಚಿತವಾಗಿ ವಡಾಫೋನ್ ಪ್ಲೇ ಸೇವೆಯನ್ನು ಒದಗಿಸುತ್ತದೆ.

ನಂಬರ್ 1:

ನಂಬರ್ 1:

ಸ್ಪೆಷಲ್ ರೀಚಾರ್ಜ್ ಮತ್ತು ಸೇವೆಗಳಿಂದ ಬಿಎಸ್ಎನ್ಎಲ್ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಎನ್ನಿಸಿಕೊಂಡಿದೆ.2019 ರಲ್ಲಿ ಬಿಎಸ್ಎನ್ಎಲ್ ಎರಡನೇ ಅತೀ ದೊಡ್ಡ ಅಪರೇಟರ್ ಆಗಿ ಗುರುತಿಸಿಕೊಂಡಿತ್ತು.ಕೆಲವು ಸರ್ಕಲ್ ಗಳಲ್ಲಿ ಬಿಎಸ್ಎನ್ಎಲ್ 4ಜಿ ವೋಲ್ಟ್ ನೆಟ್ ವರ್ಕ್ ನ್ನು ಅಭಿವೃದ್ಧಿ ಪಡಿಸಿದೆ. ಈಗಾಗಲೇ ಇದರ 3ಜಿ ಸಿಮ್ ನಿಂದ 4ಜಿ ಸಿಮ್ ಅಪ್ ಡೇಟ್ ಕೂಡ ನಡೆಯುತ್ತಿದೆ.

Best Mobiles in India

English summary
BSNL offers new recharge plans for IPL 2019 fans, offers cricket score caller tunes from Rs 199
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+