BSNL ಬಂಪರ್ ಆಫರ್!..455 ದಿನ ವ್ಯಾಲಿಡಿಟಿ..ದಿನಕ್ಕೆ 2ಜಿಬಿ ಡೇಟಾ..ಬೆಲೆ ಕೇವಲ?
ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಹೊಸ ಕೊಡುಗೆಯನ್ನು ಪ್ರಕಟಿಸಿದೆ. ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಯೋಜನೆ 365 ದಿನಗಳ ವ್ಯಾಲಿಡಿಟಿ ಆಫರ್ ವಿರುದ್ಧವಾಗಿ ಇದೀಗ ಹೊಸ 455 ದಿನಗಳ ಹೊಸ ಪ್ರೀಪೇಡ್ ಆಫರ್ ಅನ್ನು ಘೋಷಿಸಿದ್ದು, 455 ದಿನಗಳ ಈ ಪ್ರೀಪೇಡ್ ಆಫರ್ 1,699 ರೂ.ಗಳ ಬೆಲೆ ಹೊಂದಿದೆ. ಈ ಆಫರ್ ಅಡಿಯಲ್ಲಿ ಗ್ರಾಹಕರು ದಿನಕ್ಕೆ 2 ಜಿಬಿ ಎಫ್‌ಯುಪಿ ಯೊಂದಿಗೆ ಅನಿಯಮಿತ ಮೊಬೈಲ್ ಡೇಟಾವನ್ನು ಪಡೆಯುತ್ತಾರೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

ಹೌದು, ಏರ್‌ಟೆಲ್, ವೊಡಾಫೋನ್ ಮತ್ತು ಜಿಯೋ ಕಂಪೆನಿಗಳ ವಾರ್ಷಿಕ ಆಫರ್ ಯೋಜನೆಗಳಿಗೆ ಸೆಡ್ಡುಹೊಡೆಯಲು ಸರ್ಕಾರಿ ಟೆಲಿಕಾಂ ಮುಂದಾಗಿದೆ. ಹಾಗಾಗಿ, 1,699 ರೂ.ಗಳಿಗೆ 455 ದಿನಗಳ ಪ್ರೀಪೇಡ್ ಆಫರ್ ನೀಡಿ ಗಮನಸೆಳೆದಿದೆ. ಈ ಆಫರ್ 2 ಜಿಬಿ ಎಫ್‌ಯುಪಿ ಯೊಂದಿಗೆ ಅನಿಯಮಿತ ಮೊಬೈಲ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಎಸ್‌ಎಂಎಸ್‌ಗಳನ್ನು ಸಹ ಒಳಗೊಂಡಿದೆ. ಇವುಗಳ ಜೊತೆಗೆ ಅನಿಯಮಿತ ಹಾಡು ಬದಲಾವಣೆ ಆಯ್ಕೆಯೊಂದಿಗೆ ವೈಯಕ್ತಿಕಗೊಳಿಸಿದ ರಿಂಗ್ ಬ್ಯಾಕ್ ಟೋನ್ (ಪಿಆರ್ಬಿಟಿ) ಅನ್ನು ಸಹ ಒದಗಿಸುತ್ತಿದೆ.

ಇದೇ ರೀತಿಯಲ್ಲಿ ಬಿಎಸ್‌ಎನ್‌ಎಲ್ ತನ್ನ ಕನಿಷ್ಟ ಡೇಟಾಯೋಜನೆಗಳನ್ನು ಸಹ ಪರಿಷ್ಕರಿಸಿದೆ. ಕಡಿಮೆ ಬೆಲೆಯ 106 ಮತ್ತು 107 ರೂಪಾಯಿಗಳ ಬಿಎಸ್‌ಎನ್‌ಎಲ್ ಪ್ರೀಪೇಡ್ ಯೋಜನೆಗಳು ಈಗ ದಿನಕ್ಕೆ ಒಂದು ಜಿಬಿ ಡೇಟಾವನ್ನು ಪಡೆಯಬಹುದಾದ ಆಫರ್ ಹೊಂದಿವೆ. ಈ ಎರಡೂ ಯೋಜನೆಗಳ ಅಡಿಯಲ್ಲಿ, ಬಿಎಸ್‌ಎನ್‌ಎಲ್ ಬಳಕೆದಾರರು ದಿನಕ್ಕೆ 1 ಜಿಬಿ ಡೇಟಾವನ್ನು 24 ದಿನಗಳವರೆಗೆ ಪಡೆಯುತ್ತಾರೆ. ಇದರರ್ಥ ಒಟ್ಟು 24 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಿದೆ. ಇದಲ್ಲದೆ, ಬಳಕೆದಾರರು ಉಚಿತ ಅನಿಯಮಿತ ಧ್ವನಿ ಕರೆಗೆ ಅರ್ಹರಾಗಿದ್ದಾರೆ.

ಇನ್ನು ಕಂಪನಿಯು ತನ್ನ 186 ಮತ್ತು 187 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಗಳನ್ನು ಸಹ ಪರಿಷ್ಕರಿಸಿದೆ. ಈ ಯೋಜನೆಗಳ ಪರಿಷ್ಕರಣೆಯ ನಂತರ, ಬಿಎಸ್‌ಎನ್‌ಎಲ್ ಬಳಕೆದಾರರು ದಿನಕ್ಕೆ 3 ಜಿಬಿ ಡೇಟಾ, ಅನಿಯಮಿತ ಧ್ವನಿ ಮತ್ತು 28 ದೈನಂದಿನ 100 ಎಸ್‌ಎಂಎಸ್ ಸಂದೇಶಗಳನ್ನು ಪಡೆಯುತ್ತಾರೆ. ರೂ. 187 ಪ್ರಿಪೇಯ್ಡ್ ಯೋಜನೆ ಅನಿಯಮಿತ ಹಾಡು ಬದಲಾವಣೆ ಆಯ್ಕೆಯೊಂದಿಗೆ ಉಚಿತ ಪಿಆರ್‌ಬಿಟಿಯನ್ನು ಒದಗಿಸುತ್ತದೆ. ಈ ಎರಡು ಪ್ರೀಪೇಡ್ ಯೋಜನೆಗಳು ಬಿಎಸ್‌ಎನ್‌ಎಲ್ ಗ್ರಾಹಕರನ್ನು ಹೆಚ್ಚು ಸೆಳೆಯುವಂತೆ ಬದಲಾಗಿವೆ.

ಆದರೆ ಒಂದು ಬೇಸರದ ಸಂಗತಿ ಎಂದರೆ, ಬಿಎಸ್‌ಎನ್‌ಎಲ್ನ ಈ ಮೊದಲಿನ ಜನಪ್ರಿಯ ಯೋಜನೆಗಳು ಹಿಂದಿನ 2.2 ಜಿಬಿ ಡೇಟಾದ ಬದಲು ಪ್ರತಿದಿನ 1.5 ಜಿಬಿ ಡೇಟಾದೊಂದಿಗೆ ಪರಿಷ್ಕರಣೆಯಾಗಿವೆ. ರೂ .349, ರೂ. 399, ರೂ. 447, ರೂ. 485, ಮತ್ತು ರೂ. 666 ಯೋಜನೆಗಳೆಲ್ಲವೂ ಇದೀಗ 2.2 ಜಿಬಿ ಡೇಟಾದ ಬದಲು ಪ್ರತಿದಿನ 1.5 ಜಿಬಿ ಡೇಟಾದೊಂದಿಗೆ ಬರುತ್ತವೆ. ವಾಸ್ತವವಾಗಿ, ಬಿಎಸ್ಎನ್ಎಲ್ ಈ ಡೇಟಾ ಪ್ರಯೋಜನವನ್ನು ನವೆಂಬರ್ ಮತ್ತು ಡಿಸೆಂಬರ್ನಲ್ಲಿ 1.5 ಜಿಬಿಯಿಂದ 1 ಜಿಬಿಗೆ ಇಳಿಸಲು ಯೋಜಿಸುತ್ತಿದೆ ಎನ್ನಲಾಗಿದೆ.


Click it and Unblock the Notifications