BSNL ನಿಂದ ಕ್ರಾಂತಿಕಾರಕ ಆಫರ್: ದಿನಕ್ಕೆ 20 GB ಡೇಟಾ ಬಳಕೆ...!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸಾಕಷ್ಟು ದರ ಸಮರವು ನಡೆಯುತ್ತಿದ್ದು, ಇಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯನ್ನು ನಡೆಸುತ್ತಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL, ಈ ಬಾರಿ ಬ್ರಾಡ್ ಬ್ಯಾಂಡ್ ಸೇವೆಗಳಲ್ಲಿ ಸ್ಪರ್ಧೆಯನ್ನು ನಡೆಸಲು ಮುಂದಾಗಿದೆ. ಏರ್ಟೆಲ್ ಬ್ರಾಡ್ ಬ್ಯಾಂಡ್ ಸೇವೆಗೆ ಸೆಡ್ಡು ಹೊಡೆಯುವಂತೆ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ.

ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯೂ ನಡೆಯುತ್ತಿದೆ. ಹಲವು ಖಾಸಗಿ ಕಂಪನಿಗಳು ಸೇವೆಯನ್ನು ನೀಡುತ್ತಿವೆ. ಇದೇ ಹಿನ್ನಲೆಯಲ್ಲಿ ಸಾಕಷ್ಟು ಬಳಕೆದಾರರನ್ನು ಕಳೆದುಕೊಳ್ಳುವ BSNL ಸಾಕಷ್ಟು ಹೊಸ ಪ್ಲಾನ್ ಗಳನ್ನು ರಿವೇಜ್ ಮಾಡಿದ್ದು, ಸಾಕಷ್ಟು ಹೊಸ ಆಫರ್ ಗಳನ್ನು ನೀಡುತ್ತಿದೆ. ದಿನಕ್ಕೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಹೆಚ್ಚಿನ ವೇಗದಲ್ಲಿ ಹೆಚ್ಚಿನ ಡೇಟಾವನ್ನು ನೀಡಲಿದೆ. ಈ ಹಿನ್ನಲೆಯಲ್ಲಿ BSNL ನೀಡಿರುವ ಹೊಸ ಪ್ಲಾನ್ ಕುರಿತ ಮಾಹಿತಿಯೂ ಮುಂದಿದೆ.

ನಿತ್ಯ 20 GB ಡೇಟಾ ಬಳಕೆ:
BSNL ತನ್ನ ಬಳಕೆದಾರರಿಗೆ ನೀಡಿರುವ ಪ್ಲಾನ್ ನಲ್ಲಿ ಬಳಕೆದಾರರಿಗೆ ನಿತ್ಯ 20 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ BSNL ಸ್ಪರ್ಧಿಸಲು ಸಜ್ಜಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ.

20 Mbps ವೇಗದ ಸೇವೆ:
BSNL ನೀಡಿರುವ ಹೊಸ ಪ್ಲಾನ್ ನಲ್ಲಿ ಬಳಕೆದಾರರಿಗೆ 20 Mbps ವೇಗದ ಸೇವೆ ದೊರೆಯಲಿದೆ. ಇದರಿಂದಾಗಿ ಬಳಕೆದಾರರು ವೇಗವಾಗಿ ಇಂಟರ್ನೆಟ್ ಬ್ರೌಸಿಂಗ್ ಮಾಡಬಹುದಾಗಿದೆ. ಒಂದೇ ಪ್ಲಾನ್ ನಲ್ಲಿ ವೇಗದ ಡೇಟಾ ಮತ್ತು ಹೆಚ್ಚಿನ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಎರಡು ಲಾಭ ದೊರೆಯಲಿದೆ.

ರೂ. 491 ಪ್ಲಾನ್:
BSNL ನೀಡಿರುವ ಹೊಸ ಪ್ಲಾನ್ ಬೆಲೆ ರೂ. 491 ಆಗಿದ್ದು, ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಒಂದೇ ಪ್ಲಾನ್ ನಲ್ಲಿ ವೇಗದ ಡೇಟಾ ಸೇರಿದಂತೆ ಎಲ್ಲಾ ಮಾದರಿಯ ಬೆಸ್ಟ್ ಬ್ರಾಂಡ್ ಸೇವೆಗಳು ದೊರೆಯುತ್ತಿದೆ. ಇದರಿಂದಾಗಿ ಬೇರೆ ಖಾಸಗಿ ಕಂಪನಿಗಳಿಗಿಂತ ಇದು ಬೆಸ್ಟ್ ಎನ್ನಬಹುದಾಗಿದೆ.

ಉಚಿತ ಕರೆ ಸೇವೆ:
ಇದಲ್ಲದೇ ಈ ಪ್ಲಾನ್ ನಲ್ಲಿ ಮತ್ತೊಂದು ಲಾಭ ಎಂದರೆ ಉಚಿತವಾಗಿ ಕಡೆ ಮಾಡುವ ಸೇವೆಯನ್ನು BSNL ನೀಡುತ್ತಿದೆ. ಇದರಿಂದಾಗಿ ಬಳಕೆದಾರರು ಒಂದೇ ಪ್ಲಾನ್ ನಲ್ಲಿ ಎಲ್ಲಾ ಮಾದರಿಯ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಈ ಮಾದರಿಯ ಸೇವೆಯನ್ನು ಇದುವರೆಗೂ ನೀಡಿಲ್ಲ ಎನ್ನಬಹುದಾಗಿದೆ.

ಜಿಯೋ-ಎರ್ ಟೆಲ್ ಗೆ ಸೆಡ್ಡು..!
ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಬ್ರಾಂಡ್ ಬ್ಯಾಂಡ್ ಸೇವೆಯನ್ನು ನೀಡಲು ತುದಿಗಾಲಿನಲ್ಲಿ ನಿಂತಿದೆ. ಇದಕ್ಕಾಗಿಯೇ BSNL ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ. ಅಲ್ಲದೇ ಏರ್ ಟೆಲ್ ಸಹ ಬಳಕೆದಾರರಿಗೆ ಹೊಸ ಆಪರ್ ಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಎರಡು ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಇದು ಸಹಾಯ ಮಾಡಲಿದೆ.


Click it and Unblock the Notifications








