BSNL ಜಿಂಗಾಲಾಲ!!..ಭಾರತ್ 1 ಜೊತೆಗೆ 97 ರೂ.ಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ!!

Written By:

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ 'ಬಿಎಸ್‌ಎನ್‌ಎಲ್‌' ಮೈಕ್ರೋಮ್ಯಾಕ್ಸ್ ಜೊತೆಗೂಡಿ ಫೋನ್‌ ತರುವ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ.!! ಆದರೆ, ಇನ್ನೊಂದು ಸಿಹಿಸುದ್ದಿ ಎಂದರೆ BSNL ಮತ್ತು ಮೈಕ್ರೊಮ್ಯಾಕ್ಸ್ ಸಹಯೋಗದ ಮೊಬೈಲ್ ಖರೀದಿಸಿದರೆ ಪ್ರತಿ ತಿಂಗಳಿಗೆ 97 ರೂ ರೀಚಾರ್ಜ್‌ಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯದ ಕೊಡುಗೆ ಪ್ರಕಟಿಸಿದೆ.!!

ಹೌದು, ಮೈಕ್ರೊಮ್ಯಾಕ್ಸ್‌ನ 4ಜಿ ವೋಲ್ಟ್ ಸೌಲಭ್ಯದ ಭಾರತ್‌ ಫೋನ್‌ ಖರೀದಿಸಿದವರಿಗೆ ಪ್ರತಿ ತಿಂಗಳು ಕೇವಲ 97 ರೂಪಾಯಿ ರೀಚಾರ್ಜ್‌ಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯದ ಕೊಡುಗೆಯನ್ನು BSNL ಪ್ರಕಟಿಸಿದ್ದು, ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದು ಟೆಲಿಕಾಂನಲ್ಲಿ ಹೊಸದರಸಮರಕ್ಕೆ ನಾಂದಿಹಾಡಲು BSNL ಮುಂದಾಗಿದೆ.!!

'ದೇಶಿ ಸಂಸ್ಥೆ ಮೈಕ್ರೊಮ್ಯಾಕ್ಸ್‌ ಜತೆ ಬಿಎಸ್‌ಎನ್‌ಎಲ್‌ ಕೈಜೋಡಿಸಿದ್ದು, ಈ ಎರಡು ಕಂಪೆನಿಗಳ ಸಹಯೋಗದಲ್ಲಿ ಬರುತ್ತಿರುವ ಮೊಬೈಲ್ ಹೇಗಿದೆ?. 4G ಇಲ್ಲದಿದ್ದರೂ BSNL ಕಂಪೆನಿ ಭಾರತ್ 1 ಆಯ್ಕೆ ಮಾಡಲು ಕಾರಣವೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4G ಇಲ್ಲದಿದ್ದರೂ ಭಾರತ್ 1 ಆಯ್ಕೆ!

4G ಇಲ್ಲದಿದ್ದರೂ ಭಾರತ್ 1 ಆಯ್ಕೆ!

4G ಸೇವೆಯನ್ನು ನೀಡದಿರುವ BSNL ಕಂಪೆನಿ 4G ವೋಲ್ಟ್ ಸಪೋರ್ಟ್ ಮಾಡುವ ಭಾರತ್ 1 ಸ್ಮಾರ್ಟ್‌ಪೋನ್ ಆಯ್ಕೆ ಮಾಡಿರುವ ಬಗ್ಗೆ ಎಲ್ಲರಿಗೂ ಕುತೋಹಲ ಉಂಟಾಗಿದೆ.!! ಭವಿಷ್ಯದಲ್ಲಿ BSNL ಏನಾದರೂ 4G ತರಲಿದೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ.!! ಜನವರಿಯಲ್ಲಿ BSNL 4G ಸೇವೆಯನ್ನು ನೀಡಲಿದೆ ಎನ್ನಲಾಗಿದೆ.!!

ಭಾರತ್ 1 ಫೋನ್ ಹೇಗಿದೆ?

ಭಾರತ್ 1 ಫೋನ್ ಹೇಗಿದೆ?

ಕಡಿಮೆ ಬೆಲೆಯ 4G ಫೋನ್‌ಗಳ ಮೂಲಕ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿರುವ ಮೈಕ್ರೋಮಾಕ್ಸ್ ಮತ್ತು BSNL ಮೈಕ್ರೋ ಮಾಕ್ಸ್ ಜೊತೆಗೂಡಿ ಭಾರತ್ 1 ಲಾಂಚ್ ಮಾಡಿದ್ದು, ಈ ಫೋನ್‌ನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇ, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಪ್ರೋಸೆಸರ್ ಬಳಕೆ ಮಾಡಲಾಗಿದೆ.!!

RAM ಮತ್ತು ಕ್ಯಾಮೆರಾ!!

RAM ಮತ್ತು ಕ್ಯಾಮೆರಾ!!

ಹಿಂಭಾಗದಲ್ಲಿ 2 MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವನ್ನು ಭಾರತ್ 1 ಫೋನ್ ಹೊಂದಿದ್ದು, ಇದಲ್ಲದೇ 512 RAM ಹೊಂದಿದ್ದು, 4GB ಇಂಟರ್ನಲ್ ಮೆಮೊರಿಯನ್ನು ಈ ಫೋನ್ ಹೊಂದಿದೆ. ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದಾಗಿದೆ.

ಜಿಯೋಗಿಂತ ಅಗ್ಗದ ದರದಲ್ಲಿ ಸೇವೆ!!

ಜಿಯೋಗಿಂತ ಅಗ್ಗದ ದರದಲ್ಲಿ ಸೇವೆ!!

97 ರೂಪಾಯಿ ರೀಚಾರ್ಜ್‌ಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯದ ಕೊಡುಗೆಯನ್ನು BSNL ಪ್ರಕಟಿಸಿದ್ದು ಗ್ರಾಮೀಣ ಪ್ರದೇಶದ ಜನತೆಗೆ ಅಗ್ಗದ ದರದಲ್ಲಿ ಕರೆ ಮತ್ತು ದತ್ತಾಂಶ ಸೇವೆ ದೊರೆಯಲಿದೆ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ.

ಓದಿರಿ:ಜಿಯೋವಿನ ಹೊಸ ಆಫರ್ ಘೋಷಣೆ!..ಟೆಲಿಕಾಂಗೆ ಭಾರಿ ಶಾಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BSNL at present provides 3G services and is planning to upgrade it for 4G services from January 2018.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot