ಜಿಯೋ, ಏರ್‌ಟೆಲ್‌ಗೆ ಶಾಕ್‌!..BSNL ಹೊರತರುತ್ತಿದೆ ಕಡಿಮೆ ಬೆಲೆ ಫೋನ್!!

Written By:

ಜಿಯೋ ಜೊತೆ ಫೈಟ್ ನೀಡಲು ಏರ್‌ಟೆಲ್, ಐಡಿಯಾ ಕಂಪೆನಿಗಳು ಹೊಸದಾಗಿ ಮೊಬೈಲ್‌ಗಳನ್ನು ಹೊರತರುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ಆದರೆ, ಸರ್ಕಾರಿ ನಿಯಂತ್ರಣದ ಟೆಲಿಕಾಂ ಸಂಸ್ಥೆ BSNL ಕೂಡ ತನ್ನದೇ ಮೊಬೈಲ್ ತರುತ್ತಿದೆ ಎಂದರೆ ನೀವು ನಂಬುತ್ತೀರಾ?ಹೌದು, ನೀವು ನಂಬಲೇಬೇಕು.!!

ಖಾಸಗಿ ಟೆಲಿಕಾಂ ಆಪರೇಟರ್‌ಗಳೊಂದಿಗೆ ಸ್ಪರ್ಧಿಸಲು ಸರಕಾರಿ ಸ್ವಾಮ್ಯದ BSNL ಕಡಿಮೆ ಬೆಲೆಯ ಫೀಚರ್ ಫೋನನ್ನು ಹೊರತರಲು ಮುಂದಾಗಿದೆ.!! ಕೇವಲ ಆಫರ್‌ಗಳಿಂದ ಮುಂದೆ ಗ್ರಾಹಕರನ್ನು ಸೆಳೆಯಲು ಸಾಧ್ಯವಿಲ್ಲಾ ಎಂದು ತಿಳಿದಿರುವ BSNL ಇದೀಗ 2 ಸಾವಿರಕ್ಕೆ ಮೊಬೈಲ್ ನೀಡಲು ಮುಂದಾಗಿದೆ.!!

ಸಾಕಷ್ಟು ಆಫರ್‌ಗಳೊಂದಿಗೆ ಕೂಡಿರುವ ಈ BSNL ಫೀಚರ್ ಫೋನ್ ಶೀಘ್ರದಲ್ಲಿಯೇ ಬಿಡುಗಡೆಯಾಗುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದ್ದು, ಹಾಗಾದರೆ, ಫೋನ್ ಹೇಗಿರಲಿದೆ? ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೋ-ಬ್ರ್ಯಾಂಡ್ ಮೊಬೈಲ್!!

ಕೋ-ಬ್ರ್ಯಾಂಡ್ ಮೊಬೈಲ್!!

BSNL ಫೀಚರ್ ಫೋನ್ ತಯಾರಿಕೆಗಾಗಿ ದೇಶೀಯ ಮೊಬೈಲ್ ಕಂಪೆನಿಗಳಾದ ಲಾವಾ, ಮೈಕ್ರೋಮ್ಯಾಕ್ಸ್‌ನೊಂದಿಗೆ ಬಿಎಸ್ಎನ್ಎಲ್ ಕೈಜೋಡಿಸಿದೆ.! BSNLನ ಸಾಕಷ್ಟು ಆಫರ್‌ಗಳೊಂದಿಗೆ ಫೀಚರ್ ಫೋನ್‌ ಅನ್ನು ಬಿಡುಗಡೆ ಮಾಡಲು BSNL ಸಿದ್ಧವಾಗುತ್ತಿದೆ.!!

2 ಸಾವಿರಕ್ಕೆ ಮೀರದಂತೆ ಫೀಚರ್ ಫೋನ್

2 ಸಾವಿರಕ್ಕೆ ಮೀರದಂತೆ ಫೀಚರ್ ಫೋನ್

ಲಾವಾ, ಮೈಕ್ರೋಮ್ಯಾಕ್ಸ್ ಮೊಬೈಲ್ ಬ್ರ್ಯಾಂಡ್‌ಗಳೊಂದಿಗೆ ಮಾತುಕತೆ ನಡೆಸಿದ್ದು, ಕೋ-ಬ್ರ್ಯಾಂಡಿಂಗ್‌ನಿಂದ ಕೂಡಿರುವ ಸ್ವಂತ ಫೋನ್‌ಗಳೊಂದಿಗೆ ಮಾರುಕಟ್ಟೆಗೆ ಬರುತ್ತೇವೆ ಎಂದು ಬಿಎಸ್ಎನ್ಎಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ್ ಹೇಳಿದ್ದಾರೆ.!! 2 ಸಾವಿರಕ್ಕೆ ಮೀರದಂತೆ ಫೀಚರ್ ಫೋನ್ ಜತೆಗೆ ಆಕರ್ಷಕವಾದ ವಾಯ್ಸ್ ಪ್ಯಾಕೇಜ್‌ಗಳನ್ನೂ ಸಹ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.!!

BSNL ಫೋನ್ ಬಿಡುಗಡೆ ಯಾವಾಗ?

BSNL ಫೋನ್ ಬಿಡುಗಡೆ ಯಾವಾಗ?

ಇನ್ನೊಂದು ತಿಂಗಳಲ್ಲಿ ಹೊಸ ಫೀಚರ್ ಫೋನ್ ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಅಕ್ಟೋಬರ್ ವೇಳೆಗೆ ಬಿಎಸ್ಎನ್ಎಲ್ ಫೀಚರ್ ಫೋನ್ ಮಾರುಕಟ್ಟೆಗೆ ಬರುವ ವಿಶ್ವಾಸ ನಮಗಿದೆ ಎಂದು ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.!! ಈಗಾಗಲೇ ಮೊಬೈಲ್ ತಯಾರಿಕೆಯಾಗುತ್ತಿದೆ ಎನ್ನುವ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ.!!

ಸೆಮಿ ಅರ್ಬನ್ ಗ್ರಾಹಕರ ದೃಷ್ಟಿ!!

ಸೆಮಿ ಅರ್ಬನ್ ಗ್ರಾಹಕರ ದೃಷ್ಟಿ!!

2016-17ರ ಆರ್ಥಿಕ ವರ್ಷದಲ್ಲಿ ಸುಮಾರು 2.5 ಕೋಟಿ ಹೊಸ ಸಿಮ್ ಕಾರ್ಡ್‌ಗಳನ್ನು BSNL ಮಾರಾಟ ಮಾಡಿದೆ. ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡಲು ಸುಮಾರು 10.5 ಕೋಟಿ ಸೆಮಿ ಅರ್ಬನ್ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು BSNL ನೂತನ ಫೋನ್ ತರಲು ಮುಂದಾಗಿದೆ.!!

4G ವೋಲ್ಟ್ ಬಗ್ಗೆ ಮಾಹಿತಿ ಇಲ್ಲ!!

4G ವೋಲ್ಟ್ ಬಗ್ಗೆ ಮಾಹಿತಿ ಇಲ್ಲ!!

ಲಾವಾ, ಮೈಕ್ರೋಮ್ಯಾಕ್ಸ್ ಮತ್ತು BSNL ಟೆಲಿಕಾಂ ಸಹಭಾಗಿತ್ವದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ನೂತನ ಫೋನ್ 4G ವೋಲ್ಟ್ ಆಯ್ಕೆ ಹೊಂದಿರುವ ಮಾಹಿತಿ ಇಲ್ಲ.!! ಆದರೆ, ಪ್ರಸ್ತುತ ಟೆಲಿಕಾಂಗೆ ಬೇಕಾದಂತಹ ಎಲ್ಲಾ ಆಯ್ಕೆಗಳು ಇರಬಹುದು ಎನ್ನುವ ವಿಶ್ವಾಸವನ್ನು ಗ್ರಾಹಕನಿಡಬಹುದು.!!

ಓದಿರಿ:999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Targeting the feature phone segment.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot