Home
ಸುದ್ದಿಜಾಲ

BSNL ಪತಂಜಲಿ 144ರೂ, 792ರೂ, 1584 ರೂಪಾಯಿಗಳ ಬಂಪರ್ ಆಫರ್ಸ್!!

By Sushma Charhra

ಯೋಗಗುರು ಬಾಬಾರಾಮ್ ದೇವ್ ರ ಪತಂಜಲಿ ಸಂಸ್ಥೆಯು ಭಾರತೀಯ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ ಎಲ್) ನೊಂದಿಗೆ ಕೈಜೋಡಿಸಿ ಸಿಮ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿದ್ದು ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈ ಸಹಯೋಗಕ್ಕೆ ಸಾಕ್ಷಿ ಎಂಬಂತೆ, ಪತಂಜಲಿಯು “ಸ್ವದೇಶಿ ಸಮೃದ್ಧಿ” ಹೆಸರಿನ ಸಿಮ್ ಕಾರ್ಡ್ ಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಬಂಪರ್ ಆಫರ್ ಗಳನ್ನು ಕೊಡುತ್ತಿದೆ.

BSNL ಪತಂಜಲಿ 144ರೂ, 792ರೂ, 1584 ರೂಪಾಯಿಗಳ ಬಂಪರ್ ಆಫರ್ಸ್!!

ಯಾರು ಈ ಸಿಮ್ ಕಾರ್ಡ್ ಗಳ ಚಂದಾದಾರರಾಗುತ್ತಾರೋ ಅವರು 144 ರುಪಾಯಿ,792 ರುಪಾಯಿ ಮತ್ತು 1584 ರುಪಾಯಿಯ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಎಲ್ಲಾ ರಿಚಾರ್ಜ್ ಪ್ಲಾನ್ ನಲ್ಲಿಯೂ 2ಜಿಬಿ ಡಾಟಾ ಪ್ರತಿ ದಿನ ಫ್ರೀ, ಅನ್ ಲಿಮಿಟೆಡ್ ವಾಯ್ಸ್ ಕಾಲ್, ಬೇರೆಬೇರೆ ವ್ಯಾಲಿಡಿಟಿ ದಿನಗಳನ್ನು ಹೊಂದಿರುತ್ತದೆ.

ಪ್ರಾರಂಭಿಕ ಹಂತದಲ್ಲಿ, ಬಿಎಸ್ ಎನ್ ಎಲ್ ಪತಂಜಲಿ ಸಿಮ್ ಕಾರ್ಡ್ ಗಳ ಆಫರ್ ಗಳು ಪತಂಜಲಿ ನೌಕರರಿಗೆ ಮಾತ್ರ ಲಭ್ಯವಿರಲಿದೆ. ಸಾಮಾನ್ಯ ಜನರಿಗೆ ಮುಂದಿನ ದಿನಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತೆ ಎಂಬ ಮಾಹಿತಿಯನ್ನು ಟೆಲಿಕಾಂಟಾಕ್ ವರದಿ ಮಾಡಿದೆ. ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡುವವರಿಗೆ ಹೆಚ್ಚುವರಿ 10 ಶೇಕಡಾ ರಿಯಾಯಿತಿಯನ್ನು ಪತಂಜಲಿ ವಸ್ತುಗಳ ಖರೀದಿಯಲ್ಲಿ ನೀಡಲಾಗುತ್ತೆ. ಆರೋಗ್ಯ, ಅಪಘಾತ ಮತ್ತು ಜೀವ ವಿಮೆ ಸೌಲಭ್ಯದ ಜೊತೆಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ಇರಲಿವೆಯಂತೆ.

ಬಿಎಸ್ ಎನ್ ಎಲ್ ಪತಂಜಲಿ 144 ಪ್ಲಾನ್ ಬಗ್ಗೆ ಹೇಳುವುದಾದರೆ, ಭಾರತದಾದ್ಯಂತ( ಮುಂಬೈ ಮತ್ತು ದೆಹಲಿ ಹೊರತು ಪಡಿಸಿ) ಅನ್ ಲಿಮಿಟೆಡ್ ವಾಯ್ಸ್ ಕರೆಗಳನ್ನು ಮಾಡಬಹುದು. ಎರಡು ಜಿಬಿ ಡಾಟಾ ಪ್ರತಿದಿನ ಮತ್ತು 100 ಎಸ್ ಎಂ ಎಸ್ ಗಳನ್ನು ಫ್ರೀಯಾಗಿ 30 ದಿನಗಳಿಗೆ ನೀಡಲಾಗುತ್ತೆ. ಅದೇ ರೀತಿ 792 ರುಪಾಯಿ ಮತ್ತು 1584 ರುಪಾಯಿಯ ರಿಚಾರ್ಜ್ ಗಳು ಕೂಡ ಇದೇ ಆಫರ್ ನ್ನು ನೀಡುತ್ತೆ ಆದರೆ ವ್ಯಾಲಿಡಿಟಿ ಅವಧಿ ಕ್ರಮವಾಗಿ 180 ದಿನಗಳು ಮತ್ತು 365 ದಿನಗಳು ಆಗಿರಲಿದೆ.

ಈ ಆಫರ್ ಗಳು ಕೇವಲ ಸ್ವದೇಶಿ ಸಿಮ್ ಕಾರ್ಡ್ ಗಳನ್ನು ಪಡೆದವರಿಗೆ ಮಾತ್ರವೇ ಆಗಿರುವುದರಿಂದಾಗಿ ಪತಂಜಲಿ ನೌಕರರು ಕೂಡಲೇ ಸಿಮ್ ಕಾರ್ಡ್ ಗಳನ್ನು ಖರೀದಿಸುವುದು ಒಳಿತು. ಈ ಆಫರ್ ಗಳು ಯಾವುದೇ ಬಿಎಸ್ ಎನ್ ಎಲ್ ಬಳಕೆದಾರರಿಗೆ ಲಭ್ಯವಿಲ್ಲ ಎನ್ನುವುದು ತಿಳಿದರಲಿ.

Riversong Jelly Kids GPS tracker hands-on - GIZBOT KANNADA

2ಜಿಬಿ ಡಾಟಾ ಪ್ರತಿ ದಿನವೂ ಫ್ರೀ ಎಂಬ ವಿಚಾರಕ್ಕೆ ಬಂದರೆ ಭಾರತೀ ಏರ್ ಟೆಲ್ ಇತ್ತೀಚೆಗೆ 449 ರೂಪಾಯಿ ರೀಚಾರ್ಜ್ ಪ್ಯಾಕ್ ನ್ನು ಬಿಡುಗಡೆಗೊಳಿಸಿದ್ದು,140 ಜಿಬಿ 3ಜಿ/4ಜಿ ಡಾಟಾವನ್ನು ಅದು 70 ದಿನಗಳ ಅವಧಿಗೆ ನೀಡಲಿದೆ. ಇನ್ನು ರಿಲಯನ್ಸ್ ಜಿಯೋ, 448 ರುಪಾಯಿ ಪ್ಲಾನ್ ನ ಅಡಿಯಲ್ಲಿ 2ಜಿಬಿ ಡಾಟಾ ಪ್ರತಿದಿನ 4ಜಿ ಹೈ ಸ್ಪೀಡ್ ನಲ್ಲಿ 84 ದಿನಗಳ ಅವಧಿಗೆ ನೀಡುತ್ತಿದೆ.

Best Mobiles in India

English summary
BSNL Patanjali 144 Plans Offer Unlimited Voice Calls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+