Subscribe to Gizbot

ಜಿಯೋಗೆ ನೇರ ಸವಾಲು: BSNL ನಿಂದ ರೂ.7ಕ್ಕೆ 1GB ಡೇಟಾ..!

Written By:

ಸರಕಾರಿ ಸ್ವಾಮ್ಯದ BSNL ಮಾರುಕಟ್ಟೆಯಲ್ಲಿ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಕಡಿಮೆ ಇಲ್ಲದಂತೆ ಆಫರ್ ಗಳನ್ನು ನೀಡುತ್ತಿದೆ. ಈಗಾಗಲೇ ವರ್ಷದ ಪ್ಯಾಕ್ ‍ಘೋಷಣೆ ಮಾಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು. ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಆಫರ್ ಅನ್ನು ಲಾಂಚ್ ಮಾಡಿದೆ. ಆದರೆ ಇಂದು ಸಣ್ಣ ಪ್ಲಾನ್‌ಗಳನ್ನು ಪರಿಚಯಿಸಿದೆ.

ಜಿಯೋಗೆ ನೇರ ಸವಾಲು: BSNL ನಿಂದ ರೂ.7ಕ್ಕೆ 1GB ಡೇಟಾ..!

ಎರಡು ಮಿನಿ ಪ್ಯಾಕ್ ಗಳನ್ನು BSNL ಪರಿಚಯ ಮಾಡಿದ್ದು, ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸಮರಕ್ಕೆ ತುಪ್ಪವನ್ನು ಸುರಿಯಲಿದೆ. ಸದ್ಯದ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ 3G ಆಫರ್ ಇದಾಗಲಿದೆ ಎನ್ನುವ ಮಾತು ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಈ ಪ್ಲಾನ್ ಗಳ ಕುರಿತ ಮಾಹಿತಿಯೂ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
BSNL ರೂ.7 ಪ್ಲಾನ್:

BSNL ರೂ.7 ಪ್ಲಾನ್:

ಇದು BSNL ಬಿಡುಗಡೆ ಮಾಡಿರುವ ಅತೀ ಸಣ್ಣ ಪ್ಯಾಕ್ ಆಗಿದ್ದು, ಇದರಲ್ಲಿ ಗ್ರಾಹಕರಿಗೆ BSNL ಒಂದು ದಿನದ ವ್ಯಾಲಿಡಿಟಿಗೆ ಒಂದು GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರಿಗೆ ಡೇಟಾ ಬಿಟ್ಟರೆ ಇನ್ಯಾವುದೇ ಲಾಭಗಳು ಇಲ್ಲ.

BSNL ರೂ.16 ಪ್ಲಾನ್:

BSNL ರೂ.16 ಪ್ಲಾನ್:

ಇದಲ್ಲದೇ BSNL ಮತ್ತೊಂದು ಪ್ಲಾನ್ ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ BSNL ಒಂದು ದಿನದ ವ್ಯಾಲಿಡಿಟಿಗೆ ಎರಡು GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರಿಗೆ ಡೇಟಾ ಬಿಟ್ಟರೆ ಇನ್ಯಾವುದೇ ಲಾಭಗಳು ಇಲ್ಲ.

ಇಷ್ಟು ಕಡಿಮೆ:

ಇಷ್ಟು ಕಡಿಮೆ:

ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆಗೆ ಬೇರೆ ಕಂಪನಿಗಳು ಸೇವೆಯನ್ನು ನೀಡುತ್ತಿಲ್ಲ. ಒಂದು ದಿನದ ಸೇವೆಯೂ ಸಾಕು ಎನ್ನುವವರು ಈ ಪ್ಲಾನ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

BSNL ರೂ.999 ಪ್ಲಾನ್;

BSNL ರೂ.999 ಪ್ಲಾನ್;

ಈಗಾಗಲೇ ಮಾರುಕಟ್ಟೆಯಲ್ಲಿ BSNL ಲಾಂಚ್ ಮಾಡಿರುವ ರೂ.999 ಪ್ಲಾನ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭಗಳು ದೊರೆಯುತ್ತಿದೆ. ಒಂದು ವರ್ಷದ ಅವಧಿಗೆ ಉಚಿತ ಕರೆ, ಡೇಟಾ ಸೇರಿದಂತೆ ಎಲ್ಲಾ ಲಾಭವನ್ನು BSNL ಮಾಡಿಕೊಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
BSNL Plans of Rs 7 Offering 1GB Data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot