BSNL: 200ಕ್ಕಿಂತ ಕಡಿಮೆ! ಮೂರು ಬೊಂಬಾಟ್ ಪ್ಲಾನ್‌ಗಳಿವು.. ಜಿಯೋ, ಏರ್ಟೆಲ್ಗೆ ನಡುಕ!
ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಬಿಎಸ್‌ಎನ್‌ಎಲ್ 200 ರೂ. ಒಳಗಿನ ರೀಚಾರ್ಜ್ ಪ್ಲಾನ್‌ಗಳನ್ನು (Recharge Plan Under Rs 200) ತನ್ನ ಬಳಕೆದಾರರಿಗೆ ನೀಡುತ್ತಿವೆ. ಈ ಮೂಲಕ ಏರ್‌ಟೆಲ್ ಮತ್ತು ಜಿಯೋಗೆ ಟಕ್ಕರ್ ನೀಡಿದೆ. ವಿಶೇಷವೆಂದರೆ, ಏರ್‌ಟೆಲ್ (Airtel) ಮತ್ತು ಜಿಯೋ (Jio) ಸಹ ತನ್ನ ಬಳಕೆದಾರರಿಗೆ 200 ರೂ.ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ನೀಡುತ್ತಿದೆ. ಈ ಬಗ್ಗ ಇಲ್ಲಿದೆ ಹೆಚ್ಚಿನ ಮಾಹಿತಿ.
ಪ್ರಸ್ತುತ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಖಾಸಗಿ ಕಂಪನಿಗಳ ದುಬಾರಿ ರೀಚಾರ್ಜ್ ಪ್ಲಾನ್‌ಗಳಿಂದ ಬೇಸರಗೊಂಡಿರುವ ಗ್ರಾಹಕರು ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ನತ್ತ ಮುಖ ಮಾಡುತ್ತಿದ್ದಾರೆ. ಬಿಎಸ್‌ಎನ್‌ಎಲ್ ಸಹ ತನ್ನ ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಹಲವು ಅಗ್ಗದ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ರೀಚಾರ್ಜ್ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. 200 ರೂ.ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ತಿಳಿಯಲು ಮುಂದೆ ಓದಿ.

ಬಿಎಸ್‌ಎನ್‌ಎಲ್ 107 ರೂ. ರೀಚಾರ್ಜ್ ಪ್ಲಾನ್
ಇದು ಬಿಎಸ್‌ಎನ್‌ಎಲ್‌ನ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಯಾಗಿದೆ. ಬಳಕೆದಾರರು ಈ ಪ್ಲಾನ್‌ನಲ್ಲಿ ಡೇಟಾ ಮತ್ತು ವಾಯ್ಸ್ ಕಾಲ್ಸ್ ಲಾಭವನ್ನು ಪಡೆಯಬಹುದು. ಇದು 50 ದಿನಗಳ ವ್ಯಾಲಿಡಿಟಿಯೊಂದಿಗೆ (ಮಾನ್ಯತೆ) ಬರುತ್ತದೆ. ಇದು 200 ನಿಮಿಷಗಳ ಉಚಿತ ಧ್ವನಿ ಕರೆ ಮತ್ತು 3G ಡೇಟಾ ಹೊಂದಿದೆ. ಕಡಿಮೆ ಕರೆಗಳನ್ನು ಮಾಡುವ ಬಳಕೆದಾರರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿಯಾಗಿ ನೀವು, 50 ದಿನಗಳವರೆಗೆ ಬಿಎಸ್‌ಎನ್‌ಎಲ್ ಟ್ಯೂನ್‌ನ ಪ್ರಯೋಜನ ಸಹ ಪಡೆಯಬಹುದು.
ಬಿಎಸ್‌ಎನ್‌ಎಲ್ 153 ರೂ. ರೀಚಾರ್ಜ್ ಯೋಜನೆ
ಬಿಎಸ್‌ಎನ್‌ಎಲ್‌ನ ಎರಡನೇ ಅಗ್ಗದ ರೀಚಾರ್ಜ್ ಯೋಜನೆಯ ದರ 153 ರೂ. ಆಗಿದೆ. ನೀವು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನ ಪಡೆಯಬಹುದು. ಈ ಪ್ಲಾನ್‌ನ ವ್ಯಾಲಿಡಿಟಿ 28 ದಿನಗಳು. ಬಳಕೆದಾರರು ಈ 28 ದಿನಗಳಲ್ಲಿ ಯಾವುದೇ ನೆಟ್‌ವರ್ಕ್‌ಗೆ ಉಚಿತ ಕಾಲ್ ಮಾಡುವ ಸೌಲಭ್ಯವನ್ನು ಪಡೆಯಬಹುದು. ಅಲ್ಲದೆ, ಬಳಕೆದಾರರು ಪ್ರತಿದಿನ 1GB ಹೈ ಸ್ಪೀಡ್ ಡೇಟಾ ಪಡೆಯಲಿದ್ದಾರೆ. 1GB ಡೇಟಾ ಮಿತಿಯನ್ನು ಮುಗಿದ ಬಳಿಕ, ಇಂಟರ್ನೆಟ್ ವೇಗವು 40kbps ಗೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸಹ ಲಭ್ಯವಿದೆ.
ಬಿಎಸ್‌ಎನ್‌ಎಲ್ 199 ರೂ. ರೀಚಾರ್ಜ್ ಪ್ಲಾನ್
ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯು 153 ರೂ. ರೀಚಾರ್ಜ್ ಪ್ಲಾನ್‌ಗಿಂತ ಅನಿಯಮಿತ ವಾಯ್ಸ್ ಕಾಲ್ಸ್ ಮತ್ತು ಹೆಚ್ಚು ಡೇಟಾ ನೀಡುತ್ತದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ. ಈ ಮಿತಿ ಮುಗಿದ ನಂತರ, ಇಂಟರ್ನೆಟ್ ವೇಗವು 80kbpsಗೆ ಇಳಿಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸಹ ಪಡೆಯಬಹುದು. ಈ ಯೋಜನೆಯು ಅನಿಯಮಿತ ಕರೆ, 60GB ಡೇಟಾ ಮತ್ತು 3000 ಉಚಿತ ಎಸ್‌ಎಂಎಸ್ ನೀಡುತ್ತದೆ.
ಜಿಯೋ 199 ರೂ. ರೀಚಾರ್ಜ್ ಪ್ಲಾನ್
ಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 199 ರೂ.ನ ಯೋಜನೆ ಒಂದಾಗಿದೆ. ಈ ಪ್ಲಾನ್‌ನಲ್ಲಿ ನೀವು ಪ್ರತಿದಿನ 1.5GB ಡೇಟಾ ಪಡೆಯಬಹುದು. ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಪಡೆಯಬಹುದು. ಈ ಯೋಜನೆಯ ವ್ಯಾಲಿಡಿಟಿ 18 ದಿನಗಳು ಮಾತ್ರ. ಈ ಪ್ಲಾನ್‌ನಲ್ಲಿ ಒಟ್ಟು 27 GB ಡೇಟಾ ಲಬ್ಯವಿದೆ. ಈ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೌಲಭ್ಯ ಸಹ ಸಿಗಲಿದೆ.
ಏರ್‌ಟೆಲ್ 199 ರೂ. ರೀಚಾರ್ಜ್ ಪ್ಲಾನ್
ಏರ್‌ಟೆಲ್ ತನ್ನ ಗ್ರಾಹಕರಿಗೆ 199 ರೂ.ನ ಪ್ರಿಪೇಯ್ಡ್ ಪ್ಲಾನ್ ನೀಡುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು ಮಾತ್ರ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಮತ್ತು ರೋಮಿಂಗ್ ಕಾಲ್ಸ್ ಲಭ್ಯವಿದೆ. ನಿತ್ಯ 100 ಎಸ್‌ಎಂಎಸ್ ಮಾಡಬಹುದು. ಈ ಪ್ಲಾನ್‌ನಲ್ಲಿ ಕೇವಲ 2 GB ಇಂಟರ್ನೆಟ್ ಸೌಲಭ್ಯ ಮಾತ್ರ ಪಡೆಯಬಹು


Click it and Unblock the Notifications








