ಬಿಎಸ್ಎನ್ಎಲ್ ನಿಂದ 247ರೂ. ಪ್ಲ್ಯಾನ್‌! ಆಕರ್ಷಕ ಡೇಟಾ ಆಫರ್‌!

|

ಕಳೆದ ಕೆಲ ವರ್ಷಗಳಿಂದ ಭಾರತದ ಟೆಲಿಕಾಂ ವಲಯದಲ್ಲಿ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಟೆಲಿಕಾಂ ವಲಯಕ್ಕೆ ಜಿಯೋ ಎಂಟ್ರಿ ಕೊಟ್ಟ ಮೇಲೆ ಟೆಲಿಕಾಂ ಕಂಪೆನಿಗಳ ನಡುವೆ ಆಗಾಗ ದರ ಸಮರಗಳು ನಡೆಯುತ್ತಲೇ ಇವೆ. ಇದರ ನಡುವೆ ಸರ್ಕಾರ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ತನ್ನ ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ಸ್ಪರ್ಧೆ ಒಡ್ಡುತ್ತಾ ಬಂದಿದೆ. ಅಷ್ಟೇ ಅಲ್ಲ ಇತ್ತೀಚಿಗೆ 4G ನೆಟ್‌ವರ್ಕ್‌ ಸೇವೆಗೆ ಎಂಟ್ರಿ ನೀಡಿರುವ ಬಿಎಸ್ಎನ್ಎಲ್ ಅಧಿಕ ಡೇಟಾ ಪ್ಲ್ಯಾನ್‌ಗಳನ್ನ ನೀಡುತ್ತಲೇ ಬಂದಿದೆ.

ಹೌದು

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಖಾಸಗಿ ವಲಯದ ಟೆಲಿಕಾಂ ಕಂಪೆನಿಗಳ ಪೈಪೋಟಿಯ ನಡುವೆ ತನ್ನ ಗ್ರಾಹಕರಿಗೆ ಉತ್ತಮ ಪ್ಲ್ಯಾನ್‌ಗಳನ್ನ ನೀಡುತ್ತಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಘೊಷಿಸಿದೆ. ಈ ಮೂಲಕ ತನ್ನ ಖಾಸಗಿ ಟೆಲಿಕಾಂಗಳಿಗೆ ಮತ್ತೆ ಸೆಡ್ಡು ಹೊಡೆದಿದೆ. ಅಷ್ಟಕ್ಕೂ ಬಿಎಸ್ಎನ್ಎಲ್ ಘೊಷಿಸಿರುವ ಹೊಸ ಪ್ರಿಪೇಯ್ಡ್‌ ರಿಚಾರ್ಜ್‌ ಪ್ಲ್ಯಾನ್‌ ಏನು,ಇದರ ಉಪಯೋಗವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಭಾರತ್

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಹೊಸ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ. 247 ರೂ ಗಳ ಪ್ರೀಪೇಯ್ಡ್‌ ರಿಚಾರ್ಜ್‌ ಪ್ಲ್ಯಾನ್‌ ಇದಾಗಿದೆ. ಈ ಪ್ಲ್ಯಾನ್‌ ಅನ್ವಯ 30 ದಿನಗಳ ವರೆಗೆ ಪ್ರತಿನಿತ್ಯ 3GB ಹೈಸ್ಪೀಡ್‌ ಡೇಟಾ ಹಾಗೂ ಅನಿಯಮಿತ ಧ್ವನಿ ಕರೆ ಸೌಲಭ್ಯಗಳ ಪ್ರಯೋಜನಗಳನ್ನು ಹೊಂದಿದೆ. ಇದಲ್ಲದೆ ಸರ್ಕಾರಿ ಸ್ವಾಮ್ಯದ ಟೆಲ್ಕೊ ಸಹ ರೂ. 998 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಮತ್ತು ಎರಡು ತಿಂಗಳ ಅವಧಿಯ ರೂ. 1,999 ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನ ತಂದಿದೆ. ಇದು ಹರಿಯಾಣ, ಕರ್ನಾಟಕ, ಮತ್ತು ತಮಿಳುನಾಡು ಸೇರಿದಂತೆ ವಿವಿಧ ವಲಯಗಳಲ್ಲಿ ಅನ್ವಯವಾಗಲಿದೆ.

ಇನ್ನು

ಇನ್ನು ಬಿಎಸ್‌ಎನ್‌ಎಲ್ ಹೊಸ ಪ್ರಿಪೇಯ್ಡ್‌ ರಿಚಾರ್ಜ್‌ ಪ್ಲ್ಯಾನ್‌ ವಿವಿಧ ವಲಯಗಳಲ್ಲಿ ವಿವಿಧ ರೀತಿಯಲ್ಲಿ ಇದೆ. ಅದರಲ್ಲಿ ಹರಿಯಾಣ ರಾಜ್ಯದ ಸೈಟ್‌ನಲ್ಲಿನ ಪಟ್ಟಿಯ ಪ್ರಕಾರ ರೂ. 247 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಧ್ವನಿ ಕರೆಗಳನ್ನು ದಿನಕ್ಕೆ 250 ನಿಮಿಷಗಳ ಸೀಲಿಂಗ್‌ನೊಂದಿಗೆ ನೀಡಿದೆ. ಅಲ್ಲದೆ ಈ ಯೋಜನೆಯು ಲೋಕಧನ್ ವಿಷಯದ ಜೊತೆಗೆ 3 ಜಿಬಿ ಹೈಸ್ಪೀಡ್ ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಂದೇಶಗಳನ್ನು ಒಳಗೊಂಡಿದೆ. ಇದೆಲ್ಲವೂ 30 ದಿನಗಳ ಅವಧಿಯನ್ನ ಹೊಂದಿದೆ.

ಇದಲ್ಲದೆ

ಇದಲ್ಲದೆ 240 ದಿನಗಳಿಂದ 270 ದಿನಗಳವರೆಗೆ ಅನ್ವಯಿಸುವ ಬಿಎಸ್‌ಎನ್‌ಎಲ್ ರೂ. 998 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಸಹ ಘೊಷಿಸಿದೆ. ಈ ಹೊಸ ಪ್ಲ್ಯಾನ್‌ 90 ದಿನಗಳವರೆಗೆ ಪ್ರಚಾರದ ಕೊಡುಗೆಯಾಗಿ ಲಭ್ಯವಿದೆ. ಜೊತೆಗೆ ರೂ. 998 ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಯೋಜನೆಯು 2GB ಹೈಸ್ಪೀಡ್ ಡೇಟಾವನ್ನು ಪ್ರತಿದಿನವೂ ದೊರೆಯಲಿದೆ, ಜೊತೆಗೆ ಎರಡು ತಿಂಗಳವರೆಗೆ ರಿಂಗ್‌ಬ್ಯಾಕ್ ಟೋನ್ ಅನ್ನು ಸಹ ಕಲ್ಪಿಸಿದೆ.

ಬಿಎಸ್ಎನ್ಎಲ್

ಇನ್ನು ಬಿಎಸ್ಎನ್ಎಲ್ ಹೆಚ್ಚುವರಿ 60 ದಿನಗಳ ಮಾನ್ಯತೆ ಹೊಂದಿರುವ 1,999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಮತ್ತು ಇರೋಸ್ ನೌ ಸೇವೆಗೆ ಎರಡು ತಿಂಗಳ ಉಚಿತ ಅವಕಾಶವನ್ನು ಹೊಂದಿದೆ. ಇದು ಅನಿಯಮಿತ ಧ್ವನಿ ಕರೆಗಳು, 3GB ಹೈಸ್ಪೀಡ್ ದೈನಂದಿನ ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಂದೇಶಗಳನ್ನು ನೀಡುವ 1,999 ಯೋಜನೆ 365 ದಿನಗಳವರೆಗೆ ಅನ್ವಯಿಸುತ್ತದೆ, ಇದು ಮಾರ್ಚ್ 31 ರವರೆಗೆ ಈ ಪ್ಲ್ಯಾನ್‌ ಮಾನ್ಯತೆಯ ಲಾಭ ಪಡೆಯಬಹುದಾಗಿದೆ

Most Read Articles
Best Mobiles in India

English summary
The Rs. 247 BSNL prepaid recharge plan is live in circles including Haryana, Karnataka, and Tamil Nadu.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X