ಜಿಯೋಗೆ ಸೆಡ್ಡು ಹೊಡೆದ BSNL ನಿಂದ ನಿತ್ಯ 2.5 GB ಡೇಟಾ ಆಫರ್ ಘೋಷಣೆ...!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳೊಂದಿಗೆ ಸಮಬಲದ ಪ್ರದರ್ಶನವನ್ನು ನೀಡುತ್ತಿರುವ ಸರ್ಕಾರಿ ಸ್ವಾಮ್ಯದ BSNL, ಮತ್ತೊಂದು ಬಾರಿ ಹೊಸ ಮಾದರಿಯ ಪ್ಲಾನ್ ಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ನಾಚಿಕೊಳ್ಳುವಂತಹ ಆಫರ್ ಗಳನ್ನು ಲಾಂಚ್ ಮಾಡಿದ್ದು, ಬಳಕೆದಾರರಿಗೆ ಹೆಚ್ಚಿನ ಡೇಟಾ ವನ್ನು ನೀಡಲು ಮತ್ತು ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ಈಗಾಗಲೇ ಜಿಯೋ ಮತ್ತು ಏರ್ ಟೆಲ್ ಕಂಪನಿಗಳು ತಮ್ಮ ಬಳಕೆದಾರರಿಗೆ ಸಾಕಷ್ಟು ಹೆಚ್ಚು ಡೇಟಾವನ್ನು ಇರುವ ಪ್ಲಾನ್ ಗಳಿಗೆ ನೀಡುತ್ತಿವೆ. ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ BSNL ತನ್ನ ಬಳಕೆದಾರರಿಗೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾನ್ ಗಳಿಗೆ ಹೆಚ್ಚಿನ ಡೇಟಾ ಬೆನಿಫಿಟ್ ನೀಡುವ ಕ್ರಮಕ್ಕೆ ಮುಂದಾಗಿದೆ. ಇರಿಂದಗಿ ಮಾರುಕಟ್ಟೆಯಲ್ಲಿ ಹೊಸ ಅಲೆಯೂ ಎಳಲಿದ್ದು, ಮತ್ತೊಮ್ಮೆ BSNL ತನ್ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳಲು ಯೋಜನೆಯೊಂದನ್ನು ರೂಪಿಸುತ್ತಿದೆ ಎನ್ನಲಾಗಿದೆ.

ರೂ.198 ಪ್ಲಾನ್:
BSNL ಈಗಾಗಲೇ ತನ್ನ ಬಳಕೆದಾರರಿಗೆ ನೀಡಿರುವ ರೂ.198 ಪ್ಲಾನ್ ನಲ್ಲಿ ಬಳಕೆದಾರರಿಗೆ ರೂ.198 ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಸದ್ಯ ಹೆಚ್ಚಿನ ಡೇಟಾವನ್ನು ನೀಡುವ ಕ್ರಮಕ್ಕೆ ಮುಂದಾಗಿದ್ದು, ನಿತ್ಯ 2.5 GB ಡೇಟಾವನ್ನು ನೀಡಲು ಮುಂದಾಗಿದೆ. ಈ ಮಾದರಿಯ ಆಫರ್ ಅನ್ನು ಬೇರೆ ಯಾವುದೇ ನೆಟ್ ವರ್ಕ್ ನಲ್ಲಿ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ರೂ.155 ಪ್ಲಾನ್:
ಈಗಾಗಲೇ ಮಾರುಕಟ್ಟೆಯಲ್ಲಿ ಈ ಪ್ಲಾನ್ ಜಾರಿಯಲ್ಲಿದ್ದು, ಸದ್ಯ ಈ ಪ್ಲಾನ್ ಅನ್ನು ರಿವೇಜ್ ಮಾಡಿರುವ BSNL ತನ್ನ ಬಳಕೆದಾರರಿಗೆ ರೂ.155ಕ್ಕೆ ನಿತ್ಯ 2GB ಡೇಟಾವನ್ನು ನೀಡಲು ಮುಂದಾಗಿದ್ದು, ವ್ಯಾಲಿಡಿಟಿಯನ್ನು 17 ದಿನಕ್ಕೆ ನಿಗಧಿಪಡಿಸಿದೆ ಎನ್ನಲಾಗಿದೆ.

ರೂ.14ರ ಪ್ಲಾನ್:
ಇದಲ್ಲದೇ ಜಿಯೋ ಮಾದರಿಯಲ್ಲಿ ನೀಡಿರುವ BSNL ಆಡ್ ಆನ್ ಪ್ಲಾನ್ ನಲ್ಲಿ ಬಳಕೆದಾರರಿಗೆ ರೂ.14ಕ್ಕೆ ಒಂದು GB ಡೇಟಾವನ್ನು ನೀಡಲು ಮೂಮದಾಗಿದೆ. ಇದು ಒಂದು ದಿನದ ವ್ಯಾಲಿಡಿಟಿಯನ್ನು ನೀಡಲಿದೆ ಎನ್ನಲಾಗಿದೆ. ಈ ಮೊದಲು 110MB ಡೇಟಾವನ್ನು ನೀಡುತ್ತಿತು.

ರೂ.29ರ ಪ್ಲಾನ್:
ಇದು ಸಹ ಆಡ್ ಆನ್ ಪ್ಲಾನ್ ಆಗಿದ್ದು, ಬಳಕೆದಾರರಿಗೆ ಒಂದು GB ಡೇಟಾವನ್ನು ಮೂರು ದಿನಗಳ ವ್ಯಾಲಿಡಿಟಿಗೆ ನೀಡಲಿದೆ ಎನ್ನಲಾಗಿದೆ. ಜಿಯೋವನ್ನು ಬಿಟ್ಟರೇ ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ.

ರೂ.57ರ ಪ್ಲಾನ್:
ಇದಲ್ಲದೇ ರೂ.57ರ ಪ್ಲಾನ್ ಅನ್ನು ನೀಡಲಾಗಿದ್ದು, ಇದು 21 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 1 GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ಆಯ್ಕೆಗಳು ನೀಡಿದೆ ಎನ್ನಲಾಗಿದೆ.


Click it and Unblock the Notifications








