ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ..!

|

ಏರ್ ಟೆಲ್ ಮತ್ತು ವೊಡಾಫೋನ್‌ ಜೊತೆ ಸ್ಪರ್ಧೆಗೆ ಇಳಿಯುವ ಕಾರಣದಿಂದ ಬಿಎಸ್ಎನ್ಎಲ್ ಸಂಸ್ಥೆ ತನ್ನ 525 ರುಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಪ್ರೀಮಿಯಂ ಗ್ರಾಹಕರು ಎಂದು ಯಾವುದೇ ಟೆಲಿಕಾಂ ಆಪರೇಟರ್ ಗಳು ಕೂಡ ಕರೆಯಬಹುದು ಮತ್ತು ಅದೇ ಕಾರಣಕ್ಕೆ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ಇತ್ತೀಚೆಗೆ ಹಲವು ಡಾಟಾ ಮತ್ತು ಕರೆಗಳ ಅಧ್ಬುತ ಬೆನಿಫಿಟ್ ಗಳೊಂದಿಗೆ ಬರುತ್ತಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ..!

ಏರ್ ಟೆಲ್ ಮತ್ತು ವೊಡಾಫೋನ್‌ ನಂತಹ ಕಂಪೆನಿಗಳು ಹೆಚ್ಚು ಡಾಟಾಗಳನ್ನು ಆಫರ್ ಮಾಡುತ್ತಿದೆ ಮತ್ತು ಒಂದು ವೇಳೆ ನಿಗದಿಯಷ್ಟು ಡಾಟಾಗಳನ್ನು ಬಳಕೆಯಾಗದೇ ಇದ್ದಲ್ಲಿ ಅದನ್ನು ಮುಂದಿನ ತಿಂಗಳಿಗೆ ಮುಂದುವರಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದೆ. ಬಿಎಸ್ಎನ್ಎಲ್ ಇದುವರೆಗೂ ಈ ವೈಶಿಷ್ಟ್ಯತೆಯೊಂದಿಗೆ ಬಂದಿರಲಿಲ್ಲ. ಇದೀಗ ಬಿಎಸ್ಎನ್ಎಲ್ ಕೂಡ ತನ್ನ 525 ರುಪಾಯಿಯ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಈ ವೈಶಿಷ್ಟ್ಯತೆಯನ್ನು ಸೇರಿಸಿದೆ. ಬಿಎಸ್ಎನ್ಎಲ್ ಸಂಸ್ಥೆ ಹೇಳಿಕೆ ನೀಡಿರುವಂತೆ ಇದೀಗ ಸದ್ಯ ಕೋಲ್ಕತ್ತಾದಲ್ಲಿ ಮಾತ್ರ ಈ ಸೇವೆ ಲಭ್ಯವಾಗಲಿದ್ದು ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಲಭ್ಯವಾಗಲಿದೆ.

ಹೊಸ ಆಫರ್ ನಲ್ಲಿ ಏನೇನಿದೆ?

ಹೊಸ ಆಫರ್ ನಲ್ಲಿ ಏನೇನಿದೆ?

ಬಿಎಸ್ಎನ್ಎಲ್ ನ 525 ರುಪಾಯಿ ಪ್ಲಾನ್ ನಲ್ಲಿ ಅನಿಯಮಿತ ಕರೆಯನ್ನು ಭಾರತದಾದ್ಯಂತ ಎಲ್ಲಾ ನೆಟ್ ವರ್ಕ್ ಗಳಿಗೂ ನೀಡಲಾಗಿದೆ. 100ಎಸ್ಎಂಎಸ್ ಪ್ರತಿದಿನ ಉಚಿತವಾಗಿರುತ್ತದೆ. ಪ್ರತಿ ಅಂತರಾಷ್ಟ್ರೀಯ ಎಸ್ಎಂಎಸ್ ಗೆ 5 ರೂಪಾಯಿ ಚಾರ್ಜ್ ಮಾಡಲಾಗುತ್ತದೆ ಮತ್ತು 80ಜಿಬಿ ಡಾಟಾ ಸಿಗುತ್ತದೆ ಜೊತೆಗೆ 200ಜಿಬಿ ವರೆಗೆ ಡಾಟಾ ರೋಲ್ ಓವರ್ ಫೆಸಿಲಿಟಿ ಲಭ್ಯವಾಗುತ್ತದೆ.ಇದರ ಜೊತೆಗೆ ಬಿಎಸ್ಎನ್ಎಲ್ ಉಚಿತ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಒಂದು ವರ್ಷದ ಅವಧಿಗೆ ನೀಡುತ್ತದೆ.

ಪ್ರೈಮ್ ಚಂದಾದಾರಿಕೆ ಪಡೆಯಲು ಎಷ್ಟು ರೀಚಾರ್ಜ್ ಮಾಡಬೇಕು?

ಪ್ರೈಮ್ ಚಂದಾದಾರಿಕೆ ಪಡೆಯಲು ಎಷ್ಟು ರೀಚಾರ್ಜ್ ಮಾಡಬೇಕು?

ಬಿಎಸ್ಎನ್ಎಲ್ ಇತ್ತೀಚೆಗಷ್ಟೇ 1 ವರ್ಷದ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್ ಬ್ಯಾಂಡ್ ಪ್ಲಾನ್ ಗಳ ಜೊತೆಗೆ ನೀಡುವ ಬಗ್ಗೆ ಅಮೇಜಾನ್ ಜೊತೆ ಕೈಜೋಡಿಸಿರುವುದನ್ನು ಪ್ರಕಟಿಸಿತ್ತು. ಒಂದು ವರ್ಷದ ಅಮೇಜಾನ್ ಪ್ರೈಮ್ ಚಂದಾದಾರಿಕೆಯ ಬೆಲೆಯು 999 ರುಪಾಯಿಗಳು. ಆದರೆ ಇದೀಗ ಬಿಎಸ್ಎನ್ಎಲ್ ಚಂದಾದಾರರು 399 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪೋಸ್ಟ್ ಪೇಯ್ಡ್ ಪ್ಲಾನ್ ಅಥವಾ 745 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬ್ರಾಡ್ ಬ್ರ್ಯಾಂಡ್ ರಿಚಾರ್ಜ್ ಮಾಡಿಕೊಂಡಾಗ ಅಮೇಜಾನ್ ಪ್ರೈಮ್ ಸದಸ್ಯತ್ವವು ಒಂದು ವರ್ಷದ ಅವಧಿಗೆ ಉಚಿತವಾಗಿ ಲಭ್ಯವಾಗುತ್ತದೆ. ಈ ಆಫರ್ ಭಾರತದಾದ್ಯಂತ ಎಲ್ಲಾ ಬಿಎಸ್ಎನ್ಎಲ್ ಗ್ರಾಹಕರು ಪಡೆದುಕೊಳ್ಳಬಹುದು.

ಆಫರ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

ಆಫರ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?

ಮೇಲೆ ತಿಳಿಸಿರುವ ಮೊತ್ತದ ಪ್ಲಾನ್ ನ್ನು ಖರೀದಿಸಿದ ನಂತರ ಬಿಎಸ್ಎನ್ಎಲ್ ವೆಬ್ ಸೈಟ್ www.portal.bsnl.in ಗೆ ತೆರಳಿ ಮತ್ತು ವಿಶೇಷ BSNL-Amazon offer ಬ್ಯಾನರ್ ನ್ನು ಕ್ಲಿಕ್ಕಿಸಿ. ನಿಮ್ಮ ಬಿಎಸ್ಎನ್ಎಲ್ ನಂಬರ್ ನ್ನು ಕ್ಲಿಕ್ಕಿಸಿ ಮತ್ತು ಉಚಿತ ಓಟಿಪಿಯನ್ನು ಜನರೇಟ್ ಮಾಡಿಕೊಳ್ಳಿ. ಓಟಿಪಿ ಎಂಟರ್ ಮಾಡಿದ ನಂತರ ಅಮೇಜಾನ್ ಪ್ರೈಮ್ ಚಂದಾದಾರಿಕೆಯು ಆಕ್ಟಿವೇಟ್ ಆಗಿರುವ ಮೆಸೇಜ್ ನಿಮಗೆ ಲಭ್ಯವಾಗುತ್ತದೆ.ಅದನ್ನು ಕ್ಲಿಕ್ಕಿಸಿ ಮತ್ತು ಅಮೇಜಾನ್ ಲಾಗಿನ್ ಕ್ರಿಡೆನ್ಶಿಯಲ್ಸ್ ಬಳಸಿ ಅಮೇಜಾನ್ ಗೆ ಲಾಗಿನ್ ಆಗಿ. ಒಂದು ಅಕೌಂಟ್ ಇಲ್ಲದೇ ಇದ್ದರೆ ಹೊಸ ಅಮೇಜಾನ್ ಅಕೌಂಟ್ ನ್ನು ಕ್ರಿಯೇಟ್ ಮಾಡಿ. ನಂತರ ಉಚಿತ ಪ್ರೈಮ್ ಚಂದಾದಾರಿಕೆಯನ್ನು ಪಡೆದು ಅಮೇಜಾನ್ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಜಿಯೋ ಎಂದು ನಂಬಿದರೆ ಗ್ಯಾರಂಟಿ ಪಂಗನಾಮ..! ಜಿಯೋ ಹೆಸರಿನಲ್ಲಿ ನಡಿತಿದೆ ಭಾರೀ ಮೋಸ..!   Read more at: https://kannada.gizbot.com/news/beware-this-fake-jio-laptop-offer-website-018819.htmlಜಿಯೋ ಎಂದು ನಂಬಿದರೆ ಗ್ಯಾರಂಟಿ ಪಂಗನಾಮ..! ಜಿಯೋ ಹೆಸರಿನಲ್ಲಿ ನಡಿತಿದೆ ಭಾರೀ ಮೋಸ..!

ಜಿಯೋ ಎಂದು ನಂಬಿದರೆ ಗ್ಯಾರಂಟಿ ಪಂಗನಾಮ..! ಜಿಯೋ ಹೆಸರಿನಲ್ಲಿ ನಡಿತಿದೆ ಭಾರೀ ಮೋಸ..! Read more at: https://kannada.gizbot.com/news/beware-this-fake-jio-laptop-offer-website-018819.htmlಜಿಯೋ ಎಂದು ನಂಬಿದರೆ ಗ್ಯಾರಂಟಿ ಪಂಗನಾಮ..! ಜಿಯೋ ಹೆಸರಿನಲ್ಲಿ ನಡಿತಿದೆ ಭಾರೀ ಮೋಸ..!

2016ರ ನಂತರ ಭಾರತದ ಟೆಲಿಕಾಂ ಲೋಕದಲ್ಲಿ ಎಲ್ಲಿ ಕೇಳಿದರೂ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಪದ ಕೇಳುತ್ತದೆ. ಏರ್‌ಟೆಲ್‌ ಸೇರಿದಂತೆ ಇತರೆ ಟೆಲಿಕಾಂ ಆಪರೇಟರ್‌ಗಳು ಅಗ್ಗದ ದರದಲ್ಲಿ ಕರೆ ಹಾಗೂ ಡೇಟಾವನ್ನು ಗ್ರಾಹಕರಿಗೆ ನೀಡಲು ಪರೋಕ್ಷ ಅಥವಾ ಪ್ರತ್ಯಕ್ಷ ಕಾರಣವಾಗಿರುವ ಜಿಯೋ ಭಾರತದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿದೆ. ಆದರೆ, ಜಿಯೋ ಹೆಸರನಲ್ಲಿ ಬರುತ್ತಿರುವುದೆಲ್ಲಾ ಅಸಲಿಯಲ್ಲ. ಸ್ವಲ್ಪ ಯಾಮಾರಿದ್ರು ನಿಮ್ಮ ದುಡ್ಡು ಯಾರ ಬ್ಯಾಂಕ್‌ ಅಕೌಂಟ್‌ ಪಾಲಾಗುತ್ತೋ ಗೊತ್ತಿಲ್ಲ. ಹೌದು, ಜಿಯೋ ಜನಪ್ರಿಯತೆಯನ್ನೇ ಅನೇಕರು ತಮ್ಮ ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ.

ಹೌದು, ಜಿಯೋ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಅನೇಕ ವೆಬ್‌ಸೈಟ್‌ಗಳು ಸೃಷ್ಟಿಯಾಗಿದ್ದು, ಎಲ್ಲವೂ ನಕಲಿ ವೆಬ್‌ಸೈಟ್‌ಗಳೇ ಆಗಿವೆ. ಜಿಯೋ ಬಿಡುಗಡೆ ಮಾಡದ ಅನೇಕ ಉತ್ಪನ್ನಗಳನ್ನು ಇವು ಮಾರಾಟದ ಪಟ್ಟಿಯಲ್ಲಿ ಸೇರಿಸಿವೆ. ಉತ್ಪನ್ನದ ಕೆಳಗೆ ಅತಿ ಕಡಿಮೆ ದರ ನಮೂದಿಸಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಜಿಯೋ ಮೂಲಕ ಟೆಲಿಕಾಂ ಉದ್ಯಮ ಪ್ರವೇಶಿಸಿದ ಮುಖೇಶ್‌ ಅಂಬಾನಿ, ನಂತರ ಮೊಬೈಲ್‌ ಕ್ಷೇತ್ರಕ್ಕೂ ಬಂದರೂ, ಮುಂದಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಹಾಗೂ ರಿಟೇಲ್‌ ಕ್ಷೇತ್ರಕ್ಕೂ ಕೈ ಹಾಕುವುದು ಪಕ್ಕಾ ಆಗಿದೆ.

ಯಾಕೆಂದರೆ ಜಿಯೋ ಮೂಲಕ ಅಂಬಾನಿ ಏನೇ ಮುಟ್ಟಿದರೂ ಚಿನ್ನವಾಗುತ್ತಿದೆ. ಅಷ್ಟರ ಮಟ್ಟಿಗೆ ಜಿಯೋ ಜನಪ್ರಿಯತೆ ಗಳಿಸಿದೆ. ಈ ಜನಪ್ರಿಯತೆಯನ್ನು ಇಂತಹ ನಕಲಿ ವೆಬ್‌ಸೈಟ್‌ಗಳು ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಅಂತಹದ್ದೇ ಒಂದು ವೆಬ್‌ಸೈಟ್‌ನ್ನು ಜಾಲಾಡುತ್ತಾ ಹೋಗುವಾಗ ಅನೇಕ ಅಂಶಗಳು ಬಹಿರಂಗವಾಗಿವೆ. ಆಗಿದ್ದರೆ ರಿಯಾಲಿಟಿ ಚೆಕ್‌ನಲ್ಲಿ ಕಂಡಿದ್ದೇನು..? ಮುಂದೆ ನೀವೇ ನೋಡಿ.

ಜಿಯೋ ಹೆಸರಲ್ಲಿಯೇ ಹಲವು ವೆಬ್‌ಸೈಟ್‌

ಜಿಯೋ ಹೆಸರಲ್ಲಿಯೇ ಹಲವು ವೆಬ್‌ಸೈಟ್‌

ಜಿಯೋ ಜನಪ್ರಿಯತೆಯ ಲಾಭ ಮಾಡಿಕೊಳ್ಳಲು ಆ ಹೆಸರಿನಲ್ಲಿಯೇ ಅನೇಕ ವೆಬ್‌ಸೈಟ್‌ಗಳು ಸೃಷ್ಟಿಯಾಗಿವೆ. https://jioprime.org/, http://ji0daily-deals.online/index.php, http://jiodevices.online/ ನಂತಹ ಅನೇಕ ವೆಬ್‌ಸೈಟ್‌ಗಳು ಸೃಷ್ಟಿಯಾಗಿದ್ದು, ಜಿಯೋ ಹೆಸರಿನಲ್ಲಿ ಮೋಸ ಮಾಡುತ್ತಿವೆ.

599 ರೂ.ಗೆ ಜಿಯೋ ಲ್ಯಾಪ್‌ಟಾಪ್‌

599 ರೂ.ಗೆ ಜಿಯೋ ಲ್ಯಾಪ್‌ಟಾಪ್‌

ಕೆಲವು ವೆಬ್‌ಸೈಟ್‌ಗಳು ಜಿಯೋ ಸುದ್ದಿಯನ್ನು ಪ್ರಕಟಿಸಿ ಲಾಭ ಮಾಡಿಕೊಂಡರೆ. ಇನ್ನೊಂದಿಷ್ಟು ವೆಬ್‌ಸೈಟ್‌ಗಳು ಜಿಯೋ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಸೃಷ್ಟಿಸಿ ಅದನ್ನು ಗ್ರಾಹಕರಿಗೆ ಕಡಿಮೆ ದರಕ್ಕೆ ಪ್ರದರ್ಶಿಸಿ ಗ್ರಾಹಕರ ಹಣವನ್ನು ಕೊಳ್ಳೆ ಹೊಡೆಯುತ್ತಿವೆ. ಅದರಂತೆ http://ji0daily-deals.online/ ಡೊಮೇನ್‌ ಹೊಂದಿರುವ ಜಿಯೋ ಸ್ಟೋರ್‌ ವೆಬ್‌ಸೈಟ್‌ನಲ್ಲಿ 599 ರೂ.ಗೆ ಜಿಯೋ ಲ್ಯಾಪ್‌ಟಾಪ್‌ ಮಾರಾಟವಾಗುತ್ತಿದೆ.

ಲ್ಯಾಪ್‌ಟಾಪ್‌ ಅಷ್ಟೇ ಅಲ್ಲ

ಲ್ಯಾಪ್‌ಟಾಪ್‌ ಅಷ್ಟೇ ಅಲ್ಲ

ನಕಲಿ ಜಿಯೋ ಸ್ಟೋರ್‌ನಲ್ಲಿ ಕೇವಲ ಲ್ಯಾಪ್‌ಟಾಪ್‌ ಅಷ್ಟೇ ಅಲ್ಲ. ಜಿಯೋ ಟ್ಯಾಬ್ಲೆಟ್‌, ಜಿಯೋ LYF C459, ಜಿಯೋ ಫೋನ್‌ 2, JioFi M2, Jio Phone, Jio ಸ್ಮಾರ್ಟ್‌ವಾಚ್‌, ಜಿಯೋ ಫಿಟ್‌ನೆಸ್‌ ಟ್ರಾಕರ್‌ಗಳು ಮಾರಾಟಕ್ಕಿವೆ. ಅದು ಕಡಿಮೆ ದರದಲ್ಲಿ ಎನ್ನುವುದು ಮೋಸದ ಇನ್ನೊಂದು ರೂಪ.

ಆಕರ್ಷಕ ದರವೇ ಮೋಸಕ್ಕೆ ಮೆಟ್ಟಿಲು

ಆಕರ್ಷಕ ದರವೇ ಮೋಸಕ್ಕೆ ಮೆಟ್ಟಿಲು

ನಕಲಿ ಜಿಯೋ ಸ್ಟೋರ್‌ ಆಪ್‌ನಲ್ಲಿ ಜಿಯೋ ಲ್ಯಾಪ್‌ಟಾಪ್‌ 599 ರೂ. ಆದರೆ, ಜಿಯೋ ಟ್ಯಾಬ್ಲೆಟ್‌ 549 ರೂ., ಜಿಯೋ LYF C459 449 ರೂ., ಜಿಯೋ ಫೋನ್‌ 2 499 ರೂ., JioFi M2 349 ರೂ., Jio Phone 299 ರೂ., Jio ಸ್ಮಾರ್ಟ್‌ವಾಚ್‌ 199 ರೂ., ಜಿಯೋ ಫಿಟ್‌ನೆಸ್‌ ಟ್ರಾಕರ್‌ 99 ರೂ. ಅಂತೆ. ನೋಡಿ ಹೇಗೆ ಏರಿಕೆ ಕ್ರಮದಿಂದ ಇಳಿಕೆ ಕ್ರಮದಲ್ಲಿ ದರಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿದ್ದಾರೆ.

ನಕಲಿ ಎನ್ನಲು ಕಾರಣಗಳಿವೆ..!

ನಕಲಿ ಎನ್ನಲು ಕಾರಣಗಳಿವೆ..!

ಈ ಜಿಯೋ ಸ್ಟೋರ್‌ನ್ನು ನಕಲಿ ಎನ್ನಲು ಕಡಿಮೆ ದರಕ್ಕೆ ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಮಾತ್ರ ಕಾರಣವಲ್ಲ. http://ji0daily-deals.online/ ಡೋಮೆನ್‌ ನೇಮ್‌ನ್ನು ಸೂಕ್ಷ್ಮವಾಗಿ ನೀವು ಗಮನಿಸಿದರೆ, ಇಂಗ್ಲಿಷ್‌ನ jio ಹೀಗಿರಬೇಕಿತ್ತು. ಆದರೆ ಡೋಮೆನ್‌ ನೇಮ್‌ನಲ್ಲಿ ji0 ಈ ರೀತಿ ಇದೆ. o ಬದಲಿಗೆ 0 ಬಳಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅದಲ್ಲದೇ ಇಲ್ಲಿ ನೀವು ಜಿಯೋ ತಯಾರಿಸದ ಹಲವು ಉತ್ಪನ್ನಗಳನ್ನು ನೋಡಬಹುದು. ಪಟ್ಟಿಯಲ್ಲಿನ ಜಿಯೋ ಫೋನ್‌ ಚಿತ್ರ ಕೂಡ ಸ್ಮಾರ್ಟ್‌ಫೋನ್‌ನಂತಿದೆ. ಆದರೆ, ಅಸಲಿಗೆ ಜಿಯೋ ಫೋನ್‌ ಫೀಚರ್ ಫೋನ್‌ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಪೇಟಿಎಂ ಮೂಲಕ ಪೇಮೆಂಟ್‌ಗೆ ಅವಕಾಶ

ಪೇಟಿಎಂ ಮೂಲಕ ಪೇಮೆಂಟ್‌ಗೆ ಅವಕಾಶ

ನಕಲಿ ಜಿಯೋ ಸ್ಟೋರ್‌ನಲ್ಲಿ ನೇರವಾಗಿ ಪೇಟಿಎಂ ಮೂಲಕ ಹಣ ಕಳಿಸುವ ಆಯ್ಕೆಯನ್ನು ವೆಬ್‌ಸೈಟ್‌ ರೂಪಿಸಿರುವವರು ಸುಲಭವಾಗಿಯೇ ಸೃಷ್ಟಿಸಿದ್ದಾರೆ. ನೀವು ಚೆಕ್‌ಔಟ್‌ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಆಯ್ಕೆಯ ಉತ್ಪನ್ನದ ಯಾವುದೇ ಸ್ಪೇಷಿಪಿಕೇಶನ್, ಫೀಚರ್‌ಗಳನ್ನು ತೋರಿಸದೆ ನೇರವಾಗಿ ನಿಮ್ಮ ವಿವರಗಳನ್ನು ಕೇಳುತ್ತದೆ. ಅಲ್ಲಿ ವಿವರಗಳನ್ನು ನಮೂದಿಸಿದರೆ ಪೇಟಿಎಂ ಮೂಲಕ ನೇರವಾಗಿ ನಕಲಿ ಜಿಯೋ ಸ್ಟೋರ್‌ ವೆಬ್‌ಸೈಟ್‌ಗೆ ಹಣ ಪಾವತಿಯಾಗುತ್ತದೆ.

ವೆಬ್‌ಸೈಟ್‌ ಭಾರತದ್ದಲ್ಲ

ವೆಬ್‌ಸೈಟ್‌ ಭಾರತದ್ದಲ್ಲ

599 ರೂ.ಗೆ ಜಿಯೋ ಲ್ಯಾಪ್‌ಟಾಪ್‌ ನೀಡುವ ನಕಲಿ ಜಿಯೋ ಸ್ಟೋರ್‌ನ http://ji0daily-deals.online/ ಡೋಮೇನ್ ಭಾರತದ್ದಲ್ಲ ಎನ್ನುವುದು ಇನ್ನೊಂದು ಆತಂಕಕಾರಿ ಅಂಶ. ಅನೇಕ ಕ್ರಾಸ್‌ ಚೆಕ್‌ಗಳನ್ನು ಮಾಡಿದಾಗ ಈ ವೆಬ್‌ಸೈಟ್‌ನ ಐಪಿ ಅಮೇರಿಕಾದ ನ್ಯೂಜೆರ್ಸಿಯ ಪಿಕ್ಸಟಾವೇ ಮತ್ತು ನ್ಯೂಯಾರ್ಕ್‌ನಲ್ಲಿರುವುದು ಕಂಡು ಬಂದಿದೆ. ಅದಲ್ಲದೇ ವೆಬ್‌ಸೈಟ್‌ನಲ್ಲಿ ಕ್ಯಾಲಿಪೋರ್ನಿಯಾದ ಕುಪರ್ಟಿನೋ ನಗರದ ಹೆಸರು ಕಾಣುತ್ತಿರುವುದು ವೆಬ್‌ಸೈಟ್‌ ಭಾರತದ್ದಲ್ಲ ಎಂಬುದು ಪಕ್ಕಾ.

ಇದೇನು ಮೊದಲಲ್ಲ

ಇದೇನು ಮೊದಲಲ್ಲ

ಜಿಯೋ ಹೆಸರಿನಲ್ಲಿ ನಡೆಯುತ್ತಿರುವ ಕೊಳ್ಳೆ ಇದೇ ಮೊದಲೆನಲ್ಲ, ಇದಕ್ಕೂ ಮುಂಚೆ ಜಿಯೋ ಕಾಯಿನ್‌ ಎನ್ನುವ ಕ್ರಿಪ್ಟೋಕರೆನ್ಸಿಯನ್ನು ರಿಲಾಯನ್ಸ್‌ ಪ್ರಾರಂಭ ಮಾಡಿದ್ದು, jio coin ಎಂಬ ನಕಲಿ ವೆಬ್‌ಸೈಟ್‌ ಕಡಿಮೆ ದರದಲ್ಲಿ ಜಿಯೋ ಕಾಯಿನ್‌ ಖರೀದಿಸುವ ಆಯ್ಕೆ ನೀಡಿ ಜನರನ್ನು ಮೋಸ ಮಾಡಿತ್ತು. ಜಿಯೋ ಕಾಯಿನ್‌ಗೆ ಸಂಬಂಧಿಸಿದಂತೆ ಪ್ಲೇ ಸ್ಟೋರ್‌ನಲ್ಲಿ 22ಕ್ಕೂ ಹೆಚ್ಚು ನಕಲಿ ಆಪ್‌ಗಳು ಜನವರಿಯಲ್ಲಿ ಪತ್ತೆ ಆಗಿದ್ದವು.

ಜಿಯೋ ಟವರ್ ಹೆಸರಿನಲ್ಲೂ ಮೋಸ

ಜಿಯೋ ಟವರ್ ಹೆಸರಿನಲ್ಲೂ ಮೋಸ

ರಾಷ್ಟ್ರೀಯ ಗ್ರಾಹಕರ ದೂರು ವೇದಿಕೆಯಲ್ಲಿ ಜಿಯೋ ಟವರ್ ಹೆಸರಿನಲ್ಲಿ ನಡೆದಿರುವ ಮೋಸದ ಕುರಿತು ಅನೇಕ ದೂರುಗಳು ಸಲ್ಲಿಕೆಯಾಗಿವೆ. ಇವುಗಳು ಕೂಡ ನಕಲಿ ವೆಬ್‌ಸೈಟ್‌ಗಳಿಂದ ಎನ್ನುವುದು ಗಮನಿಸಬೇಕಾದ ಅಂಶ. http://jiotowers.net.in/ ಮತ್ತು http://myjiotower.com/ ಎನ್ನುವ ವೆಬ್‌ಸೈಟ್‌ಗಳು ಗ್ರಾಹಕರು ಸಲ್ಲಿಸಿರುವ ದೂರಿನಲ್ಲಿ ಸೇರಿವೆ.

ಅಧಿಕೃತ ವೆಬ್‌ಸೈಟ್‌ ಇದೊಂದೆ

ಅಧಿಕೃತ ವೆಬ್‌ಸೈಟ್‌ ಇದೊಂದೆ

ರಿಲಾಯನ್ಸ್‌ ಜಿಯೋ ತನ್ನ ಬಳಕೆದಾರರಿಗಾಗಿ ಅಧಿಕೃತ ವೆಬ್‌ಸೈಟ್‌ ಒಂದನ್ನು ಘೋಷಿಸಿದ್ದು, ಜಿಯೋದ ಎಲ್ಲಾ ಘೋಷಣೆಗಳು, ಆಫರ್‌ಗಳು, ಉತ್ಪನ್ನಗಳು ಅದರಲ್ಲಿ ದೊರೆಯುತ್ತವೆ. https://www.jio.com/ ಇದರ ಮೂಲಕ ಜಿಯೋದ ಆನ್‌ಲೈನ್‌ ವ್ಯವಹಾರಗಳು ನಡೆಯುತ್ತವೆ. ಆದ್ದರಿಂದ ಗ್ರಾಹಕರು ಯಾವುದೇ ಆಫರ್‌ಗಳಿಗೆ ಮೋಸ ಹೋಗಿ ದುಡ್ಡು ಕಳೆದುಕೊಳ್ಳಬೇಡಿ.

Read more at: https://kannada.gizbot.com/news/beware-this-fake-jio-laptop-offer-website/articlecontent-pf103193-018819.html

Best Mobiles in India

English summary
BSNL revamps Rs 525 postpaid plan to offer 80GB data, unlimited voice calls and more. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X