Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ ಈ ಪ್ರಿಪೇಯ್ಡ್‌ ಪ್ಲ್ಯಾನ್‌ನಲ್ಲಿ ಹೊಸ ಬದಲಾವಣೆ!

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪೆನಿಗಳು ಸದ್ದಿಲ್ಲದೆ ತಮ್ಮ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಬೆಲೆಯನ್ನು ಹೆಚ್ಚು ಮಾಡಿವೆ. ಇದರಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಮತ್ತು ವಿ ತಮ್ಮ ಕೆಲವು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಿಗೆ ಟಾರಿಫ್‌ ಅನ್ನು ಹೆಚ್ಚಿಸಿವೆ. ಸದ್ಯ ಇದೀಗ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಕೂಡ ತನ್ನ ಕೆಲವು ಯೋಜನೆಗಳಿಗೆ ಪರೋಕ್ಷವಾಗಿ ಸುಂಕವನ್ನು ಹೆಚ್ಚಿಸಿದೆ. ಅಂದರೆ ಯೋಜನೆಯ ಬೆಲೆ ಒಂದೇ ಆಗಿರುತ್ತದೆ ಆದರೆ ಪ್ರಯೋಜನಗಳನ್ನು ಕಡಿಮೆಮಾಡಿದೆ.

ಬಿಎಸ್‌ಎನ್ಎಲ್‌

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್‌ ತನ್ನ ಪ್ಲ್ಯಾನ್‌ಗಳಲ್ಲಿ ಕೆಲವು ಮಹತ್ತರ ಬದಲಾವಣೆ ಮಾಡಿದೆ. ಸದ್ಯ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಟಾರಿಫ್‌ ಅನ್ನು ಜಾಸ್ತಿ ಮಾಡಿದ್ದು, ಪ್ಲ್ಯಾನ್‌ಗಳ ಮಾನ್ಯತೆ ಅವಧಿಯನ್ನು ಕಡಿಮೆ ಮಾಡಿದೆ. ಅಂದರೆ BSNL ಯೋಜನೆಗಳ ಬೆಲೆ ಒಂದೇ ಆಗಿದ್ದರೂ, ಅದರಿಂದ ನೀವು ಪಡೆದುಕೊಳ್ಳುವ ಮಾನ್ಯತೆ ಅವಧಿ ಕಡಿಮೆ ಆಗಲಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ನ ಯಾವ ಪ್ಲ್ಯಾನ್‌ಗಳಲ್ಲಿ ಈ ರೀತಿಯ ಬದಲಾವಣೆಯನ್ನು ಕಾಣಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

BSNL

BSNL ತನ್ನ ಪ್ರಿಪೇಯ್ಡ್‌ ಪ್ಲ್ಯಾನ್‌ಗಳಲ್ಲಿ 49ರೂ, 75,ರೂ .94ರೂ ಮತ್ತು 106ರೂ, 107ರೂ, 197ರೂ, ಮತ್ತು 77ರೂ,ಅನ್ನು ಕಡಿಮೆ ಮಾಡಿದೆ. ಈ ಬದಲಾವಣೆಗಳು ಆಗಸ್ಟ್ 1 ರಂದು ಆಗಿದೆ. ಇನ್ನು 49ರೂ, ಬೆಲೆಯ ಪ್ರವೇಶ ಮಟ್ಟದ ವಿಶೇಷ ಪ್ಲ್ಯಾನ್‌ನಲ್ಲಿ ಈ ಹಿಂದೆ 28 ದಿನಗಳ ಮಾನ್ಯತೆಯನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಈ ಪ್ಲ್ಯಾನ್‌ ಕೇವಲ 24 ದಿನಗಳಿಗೆ ಮಾತ್ರ ಸೀಮಿತವಾಗಿದೆ. ಈ ಫ್ಲ್ಯಾನ್‌ ಅನ್ನು ತಮ್ಮ ಯೋಜನೆಗಳನ್ನು ಸಕ್ರಿಯವಾಗಿಡಲು ಬಯಸುವ ಗ್ರಾಹಕರು ಬಳಸಬಹುದು. ಇನ್ನು ಈ ಫ್ಲ್ಯಾನ್‌ನಲ್ಲಿ ಪ್ರತಿ ನಿಮಿಷಕ್ಕೆ 45 ಪೈಸೆ ರಿಯಾಯಿತಿ ದರದ ಕರೆ ದರ, 2 ಜಿಬಿ ಉಚಿತ ಡೇಟಾ ಮತ್ತು ಯಾವುದೇ ವ್ಯಾಲಿಡಿಟಿ ಅವಧಿಗೆ ಒಟ್ಟು 100 ಉಚಿತ ಎಸ್‌ಎಂಎಸ್‌ಗಳನ್ನು ಅನುಮತಿಸುತ್ತದೆ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ನ 75ರೂ. ಪ್ಲ್ಯಾನ್‌ ಮಾನ್ಯತೆ ಅವಧಿ ಕೂಡ ಇದೀಗ 50 ದಿನಗಳಿಗೆ ಇಳಿದಿದೆ. ಈ ಪ್ಲ್ಯಾನ್‌ ಯಾವುದೇ ನೆಟ್‌ವರ್ಕ್‌ಗೆ 100 ನಿಮಿಷಗಳ ಉಚಿತ ಧ್ವನಿ ಕರೆಗಳನ್ನು, 2GB ಉಚಿತ ಡೇಟಾ ಮತ್ತು 50 ದಿನಗಳವರೆಗೆ ಉಚಿತ BSNL ಡೀಫಾಲ್ಟ್ ಟ್ಯೂನ್‌ಗಳನ್ನು ನೀಡುತ್ತದೆ. ಉಚಿತ ಕರೆಗಳ ನಂತರ, ಟೆಲ್ಕೊ ಹೊರಹೋಗುವ ಕರೆಗಳಿಗೆ ನಿಮಿಷಕ್ಕೆ 30 ಪೈಸೆ ವಿಧಿಸುತ್ತದೆ.

ಬಿಎಸ್‌ಎನ್‌ಎಲ್‌

ಅದೇ ರೀತಿ ಬಿಎಸ್‌ಎನ್‌ಎಲ್‌ನ 94 ರೂ ಪ್ಲ್ಯಾನ್‌ ಈ ಹಿಂದೆ ಇದ್ದ 90 ದಿನಗಳ ಮಾನ್ಯತೆ ಬದಲಿಗೆ 75 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಪ್ಲ್ಯಾನ್‌ನಲ್ಲಿ 75 ದಿನಗಳವರೆಗೆ 3GB ಉಚಿತ ಡೇಟಾವನ್ನು ನೀಡುತ್ತದೆ. ಇದು ಮೊದಲ 60 ದಿನಗಳವರೆಗೆ ಉಚಿತ ಬಿಎಸ್‌ಎನ್‌ಎಲ್ ಡೀಫಾಲ್ಟ್ ಟ್ಯೂನ್‌ಗಳನ್ನು ಸಹ ನೀಡುತ್ತದೆ. ಉಚಿತ ಕರೆಗಳ ನಂತರ, ಎಲ್ಲಾ ಹೊರಹೋಗುವ ಧ್ವನಿ ಕರೆಗಳಿಗೆ ನಿಮಿಷಕ್ಕೆ 30 ಪೈಸೆ ಶುಲ್ಕ ವಿಧಿಸಲಾಗುತ್ತದೆ.

ಬಿಎಸ್‌ಎನ್‌ಎಲ್‌

ಇನ್ನು ಬಿಎಸ್‌ಎನ್‌ಎಲ್‌ನ 106ರೂ, ಮತ್ತು 107ರೂ, ಬೆಲೆಯ ಪ್ಲಾನ್ ‌ನಲ್ಲಿ ಕೂಡ ಬದಲಾವಣೆ ಕಂಡು ಬರುತ್ತಿದ್ದು, ಪ್ರಸ್ತುತ 100 ದಿನಗಳ ವ್ಯಾಲಿಡಿಟಿಗೆ ಬದಲಾಗಿ 84 ದಿನಗಳ ವ್ಯಾಲಿಡಿಟಿಯನ್ನು ನೀಡಲು ಯೋಜನೆಗಳನ್ನು ಪರಿಷ್ಕರಿಸಲಾಗಿದೆ. ಈ ಎರಡೂ ಪ್ಲಾನ್ ಗಳು ಯಾವುದೇ ನೆಟ್‌ವರ್ಕ್‌ಗೆ 100 ನಿಮಿಷಗಳ ಉಚಿತ ಕರೆಗಳನ್ನು, 84 ದಿನಗಳವರೆಗೆ 3GB ಉಚಿತ ಡೇಟಾವನ್ನು ನೀಡುತ್ತವೆ. ಗ್ರಾಹಕರು 60 ದಿನಗಳವರೆಗೆ ಉಚಿತ ಬಿಎಸ್‌ಎನ್‌ಎಲ್ ಡೀಫಾಲ್ಟ್ ಟ್ಯೂನ್‌ಗಳನ್ನು ಆನಂದಿಸಬಹುದು.

Best Mobiles in India

English summary
BSNL prepaid plans starting at Rs 49 will now give reduced validity.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+