Home
ಸುದ್ದಿಜಾಲ

349 ರುಪಾಯಿ ವ್ಯಾಲಿಡಿಟಿ ಪ್ಲಾನ್ ನ್ನು ಬದಲಾಯಿಸಿದ ಬಿಎಸ್ಎನ್ಎಲ್- ಇದೀಗ 64 ದಿನಗಳಿಗೆ 3.2ಜಿಬಿ ಪ್ರತಿದಿನ ಡಾಟಾ ಉಚಿತ

By Gizbot Bureau

ಇತ್ತೀಚೆಗೆ ಬಿಎಸ್ಎನ್ಎಲ್ ತನ್ನ ಹಲವಾರು ರಿಚಾರ್ಜ್ ಪ್ಲಾನ್ ಗಳನ್ನು ಬದಲಾಯಿಸುತ್ತಿದೆ. ಇದೀಗ ಸದ್ಯವಿರುವ ಪ್ರಿಪೇಯ್ಡ್ ಪ್ಲಾನ್ ವೊಂದರಲ್ಲಿ ಬದಲಾವಣೆಯನ್ನು ಮಾಡಲಾಗಿದೆ.ಸದ್ಯ ಲಭ್ಯವಿರುವ 349 ರುಪಾಯಿ ಪ್ಲಾನ್ ನಲ್ಲಿ ನೀಡಲಾಗುತ್ತಿರುವ ಬೆನಿಫಿಟ್ ಗಳಲ್ಲಿ ಬದಲಾವಣೆ ಆಗಿದೆ. 64 ದಿನಗಳ ಅವಧಿಗೆ ಈ ಪ್ಲಾನಿನ ವ್ಯಾಲಿಡಿಟಿಯನ್ನು ಹೆಚ್ಚಿಸಲಾಗಿದೆ.

ಹೆಚ್ಚುವರಿ ಡಾಟಾ ಆಫರ್:

ಹೆಚ್ಚುವರಿ ಡಾಟಾ ಆಫರ್:

ಬಿಎಸ್ಎನ್ಎಲ್ ಇದೀಗ ಹೆಚ್ಚುವರಿ ಡಾಟಾ ಆಫರ್ ನ್ನು ನೀಡುತ್ತಿದ್ದು ಸದ್ಯ ಇರುವ ಪ್ಲಾನ್ ಗಳಿಗೆ ಹೆಚ್ಚುವರಿ 2.2ಜಿಬಿ ಪ್ರತಿದಿನ ಡಾಟಾವನ್ನು ನೀಡುತ್ತಿದೆ. ಈ ಆಫರ್ ರುಪಾಯಿ 349 ಪ್ಲಾನ್ ನಲ್ಲೂ ಬರುತ್ತದೆ.ಈ ಆಫರ್ ನ ಭಾಗವಾಗಿ ಇದೀಗ ಬಿಎಸ್ಎನ್ಎಲ್ 3.2ಜಿಬಿ ಡಾಟಾವನ್ನು ರುಪಾಯಿ 349 ರೀಚಾರ್ಜ್ ಮಾಡಿಕೊಂಡಿರುವ ಗ್ರಾಹಕರಿಗೆ ಲಭ್ಯವಾಗುತ್ತದೆ. ಇದರ ಜೊತೆಗೆ ಬಿಎಸ್ಎನ್ಎಲ್ ಡಾಟಾ ಮುಗಿದ ನಂತರದ FUP ಸ್ಪೀಡ್ ನ್ನು ಕೂಡ 40Kbps ಗೆ ಹೆಚ್ಚಿಸಿದೆ.

ಇದೆಲ್ಲದರ ಜೊತೆಗೆ ಗ್ರಾಹಕರಿಗೆ ಅನಿಯಮಿತ ಉಚಿತ ವಾಯ್ಸ್ ಕರೆಗಳು ಮತ್ತು 100ಎಸ್ಎಂಎಸ್ ಗಳನ್ನು ಪ್ರತಿದಿನ ದೇಶದಾದ್ಯಂತ ಕಳುಹಿಸಿವುದಕ್ಕೆ ಅವಕಾಶವಿರುತ್ತದೆ. ಅದರಲ್ಲಿ ದೆಹಲಿ ಮತ್ತು ಮುಂಬೈ ಸರ್ಕಲ್ ಗೂ ಕೂಡ ಕಳುಹಿಸಬಹುದು. ಇದರ ಅವಧಿ 64 ದಿನಗಳಾಗಿರುತ್ತದೆ.

ಹಲವು ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ

ಹಲವು ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ

ಬಿಎಸ್ಎನ್ಎಲ್ ಕಳೆದ ವರ್ಷ ಜೂನ್ ನಲ್ಲಿ ಕೆಲವು ಪ್ರೀಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆಗಳನ್ನು ಮಾಡಿತ್ತು. ಹೆಚ್ಚು ಡಾಟಾವನ್ನು ನೀಡುವ ನಿರ್ಧಾರವನ್ನು ಕೈಗೊಂಡಿತ್ತು. Rs 14, Rs 19, Rs 40 ಮತ್ತು Rs 57 ರ ಪ್ಲಾನ್ ನಲ್ಲಿ ಹೆಚ್ಚು ಡಾಟಾ ಲಭ್ಯವಾಗಲು ಆರಂಭವಾಗಿತ್ತು. ಇದೀಗ ಬಿಎಸ್ಎನ್ಎಲ್ Rs 14 ಪ್ಲಾನ್ ನಲ್ಲಿ 110ಎಂಬಿ ಡಾಟಾ ಬದಲಾಗಿ 1ಜಿಬಿ ಡಾಟಾವನ್ನು ಪ್ರತಿನಿತ್ಯ ನೀಡುತ್ತದೆ. Rs 29 ಪ್ಲಾನ್ 150ಎಂಬಿ ಡಾಟಾದ ಬದಲಾಗಿ 1ಜಿಬಿ ಡಾಟಾವನ್ನು ಪ್ರತಿದಿನ ಮೂರು ದಿನಗಳ ಅವಧಿಗೆ ನೀಡುತ್ತದೆ. ಬಿಎಸ್ಎನ್ಎಲ್ 10 ರುಪಾಯಿ ಮತ್ತು 57 ರುಪಾಯಿ ಪ್ಲಾನ್ ನಲ್ಲೂ ಕೂಡ ಬದಲಾಯಿಸಿ 1ಜಿಬಿ ಡಾಟಾವನ್ನು ಪ್ರತಿದಿನ ನೀಡುವ ನಿರ್ಧಾರ ಕೈಗೊಂಡಿತ್ತು.

ಡಾಟಾ ಆಫರ್:

ಡಾಟಾ ಆಫರ್:

ಬಿಎಸ್ಎನ್ಎಲ್ ಜನವರಿ ಹೆಚ್ಚುವರಿ ಡಾಟಾವನ್ನು ಬಳಕೆದಾರರಿಗೆ ನೀಡುವ ಬಗ್ಗೆ ಪ್ರಕಟಿಸಿತ್ತು. ಆಫರ್ ನ ಆರಂಭದಲ್ಲಿ 2.2ಜಿಬಿ ಹೆಚ್ಚುವರಿ ಡಾಟಾವಾಗಿತ್ತು. ನಂತರ ಅದನ್ನು 2.21ಜಿಬಿ ಗೆ ಬದಲಾಯಿಸಲಾಯಿತು. ಜನವರಿಯಲ್ಲಿ ಕಂಪೆನಿಯು ಪುನಃ ಇದನ್ನು ಬದಲಾಯಿಸಿ 2.2ಜಿಬಿ ಗೆ ಫಿಕ್ಸ್ ಮಾಡಿತು.

ಅಷ್ಟೇ ಅಲ್ಲದೆ ಕೆಲವು ಹೊಸ ಪ್ಲಾನ್ ಗಳನ್ನು ಕೂಡ ಕಂಪೆನಿ ಸೇರಿಸಿತ್ತು. ಸದ್ಯ ಬಿಎಸ್ಎನ್ಎಲ್ ನಲ್ಲಿ ಹೆಚ್ಚುವರಿ ಡಾಟಾ ಆಫರ್ ಗಳಿಗಾಗಿ Rs 186, STV 187, STV 333, STV 349, STV 444, STV 448, STV 1699, STV 2099, Rs 429, Rs 485, Rs 666 ಮತ್ತು Rs 999 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳು ಲಭ್ಯವಿದೆ.

98ರುಪಾಯಿ ಪ್ಲಾನ್ ನಲ್ಲೂ ಬದಲಾವಣೆ:

98ರುಪಾಯಿ ಪ್ಲಾನ್ ನಲ್ಲೂ ಬದಲಾವಣೆ:

ಬಿಎಸ್ಎನ್ಎಲ್ ಇತ್ತೀಚೆಗೆ ರುಪಾಯಿ 98 ರ ಪ್ಲಾನ್ ನ್ನು ಕೂಡ ಬದಲಾಯಿಸಿ ಅದರಲ್ಲಿ 1.5ಜಿಬಿ ಡಾಟಾ ಪ್ರತಿದಿನ ನೀಡುವ ಬದಲಾಗಿ 2ಜಿಬಿ ಡಾಟಾವನ್ನು ನೀಡುವ ನಿರ್ಧಾರ ಮಾಡಿದೆ ಮತ್ತು ಪೋಸ್ಟ್ FUP ವೇಗವು 40 Kbps ಆಗಿದೆ. 24 ದಿನಗಳ ಅವಧಿಯ ಪ್ಲಾನ್ ಇದಾಗಿದೆ. ಹಾಗಾಗಿ ಈ ಪ್ಲಾನ್ ನ ಅಡಿಯಲ್ಲಿ ಇದೀಗ 39ಜಿಬಿ ಡಾಟಾದ ಬದಲಾಗಿ 48ಜಿಬಿ ಡಾಟಾವು ಲಭ್ಯವಾಗುತ್ತದೆ. ಇದಿಷ್ಟೇ ಅಲ್ಲದೆ ಈ ಪ್ಲಾನ್ ನಲ್ಲಿ EROS ನೌ ಚಂದಾದಾರಿಕೆ ಸಿಗುತ್ತದೆ. ಈ ಮೊದಲು ಕೇವಲ 78 ರುಪಾಯಿ ರೀಚಾರ್ಜ್ ಪ್ಲಾನ್ ನಲ್ಲಿ ಮಾತ್ರವೇ ಇದು ಸಿಗುತ್ತಿತ್ತು.

Best Mobiles in India

English summary
BSNL revises validity of Rs 349 plan, now offers 3.2GB daily data for 64 day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+