ಜಿಯೋಗೆ ಮತ್ತೊಂದು ಗುದ್ದು ನೀಡಿದ ಬಿಎಸ್ಎನ್ಎಲ್..ದೈನಂದಿನ ಡೇಟಾ 2ಜಿಬಿಗೆ ಹೆಚ್ಚಳ..!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ಮುಂದುವರೆದಿದ್ದು, ಜಿಯೋ ನೀಡಿದ ಹೆಚ್ಚುವರಿ 1.5GB ಡೇಟಾದ ಡಬಲ್ ಧಮಾಕಾ ಆಫರರ್ ಎದುರು ಎಲ್ಲಾ ಟೆಲಿಕಾಂ ಆಪರೇಟರ್ ಗಳು ಮಂಕಾಗಿದ್ದವು. ಆದರೆ, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮಾತ್ರ ಜಿಯೋಗೆ ಪ್ರತಿಯಾಗಿ ಆಫರ್ ನೀಡುತ್ತಿದ್ದು, ದರ ಸಮರವನ್ನು ಮುಂದುವರೆಸುತ್ತಿವೆ.
ಜಿಯೋ ನೀಡಿದ ಡಬಲ್ ಧಮಾಕಾ ಆಫರ್ ಗೆ ಏರ್ ಟೆಲ್ ಅಥವಾ ವೊಡಾಪೋನ್ ಆಫರ್ ನೀಡುತ್ತವೆ ಎಂದು ಟೆಲಿಕಾಂ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಈ ಆಫರ್ ಗೆ ಪ್ರತಿಯಾಗಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೆಚ್ಚುವರಿ ಡೇಟಾ ನೀಡಿದೆ. ಮೊನ್ನೆ ತಾನೇ ಫಿಫಾ ವಿಶ್ವಕಪ್ ಗೆ ದಿನಕ್ಕೆ 4GB ಡೇಟಾ ಆಫರ್ ನೀಡಿದ್ದ ಬಿಎಸ್ಎನ್ಎಲ್ ಈಗ ಆಯ್ದ 5 ಪ್ಲಾನ್ ಗಳಿಗೆ ದಿನಕ್ಕೆ 2GB ಡೇಟಾ ನೀಡಿದೆ.


ಯಾವ್ಯಾವ ಪ್ಲಾನ್ ನಲ್ಲಿ ಹೆಚ್ಚಳವಾಗಲಿದೆ ಡೇಟಾ
ಬಿಎಸ್ಎನ್ಎಲ್ ನ ಹೊಸ 2GB ಡೇಟಾ ಆಫರ್ ಆಯ್ದ 5 ಪ್ಲಾನ್ ಗಳನ್ನು ಒಳಗೊಂಡಿದೆ. 186 ರೂ., 429 ರೂ., 485 ರೂ.,666 ರೂ. ಮತ್ತು 999 ರೂ.ಗಳ ಅನ್ ಲಿಮಿಟೆಡ್ ಪ್ಲಾನ್ ಗಳಲ್ಲಿ ಗ್ರಾಹಕರು ದಿನಕ್ಕೆ 1GB ಮತ್ತು 1.5GB ಡೇಟಾ ಪಡೆಯುತ್ತಿದ್ದರು. ಆದರೆ, ಈಗ ಬಿಎಸ್ಎನ್ಎಲ್ ಈ ಪ್ಲಾನ್ ಗಳ ಡೇಟಾ ಮಿತಿ ಹೆಚ್ಚಿಸಿದ್ದು, ದಿನಕ್ಕೆ 2GB ಡೇಟಾ ಪಡೆಯುತ್ತಾರೆ.

ಅನ್ ಲಿಮಿಟೆಡ್ ಡೇಟಾ ಆಫರ್
ಬಿಎಸ್ಎನ್ಎಲ್ ಘೋಷಿಸಿರುವ ಹೊಸ ಆಫರ್ ನಿಂದ ಗ್ರಾಹಕರಿಗೆ ಅನ್ ಲಿಮಿಟೆಡ್ ಡೇಟಾ ದೊರೆಯಲಿದೆ. 186 ರೂ. ಮತ್ತು 999 ರೂ. ಡೇಟಾ ಪ್ಲಾನ್ ಗಳಲ್ಲಿ ಬಿಎಸ್ಎನ್ಎಲ್ ಡೇಟಾ ಖಾಲಿಯಾದ ನಂತರ 40KBps ವೇಗದಲ್ಲಿ ಅನ್ ಲಿಮಿಟೆಡ್ ಡೇಟಾ ನೀಡಲಿದ್ದು, ಜಿಯೋ ಮತ್ತು ಏರ್ ಟೆಲ್ ನೊಂದಿಗೆ ಸ್ಪರ್ಧೆಯಲ್ಲಿ ಮುಂದುವರೆದಿದೆ.

ಅದ್ಭುತ ವ್ಯಾಲಿಡಿಟಿ
ಬಿಎಸ್ಎನ್ಎಲ್ ನ ಹೊಸ ಪ್ಲಾನ್ಸ್ ಅದ್ಭುತವಾದ ವ್ಯಾಲಿಡಿಟಿ ಹೊಂದಿದ್ದು, 186 ರೂ. ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, 429 ರೂ. ಪ್ಲಾನ್ 81 ದಿನಗಳ ವ್ಯಾಲಿಡಿಟಿ ಹೊಂದಿದೆ. ಇನ್ನು 485 ರೂ. ಪ್ಲಾನ್ 90 ದಿನಗಳ ವ್ಯಾಲಿಡಿಟಿ, 666 ರೂ. ಪ್ಲಾನ್ 129 ದಿನಗಳ ವ್ಯಾಲಿಡಿಟಿ ಮತ್ತು 999 ರೂ. ಪ್ಲಾನ್ ರಿಚಾರ್ಜ್ ಮಾಡಿಸಿದ ದಿನದಿಂದ 180 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.

ಜಿಯೋಗಿಂತ ಬೆಸ್ಟ್ ಬಿಎಸ್ಎನ್ಎಲ್
ಬಿಎಸ್ಎನ್ಎಲ್ 186 ರೂ. ಗೆ ದಿನಕ್ಕೆ 2GB ಡೇಟಾ ನೀಡಿದರೆ, ಜಿಯೋ 149 ರೂ. ಗೆ ದಿನಕ್ಕೆ 3GB ಡೇಟಾ ನೀಡುತ್ತಿದೆ. ಆದರೆ, ಜಿಯೋ ಪ್ಲಾನ್ ಜೂನ್ 30ಕ್ಕೆ ಅಂತ್ಯವಾಗಲಿದ್ದು, ಬಿಎಸ್ಎನ್ಎಲ್ ಪ್ಲಾನ್ ಇನ್ನು 60 ದಿನಗಳ ಕಾಲ ಮುಂದುವರೆಯಲಿದೆ. ಇದರಿಂದ ಜಿಯೋಗಿಂತ ಬಿಎಸ್ಎನ್ಎಲ್ ಆಫರ್ ಉತ್ತಮವಾಗಿದೆ.

ಎಲ್ಲೆಲ್ಲಿ ಲಭ್ಯ?
ಬಿಎಸ್ಎನ್ಎಲ್ ನ ಹೊಸ ಆಫರ್ ಭಾರತದಾದ್ಯಂತ ಜೂನ್ 18ರಿಂದ ಲಭ್ಯವಿದ್ದು, ಬಿಎಸ್ಎನ್ಎಲ್ ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಅಥವಾ ಯಾವುದೇ ರಿಚಾರ್ಜ್ ಪೋರ್ಟಾಲ್ ಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆದರೆ, ಬಿಎಸ್ಎನ್ಎಲ್ ತಿಳಿಸಿರುವಂತೆ ಕೇರಳ ಟೆಲಿಕಾಂ ಸರ್ಕಲ್ ನಲ್ಲಿ ಆಫರ್ ಭಿನ್ನವಾಗಿರಲಿದೆಯಂತೆ.

ರಂಜಾನ್ ಗೆ ವಿಶೇಷ ಆಫರ್
ಬಿಎಸ್ಎನ್ಎಲ್ ರಂಜಾನ್ ಅನ್ನು ವಿಶಿಷ್ಟವಾಗಿ ಆಚರಿಸುವ ಸಲುವಾಗಿ ವಿಶೇಷ ಆಫರ್ ಬಿಡುಗಡೆ ಮಾಡಿದೆ. ಈದ್ ಮುಬಾರಕ್ STV 786 ಪ್ಲಾನ್ ಘೋಷಿಸಿದ್ದು, ಇದರನ್ವಯ ದಿನಕ್ಕೆ 2GB ಡೇಟಾ ಮತ್ತು ಅನ್ ಲಿಮಿಟೆಡ್ ಕರೆ ಹಾಗೂ 100 ಉಚಿತ SMS ನೀಡಿದೆ.

ಈದ್ ಮುಬಾರಕ್ STV 786
ರಂಜಾನ್ ವಿಶೇಷ ಆಫರ್ 150 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದೆಹಲಿ ಮತ್ತು ಮುಂಬೈ ಟೆಲಿಕಾಂ ಸರ್ಕಲ್ ಗಳಲ್ಲೂ ಉಚಿತ ವಾಯ್ಸ್ ಕರೆ ಹೊಂದಿದೆ. ಮತ್ತು ಜೂನ್ 12ರಿಂದ ಪ್ರಾರಂಭವಾಗಿರುವ 786 ಪ್ಲಾನ್ ಜೂನ್ 26ರವೆಗೆ ಲಭ್ಯವಿದೆ.

ಫಿಫಾಗೂ ನೀಡಿತ್ತು 4GB ಬಿಗ್ ಆಫರ್
ಬಿಎಸ್ಎನ್ಎಲ್ ಮೊನ್ನೆ ತಾನೇ ಫಿಫಾ ವಿಶ್ವಕಪ್ ಅಂಗವಾಗಿ ದಿನಕ್ಕೆ 4GB ಡೇಟಾವನ್ನು 30 ದಿನಗಳ ವ್ಯಾಲಿಡಿಟಯೊಂದಿಗೆ 147 ರೂ.ಗೆ ವಿಶೇಷ ಪ್ಲಾನ್ ಮೂಲಕ ನೀಡಿ ಟೆಲಿಕಾಂ ಕ್ಷೇತ್ರದಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು.

ಬಿಎಸ್ಎನ್ಎಲ್ ತೊರೆದಿದ್ದ 12 ಲಕ್ಷ ಗ್ರಾಹಕರು
ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು 12 ಲಕ್ಷ ಗ್ರಾಹಕರು ತೊರೆದು ಬೇರೆ ನೆಟ್ ವರ್ಕ್ ಅನ್ನು ಆಯ್ದುಕೊಂಡಿದ್ದರು. ಆದ್ದರಿಂದ ಬಿಎಸ್ಎನ್ಎಲ್ ಹೊಸ ಹೊಸ ಆಫರ್ ಗಳ ಮೂಲಕ ಗ್ರಾಹಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.


Click it and Unblock the Notifications








