ಜಿಯೋ ಎದುರು ಮತ್ತೊಂದು ಬಿಗ್ ಆಫರ್ ಘೋಷಿಸಿದ ಬಿಎಸ್ಎನ್ಎಲ್...ಮೊಬೈಲ್ ನಲ್ಲಿಯೇ ಪುಟ್ಬಾಲ್ ನೋಡಿ..!
ನಿನ್ನೇ ತಾನೆ ಜಿಯೋ ತನ್ನ ಗ್ರಾಹಕರಿಗೆ ಪ್ರತಿದಿನ ಹೆಚ್ಚುವರಿಯಾಗಿ ಉಚಿತ 1.5GB ಡೇಟಾ ನೀಡುವ ಘೋಷಣೆ ಮಾಡಿತ್ತು. ಇದರಿಂದ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಯಾವ ಟೆಲಿಕಾಂ ಆಪರೇಟರ್ ಗಳು ಬೇಗ ಸುಧಾರಿಸಿಕೊಳ್ಳದಷ್ಟು ಏಟನ್ನು ಜಿಯೋ ತನ್ನ ಡಬಲ್ ಧಮಾಕಾ ಆಫರ್ ನಿಂದ ನೀಡಿತ್ತು.
ಆದರೆ, ಸರ್ಕಾರಿ ಸ್ವಾಮ್ಯದಲ್ಲಿನ ಬಿಎಸ್ಎನ್ಎಲ್ ಒಂದೇ ದಿನಕ್ಕೆ ನಾವೇನೂ ಕಮ್ಮಿ ಇಲ್ಲ ಅಂತ ಬಿಗ್ ಆಫರ್ ಘೋಷಿಸಿದ್ದು, ಜಿಯೋಗೆ ಶಾಕ್ ನೀಡಿದೆ. ಹೌದು, ನಾಳೆಯಿಂದ ವಿಶ್ವದಾದ್ಯಂತ ಪುಟ್ಬಾಲ್ ಹಬ್ಬ ಶುರುವಾಗಲಿದ್ದು, ಬಿಎಸ್ಎನ್ಎಲ್ ಸಹ ಪುಟ್ಬಾಲ್ ಉತ್ಸವವನ್ನು ಇಮ್ಮಡಿಗೊಳಿಸಲು ತನ್ನ ಗ್ರಾಹಕರಿಗೆ ಬಿಗ್ ಆಫರ್ ನೀಡಿದೆ. ಇದು ನೇರವಾಗಿ ಜಿಯೋಗೆ ಹೊಡೆತ ನೀಡುವುದಂತೂ ಖಂಡಿತ. ಬಿಎಸ್ಎನ್ಎಲ್ ಘೋಷಿಸಿರುವ ಹೊಸ ಆಫರ್ ನಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.


ದಿನಕ್ಕೆ 4GB ಡೇಟಾ
ಬಿಎಸ್ಎನ್ಎಲ್ ಘೋಷಿಸಿರುವ ಪುಟ್ಬಾಲ್ ಆಫರ್ ದಿನಕ್ಕೆ 4GB ಡೇಟಾ ನೀಡಲಿದೆ. ಇದಕ್ಕಾಗಿಯೇ ವಿಶೇಷ ರಿಚಾರ್ಜ್ ಪ್ಯಾಕ್ ಘೋಷಿಸಿರುವ ಬಿಎಸ್ಎನ್ಎಲ್ FIFA ವಿಶ್ವಕಪ್ ಸ್ಪೇಷಲ್ ಡೇಟಾ STV 149 ಎಂದು ಹೆಸರಿಟ್ಟಿದೆ.

ಪುಟ್ಬಾಲ್ ಕ್ರೇಜ್ ಹೆಚ್ಚಿಸಲಿದೆ ಹೊಸ ಪ್ಲಾನ್
ಬಿಎಸ್ಎನ್ಎಲ್ ಘೋಷಿಸಿರುವ ಹೊಸ 149 ರೂ. ಪ್ಲಾನ್ ಭಾರತದಲ್ಲಿ ಪುಟ್ಬಾಲ್ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಲಿದೆ. ಹೀಗಾಗಲೇ ISL, I ಲೀಗ್ ಮುಂತಾದ ಟೂರ್ನಿಗಳಿಂದ ಭಾರತದಲ್ಲಿ ಪುಟ್ಬಾಲ್ ಜ್ವರ ಹೆಚ್ಚಿದೆ. ಪಶ್ಚಿಮ ಬಂಗಾಳ, ಕೇರಳ, ಗೋವಾ ಮತ್ತೀತರ ಕಡೆ ಪುಟ್ಬಾಲ್ ವಿಶ್ವಕಪ್ ಅನ್ನು ಹಬ್ಬದ ರೀತಿ ಆಚರಿಸಲು ಜನ ಉತ್ಸುಕರಾಗಿದ್ದಾರೆ. ಇದರ ಜೊತೆಗೆ ಬಿಎಸ್ಎನ್ಎಲ್ ನೀಡಿದ ಹೊಸ ಆಫರ್ ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ.

149 ಕ್ಲಬ್ ಗೆ ಬಿಎಸ್ಎನ್ಎಲ್ ಎಂಟ್ರಿ
ಈಗಾಗಲೇ 149 ರೂ.ಗಳಿಗೆ ಜಿಯೋ ದಿನಕ್ಕೆ 3GB ಡೇಟಾ ನೀಡುತ್ತಿದ್ದರೆ, ಏರ್ ಟೇಲ್ 2GB ಡೇಟಾವನ್ನು ನೀಡುತ್ತಿತ್ತು. ಈಗ 149 ರೂ. ಕ್ಲಬ್ ಗೆ ಎಂಟ್ರಿ ಕೊಟ್ಟಿರುವ ಬಿಎಸ್ಎನ್ಎಲ್ ಎರಡಕ್ಕೂ ಮೀರಿ 4GB ಡೇಟಾ ನೀಡಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಏನೆಲ್ಲಾ ಇದೇ..?
ಬಿಎಸ್ಎನ್ಎಲ್ ಘೋಷಿಸಿರುವ ಹೊಸ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 4GB ಡೇಟಾದಂತೆ 112GB ಡೇಟಾ ನೀಡಲಿದೆ. ಭಾರತದ ಎಲ್ಲಾ ಟೆಲಿಕಾಂ ಸರ್ಕಲ್ ಗಳಲ್ಲೂ ಈ ಆಫರ್ ಲಭ್ಯವಿದೆ. ಈ ಪ್ಲಾನ್ ಯಾವುದೇ ಅನಿಯಮಿತ ಕರೆ ಮತ್ತು ದಿನಕ್ಕೆ ಉಚಿತ SMS ಹೊಂದಿಲ್ಲ.

ಯುವಕೇಂದ್ರಿತ ಪ್ಲಾನ್
ಬಿಎಸ್ಎನ್ಎಲ್ ತಿಳಿಸಿರುವಂತೆ ಹೊಸ 149 ರೂ. ಪ್ಲಾನ್ ಅನ್ನು ಯುವಜನರನ್ನು ಆದ್ಯತೆಯನ್ನಿಟ್ಟುಕೊಂಡು ತರಲಾಗಿದೆ. ಪುಟ್ಬಾಲ್ ವಿಶ್ವಕಪ್ ಅನ್ನು ಮೊಬೈಲ್ ಡಿವೈಸ್ ಗಳಲ್ಲಿ ನೋಡಲು ಅನುಕೂಲವಾಗುವಾಗುವಂತೆ ಹೊಸ ಪ್ಲಾನ್ ತಂದಿದೆಯಂತೆ.

ಬಿಎಸ್ಎನ್ಎಲ್ ನಿಂದ ಮುಂದುವರೆದ ಸ್ಪರ್ಧೆ
149 ರೂ. ಗೆ ದಿನಕ್ಕೆ 4GB ಡೇಟಾ ಬಿಗ್ ಆಫರ್ ನೀಡಿರುವ ಬಿಎಸ್ಎನ್ಎಲ್ ಕಳೆದ ವಾರ FTTH (fibre-to-the-home) ಸೇವೆಗೆ ಕಾಲಿರಿಸಿತ್ತು. ಇದರಡಿ Fibro Combo ULD 777 ಮತ್ತು Fibro Combo ULD 1277 ಪ್ಲಾನ್ ಗಳನ್ನು ಪರಿಚಯಿಸಿ ಜಿಯೋಗೆ ಸೆಡ್ಡು ಹೊಡೆದಿತ್ತು. ಫೈಬ್ರೋ ಕಾಂಬೋ ULD 777 ಪ್ಲಾನ್ 50Mbps ವೇಗದಲ್ಲಿ 500GB ಡೇಟಾವನ್ನು 30 ದಿನಗಳ ವ್ಯಾಲಿಡಿಟಿಯೊಂದಿಗೆ 777 ರೂ.ಗೆ ನೀಡಿದರೆ, ಫೈಬ್ರೋ ಕಾಂಬೋ ULD 1277 ಪ್ಲಾನ್ 100Mbps ವೇಗದಲ್ಲಿ 750GB ಡೇಟಾವನ್ನು 30 ದಿನಗಳ ವ್ಯಾಲಿಡಿಟಿಯೊಂದಿಗೆ 777 ರೂ.ಗೆ ನೀಡಿತ್ತು.


Click it and Unblock the Notifications








