ಬಿಎಸ್ಎನ್ಎಲ್ ನಿಂದ 599 ರುಪಾಯಿ ಪ್ಲಾನ್ ಬಿಡುಗಡೆ- ಜಿಯೋ 498 ಪ್ಲಾನ್ ನೊಂದಿಗೆ ಸ್ಪರ್ಧೆ
ಟೆಲಿಕಾಂ ಸೆಕ್ಟರ್ ನಲ್ಲಿ ಅಧಿಕವಾಗುತ್ತಿರುವ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಆಪರೇಟರ್ ಗಳು ಹೊಸ ಹೊಸ ಪ್ಲಾನ್ ನೊಂದಿಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಾರೆ. ಇದೀಗ ಬಿಎಸ್ಎನ್ಎಲ್ ಕೂಡ ಹೊಸ ಪ್ಲಾನ್ ಗಳನ್ನು ಪ್ರಿಪೇಯ್ಡ್ ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದೆ. ಹೌದು ಬಿಎಸ್ಎನ್ಎಲ್ ರುಪಾಯಿ 599 ರ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ.

599 ರುಪಾಯಿ ಪ್ಲಾನ್:
ರುಪಾಯಿ 599 ದೀರ್ಘಾವಧಿ ಪ್ಲಾನ್ ಆಗಿದ್ದು 180 ದಿನಗಳ ಅವಧಿಯನ್ನು ಹೊಂದಿದೆ ಅಂದರೆ 6 ತಿಂಗಳ ಅವಧಿಯನ್ನು ಈ ಪ್ಲಾನ್ ನೀಡುತ್ತದೆ. ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಇದು ಆಫರ್ ಮಾಡುತ್ತದೆ. ಆದರೆ ಅನಿಯಮಿತ ಕರೆಗಳ ಸೌಲಭ್ಯವು ಮುಂಬೈ ಮತ್ತು ದೆಹಲಿ ಸರ್ಕಲ್ ಗೆ ಲಭ್ಯವಿರುವುದಿಲ್ಲ.ಕರೆಗಳ ಸೌಲಭ್ಯವವನ್ನು ಹೊರತುಪಡಿಸಿದರೆ ಇತರೆ ಯಾವುದೇ ಬೆನಿಫಿಟ್ ನ್ನು ಕೂಡ ಈ ಪ್ಲಾನ್ ನೀಡುವುದಿಲ್ಲ. ಅಂದರೆ ಯಾವುದೇ ಎಸ್ಎಂಎಸ್ ಮತ್ತು ಡಾಟಾ ಫೆಸಿಲಿಟಿಯು ಈ ಪ್ಲಾನಿನ ಅಡಿಯಲ್ಲಿ ಗ್ರಾಹಕರಿಗೆ ಸಿಗುವುದಿಲ್ಲ.

498 ರುಪಾಯಿ ಜಿಯೋ ಪ್ಲಾನ್ ನೊಂದಿಗೆ ಸ್ಪರ್ಧೆ:
ಈ 599 ರುಪಾಯಿ ಪ್ಲಾನ್ ರಿಲಯನ್ಸ್ ಜಿಯೋ ಸಂಸ್ಥೆಯ ರುಪಾಯಿ 498ರ ಪ್ಲಾನ್ ನೊಂದಿಗೆ ಸ್ಪರ್ಧೆ ಮಾಡುತ್ತದೆ. ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ 2ಜಿಬಿ ಡಾಟಾವನ್ನು ಪ್ರತಿದಿನ ಜೊತೆಗೆ 100 ಎಸ್ಎಂಎಸ್ ಸೌಲಭ್ಯವನ್ನು 498 ರುಪಾಯಿ ಪ್ಲಾನಿನ ಅಡಿಯಲ್ಲಿ ನೀಡುತ್ತದೆ. ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳ ಬೆನಿಫಿಟ್ ಕೂಡ ನೀಡುತ್ತದೆ. ಈ ಪ್ಲಾನ್ 91 ದಿನಗಳ ಅವಧಿಯನ್ನು ಹೊಂದಿರುತ್ತದೆ ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತರೆ ಫೆಸಿಲಿಟಿಯನ್ನು ಕೂಡ ಹೊಂದಿರುತ್ತದೆ.

999 ರುಪಾಯಿ ಪ್ಲಾನ್ ಮತ್ತು 2,099 ಪ್ಲಾನ್
ಇತ್ತೀಚೆಗೆ ಬಿಎಸ್ಎನ್ಎಲ್ ತನ್ನ ಪ್ರೀಪೇಯ್ಡ್ ಬಳಕೆದಾರರಿಗಾಗಿ 666 ರುಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿತ್ತು. ಆದಾದ ನಂತರ ಕಂಪೆನಿಯು ಪ್ಲಾನಿನ ಅವಧಿಯನ್ನು ಅಧಿಕಗೊಳಿಸಿತ್ತು.ಮೊದಲು 122 ದಿನಗಳ ಅವಧಿಯು ಬಳಕೆದಾರರಿಗೆ 666 ರುಪಾಯಿ ಪ್ಲಾನಿನ ಅಡಿಯಲ್ಲಿ ಸಿಗುತ್ತಿತ್ತು. ಆದರೆ ಇದೀಗ 666 ರುಪಾಯಿ ಪ್ಲಾನಿನ ಅಡಿಯಲ್ಲಿ 134 ದಿನಗಳ ಅವಧಿ ಸಿಗುತ್ತದೆ.ಈ ಪ್ಲಾನ್ ನಲ್ಲಿ 100 ಎಸ್ಎಂಎಸ್ ಉಚಿತ ಮತ್ತು 3.7ಜಿಬಿ ಡಾಟಾ ಪ್ರತಿದಿನ ಲಭ್ಯವಾಗುತ್ತದೆ. ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳ ಬೆನಿಫಿಟ್ ಈ ಪ್ಲಾನಿನ ಅಡಿಯಲ್ಲಿ ಸಿಗುತ್ತದೆ.
ಇದರ ಜೊತೆಗೆ ಕಂಪೆನಿಯು ದೀರ್ಘಾವಧಿ ಪ್ಲಾನ್ ಆಗಿದ್ದು ಎರಡು ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ. ಹೌದು 999 ರುಪಾಯಿ ಪ್ಲಾನ್ ಮತ್ತು 2,099 ರುಪಾಯಿಯ ಎರಡು ಪ್ಲಾನ್ ಗಳು ಇನ್ನು ಮುಂದೆ ಗ್ರಾಹಕರಿಗೆ ಬಿಎಸ್ಎನ್ಎಲ್ ನಲ್ಲಿ ಲಭ್ಯವಿರುವುದಿಲ್ಲ.


Click it and Unblock the Notifications








