ಟೆಲಿಕಾಂ ಮಾರುಕಟ್ಟೆಯೇ ತಿರುಗಿ ನೋಡುವ ಆಫರ್: 730 GB ಡೇಟಾ ಕೊಟ್ಟ BSNL!!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರಕಾರಿ ಸ್ವಾಮ್ಯದ BSNL ಸಾಕಷ್ಟು ಹವಾ ಎಬ್ಬಿಸಿದೆ. ಈಗಾಗಲೇ ಮೂರು ತಿಂಗಳಿಗೂ ಅಧಿಕವ ವ್ಯಾಲಿಡಿಟಿಯ ಪ್ಲಾನ್ ಗಳನ್ನು ಘೋಷಣೆ ಮಾಡಿದ್ದ BSNL, ಈಗ ಮತ್ತೊಂದು ಕ್ರಾಂತಿ ಕಾರಕ ಪ್ಲಾನ್ ವೊಂದನ್ನು ಲಾಂಚ್ ಮಾಡಿದ್ದು, ನಿತ್ಯ 2GB ಡೇಟಾವನ್ನು ನೀಡುವ ಪ್ಲಾನ್ ವೊಂದನ್ನು ಲಾಂಚ್ ಮಾಡಿದ್ದಾರೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯೊಂದನ್ನು ತೋರಿಸಿಕೊಟ್ಟಿದೆ.

ಟೆಲಿಕಾಂ ಮಾರುಕಟ್ಟೆಯೇ ತಿರುಗಿ ನೋಡುವ ಆಫರ್: 730 GB  ಡೇಟಾ ಕೊಟ್ಟ BSNL

ಜಿಯೋ ಕಾರ್ಯರಂಭದ ನಂತರದಲ್ಲಿ ಸಾಕಷ್ಟು ಚಟುವಟಿಕೆಯಿಂದ ಕೂಡಿರುವ BSNL, ಖಾಸಗಿ ಟೆಲಿಕಾಂ ಕಂಪನಿಗಳು ನಾಚುವಂತಹ ಆಪರ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಇದರಿಂದಾಗಿ BSNL ಸ್ಪರ್ಧೆಯನ್ನು ಎದುರಿಸಲು ಇತರೆ ಟೆಲಿಕಾಂ ಕಂಪನಿಗಳು ಉತ್ತಮ ಆಫರ್ ಗಳನ್ನ ಲಾಂಚ್ ಮಾಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಸೆಡ್ಡು ಹೊಡೆಯಲು ಒಂದು ವರ್ಷದ ಪ್ಲಾನ್ ಅನ್ನು BSNL ಲಾಂಚ್ ಮಾಡಿದೆ.

ಒಂದು ವರ್ಷದ ವ್ಯಾಲಿಡಿಟಿ

ಒಂದು ವರ್ಷದ ವ್ಯಾಲಿಡಿಟಿ

BSNL ಸದ್ಯ ನೀಡಿರುವ ಪ್ಲಾನ್ ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿದೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿಸಿದರೆ 365 ದಿನಗಳ ಕಾಲ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಮೂರು ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಸಿಕೊಳ್ಳುವ ಅವಶ್ಯಕತೆ ತಲೆದೂರುವುದಿಲ್ಲ. ಇದು ದೀರ್ಘಾವಧಿಯ ಲಾಭವನ್ನು ಮಾಡಿಕೊಡಲಿದೆ.

ನಿತ್ಯ 2 GB  ಡೇಟಾ

ನಿತ್ಯ 2 GB ಡೇಟಾ

BSNL ಒಂದು ವರ್ಷದ ವ್ಯಾಲಿಡಿಟಿಯನ್ನು ನೀಡುವುದರೊಂದಿಗೆ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ನಿತ್ಯ 2GB ಡೇಟಾ ನೀಡಲು ಮುಂದಾಗಿದೆ. ಒಟ್ಟು 730 GB ಡೇಟಾ ಬಳಕೆಗೆ ಲಭ್ಯವಾಗಲಿದೆ. ಇದರಿಂದಾಗಿ ಒಂದೇ ಪ್ಲಾನ್ ನಲ್ಲಿ ಬಳಕೆದಾರರಿಗೆ ದೀರ್ಘಾವಧಿ ಮತ್ತು ಹೆಚ್ಚಿನ ಡೇಟಾ ಲಾಭವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಇದು ಎರಡು ಮಾದರಿಯ ಲಾಭವನ್ನು ಮಾಡಿಕೊಡಲಿದೆ.

ಅನ್ ಲಿಮಿಟೆಡ್ ಕರೆಗಳು

ಅನ್ ಲಿಮಿಟೆಡ್ ಕರೆಗಳು

BSNL ಲಾಂಚ್ ಮಾಡಿರುವ ಒಂದು ವರ್ಷದ ವ್ಯಾಲಿಡಿಟಿ ಪ್ಲಾನ್ ನಲ್ಲ ಬಳಕೆದಾರರಿಗೆ ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಒಂದೇ ಪ್ಲಾನ್ ನಲ್ಲಿ ಬಳಕೆದಾರರು ಮೂರು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವರ್ಷ ಯಾವುದೇ ತೊಂದರೆ ಇಲ್ಲದೇ ಕರೆಗಳನ್ನು ಮಾಡಬಹುದಾಗಿದೆ.

ನೂರು SMS ಲಭ್ಯ

ನೂರು SMS ಲಭ್ಯ

BSNL ಒಂದು ವರ್ಷದ ವ್ಯಾಲಿಡಿಟಿಯ ಪ್ಲಾನ್ ನಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ನೀಡುವುದರೊಂದಿಗೆ ಉಚಿತವಾಗಿ ಕರೆ ಮಾಡುವ ಅವಕಾಶವೂ ಲಭ್ಯವಾಗಿದೆ. ಇದಲ್ಲದೇ ನಿತ್ಯ 100 SMSಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಬಳಕೆದಾರರು ಎಲ್ಲಾ ಲಾಭವನ್ನು ಇಲ್ಲಿ ಪಡೆಯಬಹುದಾಗಿದೆ.

WhatsApp group voice and video calling is now live - KANNADA GIZBOT
ಬೆಲೆ:

ಬೆಲೆ:

BSNL ಒಂದು ವರ್ಷದ ವ್ಯಾಲಿಡಿಟಿಯ ಪ್ಲಾನ್ ಬೆಲೆಯೂ ರೂ. 1,999 ಆಗಲಿದ್ದು, ಇದು ಬಳಕೆದಾರರಿಗೆ ಎಲ್ಲಾ ಮಾದರಿಯಲ್ಲಿಯೂ ಲಾಭವನ್ನು ಮಾಡಿಕೊಡಲಿದೆ. ಡೇಟಾ, ಕರೆ, ವ್ಯಾಲಿಡಿಟಿ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಬಳಕೆದಾರರಿಗೆ ಹೇಳಿ ಮಾಡಿಸಿದ ಆಫರ್ ಇದಾಗಿದೆ.

Best Mobiles in India

English summary
BSNL Rs. 1,999 Long-Term Prepaid Pack Offers 2GB Data Per Day, Unlimited Voice Calls for 365 Days. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X